For Quick Alerts
ALLOW NOTIFICATIONS  
For Daily Alerts

ಏಲಕ್ಕಿಯಲ್ಲಿರುವ ಆರೋಗ್ಯಕಾರಿ ಲಾಭಗಳು ಯಾವುದು?

|

ಭಾರತೀಯ ಅಡುಗೆಯಲ್ಲಿ ಏಲಕ್ಕಿ ತನ್ನ ಚಮತ್ಕಾರವನ್ನು ತೋರುವ ಈ ಪುಟ್ಟ ಸಾಂಬಾರು ಪದಾರ್ಥ, ಆಯುರ್ವೇದದಲ್ಲಿ ದಿವ್ಯ ಔಷಧವಾಗಿದೆ ಎಂದರೆ ನೀವು ನಂಬಲೇಬೇಕು. ಬಾಯಿ ಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಏಲಕ್ಕಿ ಸಿದ್ಧಹಸ್ತವಾಗಿದೆ.

ನಿಮ್ಮ ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ. "ಏಲಕ್ಕಿ" ಎಂದು ಕರೆಯಲ್ಪಡುವ ಈ ಒಂದು ಸಾಂಬಾರ ಪದಾರ್ಥವು ಭಾರತೀಯರ ಅಡುಗೆ ಮನೆಗಳಲ್ಲಿ ಕಾಣಸಿಗುವ ಒಂದು ಅತಿ ಸಾಮಾನ್ಯ ವಸ್ತುವಾಗಿದೆ.

ಈ ಏಲಕ್ಕಿಯು ಸಿಹಿತಿಂಡಿ ಮತ್ತು ಖಾರ ಅಥವಾ ಉಪ್ಪು ರುಚಿಯಿರುವ ತಿಂಡಿಗಳ ತಯಾರಿಕೆಯಲ್ಲಿ ಬಳಸಲ್ಪಡುವುದು ಮಾತ್ರವಲ್ಲದೇ, ಏಲಕ್ಕಿಯು ಬಾಯಿಯನ್ನು ಸ್ವಚ್ಚಗೊಳಿಸಿ ತಾಜಾಗೊಳಿಸುವ ಒಂದು ಪ್ರಾಕೃತಿಕ ವಸ್ತುವಾಗಿದೆ. ಇಷ್ಟು ಮಾತ್ರವಲ್ಲದೇ, ಈ ತಿಳಿಹಸಿರು ಬಣ್ಣದ ಕಾಳು ಆರೋಗ್ಯದ ದೃಷ್ಟಿಯಿಂದ ಇನ್ನೂ ಅನೇಕ ಮಹತ್ವಪೂರ್ಣ ಪ್ರಯೋಜನಗಳನ್ನು ಹೊಂದಿದೆ. ಏಲಕ್ಕಿಯ 8 ಪ್ರಮುಖ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ.

ಜೀರ್ಣ ಪ್ರಕ್ರಿಯನ್ನು ಸುಲಭಗೊಳಿಸುತ್ತದೆ

ಜೀರ್ಣ ಪ್ರಕ್ರಿಯನ್ನು ಸುಲಭಗೊಳಿಸುತ್ತದೆ

ಭೋಜನದ ಬಳಿಕ ತೆಗೆದುಕೊಳ್ಳುವ ಬಡೆಸೋಪಿಗೆ ಏಲಕ್ಕಿಯನ್ನು ಅವಶ್ಯವಾಗಿ, ಹೆಚ್ಚುವರಿಯಾಗಿ ಯಾಕೆ ಸೇರಿಸುತ್ತಾರೆ ಎಂದು ನೀವು ಎಂದಾದರೂ ಚಕಿತಗೊoಡಿದ್ದಿರಾ?! ಏಕೆಂದರೆ, ಏಲಕ್ಕಿಯು ಹೊಟ್ಟೆಯುಬ್ಬರವನ್ನು ನಿವಾರಿಸುವ ಗುಣವನ್ನು ಹೊಂದಿದ್ದು ಇದು ಪಚನ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ, ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ, ಹಾಗೂ ಹುಳಿತೇಗು ಮತ್ತು ವಾಂತಿಯ ಲಕ್ಷಣಗಳ ವಿರುದ್ಧ ಹೋರಾಡುತ್ತದೆ. ಮಾತ್ರವಲ್ಲದೇ, ಆಯುರ್ವೇದ ಪಠ್ಯಪುಸ್ತಕಗಳಲ್ಲಿ ಉಲ್ಲೇಖಿತವಾಗಿರುವಂತೆ, ಏಲಕ್ಕಿಯು ಹೊಟ್ಟೆಯಲ್ಲಿನ ವಾಯು ಹಾಗೂ ನೀರಿನ ಅಂಶ/ಗುಣಗಳನ್ನು ಕಡಿಮೆ ಮಾಡಿ, ಹೊಟ್ಟೆಯು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಪಚನ ಮಾಡುವಂತೆ ಅನುವು ಮಾಡಿಕೊಡುತ್ತದೆ.

