For Quick Alerts
ALLOW NOTIFICATIONS  
For Daily Alerts

ತಿನ್ನುವ ಕಾಯಿಲೆ ಚಿಕಿತ್ಸೆಗೆ ವಿಧಾನಗಳು

By Hemanth P
|

ಬದುಕಲು ಆಹಾರ ಬೇಕು. ಆದರೆ ಇದರರ್ಥ ಸಿಕ್ಕಿದೆಲ್ಲ ಹಾಗೂ ನೋಡಿದೆಲ್ಲವನ್ನು ತಿನ್ನಬೇಕೆಂದಲ್ಲ. ಬಟಾಟೆ ಚಿಪ್ಸ್ ಇರುವ ಒಂದು ಬ್ಯಾಗ್ ನ್ನು ಎತ್ತಿಕೊಂಡು ಟಿವಿ ಮುಂದೆ ಕುಳಿತುಕೊಂಡು ಗಂಟೆಗಟ್ಟಲೆ ಕಳೆಯಲು ನೀವು ಹೆಚ್ಚಿನ ಆಸಕ್ತಿ ತೋರಿಸಬಹುದು. ಇದು ನಿಮಗೆ ತುಂಬಾ ಆಸಕ್ತಿ ಮೂಡಿಸಬಹುದು. ಆದರೆ ಇದು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಇದರ ಬಗ್ಗೆ ದೀರ್ಘವಾಗಿ ವಿಶ್ಲೇಷಿಸಿದರೆ ಅದು ನಿಮಗೆ ಆಘಾತವನ್ನುಂಟುಮಾಡಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ನೀವು ತಿನ್ನುವ ಆಹಾರವು ನಿಮ್ಮ ದೈಹಿಕ ಹಾಗೂ ಮಾನಸಿಕ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ತಿನ್ನುವ ಆಹಾರದ ಪ್ರಮಾಣವನ್ನು ಹೆಚ್ಚಿನ ಕಾಳಜಿಯಿಂದ ಗಮನಿಸಬೇಕು ಮತ್ತು ಅದನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು. ತುಂಬಾ ಜನರಿಗೆ ತಿನ್ನುವ ಕಾಯಿಲೆ ಇರುತ್ತದೆ ಮತ್ತು ಇದೀಗ ಸಾಮಾನ್ಯವಾಗಿದೆ.

Ways to treat eating disorders

ತಿನ್ನುವ ಕಾಯಿಲೆಯು ಯಾರನ್ನೂ ಬಿಟ್ಟಿಲ್ಲ, ಜನಪ್ರಿಯ ಗಾಯಕಿ ಕೂಡ ಇದರಿಂದ ಬಳಲಿದ್ದಾಳೆ. ಹೌದು, ಆಕೆಯೇ ನಿಮ್ಮ ಫೇವರಿಟ್ ಕೆಶಾ!. ಕಾಯಿಲೆ ನಿವಾರಣೆಗೆ ಪ್ರಯತ್ನಿಸಿದಾಗ ಆಕೆ ಸಾವು ಮತ್ತು ಬದುಕಿನ ಮಧ್ಯೆ ತುಂಬಾ ಹೋರಾಟ ನಡೆಸಿದ್ದಳು. ಆಕೆ ತುಂಬಾ ಕಠಿಣ ವಿಧಾನದಿಂದ ತನ್ನಿಂದಲೇ ಕಲಿತುಕೊಂಡು ಈಗ ತುಂಬಾ ಸಂತೋಷದಿಂದ ಇದ್ದಾಳೆ. ಆಕೆ ಕಾಯಿಲೆಯ ಪುನರ್ವಸತಿ ಕೇಂದ್ರದಲ್ಲಿರುವಾಗ ಬಿಡುಗಡೆ ಮಾಡಿದಂತಹ ಕೆಲವೊಂದು ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತನ್ನ ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿಯ ಬಗ್ಗೆ ಆಕೆ ಕಣ್ಣೀರು ಸುರಿಸಿದ್ದಳು. ಕೆಶಾಳಂತೆ ನೀವು ಕಠಿಣ ಹಾದಿಗೆ ಬರುವ ಮೊದಲೇ ತಿನ್ನುವ ಕಾಯಿಲೆ ನಿಯಂತ್ರಿಸಬಹುದು. ಅದಕ್ಕಾಗಿ ಕೆಲವೊಂದು ವಿಧಾನಗಳು ಇಲ್ಲಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿನ್ನುವ ಆಹಾರದ ಪ್ರಮಾಣ ನಿಯಂತ್ರಣಕ್ಕೆ ಟಿಪ್ಸ್

