For Quick Alerts
ALLOW NOTIFICATIONS  
For Daily Alerts

ಆಲ್ಕೋಹಾಲ್ ನಿಮ್ಮ ಜಠರಕ್ಕೆ ಏಕೆ ಕೆಟ್ಟದ್ದು?

|

ಆಲ್ಕೋಹಾಲ್ ಅಥವಾ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳು ಒಂದೆರಡಲ್ಲ. ಮದಿರೆಯ ಮೋಹ ನಮ್ಮ ಆರೋಗ್ಯವನ್ನು ಹಾಳುಗೆಡವುದರೊಂದಿಗೆ ದೈಹಿಕ ಮಾನಸಿಕ ಸ್ವಾಸ್ಥ್ಯವನ್ನು ಕಂಗೆಡಿಸುತ್ತದೆ. ನೀವು ಯೋಚನೆ ಮಾಡುವುದಕ್ಕಿಂತಲೂ ಹೆಚ್ಚು ನಿಮ ಸ್ವಾಸ್ಥ್ಯ ಹಾಳಾಗುತ್ತದೆ. ಇದಕ್ಕೆ ಮೊದಲು ಹಾನಿಯಾಗುವುದು ಜಠರವಾಗಿದೆ. ಜಠರಕ್ಕೆ ಹಾನಿಯುಂಟಾಗುವುದು ನಿಮ್ಮ ದೇಹಕ್ಕೆ ಹೆಚ್ಚಿನ ಆಘಾತವನ್ನು ನೀಡುತ್ತದೆ. ಮದ್ಯವು ಜಠರಕ್ಕೆ ಹೇಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಜಠರವು ನಿಮ್ಮ ದೇಹದ ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಜಠರ ಇಲ್ಲವಾದರೆ ನೀವು ತಿಂದ ಆಹಾರದಿಂದ ಕಾರ್ಬೊಹೈಡ್ರೇಟ್ಸ್, ಪ್ರೋಟೀನ್, ವಿಟಮಿನ್ಸ್ ಸರಿಯಾಗಿ ಪ್ರಕ್ರಿಯೆಗೊಳ್ಳುವುದಿಲ್ಲ. ದೇಹದಲ್ಲಿನ ವಿಷಕಾರಿ ಅಂಶಗಳು ದೇಹದಲ್ಲೇ ಉಳಿದುಬಿಡುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲ್ಕೋಹಾಲ್ ಸೇವನೆಗೆ ಮೊದಲು ತಿನ್ನಬೇಕಾದ ಆಹಾರಗಳು

ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಪ್ರತಿಯೊಂದು ಅಂಶವನ್ನು ಕರಾರುವಾಕ್ಕಾಗಿ ಮಾಡಲು ಜಠರ ಅಗತ್ಯ. ನೀವು ಮದ್ಯಪಾನ ಮಾಡಿದಾಗ ಅದರಲ್ಲಿನ ಎಥನೋಲ್ ಅನ್ನು ಏಸೆಟಿಕ್ ಏಸಿಡ್‌ನ್ನಾಗಿ ಪರಿವರ್ತಿಸಲು ಜಠರ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಮೂತ್ರದ ಮೂಲಕ ದೇಹದಿಂದ ಹೊರಹೋಗುವ ಕಡಿಮೆ ಟೋಕ್ಸಿಕ್ ಆದ ಏಸಿಟೇಟ್ ಆಗಿ ಮಾರ್ಪಡುತ್ತದೆ.

Why is alcohol bad for your liver?

ಹೆಚ್ಚಿನ ಪ್ರಮಾಣದ ಟೋಕ್ಸಿನ್‌ಗಳನ್ನು ಮಾರ್ಪಡಿಸುವುದು ಮತ್ತು ಹೊರಹಾಕುವುದು ಜಠರದ ಪ್ರಾಥಮಿಕ ಅಂಶಗಳನ್ನು ವಿಮುಖಗೊಳಿಸುತ್ತದೆ. ಗ್ಲುಕೋಸ್ ಒದಗಇಸುವಿಕೆ ಇತ್ಯಾದಿ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಗ್ಲುಕೋಸ್ ಅತ್ಯಗತ್ಯವಾಗಿದೆ. ಗ್ಲುಕೋಸ್‌ನ ಕೊರತೆಯಿಂದಾಗಿ ನಿಮಗೆ ಸುಸ್ತು, ವಾಂತಿ, ತಲೆನೋವು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದು ಮದ್ಯದಿಂದ ಉಂಟಾಗುವ ಸಣ್ಣ ಪ್ರಮಾಣದ ಪರಿಣಾಮವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಟಿಪ್ಸ್ ಮದ್ಯ ಬೇಡ ಅನ್ನುವವರಿಗೆ ಮಾತ್ರ!

