For Quick Alerts
ALLOW NOTIFICATIONS  
For Daily Alerts

ಕೊಬ್ಬು ಕರಗಿಸಬೇಕೇ? ಹಾಗಾದರೆ ಚೆನ್ನಾಗಿ ನೀರು ಕುಡಿಯಿರಿ

By Super
|

ದೇಹದ ಕೊಬ್ಬು ಹೆಚ್ಚಾಗುತ್ತಿದೆಯೇ? ಸೊಂಟದ ಸುತ್ತಳತೆ ಅಂಕೆಯಿಲ್ಲದೆ ಮೀರುತ್ತಿದೆಯೇ? ಅಥವಾ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದೀರಾ? ಒಂದು ವೇಳೆ ಹೌದಾದರೆ ವ್ಯಾಯಮ ಮಾಡಿ ಕೊಬ್ಬು ಕರಗಿಸಿ ಎಂದೇ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ವ್ಯಾಯಮಕ್ಕಾಗಿ ಸಮಯ ತೆಗೆಯುವುದೇ ಮುಖ್ಯ ಸಮಸ್ಯೆ. ಕಷ್ಟಪಟ್ಟು ನಾಲ್ಕಾರು ದಿನ ವ್ಯಾಯಮಶಾಲೆಗೆ ಬಂದವರು ಐದನೆಯ ದಿನ ಚಕ್ಕರ್ ಹಾಕುವುದು ಮಾಮೂಲಿ.

ಯಾವುದಕ್ಕೂ ಮುಖ್ಯವಾಗಿ ಬೇಕಾಗಿರುವುದು ತೂಕ, ಹಾಗೂ ಕೊಬ್ಬು ಇಳಿಸಿಕೊಳ್ಳಲೇಬೇಕೆಂಬ ದೃಢನಿರ್ಧಾರ. ಒಮ್ಮೆ ನಿರ್ಧರಿಸಿದರೆ ನಿಮ್ಮ ನೆರವಿಗೆ ಹತ್ತು ಹಲವು ವಿಧಾನಗಳು ತಾವೇ ತಾವಾಗಿ ಮುಂದೆ ಬರುತ್ತವೆ. ಅದರಲ್ಲಿ ಅತ್ಯಂತ ಸುಲಭ ಮತ್ತು ಸೂಕ್ತವಾದ ವಿಧಾನವೆಂದರೆ ಕುಡಿಯುವ ನೀರನ್ನು ಹೆಚ್ಚಿಸುವುದು! ಹೌದು, ಕೇವಲ ನಿತ್ಯದ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸುವ ಮೂಲಕವೂ ತೂಕವನ್ನು ಹಾಗೂ ದೇಹದ ಕೊಬ್ಬನ್ನು ಇಳಿಸಬಹುದು. ನೀರು ಆರೋಗ್ಯಕ್ಕೆ ಎಷ್ಟು ಅಗತ್ಯ ಮತ್ತು ಉಪಕಾರಿ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.

ಒಂದು ವೇಳೆ ದಿನಕ್ಕೆ ಎರಡೇ ಲೋಟಗಳಷ್ಟು ನೀರನ್ನು ಹೆಚ್ಚಾಗಿ ಕುಡಿಯುವ ಮೂಲಕ ಅದ್ಭುತವನ್ನೇ ಸಾಧಿಸಬಹುದು. ತೂಕ ಇಳಿಯುವ ಜೊತೆಗೇ ಚರ್ಮದ ಕಾಂತಿ ಹೆಚ್ಚುವ, ರೋಗ ನಿರೋಧಕ ಶಕ್ತಿ ಹೆಚ್ಚುವ, ಹಳದಿ ಮೂತ್ರದ ಬಣ್ಣ ಬಿಳಿಯಾಗುವ ಮೊದಲಾದ ಹಲವಾರು ಬೋನಸ್‌ಗಳಿವೆ. ತೂಕ, ಹಾಗೂ ದೇಹದ ಕೊಬ್ಬು ಇಳಿಸಲೇಬೇಕು ಎಂಬ ಮನೋನಿರ್ಧಾರ ಕೈಗೊಂಡ ಬಳಿಕ ನಿತ್ಯವೂ ಹತ್ತು ಲೋಟ ನೀರು ಕುಡಿಯಲು ಪ್ರಾರಂಭಿಸಿ. ಮೊದಲ ದಿನಗಳಲ್ಲಿ ಏನೂ ಗೊತ್ತಾಗುವುದೇ ಇಲ್ಲ.

ಸುಮಾರು ಒಂದು ತಿಂಗಳ ಬಳಿಕ ಎಲ್ಲೋ ಒಂದು ಕೇಜಿಯಷ್ಟು ತೂಕ ಕಡಿಮೆಯಾದರೆ ಅದೊಂದು ಪವಾಡವೇ. ಆದರೆ ಮೂರು ತಿಂಗಳ ಬಳಿಕವೇ ನಿಜವಾದ ತೂಕ ಇಳಿಯುವುದು ಕಂಡುಬರುತ್ತದೆ. ಏಕೆಂದರೆ ಈ ಅವಧಿಯಲ್ಲಿ ದೇಹದಲ್ಲಿದ್ದ ಸಂಗ್ರಹವಾಗಿದ್ದ ಕೊಬ್ಬು ಮೊದಲು ಕರಗಬೇಕು. ಅಚ್ಚರಿಯಾಯಿತೇ? ಕೇವಲ ನೀರು ನಿಮ್ಮ ತೂಕವನ್ನು ಕಳೆದು ಆರೋಗ್ಯವನ್ನು ಹೇಗೆ ವೃದ್ಧಿಸುತ್ತದೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದಿನಕ್ಕೆ ಹೆಚ್ಚುವರಿ ನೀರು ಕುಡಿಯುವ ಮೂಲಕ ಹೆಚ್ಚು ಶಕ್ತಿಯೂ ಉತ್ಪತ್ತಿಯಾಗುತ್ತದೆ. ಇದು ಇಡಿಯ ದಿನ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಎಷ್ಟರ ಮಟ್ಟಿಗೆ ಅಂದರೆ ದುಬಾರಿ ಹಣ ತೆತ್ತು ಒಂದು ಗಂಟೆ ಕಾಲ ವ್ಯಾಯಮಶಾಲೆಯಲ್ಲಿ ನಡೆಸಿದ ಕಠಿಣ ವ್ಯಾಯಮಕ್ಕೆ ವ್ಯಯಿಸಿದ ಶಕ್ತಿಗೆ ಸಮನಾಗಿದೆ.

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ನಮಗೆ ಅಗತ್ಯವಿರುವ ಶಕ್ತಿಯನ್ನು ಆಹಾರದ ಮೂಲಕ ಪಡೆದುಕೊಳ್ಳುತ್ತೇವೆ. ಆಹಾರ ಜೀರ್ಣಗೊಂಡು ಅದರಲ್ಲಿರುವ ಶಕ್ತಿಯನ್ನು ಹೀರಲು ನಡೆಸುವ ಕ್ರಿಯೆಯೇ ಜೀವರಾಸಾಯನಿಕ ಕ್ರಿಯೆ. ಹೆಚ್ಚಿನ ನೀರು ಲಭ್ಯವಾದ ಕಾರಣ ಈ ಕ್ರಿಯೆ ಇನ್ನಷ್ಟು ಸುಲಭವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಡೆದು ಹೆಚ್ಚಿನ ಶಕ್ತಿ ಉತ್ಪತ್ತಿಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಈ ಕಾರ್ಯಕ್ಕೆ ಶೇಖರವಾಗಿದ್ದ ಕೊಬ್ಬನ್ನು ಅನಿವಾರ್ಯವಾಗಿ ಬಳಸಲೇ ಬೇಕಾದುದರಿಂದ ಕೊಬ್ಬು ಕರಗುತ್ತದೆ. ಅಲ್ಲದೇ ಇತರ ಹಾರ್ಮೋನುಗಳೂ ಸೂಕ್ತಪ್ರಮಾಣದಲ್ಲಿ ಸ್ರವಿತವಾಗಿ ದೇಹವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ನಮ್ಮ ದೇಹದಲ್ಲಿ ಆಹಾರದ ಮೂಲಕ ಲಭ್ಯವಾಗುವ ಅಥವಾ ಜೀರ್ಣಕ್ರಿಯೆಯಲ್ಲಿ ಉತ್ಪತ್ತಿಯಾಗುವ ಹಲವು ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕಲು ಹೆಚ್ಚಿನ ನೀರಿನ ಅಗತ್ಯವಿದೆ.

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ಹೆಚ್ಚುವರಿ ನೀರನ್ನು ಕುಡಿಯುವ ಮೂಲಕ ಈ ಕ್ರಿಯೆ ಇನ್ನಷ್ಟು ಉತ್ತಮವಾಗುತ್ತದೆ. ಈ ಕಾರ್ಯದಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ಅನಗತ್ಯ ಕೊಬ್ಬನ್ನೂ ಹೊರದೂಡಲ್ಪಡುವುದರಿಂದ ತೂಕ ಇಳಿಯುತ್ತದೆ ಹಾಗೂ ದಾರ್ಢ್ಯತೆ ಹೆಚ್ಚುತ್ತದೆ.

