Just In
- 5 hrs ago ಮೀನ ರಾಶಿಗೆ ಮಂಗಳ ಸಂಚಾರ: ಈ 5 ರಾಶಿಯವರು ವೃತ್ತಿ ಬದುಕಿನಲ್ಲಿ ಜಾಗ್ರತೆ
- 5 hrs ago ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- 6 hrs ago ಬಿಲ್ಗೇಟ್ಸ್ ಟೀ ಕೇಳಿದ್ದಕ್ಕೆ ಟೀ ಮಾಡುತ್ತಿರುವ ನಾಯಿ: ಕ್ಯೂಟ್ ವೀಡಿಯೋ ವೈರಲ್
- 8 hrs ago ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
Don't Miss
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಹದ ಕೀಲುಗಳ ಸ್ವಾಸ್ಥ್ಯಕ್ಕಾಗಿ ಟಾಪ್ 7 ಸಲಹೆಗಳು
ನಮ್ಮ ದೇಹದಲ್ಲಿ ಒಟ್ಟು ಇನ್ನೂರಾ ಆರು ಮೂಳೆಗಳಿವೆ. ಕಿವಿಯೊಳಗಣ ಪುಟ್ಟ ಮೂಳೆಯಿಂದ ಹಿಡಿದು ತೊಡೆಯ ಮೂಳೆಯವರೆಗೆ ಇವುಗಳ ಆಕಾರ ವೈವಿಧ್ಯಗಳು. ಆದರೆ ಮೂಳೆಗಳು ತನ್ನಿಂತಾನೇ ಚಲಿಸಲಾರವು, ಅವುಗಳಿಗೆ ಚಾಲನೆ ನೀಡಲು ಮಾಂಸಖಂಡಗಳು ಬೇಕು. ಸರಾಗವಾದ ಚಲನೆಗೆ ಎರಡು ಮೂಳೆಗಳ ನಡುವೆ ಕೀಲುಗಳಿವೆ. ಕೀಲುಗಳಿರುವಲ್ಲಿ ಎರಡು ಮೂಳೆಗಳು ಒಂದಕ್ಕೊಂದು ತಾಕುವ ಸ್ಥಳದಲ್ಲಿ ಮೆದುವಾದ ಅಸ್ಥಿಯಿದೆ. artilage ಎಂದು ಕರೆಯಲ್ಪಡುವ ಈ ಮೃದ್ವಸ್ಥಿಯ ಹೊರಭಾಗವು synovial fluid ಎಂಬ ದ್ರವದಿಂದ ಸದಾ ತೇವವಾಗಿರುತ್ತದೆ.
ಇದೇ ನಮ್ಮ ಚಲನೆಗೆ ಕೀಲೆಣ್ಣೆಯಂತೆ ಕಾರ್ಯನಿರ್ವಹಿಸುತ್ತದೆ. ಆದರೆ ವಯಸ್ಸಾದಂತೆಲ್ಲಾ cartilage ಸವೆದು ಮೂಳೆಗಳು ಒಂದಕ್ಕೊಂದು ತಿಕ್ಕಲು ತೊಡಗುತ್ತವೆ. ಇದಕ್ಕೆ ನಮ್ಮ ಶರೀರವನ್ನು ಪ್ರವೇಶಿಸಿದ ಔಷಧಿಗಳು ಅಡ್ಡಪರಿಣಾಮವಿರಬಹುದು ಅಥವಾ ಯಾವುದೋ ಅಪಘಾತ ಅಥವಾ ಪೋಷಕಾಂಶಗಳಲ್ಲಿ ಕೊರತೆಯೂ ಇರಬಹುದು. ಈ ಸವೆತ ತನ್ನ ಗರಿಷ್ಟ ಮಿತಿಯನ್ನು ಮೀರಿದ ಬಳಿಕ ಕೀಲುಗಳಲ್ಲಿ, ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ನೋವಿನ ಪರಿಣಾಮವಾಗಿ ಗಂಟುಗಳಲ್ಲಿ ಊತ, ಉರಿ ಹಾಗೂ ಚರ್ಮ ಕೆಂಪಗಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯಿಂದ ಹೊರಬರುವುದು ತುಂಬಾ ನಾಜೂಕಿನ ಹಾಗೂ ಬಹಳ ಸಮಯ ಹಿಡಿಯುವ ಚಿಕಿತ್ಸೆಯಾಗಿದೆ. ಬದಲಿಗೆ ಆರೋಗ್ಯವಂತರಾಗಿದ್ದಾಗ ಈ ಕೀಲುಗಳ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರಿಂದ ಈ ಸ್ಥಿತಿ ಬರುವುದನ್ನು ಬಹಳ ಸಮಯದವೆರೆಗೆ ಮುಂದೂಡಬಹುದು. ಕ್ರಮಬದ್ಧ ಆಹಾರ, ನಿಯಮಿತ ವ್ಯಾಯಾಮ, ಬಿರುಸಾದ ನಡಿಗೆ ಮೊದಲಾದವುಗಳಿಂದ ಕೀಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರಪರಿಹಾರ
ಒಂದು ವೇಳೆ ಕೀಲುಗಳಲ್ಲಿ ನೋವು ಕಂಡುಬಂದರೆ ತಡಮಾಡದೇ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಏಕೆಂದರೆ ಈ ನೋವು ತನ್ನಿಂತಾನೇ ಕಡಿಮೆಯಾಗುವುದಿಲ್ಲ. ಈ ನೋವಿನ ಮೂಲವನ್ನು ವೈದ್ಯರು ಸೂಕ್ತ ತಪಾಸಣೆಗಳಿಂದ ಕಂಡುಹಿಡಿದು ಅಗತ್ಯವುಳ್ಳ ಚಿಕಿತ್ಸೆಯನ್ನು ನೀಡುತ್ತಾರೆ. ಇದರ ಬದಲು ವಯಸ್ಸಾಗಿದೆ, ಕೊಂಚ ನೋವು ಬಂದೇ ಬರುತ್ತದೆ ಎಂಬ ನಿರಾಶಾದಾಯಕ ಆಲೋಚನೆಗಳಿಂದ ದೂರವಿದ್ದು ಚಿಕಿತ್ಸೆಗೆ ಮುಂದಾಗಬೇಕು. ಅಮೇರಿಕಾದ The U.S. Centers for Disease Control and Prevention ಸಂಸ್ಥೆ ಕೀಲುಗಳ ಆರೋಗ್ಯದ ಕುರಿತಾದ ಮಾಹಿತಿಯನ್ನು ಎಲ್ಲರಿಗೂ ಹಂಚುವ ಮೂಲಕ ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಎಚ್ಚರಿಕೆಯನ್ನು ಮೂಡಿಸುತ್ತಿದೆ. ಈ ಮಾಹಿತಿಗಳಲ್ಲಿ ಮಹತ್ವದ ಏಳು ವಿಷಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ನಿಮ್ಮ
ತೂಕವನ್ನು
ಆರೋಗ್ಯಕರ
ಮಿತಿಗಳಲ್ಲಿರಿಸಿರಿ
ದೇಹದ
ತೂಕ
ಹೆಚ್ಚಾದಷ್ಟೂ
ಮೂಳೆಗಳು
ಹೊರಬೇಕಾದ
ತೂಕವೂ
ಹೆಚ್ಚುತ್ತದೆ.
ಅದರಲ್ಲೂ
ಹೆಚ್ಚಾಗಿ
ಸೊಂಟ,
ಹಿಮ್ಮಡಿ,
ಪಾದ
ಮತ್ತು
ಮೊಣಕಾಲಿನ
ಗಂಟುಗಳಿಗೆ
ಅತಿಹೆಚ್ಚು
ಭಾರ
ಬೀಳುತ್ತದೆ.