ದೊಡ್ಡ ಪ್ರಮಾಣದ ಪರಿಣಾಮವೆಂದರೆ ಅತಿಯಾದ ಮದ್ಯ ಸೇವನೆಯು ಜಠರದ ಕಾಯಿಲೆಗಳನ್ನು ಆಹ್ವಾನಿಸಿದಂತೆ. ಮದ್ಯದಿಂದ ಕೊಬ್ಬಿನ ಉತ್ಪತ್ತಿ ಜಠರದಲ್ಲಿ ಸಂಗ್ರಹವಾಗಿ ಕೊಬ್ಬುಯುಕ್ತ ಜಠರ ಕಾಯಿಲೆ ಉಂಟಾಗುತ್ತದೆ. ಇದರಿಂದ ಆಲ್ಕೋಹಾಲಿಕ್ ಹೆಪಟೈಟೀಸ್ (ಯಕೃತ್ತಿನ ಉರಿಯೂತ) ಜಠರದ ಪ್ರಾಥಮಿಕ ಕಾಯಿಲೆ ಆರಂಭವಾಗುತ್ತದೆ. ಇದು ನಂತರ ಫೈಬ್ರೋಸಿಸ್‌ಗೆ ಕಾರಣವಾಗುತ್ತದೆ.

ಮದ್ಯಪಾನವು ಒಂದು ಸ್ಲೋ ಪಾಯಿಸಿನ್‌ನಂತೆ. ಜಠರಕ್ಕೆ ಉಂಟಾಗುವ ಈ ಹಾನಿಗಳು ದೇಹಕ್ಕೆ ಶಾಶ್ವತ ಹೊಡೆತವನ್ನು ನೀಡುತ್ತವೆ. ಇದರಿಂದ ಮುಕ್ತಿ ಹೊಂದಲು ನೀವು ಪ್ರಯತ್ನಪಟ್ಟರೆ ಖಂಡಿತ ಸಾಧ್ಯ. ಜಠರವನ್ನು ಸ್ವಾಸ್ಥ್ಯವಾಗಿಡುವುದಕ್ಕಾಗಿ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲ್ಕೋಹಾಲ್ ಮತ್ತು ಆರೋಗ್ಯ ಸಮಸ್ಯೆಗಳು

1.ನಿಮ್ಮ ಆಹಾರ ಮತ್ತು ಮದ್ಯದ ಸೇವನೆ
ಕಡಿಮೆ ಕೊಬ್ಬಿರುವ ಆಹಾರವನ್ನು ಸೇವಿಸುವುದು ನಿಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಪಾತ್ರ ವಹಿಸುತ್ತದೆ. ಮದ್ಯವನ್ನು ತ್ಯಜಿಸುವುದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ನಿಮಗೆ ಕುಡಿಯಲೇಬೇಕೆಂದು ಬಯಕೆಯಾದಲ್ಲಿ ಕೆಂಪು ಅಥವಾ ಬಿಳಿ ವೈನ್ ಅನ್ನು ಸೇವಿಸಿ. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಿ ರಕ್ತ ಪರಿಚಲನೆಯನ್ನು ವರ್ಧಿಸುತ್ತದೆ.

2.ವ್ಯಾಯಾಮ
ವ್ಯಾಯಾಮವು ನಿಮ್ಮನ್ನು ಸುದೃಢಗೊಳಿಸುವುದಲ್ಲದೆ, ನಿಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ನಿಯಂತ್ರಿಸಲು ಮತ್ತು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಆಂತರಿಕವಾಗಿ ಜಠರವನ್ನು ರಕ್ಷಿಸುವ ಕೆಲಸವನ್ನು ಇದು ಮಾಡುತ್ತದೆ.

3.ಆರೋಗ್ಯಯುತ ಮತ್ತು ಸ್ವಚ್ಛವಾಗಿರಿ
ಹೆಪಟೈಟೀಸ್ ಎ ಮತ್ತು ಇ ಯು ಸ್ವಚ್ಛವಾಗಿಲ್ಲದ ಆಹಾರವನ್ನು ಸೇವಿಸುವುದರಿಂದ ಹರಡುತ್ತದೆ.ಇದು ಜಠರಕ್ಕೆ ನೇರವಾಗಿ ಹಾನಿಯನ್ನುಂಟು ಮಾಡುತ್ತದೆ. ನೀರನ್ನು ಬಿಸಿ ಮಾಡಿ ಅಥವಾ ಶೋಧಿಸಿ ಕುಡಿಯುವುದು ಅತ್ಯವಶ್ಯಕ.

4.ಸಲಹೆಯಿಲ್ಲದ ಔಷಧ ಸೇವನೆ ಬೇಡ
ಸಿರಪ್ ಅನ್ನು ಸೇವಿಸುವುದು ಅಷ್ಟೇನೂ ಅಪಾಯಕಾರಿಯಲ್ಲ ಆದರೆ ಸಲಹೆಯಿಲ್ಲದ ಮಾತ್ರೆಗಳನ್ನು ಸೇವಿಸುವುದು ಜಠರಕ್ಕೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಮೊದಲು ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆದುಕೊಳ್ಳಿ.

Read more about: health ಆರೋಗ್ಯ
English summary

Why is alcohol bad for your liver?

We all know that alcohol causes liver damage, and that often becomes the butt of jokes during a long night of drinking. But, that extra glass of whiskey or wine can do much more damage to your body than you thought, and the liver is the first organ to take the hit.
X
Desktop Bottom Promotion