For Quick Alerts
ALLOW NOTIFICATIONS  
For Daily Alerts

ವ್ಯಾಯಾಮಕ್ಕಿಂತ ಮೊದಲು ಬಿಸಿಬಿಸಿ ಕಾಫಿಯನ್ನು ಸೇವಿಸಿ ನೋಡಿ!

By Deepak
|

ಇಂದಿನ ದೊಡ್ಡ ನಗರಗಳಲ್ಲಿ ಕಾಫಿ ಕುಡಿಯುವುದು ಹೆಚ್ಚಾಗಿದೆ. ಕಾಫೀ ಕುಡಿಯುವುದರಿಂದ ನಮ್ಮ ಇಡೀ ದಿನ ವಿಶ್ವಾಸ ಹೆಚ್ಚಿದಂತಿರುತ್ತದೆ ಹಾಗೆಂದು ಬಹುತೇಕ ಎಲ್ಲಾ ರಸ್ತೆಗಳಲ್ಲೂ ಅಥವ ಮೂಲೆ ಮೂಲೆಗಳಲ್ಲೂ ತಲೆ ಎತ್ತಿರುವ ಕಾಫಿ ಅಂಗಡಿಗಳನ್ನು ನಾವು ಹಚ್ಚಿಕೊಂಡುಬಿಟ್ಟಿದ್ದೇವೆ.

ಆದಾಗ್ಯೂ ಕಾಫಿ ನಮ್ಮ ದಿನನಿತ್ಯ ಜೀವನದಲ್ಲಿ ಹರಡಿಕೊಂಡಿರುವುದಕ್ಕೆ ಸ್ಪಷ್ಟ ಕಾರಣಗಳಿವೆ. ವೈಜ್ಞಾನಿಕವಾಗಿ ಈ ‘ಅದ್ಭುತ ಪಾನೀಯ' ಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ಅನಾರೋಗ್ಯವನ್ನು ದೂರವಿಡುತ್ತದೆಯೆಂಬ ಅಂಶಗಳನ್ನು ಹೊಂದಿದೆಯೆಂದು ಸಾಬೀತಾಗಿದೆ.

ನಮ್ಮಲ್ಲಿ ಬಹುತೇಕ ಮಂದಿಯ ಜೀವನ ಆರಂಭವಾಗುವುದೇ ಕಾಫಿ ಸೇವನೆಯಿಂದ. ಆದರೆ ವ್ಯಾಯಾಮ ಮಾಡುವ ಮೊದಲು ಕಾಫಿಯನ್ನು ಸೇವಿಸಿದ್ದೀರಾ? ವ್ಯಾಯಾಮ ಮಾಡುವ ಮೊದಲು ಕಾಫಿ ಸೇವನೆ ಮಾಡುವುದರಿಂದ ದೈಹಿಕ ಚಟುವಟಿಕೆ ನಿಭಾಯಿಸಲು ನಿಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

Benefits Of Caffeine Before A Workout

ಕಾಫಿಯನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿರುವ ಸಂಗತಿಯೇ, ಆದರೆ ನಾವು ಇಲ್ಲಿ ಕಾಫಿ ಸೇವನೆಯ ಚಟದ ಕುರಿತು ಮಾತನಾಡುತ್ತಿಲ್ಲ. ಆದರೆ ಕಾಫಿಯನ್ನು ಮಿತವಾಗಿ ಸೇವಿಸುವುದರಿಂದ ವ್ಯಾಯಾಮ ಮಾಡುವವರಿಗೆ ಒಳ್ಳೆಯ ಲಾಭಗಳು ದೊರೆಯುತ್ತವೆ. ಬನ್ನಿ ವ್ಯಾಯಾಮಕ್ಕೂ ಮುನ್ನ ಕಾಫಿಯನ್ನು ಸೇವಿಸುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ.