1. ನಿಮ್ಮ ಕಾಯಿಲೆಗೆ ಅನುಗುಣವಾಗಿ ಚಿಕಿತ್ಸೆ
ತಿನ್ನುವ ಕಾಯಿಲೆಯ ಚಿಕಿತ್ಸೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮೊದಲ ವಿಷಯವೆಂದರೆ ನಿಮ್ಮ ಕಾಯಿಲೆಗೆ ಸರಿಯಾದ ಕಾರಣ ತಿಳಿದುಕೊಂಡ ಬಳಿಕ ಅದಕ್ಕೆ ಚಿಕಿತ್ಸೆ ನೀಡಬಹುದು. ನಿಮ್ಮ ಸಮಸ್ಯೆ ಏನೆಂದು ವೈದ್ಯರಿಗೆ ಹೇಳಿ. ಅದರ ಚಿಹ್ನೆಗಳು ಏನೆಂದು ಅವರಿಗೆ ತಿಳಿಸಿ. ಮುಕ್ತವಾಗಿ ಮಾತನಾಡಲು ಹಿಂಜರಿಯಬೇಡಿ. ತಿನ್ನುವ ಕಾಯಿಲೆಗೆ ಚಿಕಿತ್ಸೆ ಮಾಡಬಹುದು. ಆದರೆ ವೈದ್ಯರು ಇದಕ್ಕೆ ಸೂಕ್ತ ಕಾರಣ ತಿಳಿದುಕೊಳ್ಳಬೇಕಾಗುತ್ತದೆ.

2. ಮನೋವೈಜ್ಞಾನಿಕ ಚಿಕಿತ್ಸೆ
ಮನೋವೈಜ್ಞಾನಿಕ ಸಲಹೆ ತಿನ್ನುವ ಕಾಯಿಲೆಯ ಚಿಕಿತ್ಸೆಗೆ ಒಂದು ಒಳ್ಳೆಯ ವಿಧಾನ. ತಿನ್ನುವ ಕಾಯಿಲೆ ಇರುವ ಒಬ್ಬ ರೋಗಿಗೆ ಚಿಕಿತ್ಸೆ ನೀಡುವ ವಿಧಾನವನ್ನು ವೈದ್ಯರು ಮಾತ್ರ ನಿರ್ಧರಿಸಬಲ್ಲರು. ಚಿಕಿತ್ಸೆ ಎಲ್ಲಿ ಆರಂಭಿಸಬೇಕೆಂದು ವೈದ್ಯರು ನಿರ್ಧರಿಸುತ್ತಾರೆ. ವೈದ್ಯರು ಮಾತ್ರ ರೋಗಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ತಿನ್ನುವ ಕಾಯಿಲೆಯ ಚಿಕಿತ್ಸೆ ವಿಧಾನ ನಿರ್ಧರಿಸಬಹುದು. ಕೆಲವು ರೋಗಿಗಳ ತಿನ್ನುವ ಕಾಯಿಲೆಗೆ ಸುಲಭವಾಗಿ ಚಿಕಿತ್ಸೆ ನೀಡಬಹುದು. ಕೌನ್ಸಿಲಿಂಗ್ ಅವರ ಮೇಲೆ ಮ್ಯಾಜಿಕ್ ಮಾಡಬಹುದು ಮತ್ತು ಇದು ತಿನ್ನುವ ಕಾಯಿಲೆಯ ಚಿಕಿತ್ಸೆಗೆ ಒಂದು ವಿಧಾನ.

ಮನೋವೈಜ್ಞಾನಿಕವಾಗಿ ತಿನ್ನುವ ಕಾಯಿಲೆಗೆ ಚಿಕಿತ್ಸೆ ನೀಡಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ ಕೆಲವು ಇಲ್ಲಿವೆ...

