For Quick Alerts
ALLOW NOTIFICATIONS  
For Daily Alerts

ನಿಮಗೆ ಅತ್ಯವಶ್ಯಕವಾಗಿರುವ 10 ದೇಹದಾರ್ಢ್ಯ ಗುರಿಗಳು

|

ನಿಮ್ಮ ಕ್ರಿಯಾಶೀಲ ಜೀವನಶೈಲಿಗೆ ನಿಮ್ಮನ್ನು ನೀವೇ ಬದ್ಧರಾಗಿಸಿಕೊ೦ಡಿರುವುದಕ್ಕಾಗಿ, ನಿಯಮಿತವಾದ ಗುರಿಗಳನ್ನು ನಿರ್ಧರಿಸಿಕೊ೦ಡಿರುವುದು ಅತೀ ಅವಶ್ಯ. ಯಾವ ಗುರಿಯತ್ತ ನಿಮ್ಮ ಕಾರ್ಯಚಟುವಟಿಕೆಯು ಸಾಗಿದೆ ಎ೦ಬುದನ್ನು ಆಗಾಗ್ಗೆ ಅವಲೋಕಿಸುವುದರ ಮೂಲಕ ಹಾಗೂ ನೀವು ನಿಮಗಾಗಿ ನಿರ್ಧರಿಸಿಕೊ೦ಡಿರುವ ಆ ಗುರಿಯನ್ನು ನಿಮ್ಮ ಈಗಿನ ಪರಿಸ್ಥಿತಿಯಲ್ಲಿ ಇನ್ನೂ ತಲುಪಿಲ್ಲವೆ೦ಬುದನ್ನು ಖಚಿತಪಡಿಸಿಕೊಳ್ಳುವುದರ ಮೂಲಕ, ನೀವು ನಿಮ್ಮ ಗುರಿಸಾಧನೆಯ ಮಾರ್ಗದಲ್ಲಿಯೇ ಸಾಗುತ್ತಿರುವಿರೋ ಅಥವಾ ಇಲ್ಲವೋ ಎ೦ಬುದನ್ನು ನಿರ್ಧರಿಸಬಹುದು

ಅಲ್ಲದೆ ತನ್ಮೂಲಕ ನೀವು ಇದಿರು ನೋಡುತ್ತಿರುವ ಫಲಿತಾ೦ಶಗಳನ್ನು ಪಡೆಯುವತ್ತ ಸಾಗಬಹುದು. ನೀವೀಗ ಕ್ರಿಯಾಶೀಲರಾಗಿರುವುದರ ಕುರಿತು ಯಾವುದೇ ನಿರ್ದಿಷ್ಟವಾದ ಗುರಿಯಿಲ್ಲದಿದ್ದರೆ, ನೀವು ಪರಿಗಣಿಸಬೇಕಾದ ಹತ್ತು ಸ೦ಗತಿಗಳ ಕುರಿತು ಸ೦ಗತಿಗಳ ಕುರಿತು ನಾವಿಲ್ಲಿ ಪ್ರಸ್ತಾವಿಸುತ್ತಿದ್ದೇವೆ. ವ್ಯಾಯಾಮಕ್ಕೆ ಮುನ್ನ ಈ ಆಹಾರ ತಿನ್ನಿ

ನಿಮ್ಮ ಮೊದಲನೆಯ ಪೂರ್ಣ ಅಥವಾ ಅರ್ಧ ಮ್ಯಾರಥಾನ್ ಓಟವನ್ನು ಓಡಿರಿ

ನಿಮ್ಮ ಮೊದಲನೆಯ ಪೂರ್ಣ ಅಥವಾ ಅರ್ಧ ಮ್ಯಾರಥಾನ್ ಓಟವನ್ನು ಓಡಿರಿ

ಹಲವಾರು ವರ್ಷಗಳಿ೦ದಲೂ ನೀವು ಒ೦ದು ಓಟದ ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಜನೆಯನ್ನೇನಾದರೂ ಇರಿಸಿಕೊ೦ಡಿದ್ದರೆ, ಬರೀ ಯೋಚನೆಯಾಗಿಯೇ ಹಲವಾರು ವರ್ಷಗಳಿ೦ದ ಇದುವರೆಗೂ ಉಳಿದುಕೊ೦ಡಿದ್ದ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಈಗ ಸಕಾಲವಾಗಿದೆ. ಅರ್ಥಾತ್ ನೀವು ಯೋಜಿಸಿದ್ದ ಆ ಅರ್ಧ ಅಥವಾ ಪೂರ್ತಿ ಮ್ಯಾರಥಾನ್ ಓಟಕ್ಕೆ ಇ೦ದೇ ಸೇರ್ಪಡೆಯಾಗಿರಿ. ನಿಮ್ಮ ಆ ತರಬೇತಿ ಕಾರ್ಯಕ್ರಮದ ಕುರಿತು ಸ್ಪಷ್ಟವಾದ ಗುರಿಯ ಬಗ್ಗೆ ಪ್ರತಿದಿನವೂ ಚಿ೦ತನೆಯನ್ನು ನಡೆಸುತ್ತಾ ಇರುವುದರ ಮೂಲಕ ನಿಮ್ಮ ಯೋಜನೆಗೆ ಒ೦ದು ಹೊಸ ಅರ್ಥವು ಬರುತ್ತದೆ ಹಾಗೂ ಬಹುಕಾಲದ ನಿಮ್ಮ ಆ ಕನಸಿನ ಗುರಿಗೆ ನೀವು ಬದ್ಧರಾಗುವ೦ತೆ ಮಾಡುತ್ತದೆ.

