For Quick Alerts
ALLOW NOTIFICATIONS  
For Daily Alerts

ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸಬೇಕೆ? ಇಲ್ಲಿದೆ ಸಲಹೆ

By Poornima Hegde
|

ನಾವು ಸೇವಿಸುವ ಯಾವುದೇ ಆಹಾರದಲ್ಲಿ ಉಪ್ಪು ಇಲ್ಲದಿದ್ದರೆ ಆ ಆಹಾರವೇ ಸ್ವಾದ ಕಳೆದುಕೊಳ್ಳುತ್ತದೆ ಎಂಬುದು ಸಾಮಾನ್ಯ ವಾಡಿಕೆ. ಆದ್ದರಿಂದ ಕೆಲವರಂತೂ ಸಾಕಷ್ಟು ಉಪ್ಪನ್ನು ಸೇವಿಸುತ್ತಾರೆ. ಆದರೆ ಆಹಾರದಲ್ಲಿನ ಸ್ವಾದವನ್ನು ಕಡಿಮೆ ಮಾಡಿಕೊಳ್ಳದೇ ನಿಮ್ಮ ದೈನಂದಿನ ಉಪ್ಪು ಸೇವನೆಯನ್ನು ಮಾತ್ರ ಕಡಿಮೆಗೊಳಿಸಲು ಬಯಸಿದ್ದೀರಾ? ಹಾಗಾದರೆ ಇಲ್ಲಿದೆ ಮಾರ್ಗ! ನೀವು ಅದ್ಭುತ ರುಚಿಯೊಂದಿಗೆ ಆರೋಗ್ಯಕರ ಆಹಾರವನ್ನು ಸೇವಿಸಲು ಏಳು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಎಷ್ಟು ಉಪ್ಪನ್ನು ಸೇವಿಸಬಹುದು?
ನೀವು ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು ಎಂಬುದನ್ನು ಅರಿಯದಿದ್ದರೆ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸುವುದು ಕಷ್ಟ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದಿನದಲ್ಲಿ 5 ಗ್ರಾಂ ನಷ್ಟು ಅಂದರೆ ಒಂದು ಚಮಚ ಉಪ್ಪನ್ನು ನಿಮ್ಮ ದಿನದ ಆಹಾರದಲ್ಲಿ ಉಪಯೋಗಿಸಬಹುದು. ಆಹಾರವನ್ನು ತಯಾರು ಮಾಡುವಾಗ ಈ ಅಂಶ ನಿಮಗೆ ಅರಿವಿದ್ದರೆ ನೀವು ಸುಲಭವಾಗಿ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯ. ನಿಮಗೆ ಸೋಡಿಯಂ ಸೇವನೆ ಅಗತ್ಯವಾಗಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು. ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು

TRYING TO REDUCE SALT FROM FOOD, TRY THESE TIPS

ಕಡಿಮೆ ಉಪ್ಪು ಬಳಸಿ ಮಾಡುವ ಪಾಕ ವಿಧಾನಗಳನ್ನು ಅನ್ವೇಷಿಸಿ
ಎಲ್ಲರ ಅಭಿರುಚಿಯನ್ನೂ ಪೂರೈಸಲು ಕಡಿಮೆ ಉಪ್ಪು ಬಳಸಿ ಮಾಡಬಹುದಾದ ಪಾಕ ವಿಧಾನಗಳನ್ನು ಅಂತರ್ಜಾಲದ ಮೂಲಕ ಹುಡುಕಬಹುದು. 'ನೆಸ್ಲೆ' ವೆಬ್ ಸೈಟ್ ನಲ್ಲಿ ನಾವು ನಿಮ್ಮ ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ ರುಚಿಕರವಾಗಿ ಹೇಗೆ ಆಹಾರವನ್ನು ತಯಾರಿಸಬಹುದು ಎಂಬ ಪಾಕವಿಧಾನವನ್ನು ಹೇಳಿದ್ದೇವೆ. ಇದಕ್ಕೆ ನಿಮ್ಮ ಸ್ವಂತ ಯೋಚನೆಗಳನ್ನೂ ಸೇರಿಸಿ ಅದ್ಭುತ ರುಚಿಕರ ಅಡುಗೆಯನ್ನು ತಯಾರಿಸಿ ಜಗತ್ತಿಗೇ ಪರಿಚಯಿಸಬಹುದು.
ನೆಸ್ಲೆ ವೆಬ್ ಸೈಟ್ ನಲ್ಲಿ ' ಕಡಿಮೆ ಉಪ್ಪು ಬಳಸಿ ಮಾಡುವ ಪಾಕವಿಧಾನಗಳನ್ನು(ಲೋ ಸಾಲ್ಟ್ ರೆಸಿಪಿಸ್) ಪಿಂಟ್ರೆಸ್ಟ್ (Pinterest) ನಲ್ಲಿ ನೋಡಬಹುದು.