ಕುಟುಂಬ ಮಾದರಿ ಚಿಕಿತ್ಸೆ
ಇದು ಒಂದು ರೀತಿಯ ಮನೋವೈಜ್ಞಾನಿಕ ಚಿಕಿತ್ಸೆ. ಇದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಕೌನ್ಸಿಲಿಂಗ್ ನಲ್ಲಿ ಭಾಗಿಯಾಗಬೇಕು. ಇದು ತಿನ್ನುವ ಕಾಯಿಲೆಯ ಚಿಕಿತ್ಸೆಗೆ ಒಂದು ಒಳ್ಳೆಯ ವಿಧಾನ

ನಡವಳಿಕೆಯ ಚಿಕಿತ್ಸೆ
ಇದು ಕಡಿಮೆ ಸಮಯದ ಚಿಕಿತ್ಸೆ ಮತ್ತು ತಿನ್ನುವ ಕಾಯಿಲೆಯ ಚಿಕಿತ್ಸೆಗೆ ಒಂದು ವಿಧಾನ. ಈ ಚಿಕಿತ್ಸೆಯು ತಿನ್ನುವ ಕಾಯಿಲೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು ರೋಗಿಗೆ ನೆರವಾಗಲಿದೆ.

ವ್ಯಕ್ತಿಗಳ ನಡುವಿನ ಮನೋಚಿಕಿತ್ಸೆ
ನಿಮ್ಮ ತಿನ್ನುವ ಕಾಯಿಲೆಯು ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಂಬಂಧದ ಪರಿಣಾಮದಿಂದಾಗಿ ಉಂಟಾದ ನಿಮ್ಮ ತಿನ್ನುವ ಕಾಯಿಲೆ ಸಮಸ್ಯೆಯನ್ನು ಈ ಚಿಕಿತ್ಸೆ ಬಗೆಹರಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಧೂಳಿನ ಅಲರ್ಜಿ ಲಕ್ಷಣಗಳು ಮತ್ತು ಚಿಕಿತ್ಸೆ

3. ಪೌಷ್ಠಿಕಾಂಶಗಳ ಬಗ್ಗೆ ಶಿಕ್ಷಣ
ಸರಿಯಾಗಿ ತಿನ್ನಬೇಕಿದ್ದರೆ ನಿಮಗೆ ಆಹಾರದ ಬಗ್ಗೆ ಜ್ಞಾನವಿರಬೇಕು. ಯಾವುದನ್ನು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂದು ನಿಮಗೆ ತಿಳಿದಿರಬೇಕು. ಇದು ತಿನ್ನುವ ಕಾಯಿಲೆಯ ಚಿಕಿತ್ಸೆಗೆ ಒಂದು ವಿಧಾನ. ತಿನ್ನುವ ಕಾಯಿಲೆಗೆ ಚಿಕಿತ್ಸೆ ನೀಡುವ ಕೆಲವು ವೃತ್ತಿಪರರು, ಸಮಸ್ಯೆ ಎದುರಿಸುವ ವ್ಯಕ್ತಿಗೆ ಆತ ತಿನ್ನುವ ಆಹಾರದ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ. ಇದು ಅವರಿಗೆ ನೆರವಾಗಿದೆ. ನಿಮ್ಮ ಆರೋಗ್ಯಕರ ಆಹಾರದ ಬಗ್ಗೆ ಯೋಜನೆ ಹಾಕಿಕೊಳ್ಳುವುದು ಅತ್ಯಗತ್ಯ. ನಿಮ್ಮ ಊಟದ ಪಟ್ಟಿ ಮತ್ತು ಯಾವ ಸಮಯದಲ್ಲಿ ಏನು ತಿನ್ನಬೇಕು ಎನ್ನುವುದನ್ನು ವೃತ್ತಿಪರರು ಹೇಳಿಕೊಡುತ್ತಾರೆ. ಚಿಕಿತ್ಸೆಯ ಅಂತ್ಯಕ್ಕೆ ನೀವು ಒಂದು ಆರೋಗ್ಯಕರ ಆಹಾರ ಪದ್ಧತಿ ಅಳವಡಿಸಿಕೊಂಡಿರುತ್ತೀರಿ. ನೀವು ತುಂಬಾ ಪ್ರೀತಿಸುವ ಜಂಕ್ ಫುಡ್ ನ್ನು ತ್ಯಜಿಸಿರಬಹುದು. ಆದಾಗ್ಯೂ, ನೀವು ಆರೋಗ್ಯಕರವಾಗಿರುವುದನ್ನು ತಿಂದು ಆರೋಗ್ಯಕರವಾಗಿರಬೇಕು.

Read more about: health ಆರೋಗ್ಯ
English summary

Ways to treat eating disorders

Food is for survival and that really doesn’t mean you should eat everything and anything you see. You may be interested to grab a bag full of potato chips and sit in front of your television for hours.
Story first published: Friday, March 7, 2014, 15:06 [IST]
X
Desktop Bottom Promotion