ನೀವು ಅಜೀರ್ಣ ತೊಂದರೆಯಿಂದ ಬಳಲುತ್ತಿರುವಿರಾದರೆ, ಈ ಸಲಹೆಯು ನಿಮಗಾಗಿ. ಸುಮಾರು 2 ರಿಂದ 3 ಕಾಳುಗಳಷ್ಟು ಏಲಕ್ಕಿ, ಒಂದು ಸಣ್ಣ ಶುoಟಿಯ ಚೂರು, ಒಂದಷ್ಟು ಲವಂಗದ ಚೂರುಗಳು, ಮತ್ತು ಸ್ವಲ್ಪ ಕೊತ್ತೊಂಬರಿ ಬೀಜಗಳನ್ನು ತೆಗೆದುಕೊಳ್ಳಿರಿ. ಇವುಗಳನ್ನು ಒಟ್ಟಿಗೆ ನುಣ್ಣಗೆ ಪುಡಿ ಮಾಡಿ, ಉಗುರು ಬೆಚ್ಚಗಿನ ನೀರಿನೊಂದಿಗೆ ಈ ಪುಡಿಯನ್ನು ಸೇವಿಸಿರಿ. ಈ ಚೂರ್ಣವು ಅಜೀರ್ಣ, ಹೊಟ್ಟೆಯುಬ್ಬರ ಕೂಡಲೇ ಪರಿಹಾರವಾಗಿರುತ್ತದೆ.

ಉಸಿರಿನ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ

ಉಸಿರಿನ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ

ನೀವು ಉಸಿರಿನ ದುರ್ವಾಸನೆಯನ್ನು ಹೊಂದಿದ್ದು ಎಲ್ಲಾ ಉಪಾಯಗಳನ್ನು ಪ್ರಯತ್ನಿಸಿ ವಿಫಲಗೊಂಡವರಾದರೆ, ಒಮ್ಮೆ ಏಲಕ್ಕಿಯನ್ನು ಉಪಯೋಗಿಸಿ ನೋಡಿ. ಈ ಏಲಕ್ಕಿಯ ಒಂದು ಸಣ್ಣ ಕಾಳು, ಸೂಕ್ಷ್ಮಾಣು ಪ್ರತಿಬoಧಕ (antibacterial) ಗುಣಗಳನ್ನು ಹೊಂದಿದೆ, ಕಡುರುಚಿಯನ್ನು ಹೊಂದಿದೆ, ಹಾಗೂ ಹಿತಕರವಾದ ಸುವಾಸನೆಯನ್ನು ಹೊಂದಿದೆ. ಮಾತ್ರವಲ್ಲದೇ, ಈಗಾಗಲೇ ತಿಳಿಸಿದಂತೆ ಇದು ಪಚನ ಕ್ರಿಯೆಯನ್ನು ಸುಧಾರಿಸುವುದರಿoದ, ಅಜೀರ್ಣದ ಕಾರಣದಿಂದಾಗಿ ತಲೆದೋರುವ ಉಸಿರಿನ ದುರ್ವಾಸನೆಯನ್ನು ತಡೆಯುತ್ತದೆ. ತನ್ಮೂಲಕ ಏಲಕ್ಕಿಯು ಉಸಿರಿನ ದುರ್ವಾಸನೆಯ ಸಮಸ್ಯೆಯ ಮೂಲಕ್ಕೆ ಪರಿಹಾರವನ್ನು ಒದಗಿಸುತ್ತದೆ.