ಹಸಿವಾಗುವುದನ್ನು ತಪ್ಪಿಸುತ್ತದೆ

ಹಸಿವಾಗುವುದನ್ನು ತಪ್ಪಿಸುತ್ತದೆ

ಹೊಟ್ಟೆಯಲ್ಲಿ ಏನೂ ಇಲ್ಲದಿದ್ದಾಗ ಏನಾದರೂ ಕಳಿಸಿ ಎಂದು ಮೆದುಳಿಗೆ ನೀಡುವ ಸೂಚನೆಯೇ ಹಸಿವು. ಸಾಮಾನ್ಯವಾಗಿ ಹಸಿವಾದೊಡನೆಯೇ ನಾವೆಲ್ಲಾ ಏನಾದರೊಂದು ತಿಂಡಿಯನ್ನು ಕುರುಕುತ್ತೇವೆ. ಇದನ್ನೇ ಬಂಡವಾಳವಾಗಿಸಿಕೊಂಡು ದೊಡ್ಡ ದೊಡ್ಡ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಸಿದ್ಧ ಆಹಾರಗಳ ಮಹಾಪೂರವನ್ನೇ ಹರಿಸುತ್ತಿವೆ.

ಹಸಿವಾಗುವುದನ್ನು ತಪ್ಪಿಸುತ್ತದೆ

ಹಸಿವಾಗುವುದನ್ನು ತಪ್ಪಿಸುತ್ತದೆ

ಇದರ ಜಾಹೀರಾತುಗಳಿಗೆ ಮರುಳಾಗಿ ಹೊತ್ತಲ್ಲದ ಹೊತ್ತಿನಲ್ಲಿ ಅನಾರೋಗ್ಯಕರ ಆಹಾರ ಸೇವಿಸಿ ತೂಕ ಹೆಚ್ಚಿಸಿಕೊಳ್ಳುತ್ತೇವೆ. ಬದಲಿಗೆ ಹಸಿವಾದಾಗಲೆಲ್ಲಾ ಒಂದು ಲೋಟ ನೀರು ಕುಡಿದರೆ ಸಾಕು, ಹಸಿವು ಕಡಿಮೆಯಾಗಿ ಅನಗತ್ಯವಾಗಿ ಅನಾರೋಗ್ಯಕರವಾದ ಆಹಾರವನ್ನು ಸೇವಿಸಿ ಅನಗತ್ಯವಾಗಿ ಏರಬಹುದಾಗಿದ್ದ ತೂಕದಿಂದ ತಪ್ಪಿಸಿಕೊಳ್ಳಬಹುದು.

BMI ಕಡಿಮೆಗೊಳಿಸುತ್ತದೆ

BMI ಕಡಿಮೆಗೊಳಿಸುತ್ತದೆ

ನಿಮ್ಮ ಎತ್ತರಕ್ಕೆ ಎಷ್ಟು ತೂಕ ಇರಬೇಕು ಎಂಬುದನ್ನು ನಿರ್ಧರಿಸುವ ಕೋಷ್ಟಕವೇ BMI index. ನಿಮ್ಮ ಶಾರೀರ ಹೇಗೇ ಇರಲಿ, ದಿನಕ್ಕೆ ಹತ್ತು ಲೋಟ ನೀರು ಕುಡಿಯುತ್ತಿರಿ, ನಿಮ್ಮ BMI ನಿಮ್ಮ ಎತ್ತರಕ್ಕೆ ತಕ್ಕನಾಗಿ ಇಳಿಯುತ್ತದೆ.

ಕೊಬ್ಬನ್ನು ಹೆಚ್ಚಾಗಿ ಕರಗಿಸುತ್ತದೆ

ಕೊಬ್ಬನ್ನು ಹೆಚ್ಚಾಗಿ ಕರಗಿಸುತ್ತದೆ

ಹೆಚ್ಚುವರಿ ನೀರನ್ನು ಕುಡಿದರೆ ಆ ನೀರನ್ನು ಬಳಸಿಕೊಳ್ಳಲು ಹೆಚ್ಚುವರಿ ಶಕ್ತಿಯೂ ಬೇಕಾಗುತ್ತದೆ. ಇದನ್ನು ಸಂಗ್ರಹವಾಗಿದ್ದ ಕೊಬ್ಬಿನ ಮೂಲಕ ಪಡೆದುಕೊಳ್ಳಬೇಕಾಗುತ್ತದೆ. ಪರಿಣಾಮವಾಗಿ ಕೊಂಚವೇ ಕೊಬ್ಬು ಹೆಚ್ಚಾಗಿ ಖರ್ಚಾಗುತ್ತದೆ.