ನೋವುನಿವಾರಕ
ಆರೋಗ್ಯಕರ ಅಂಶವುಳ್ಳ ಕೆಫೀನ್ ಜೊತೆ caffeic acid, ferulic acid ಮತ್ತು chlorogenic acid ಎಂಬ ಪೋಷಕಾಂಶಗಳು ಆರೋಗ್ಯವನ್ನು ವೃದ್ಧಿಸುವಲ್ಲಿ ನೆರವಾಗುತ್ತವೆ. ಮುಖ್ಯವಾಗಿ ನಮ್ಮ ಚಟುವಟಿಕೆಗಳು ಕುಂಠಿತವಾಗುವ adrenal fatigue ಎಂಬ ಸುಸ್ತನ್ನು ಹೋಗಲಾಡಿಸಲು ಈ ಪೋಷಕಾಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಬೆಳಗಿನ ಜಾವ ವ್ಯಾಯಾಮಕಿಂತ ಮುಂಚೆ ಕಾಫಿಯನ್ನು ಸೇವಿಸುವುದರಿಂದ ವ್ಯಾಯಾಮ ಮಾಡುವಾಗ ಉಂಟಾಗುವ ಮೈ ಕೈ ನೋವಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುವುದರ ಜೊತೆಗೆ ಇದು ತಾತ್ಕಾಲಿಕ ನೋವು ನಿವಾರಕದಂತೆ ಕೆಲಸ ಮಾಡುತ್ತದೆ...

ಹೃದಯಕ್ಕೆ ಉತ್ತಮ
ಕಾಫಿಯನ್ನು ವ್ಯಾಯಾಮಕ್ಕಿಂತ ಮುಂಚೆ ಕುಡಿಯುವುದರಿಂದ ಹೃದಯಕ್ಕೆ ಉತ್ತಮವಾಗಿದೆ. ಹೇಗೆಂದರೆ ರಕ್ತನಾಳಗಳ ಒಳಗೆ ಜಿಡ್ಡುಪದಾರ್ಥಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಅಂಟಿಕೊಂಡು ತಿರುವು ಮತ್ತು ಕವಲುಗಳಿರುವ ಸ್ಥಳಗಳಲ್ಲಿ ಒಳಭಾಗದ ವ್ಯಾಸವನ್ನು ಕಿರಿದುಗೊಳಿಸುತ್ತವೆ. ಇದರ ಮೂಲಕ ರಕ್ತ ಹಾದುಹೋಗಲು ಹೃದಯ ಹೆಚ್ಚಿನ ಒತ್ತಡದಿಂದ ನೂಕಬೇಕಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ಈ ಜಿಡ್ಡುಗಳನ್ನು ಸಡಿಲಗೊಳಿಸಿ ಹೃದಯದೊತ್ತಡವನ್ನು ಕಡಿಮೆಗೊಳಿಸುತ್ತದೆ. ಕಾಫಿ ಹಾಗೂ ಲಿಂಬೆಯ ಜೋಡಿ ಮಾಡಲಿದೆ ಕಮಾಲಿನ ಮೋಡಿ!

ರಕ್ತಪರಿಚಲನೆ
ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ ಕಾಫಿಯು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆಯಂತೆ. ಒಳ್ಳೆಯ ರಕ್ತ ಪರಿಚಲನೆಯು ನಿಮ್ಮ ವ್ಯಾಯಾಮವನ್ನು ಉತ್ತಮವಾಗಲು ಸಹಕರಿಸುತ್ತದೆ. ಇದು ಕಾಫಿ ಸೇವನೆಯಿಂದ ದೊರೆಯುವ ಪ್ರಯೋಜನಗಳಲ್ಲಿ ಒಂದಾಗಿದೆ.