ಊಟವಾದ ನಂತರ ಏಲಕ್ಕಿಯ ಕಾಳೊಂದನ್ನು ಜಗಿಯಿರಿ ಅಥವಾ ನೀವು ಪ್ರತೀ ಮುಂಜಾನೆ ಏಲಕ್ಕಿ ಚಹಾವನ್ನು ಸೇವಿಸಿ ತನ್ಮೂಲಕ ನಿಮ್ಮ ಪಚನ ಕ್ರಿಯೆಯನ್ನು ಚುರುಕುಗೊಳಿಸಬಹುದು ಹಾಗೂ ದೇಹದ ವಿಷಪದಾರ್ಥಗಳನ್ನು ಹೊರಹಾಕಬಹುದು.

 ಅಸ್ತಮಾ, ನೆಗಡಿ, ಮತ್ತು ಕೆಮ್ಮುಗಳನ್ನು ಕಡಿಮೆ ಮಾಡುತ್ತದೆ

ಅಸ್ತಮಾ, ನೆಗಡಿ, ಮತ್ತು ಕೆಮ್ಮುಗಳನ್ನು ಕಡಿಮೆ ಮಾಡುತ್ತದೆ

ಏಲಕ್ಕಿಯು ಶ್ವಾಸಕೋಶದಲ್ಲಿ ರಕ್ತದ ಸರಬರಾಜನ್ನು ಹೆಚ್ಚಿಸಿ ತನ್ಮೂಲಕ ಉಸಿರಾಟದ ಸಮಸ್ಯೆಗಳಾದ ಅಸ್ತಮಾ, ನೆಗಡಿ, ಮತ್ತು ಕೆಮ್ಮು ಇವುಗಳನ್ನು ನಿವಾರಿಸುತ್ತದೆ. ಆಯುರ್ವೇದ ಶಾಸ್ತ್ರದ ಪ್ರಕಾರ, ಏಲಕ್ಕಿಯು ಒಂದು ಉಷ್ಣಕಾರಕ ಸಂಬಾರ ಪದಾರ್ಥವಾಗಿದ್ದು, ದೇಹದ ಉಷ್ಣತೆಯನ್ನು ಆoತರಿಕವಾಗಿ ಹೆಚ್ಚಿಸಿ, ಕಫವನ್ನು ನಿವಾರಿಸುತ್ತದೆ ಮತ್ತು ಎದೆಯ ಬಿಗಿತದಿಂದ ಮುಕ್ತಿ ದೊರಕಿಸುತ್ತದೆ.

ನೀವು ಒಂದು ವೇಳೆ ಶೀತ, ಕೆಮ್ಮು, ಮತ್ತು ಎದೆಯ ಬಿಗಿತದಿಂದ ಬಳಲುತ್ತಿದ್ದರೆ, ಈ ತೊಂದರೆಗಳ ನಿವಾರಣೆಗಾಗಿ ಏಲಕ್ಕಿಯು ಒಂದು ನೈಸರ್ಗಿಕವಾದ ಅತ್ಯುತ್ತಮ ಪರಿಹಾರವಾಗಿದೆ. ಏಲಕ್ಕಿ ಎಣ್ಣೆಯ ಕೆಲವು ಹನಿಗಳನ್ನು ಕುದಿಯುತ್ತಿರುವ ನೀರಿನ ಪಾತ್ರೆಗೆ ಸೇರಿಸಿ, ಅದರಿಂದ ಹೊರಬರುವ ಆವಿಯನ್ನು ಒಳಗೆ ತೆಗೆದುಕೊಳ್ಳಿರಿ. ನೀವು ಶೀತ ಅಥವಾ ಕೆಮ್ಮಿನಿಂದ ಬಳಲುತ್ತಿರುವಿರಾ ?! ಈ ಮೇಲಿನವೆಲ್ಲವೂ ಇಲ್ಲಿ ಸೂಚಿಸಿರುವ ಸಮಸ್ಯೆಗಳಿಗೆ, ತಕ್ಷಣ ಸ್ಪಂದಿಸುವ ಪ್ರಾಕೃತಿಕ ಪರಿಹಾರಗಳಾಗಿವೆ.