ಕೊಬ್ಬನ್ನು ಹೆಚ್ಚಾಗಿ ಕರಗಿಸುತ್ತದೆ

ಕೊಬ್ಬನ್ನು ಹೆಚ್ಚಾಗಿ ಕರಗಿಸುತ್ತದೆ

ನಿತ್ಯವೂ ಹೆಚ್ಚುವರಿ ನೀರು ಕುಡಿಯುವುದರಿಂದ ನಿತ್ಯವೂ ಕೊಂಚ ಕೊಂಚವಾಗಿ ಸಂಗ್ರಹವಾಗಿದ್ದ ಕೊಬ್ಬು ಕರಗುತ್ತಾ ಹೋಗುತ್ತದೆ. ಆದ್ದರಿಂದ ಶಕ್ತಿ ನೀಡುವ ಲಘು ಪಾನೀಯ ಅಥವಾ ಪೇಯದ ಬದಲಿಗೆ ನೀರು ಕುಡಿಯುವ ಮೂಲಕ ಕೊಬ್ಬು ಕರಗುವ ಗತಿಯಲ್ಲಿ ಶೇಖಡಾ ಐವತ್ತರಷ್ಟು ಹೆಚ್ಚಳ ಕಂಡುಬಂದಿದೆ.

ಮದ್ಯಪಾನದ ಬಳಿಕ...

ಮದ್ಯಪಾನದ ಬಳಿಕ...

ಮದ್ಯಪಾನ ಅನಾರೋಗ್ಯಕರ, ದೈಹಿಕವಾಗಿಯೂ, ಸಾಮಾಜಿಕವಾಗಿಯೂ. ಇದರಿಂದ ಹೊರಬರಲು ಯತ್ನಿಸಿ. ಆದರೆ ಈಗಾಗಲೇ ವ್ಯಸನಿಯಾಗಿದ್ದು ನಿಜವಾಗಿ ಹೊರಬರಲು ಪ್ರಯತ್ನಿಸುತ್ತಿರುವಿರೇ ಆಗಿದ್ದಲ್ಲಿ ನೀರು ನಿಮ್ಮ ನೆರವಿಗೆ ಬರಲಿದೆ.

ಮದ್ಯಪಾನದ ಬಳಿಕ...

ಮದ್ಯಪಾನದ ಬಳಿಕ...

ಮದ್ಯಸೇವನೆಗೂ ಮುನ್ನ ಸಾಕಷ್ಟು ನೀರು ಕುಡಿಯುವ ಮೂಲಕ ಹೊಟ್ಟೆಯ ಒಳಗಿನ ಪದರದ ಮೇಲೆ ನೀರು ಆವರಿಸಿ ಮದ್ಯದ ಆಗಮನದಿಂದ ಉಂಟಾಗುವ ಸುಡುವಿಕೆಯಿಂದ ರಕ್ಷಿಸುತ್ತದೆ.

ಮದ್ಯಪಾನದ ಬಳಿಕ...

ಮದ್ಯಪಾನದ ಬಳಿಕ...

ಅಲ್ಲದೇ ಸಾಕಷ್ಟು ಹೊಟ್ಟೆ ತುಂಬಿರುವ ಕಾರಣ ಕುರುಕು ತಿಂಡಿಯನ್ನು ತಿನ್ನದಿರಲೂ ಸಾಧ್ಯವಾಗುತ್ತದೆ. ಇದರಿಂದ ಮತ್ತಿನಿಂದ ತಲೆಸುತ್ತುವ ಪ್ರಮಾಣ ಅತಿ ಕಡಿಮೆಯಾಗುತ್ತದೆ ಹಾಗೂ ಮದ್ಯಪಾನದಿಂದ ಹೊರಬರಲು ಮನಸ್ಸು ಗಟ್ಟಿಯಾಗುತ್ತಾ ಹೋಗುತ್ತದೆ.

English summary

Drink 10 Glasses Of Water Daily To Burn Calories

Do you think drinking water will aid in weight loss and burn fat? Well, let us ensure you that it does. This clear beverage is the answer to a lot of problems related to your health. Along side burning the fat in your body, drinking 10 glasses of water daily will also help to keep diseases at bay. At the same time, your skin will improve and you will feel a lot more healthy. Weight loss cannot be achieved overnight. It takes a strong determination and a goal to accomplish an ideal weight your seeking.
X
Desktop Bottom Promotion