ಪರಿಣಾಮವಾಗಿ
ಈ
ಕೀಲುಗಳಲ್ಲಿನ
ಕಾರ್ಟಿಲೇಜ್
ಶೀಘ್ರ
ಸವೆಯುತ್ತದೆ.
ಇದೇ
ಕಾರಣದಿಂದ
ನಿಮ್ಮ
ತೂಕವನ್ನು
ಆರೋಗ್ಯಕರ
ಮಿತಿಯಲ್ಲಿರಿಸುವುದರಿಂದ
ಈ
ಕೀಲುಗಳ
ಮೇಲಿನ
ಹೆಚ್ಚಿನ
ಭಾರವನ್ನು
ಕಡಿಮೆಗೊಳಿಸಬಹುದು.
ನಿಯಮಿತವಾಗಿ
ವ್ಯಾಯಾಮ
ಮಾಡಿರಿ
ನಿಸರ್ಗ
ನಮ್ಮ
ಶರೀರವನ್ನು
ಸದಾ
ಚಟುವಟಿಕೆಯಲ್ಲಿರುವಂತೆ
ನಿರ್ಮಿಸಿದೆ.
ಅತಿ
ಹೆಚ್ಚು
ವಿರಾಮವೂ
ದೇಹಕ್ಕೆ
ಒಳ್ಳೆಯದಲ್ಲ.
ಬದಲಿಗೆ
ನಿಮ್ಮ
ಸಾಮರ್ಥ್ಯಕ್ಕೆ
ತಕ್ಕಂತಹ
ವ್ಯಾಯಾಮಗಳನ್ನು
ದಿನದ
ಎರಡು
ಹೊತ್ತಾದರೂ
ಮಾಡಿರಿ.
ಶರೀರವನ್ನು
ಬಗ್ಗಿಸುವ,
ನಿಧಾನಗತಿಯ
ಓಟ,
ಕೊಂಚ
ವೇಗದ
ನಡಿಗೆ,
ಏರೋಬಿಕ್ಸ್
ಮೊದಲಾದ
ವ್ಯಾಯಾಮಗಳು
ನಿಮ್ಮ
ಒಟ್ಟಾರೆ
ಆರೋಗ್ಯದ
ಜೊತೆಗೆ
ನಿಮ್ಮ
ಕೀಲುಗಳಿಗೂ
ಅಗತ್ಯವಾದ
ಸೈನೋವಿಯಲ್
ದ್ರವದಿಂದ
ತೇವವಾಗಿರುವಂತೆ
ನೋಡಿಕೊಳ್ಳುತ್ತದೆ.
ಹೆಚ್ಚು
ಸಮಯ
ಕುಳಿತುಕೊಳ್ಳುವ
ಪ್ರಮೇಯ
ಬಂದರೆ
ಕೈಕಾಲುಗಳನ್ನು
ಚಾಚುವ
ವ್ಯಾಯಾಮಗಳನ್ನು
ಹೆಚ್ಚು
ಮಾಡಿರಿ.
ಸ್ನಾಯುಗಳನ್ನು
ವೃದ್ಧಿಸಿರಿ
ಮೂಳೆಗಳು
ಸ್ನಾಯುಗಳಿಂದ
ಸದಾ
ಸುತ್ತುವರೆದಿರುತ್ತವೆ.
ಆದರೆ
ಕೀಲುಗಳ
ಸುತ್ತ
ಮಾಂಸಖಂಡಗಳು
ಕಡಿಮೆ
ಇರುತ್ತವೆ.
ಈ
ಸ್ನಾಯುಗಳನ್ನು
ಇನ್ನಷ್ಟು
ಹುರಿಗಟ್ಟಿಸುವ
ಮೂಲಕ
ಮೂಳೆಗಳು
ಹಾಗೂ
ಕೀಲುಗಳು
ಹೆಚ್ಚಿನ
ರಕ್ಷಣೆ
ಪಡೆಯುತ್ತವೆ.