ರಕ್ತಹೀನತೆಯ ವಿರುದ್ಧ ಸೆಣಸುತ್ತದೆ

ರಕ್ತಹೀನತೆಯ ವಿರುದ್ಧ ಸೆಣಸುತ್ತದೆ

ಏಲಕ್ಕಿಯಲ್ಲಿರುವ ಇತರ ಅತೀ ಮುಖ್ಯ ಘಟಕಗಳೆಂದರೆ ತಾಮ್ರ, ಕಬ್ಬಿಣ, ಹಾಗೂ ಅವಶ್ಯಕ ವಿಟಮಿನ್‌ಗಳಾದ C ಯನ್ನು ಒಳಗೊಂಡಿದೆ. ಇವೆಲ್ಲವೂ ಕೆಂಪು ರಕ್ತಕಣಗಳ ಉತ್ಪತ್ತಿಗೆ ಹಾಗೂ ಜೀವಕೋಶಗಳಲ್ಲಿನ ಚಯಾಪಚಯ ಕ್ರಿಯೆಗೆ ಅತೀ ಪ್ರಮುಖವಾದವುಗಳಾಗಿದ್ದು, ಇದರ ಜೊತೆಗೆ ಏಲಕ್ಕಿಯಲ್ಲಿರುವ ಕಬ್ಬಿಣದ ಅಂಶವು ರಕ್ತಹಿನತೆಯ ವಿರುದ್ಧ ಹೋರಾಡಲು ಅತೀ ಉಪಯುಕ್ತವಾಗಿದೆ.

ಉಗುರು ಬೆಚ್ಚಗಿನ ಒಂದು ಲೋಟದಷ್ಟು ಹಾಲಿಗೆ ಒಂದು ಅಥವಾ ಎರಡು ಚಿಟಿಕೆಯಷ್ಟು ಏಲಕ್ಕಿ ಮತ್ತು ಅರಿಶಿನದ ಪುಡಿಯನ್ನು ಸೇರಿಸಿರಿ. ನೀವು ರುಚಿಗಾಗಿ ಇದಕ್ಕೆ ಸ್ವಲ್ಪ ಸಕ್ಕರೆಯನ್ನೂ ಅವಶ್ಯವಿದ್ದಲ್ಲಿ ಸೇರಿಸಿಕೊಳ್ಳಬಹುದು. ಪ್ರತಿರಾತ್ರಿ ಇದನ್ನು, ಆಯಾಸ ಪರಿಹಾರಕ್ಕಾಗಿ ಮತ್ತು ರಕ್ತಹಿನತೆಯ ಲಕ್ಷಣಗಳ ನಿವಾರಣೆಗಾಗಿ ಸೇವಿಸಿರಿ.

ದೇಹದ ವಿಷವಸ್ತುಗಳನ್ನು ನಿವಾರಿಸುತ್ತದೆ

ದೇಹದ ವಿಷವಸ್ತುಗಳನ್ನು ನಿವಾರಿಸುತ್ತದೆ

ಏಲಕ್ಕಿಯು ಖನಿಜದ ಅತೀ ಪ್ರಮುಖ ಆಗರವಾಗಿದೆ.ಖನಿಜವು ಕಿಣ್ವದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವುಳ್ಳದ್ದಾಗಿದ್ದು, ಈ ಕಿಣ್ವವು ಶರೀರಕ್ಕೆ ಉಪಯುಕ್ತವಾದ ಅಂಶವನ್ನು ಹೀರಿಕೊಂಡು, ದೇಹದ ವಿಷವಸ್ತುಗಳನ್ನು ನಾಶಪಡಿಸುತ್ತದೆ. ಮಾತ್ರವಲ್ಲದೇ, ಏಲಕ್ಕಿಯು ಬಹು ಶಕ್ತಿಯುತವಾದ ವಿಷನಿವಾರಕ ಗುಣವನ್ನು ಹೊಂದಿದ್ದು, ಇದು ದೇಹವನ್ನು ಶುದ್ಧಗೊಳಿಸಿ ನಿಮ್ಮನ್ನು ಕ್ಯಾನ್ಸರ್‌ನಂತಹ ರೋಗಗಳಿಂದ ರಕ್ಷಿಸುತ್ತದೆ.