ತೂಕ ಇಳಿಸಲು ನೆರವಾಗುತ್ತದೆ


ತೂಕ ಇಳಿಸಲು ವ್ಯಾಯಾಮದಲ್ಲಿ ಹೆಚ್ಚಳ ಮತ್ತು ಆಹಾರದಲ್ಲಿ ಕಡಿಮೆ ಮಾಡುವುದು ಅನಾರೋಗ್ಯಕರ ವಿಧಾನವಾಗಿದೆ. ಆರೋಗ್ಯಕರ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹದ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು, ವ್ಯಾಯಾಮವನ್ನು ಹೆಚ್ಚಿಸುವುದು, ಅದಕ್ಕೆ ತಕ್ಕನಾದ ಆಹಾರಗಳನ್ನು ಸೇವಿಸುವುದು ಸಹಾ ಅಗತ್ಯವಾಗಿದೆ. thermogenesis ಎಂಬ ವಿಧಾನದಲ್ಲಿ ಜೀರ್ಣಗೊಳಿಸಲು ಕಠಿಣವಾಗಿದ್ದು ಹೆಚ್ಚಿನ ಕೊಬ್ಬನ್ನು ಬಳಸುವ ಕಾರಣ ದೇಹ ಶೀಘ್ರವಾಗಿ ಅನಗತ್ಯ ಕೊಬ್ಬನ್ನು ಕಳೆದುಕೊಳ್ಳುತ್ತಾ ಬರುತ್ತದೆ. ದಿನಕ್ಕೊಂದು ಕಪ್ ಕಾಫಿ ಕುಡಿಯುವುದರಿಂದ ಹೆಚ್ಚು ಲವಲವಿಕೆ ಉಂಟಾಗುವುದರ ಜೊತೆಗೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಆದರೆ ಈ ಕಾಫಿ ಹಾಲು ಸಕ್ಕರೆ ಇಲ್ಲದ ಕಪ್ಪು ಕಾಫಿಯಾಗಿದ್ದರೆ ಉತ್ತಮ. ದೇಹದ ಆರೋಗ್ಯವನ್ನನುಸರಿಸಿ ದಿನಕ್ಕೆ ಒಂದರಿಂದ ಮೂರು ಕಪ್ ಸೇವಿಸಬಹುದು

ವ್ಯಾಯಾಮದ ನಂತರ
ಒಂದು ಅಧ್ಯಯನದ ಪ್ರಕಾರ ವ್ಯಾಯಾಮದ ನಂತರ ಕಾಫಿ ಸೇವಿಸುವುದು ಕೆಟ್ಟದ್ದೇನಲ್ಲ. ಇದರಿಂದ ನೀವು ವ್ಯಾಯಾಮ ಮಾಡಿದ ನಂತರ ಸುಸ್ತಾದ ದೇಹಕ್ಕೆ ಲವಲವಿಕೆಯನ್ನು ನೀಡಬಹುದಂತೆ.

ಕೊಬ್ಬು ಕರಗಿಸಲು
ಶಕ್ತವಾಗಿರುವ ಕಾಫಿ ನಿಮ್ಮ ನಿತ್ಯದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿಧಾನವಾಗಿ ಕರಗಿಸಿ ಹೆಚ್ಚು ಹೊತ್ತು ವ್ಯಾಯಾಮ ಮಾಡಲು ಕಾಫಿ ನೆರವಾಗುತ್ತದೆ. ಜೊತೆಗೇ ಇದರಲ್ಲಿರುವ ಕೆಫೀನ್, ಥಿಯೋಬ್ರೋಮಿನ್, ಥಿಯೋಫೈಲಿನ್ ಮತ್ತು ಕ್ಲೋರೋಜೆನಿಕ್ ಆಮ್ಲಗಳು ಜಠರದಲ್ಲಿ ಕರಗಲು ಹೆಚ್ಚು ಕೊಬ್ಬನ್ನು ಬೇಡುವುದರಿಂದ ಕೊಬ್ಬು ಶೀಘ್ರವಾಗಿ ಕರಗುತ್ತದೆ.

English summary

Benefits Of Caffeine Before A Workout

It goes without saying that most of us start the day with a cup of coffee. But have you ever tried coffee before a workout? Well, there are certain advantages of sending some amount of 
 caffeine into your system before handling physical activity. Now, let us discuss about certain other benefits of drinking coffee before workout.
X
Desktop Bottom Promotion