ಚುರುಕಾದ ಶಾಪಿಂಗ್ ಆಯ್ಕೆ ಪಟ್ಟಿಯನ್ನು ತಯಾರಿಸಿ
ಉತ್ಪನ್ನದ ಲೇಬಲ್ ಪರೀಕ್ಷಿಸುವ ಮೂಲಕ ಉಪ್ಪು ಹೆಚ್ಚಿರುವ ಅಥವಾ ಕಡಿಮೆ ಇರುವ ನಿಮ್ಮ ಮೆಚ್ಚಿನ ಆಹಾರಗಳ ಪಟ್ಟಿಯನ್ನು ಮಾಡಿ. ನಾವು ಕಡಿಮೆ ಉಪ್ಪಿರುವ ಉತ್ಪನ್ನಗಳನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಿದ್ದೇವೆ. ಮ್ಯಾಗಿ ಸೂಪ್ ಮತ್ತು ನೂಡಲ್ಸ್, ಮತ್ತು ಪಿಜ್ಜಾಗಳು ಸೇರಿದಂತೆ ನಮ್ಮ ಖಾರದ ಆಹಾರ ಉತ್ಪನ್ನಗಳಲ್ಲಿ ಇನ್ನೂ ಉಪ್ಪು ಕಡಿಮೆ ಮಾಡಿ ತಯಾರಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.

ಕಡಿಮೆ ಉಪ್ಪು ಬಳಸಿ ಆಹಾರ ತಯಾರಿಸುವುದು
ನಾವು ಸಾಮಾನ್ಯವಾಗಿ ಪ್ರತಿ ಪಾಕ ವಿಧಾನದಲ್ಲಿಯೂ ಸ್ವಲ್ಪ ಉಪ್ಪು ಸೇರಿಸಲು ಹೇಳಿದರೂ ಅನೇಕ ಜನರು ಊಟದಲ್ಲಿ ಮತ್ತೆ ಉಪ್ಪನ್ನು ಸೇರಿಸುತ್ತಾರೆ. ಹೀಗೆ ಎರಡು ಬಾರಿ ಉಪ್ಪು ಬಳಸುವ ಅಗತ್ಯವಿದೆಯೇ? ಪ್ರತಿ ಆಹಾರಗಳ ತಯಾರಿಕೆಯಲ್ಲೂ ಸಾಕಷ್ಟು ಉಪ್ಪನ್ನು ಸೇವಿಸುವ ಬದಲು ಊಟ ಮಾಡುವ ಸಮಯದಲ್ಲಿ ಅವರವರ ರುಚಿಗೆ ತಕ್ಕಂತೆ ಮಸಾಲೆ, ಉಪ್ಪು ಇಂತಹ ಸಾಮಗ್ರಿಗಳನ್ನು ಒದಗಿಸುವುದು ಒಳ್ಳೆಯದು.