ನಿಮ್ಮ ಶರೀರದ ವಿಷಯುಕ್ತ ತ್ಯಾಜ್ಯಗಳನ್ನು ಹೊರಹಾಕಲು, ಈ ಏಲಕ್ಕಿಯೆಂಬ ಆಯುರ್ವೇದೀಯ ವಿಷನಿವಾರಕ ಆಹಾರಪದ್ಧತಿಯನ್ನು ಅನುಸರಿಸಿರಿ. ಅಲ್ಲದೆ ನೀವು ಏಲಕ್ಕಿಯನ್ನು ನಿಮ್ಮ ನಿತ್ಯದ ಭೋಜನ ಮತ್ತು ಚಹಾಕ್ಕೆ ಸೇರಿಸುವುದರ ಮೂಲಕ ಅದರ ಸಮಗ್ರ ಲಾಭವನ್ನು ಪಡೆಯಬಹುದು.

ಏಲಕ್ಕಿಯು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ

ಏಲಕ್ಕಿಯು ನಿಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತದೆ

ಏಲಕ್ಕಿಯು ಒಂದು ಸತ್ವಯುತ ಟಾನಿಕ್ ಮತ್ತು ಚೋದಕವಾಗಿದೆ. ಏಲಕ್ಕಿಯು ನಿಮ್ಮ ಶರೀರವನ್ನು ಬಲಯುತಗೊಳಿಸುವುದು ಮಾತ್ರವಲ್ಲದೇ, ಲೈಂಗಿಕ ಸಮಸ್ಯೆಗಳಾದ ಅವಧಿಪೂರ್ವ ವೀರ್ಯವಿಸರ್ಜನೆ (premature ejaculation), ನಪುಂಸಕತ್ವ ಮುಂತಾದವುಗಳ ವಿರುದ್ಧ ಹೊರಾಡುತ್ತದೆ. ಏಲಕ್ಕಿಯು ಲೈಂಗಿಕ ಸಮಸ್ಯೆಯನ್ನು ನಿವಾರಿಸುವುದು ಮಾತ್ರವಲ್ಲದೇ, ನೀವು ಶಕ್ತಿಯುತರಾಗಿರುವಂತೆ ಮಾಡುತ್ತದೆ ಮತ್ತು ಧೀರ್ಘಕಾಲದವರೆಗೆ ನೀವು ಲೈಂಗಿಕ ಸುಖವನ್ನು ಅನುಭವಿಸಲು ಸಹಕರಿಸುತ್ತದೆ.

ಏಲಕ್ಕಿಯ ಕೆಲವು ಕಾಳುಗಳನ್ನು ಹಾಲಿನಲ್ಲಿ ಕುದಿಸಿರಿ. ಚೆನ್ನಾಗಿ ಕುದಿದ ನಂತರ, ಅದಕ್ಕೆ ಜೇನುತುಪ್ಪವನ್ನು ಸೇರಿಸಿರಿ. ಹೀಗೆ ತಯಾರಾದ ಕಷಾಯವನ್ನು ಪ್ರತಿದಿನ ರಾತ್ರಿ, ಲೈಂಗಿಕ ದೌರ್ಬಲ್ಯ ನಿವಾರಣೆಗಾಗಿ ಕುಡಿಯಿರಿ.

English summary

Top Health benefits of cardamom

Elaichi or cardamom is one of the most common spices seen in an Indian household. Not only is it added to sweet and savoury dishes it is also used as a natural mouth freshener. But the humble green pod has a lot more to offer – healthy wise. Here are the top 8 benefits of elaichi.
X
Desktop Bottom Promotion