ಸ್ನಾಯುಗಳನ್ನು
ಬೆಳೆಸಲು
ಹಾಗೂ
ಹುರಿಗಟ್ಟಿಸಲು
ವೃತ್ತಿಪರ
ದೈಹಿಕ
ಶಿಕ್ಷಕರ
ನೆರವನ್ನು
ಪಡೆಯಿರಿ.
ಆರೋಗ್ಯಕರ
ಆಹಾರಗಳನ್ನು
ಸೇವಿಸಿರಿ
ಸಾಧ್ಯವಾದಷ್ಟು
ನಿಮ್ಮ
ದಿನದ
ಆಹಾರದಲ್ಲಿ
ತಾಜಾ
ಹಣ್ಣು,
ತರಕಾರಿ,
ಹಾಲು
ಮೊದಲಾದವುಗಳನ್ನು
ಸೇವಿಸಿರಿ.
ಸಿದ್ಧ
ಆಹಾರದಲ್ಲಿರುವ
ಯೂರಿಕ್
ಆಮ್ಲ
ಮೂಳೆಗಳಿಗೆ
ಮಾರಕ.
ಸಿದ್ಧ
ಆಹಾರ
ಹಾಗೂ
ಹೊರಗಿನ
ಆಹಾರಗಳನ್ನು
ಸಾಧ್ಯವಾದಷ್ಟು
ಕಡಿಮೆಗೊಳಿಸಿ
ಉತ್ತಮ
ಆಹಾರ
ಸೇವಿಸುವ
ಮೂಲಕ
ಕೀಲುಗಳ
ಆರೋಗ್ಯವನ್ನು
ಕಾಪಾಡಿಕೊಳ್ಳಬಹುದು.
ನೀವು
ಕುಳಿತುಕೊಳ್ಳುವ
ಭಂಗಿ
ಆರಾಮದಾಯಕವಾಗಿರಲಿ
ಸಾಧ್ಯವಾದಷ್ಟು
ನಿಮ್ಮ
ಕುಳಿತುಕೊಳ್ಳುವ
ಹಾಗೂ
ನಿಂತುಕೊಳ್ಳುವ
ಭಂಗಿ
ಆರಾಮದಾಯಕವಾಗಿರಲಿ.
ಏಳುವಾಗ
ಹಾಗೂ
ಕುಳಿತುಕೊಳ್ಳುವಾಗ
ಕೀಲುಗಳ
ಮೇಲೆ
ಒಮ್ಮೆಲೇ
ಭಾರ
ಹಾಕಿ
ನಿಲ್ಲಬೇಡಿ
ಅಥವಾ
ಕುಳಿತುಕೊಳ್ಳಬೇಡಿ.
ವಿಶೇಷವಾಗಿ
ಹೆಚ್ಚು
ಹೊತ್ತು
ಕುಳಿತುಕೊಳ್ಳುವ
ಅಗತ್ಯವಿದ್ದಲ್ಲಿ
ರಕ್ತಸಂಚಾರ
ಸುಗಮವಾಗುವಂತೆ,
ಸ್ನಾಯುಗಳು
ಸಂಕುಚಿಸದಂತೆ
ಆರಾಮದಾಯಕ
ಭಂಗಿಯಲ್ಲಿ
ಪವಡಿಸಿ.
ಇದರಿಂದಾಗಿ
ದೇಹದ
ಎಲ್ಲ
ಸ್ನಾಯುಗಳು
ಉತ್ತಮ
ರಕ್ತಸಂಚಾರವನ್ನು
ಪಡೆದು
ಆರೋಗ್ಯ
ಸುಧಾರಿಸುತ್ತದೆ.
ಒಂದೇ
ಭಂಗಿಯಲ್ಲಿ
ತುಂಬಾ
ಹೊತ್ತು
ಪವಡಿಸಬಾರದು.
ನಡುನಡುವೆ
ಭಂಗಿಯನ್ನು
ಕೊಂಚ
ಬದಲಿಸುತ್ತಿರಬೇಕು.