ಮೊದಲೇ ಅಡುಗೆಯ ರುಚಿ ನೋಡಿ
ನಿಮಗೆ ನಿಮ್ಮ ಊಟದಲ್ಲಿ ಇನ್ನೂ ಹೆಚ್ಚುವರಿ ಉಪ್ಪು ಬೇಕೇ? ನಮ್ಮಲ್ಲಿ ಸಾಕಷ್ಟು ಜನರು ದಿನವೂ ತಯಾರಿಸುವ ಆಹಾರಕ್ಕೆ ಅದರ ರುಚಿಯನ್ನೇ ನೋಡದೆ ಹೆಚ್ಚು ಉಪ್ಪನ್ನು ಸೇರಿಸುತ್ತಾರೆ. ಆದರೆ ಹೀಗೆ ಮಾಡುವ ಅಗತ್ಯವಿಲ್ಲ. ಕನಿಷ್ಠ ಆರಂಭದಲ್ಲೇ ಆಹಾರದ ರುಚಿಯನ್ನು ನೋಡಿ ಹೆಚ್ಚುವರಿ ಮಸಾಲೆ ಅಗತ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದದಿಂದ ನಿಮ್ಮ ಆಹಾರದಲ್ಲಿ ಹೆಚ್ಚು ವ್ಯತ್ಯಾಸವೇನೂ ಉಂಟಾಗುವುದಿಲ್ಲ.

ಕಡಿಮೆ ಉಪ್ಪು ಬಳಸಿ, ಆನಂದಿಸಿ
ಇದು ಎಲ್ಲಾ ರುಚಿಯ ಕುರಿತು: ಉಪ್ಪು ಕಡಿಮೆಗೊಳಿಸಲು ಹಿಂಜರಿಯದಿರಿ, ನಿಮ್ಮ ರುಚಿ, ಆ ಸ್ವಾದಗಳು ದಿನಕಳೆದಂತೆ ಈ ಬದಲಾವಣೆಗೆ ಹೊಂದಿಕೊಳ್ಳುತ್ತವೆ. ನಾವು ಕ್ರಮೇಣ 2005 ಏಕೆ ನಮ್ಮ ಆಹಾರದಲ್ಲಿ ಉಪ್ಪಿನ ಮಟ್ಟವನ್ನು ಕಡಿಮೆಗೊಳಿಸುತ್ತಾ ಬಂದಿದ್ದೇವೆ? ಏಕೆಂದರೆ ಗ್ರಾಹಕರಿಗೆ ಅವರಿಗೆ ದೀರ್ಘಾವಧಿಯ ತಮ್ಮ ರುಚಿ ಆಯ್ಕೆಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವುದು, ಮತ್ತು ಅವರ ಆಸ್ವಾದವನ್ನು ಬದಲಾಯಿಸುವುದು ನಮ್ಮ ಉದ್ದೇಶ. ಆರೋಗ್ಯ ವರ್ಧಿಸುವ ಸೀಬೆಹಣ್ಣು ಎಲೆಗಳ ಅದ್ಭುತ ಚಿಕಿತ್ಸಾ ಗುಣಗಳು

ಹೊಸ ರುಚಿಗಳನ್ನು ಒಪ್ಪಿಕೊಳ್ಳಿ
ಉಪ್ಪು, ಮಸಾಲೆ ಪದಾರ್ಥ ಮಾತ್ರವಲ್ಲ. ನಿಮ್ಮ ಮಸಾಲೆಯಲ್ಲಿ ಉಪ್ಪಿಗೆ ಪರ್ಯಾಯಕ್ಕಾಗಿ ನಿಮ್ಮ ಮೆಚ್ಚಿನ ಆಹಾರಕ್ಕೆ ಹೊಂದಿಕೆಯಾಗುವಂತಹ ಇತರ ಮಸಾಲೆಯನ್ನೂ ಬಳಸಲು ಪ್ರಯತ್ನಿಸಿ. ನೆಸ್ಲೆ ವೆಬ್ ನಲ್ಲಿ, ನಮ್ಮ ಪಾಕ ತಜ್ಞರು, ಯಾವಾಗಲೂ ಉಪ್ಪಿನ ಬದಲು ವಿವಿಧ ಮೆಣಸು ಹಾಗೂ ಗಿಡಮೂಲಿಕೆಗಳನ್ನು ಬಳಸಿ ಹೊಸ ಹೊಸ ರುಚಿಗಳನ್ನು ನೀಡುವಲ್ಲಿ ಸದಾ ತೊಡಗಿರುತ್ತಾರೆ.

English summary

TRYING TO REDUCE SALT FROM FOOD, TRY THESE TIPS

Hoping to reduce your daily salt intake without cutting down on flavour? Here are seven tips to help ensure you're enjoying healthy food with great taste.
Story first published: Monday, November 24, 2014, 16:43 [IST]
X
Desktop Bottom Promotion