ಕೀಲುಗಳಲ್ಲಿ
ನೋವು
ಒಮ್ಮೆಲೇ
ಗೊತ್ತಾಗುವುದಿಲ್ಲ
ಪ್ರಾರಂಭದಲ್ಲಿ
ಕುಳಿತಲ್ಲಿಂದ
ಎದ್ದೇಳುವಾಗ
ಅಥವಾ
ಮಲಗಿದ್ದಲ್ಲಿಂದ
ಏಳುವಾಗ
ಕೀಲುಗಳಲ್ಲಿ
ಕೊಂಚವಾದರೂ
ನೋವು
ಕಾಣಿಸಿಕೊಂಡರೆ
ಕೀಲುಗಳ
ಸವೆತ
ಈಗತಾನೇ
ಪ್ರಾರಂಭವಾಗಿರುವ
ಸೂಚನೆಯನ್ನು
ನೀಡುತ್ತದೆ.
ತಡಮಾಡದೇ
ವೈದ್ಯರನ್ನು
ಕಂಡು
ಚಿಕಿತ್ಸೆ
ಪಡೆದುಕೊಳ್ಳಬೇಕು.
ಒಂದು
ವೇಳೆ
ಏಳುವಾಗ
ಮಾತ್ರ
ತಾನೇ,
ಎದ್ದ
ಮೇಲೆ
ಇಲ್ಲವಲ್ಲ
ಎಂದು
ಉದಾಸೀನ
ಮಾಡಿದರೆ
ಚಿಕಿತ್ಸೆ
ಹೆಚ್ಚು
ದಿನಗಳವರೆಗೆ
ಮುಂದುವರೆಯಬಹುದು.
ನಿಮ್ಮ
ಕೀಲುಗಳ
ಮೇಲೆ
ಹೆಚ್ಚು
ಭಾರ
ಹಾಕಬೇಡಿ
ಕೆಲವೊಂದು
ಉದ್ಯೋಗಗಳಲ್ಲಿ
ಪದೇ
ಪದೇ
ಒಂದೇ
ಕಡೆಯ
ಕೀಲುಗಳಿಗೆ
ಗರಿಷ್ಟ
ಒತ್ತಡ
ನೀಡಬೇಕಾದ
ಅಗತ್ಯವಿರುತ್ತದೆ.
ಉದಾಹರಣೆಗೆ
ಬಸ್
ಚಾಲಕನಿಗೆ
ಬ್ರೇಕ್
ಮತ್ತು
ಕ್ಲಚ್
ಒತ್ತುತ್ತಿರುವುದು.
ಇಂತಹ
ಅವಶ್ಯಕತೆಗಳಿದ್ದಾದ
ವೈದ್ಯರ
ಸಲಹೆ
ಪಡೆದು
ಚಿಕಿತ್ಸೆ
ಪಡೆಯುವುದರ
ಜೊತೆಗೇ
ಈ
ಕೆಲಸದಿಂದ
ಬೇರೆ
ಕಡೆ
ಬದಲಿಸುವುದು
ಅಥವಾ
ಈ
ಕೆಲಸಕ್ಕೆ
ಹಿಂದಿನ
ಭಂಗಿಯಲ್ಲಿ
ಕೊಂಚ
ಮಾರ್ಪಾಡು
ಮಾಡುವುದು
ಅಗತ್ಯ.
ಉದಾಹರಣೆಗೆ
ಬಸ್
ಚಾಲಕನ
ಕುರ್ಚಿಯನ್ನು
ಕೊಂಚ
ಹಿಂದೆ
ಮತ್ತು
ಕೊಂಚ
ಎತ್ತರಕ್ಕೆ
ತಳ್ಳುವ
ಮೂಲಕ
ಕೊಂಚ
ಮಾರ್ಪಾಡುಗೊಳಿಸಿ
ಪದೇ
ಪದೇ
ಕೆಲವೇ
ಕೀಲುಗಳಿಗೆ
ಬೀಳುತ್ತಿದ್ದ
ಒತ್ತಡವನ್ನು
ಕಡಿಮೆಗೊಳಿಸಬಹುದು.