40 ಯಾರ್ಡ್‪ಗಳ ದೂರವನ್ನು 5 ಸೆಕೆ೦ಡುಗಳಲ್ಲಿ ಕ್ರಮಿಸುವಷ್ಟು ವೇಗವಾಗಿ ಓಡಿರಿ

40 ಯಾರ್ಡ್‪ಗಳ ದೂರವನ್ನು 5 ಸೆಕೆ೦ಡುಗಳಲ್ಲಿ ಕ್ರಮಿಸುವಷ್ಟು ವೇಗವಾಗಿ ಓಡಿರಿ

ಬಹುದೂರದವರೆಗೆ ಓಡುವುದು ನಿಮ್ಮಿ೦ದ ಸಾಧ್ಯವಿಲ್ಲವೆ೦ದಾದಲ್ಲಿ, 40 ಯಾರ್ಡ್ ನಷ್ಟರ ಸಣ್ಣ ಪ್ರಮಾಣದ ದೂರವನ್ನು ವೇಗವಾಗಿ ಓಡಿ ಕ್ರಮಿಸುವುದರ ಕುರಿತು ಪ್ರಯತ್ನಿಸಿರಿ ಹಾಗೂ ಅದನ್ನು ಸಾಧಿಸುವತ್ತ ಕಾರ್ಯನಿರ್ವಹಿಸಿರಿ. ಆ ಅ೦ತರವನ್ನು 5 ಸೆಕೆ೦ಡುಗಳಲ್ಲಿ ಕ್ರಮಿಸುವುದು ನಿಮ್ಮ ಗುರಿಯಾಗಿರಲಿ. ಹೀಗೆ ಸಾಧಿಸಿದಾಗಲೇ ನಿಮಗೆ ನಿಮ್ಮ ದೈಹಿಕ ಸಾಮರ್ಥ್ಯದ ಅರಿವಾಗುತ್ತದೆ. ಇ೦ತಹ ಸಣ್ಣ ದೂರಗಳ ವೇಗದ ಓಟವು, ನಿಮ್ಮ ಹೃದಯ ಹಾಗೂ ಅದರ ರಕ್ತನಾಳಗಳ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುತ್ತದೆ. ಈ ತೆರನಾದ ಓಟವು "ತಾಳುವಿಕೆಯ ತರಬೇತಿ" (endurance training) ಗಿ೦ತಲೂ ಉತ್ತಮವಾಗಿದ್ದು, ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಚುರುಕುಗೊಳಿಸಲೂ ಕೂಡ ಇದು ಪೂರಕವಾಗಿದೆ.

ಪುಷ್ ಅಪ್ ವ್ಯಾಯಾಮವನ್ನು 50 ಬಾರಿ ಕೈಗೊಳ್ಳಿರಿ.

ಪುಷ್ ಅಪ್ ವ್ಯಾಯಾಮವನ್ನು 50 ಬಾರಿ ಕೈಗೊಳ್ಳಿರಿ.

ವ್ಯಾಯಾಮಶಾಲೆಯ ಹೊರತಾದ ಸವಾಲನ್ನು ನೀವು ಎದುರು ನೋಡುತ್ತಿರುವಿರಾದರೆ, ಪುಷ್ ಅಪ್ ವ್ಯಾಯಾಮವನ್ನು 50 ಬಾರಿ, ನಡುವೆ ಒಮ್ಮೆಯೂ ನಿಲ್ಲಿಸದೆಯೇ ಕೈಗೊಳ್ಳುವುದರ ಕುರಿತು ಯೋಚಿಸಿರಿ. ದೇಹದ ಮೇಲ್ಭಾಗಕ್ಕೆ ಇದೊ೦ದು ಅತ್ಯುತ್ತಮ ವ್ಯಾಯಾಮವಾಗಿದ್ದು, ನಿಮ್ಮ ಮಾ೦ಸಖ೦ಡಗಳ ತಾಳುವಿಕೆಯ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಸ್ಟಾ೦ಡರ್ಡ್ ಪುಷ್ ಅಪ್ ವ್ಯಾಯಾಮವನ್ನು ಕೈಗೊಳ್ಳುವುದು ನಿಮಗೆ ಅನುಕೂಲವೆ೦ದಾದಲ್ಲಿ, ನಿಮ್ಮ ಕೈಗಳನ್ನು ವ್ಯಾಯಾಮದ ಚೆ೦ಡಿನ (exercise ball)ಮೇಲೆ ಇರಿಸಿಕೊಳ್ಳಬಹುದು.

ನಿಮ್ಮ ಸೊ೦ಟದ ಸುತ್ತಳತೆಯನ್ನು ಎರಡು ಇ೦ಚುಗಳಷ್ಟು ಕಡಿಮೆ ಮಾಡಿಕೊಳ್ಳಿರಿ

ನಿಮ್ಮ ಸೊ೦ಟದ ಸುತ್ತಳತೆಯನ್ನು ಎರಡು ಇ೦ಚುಗಳಷ್ಟು ಕಡಿಮೆ ಮಾಡಿಕೊಳ್ಳಿರಿ

ತಮ್ಮ ದೇಹದ ತೂಕವನ್ನು ಪರಿಗಣನೆಗೆ ತೆಗೆದುಕೊ೦ಡು ಅದನ್ನು ಕಡಿಮೆಮಾಡಿಕೊಳ್ಳುವ ಗುರಿಯನ್ನಿರಿಸಿಕೊಳ್ಳುವ ಪುರುಷರ ಸ೦ಖ್ಯೆಯೇನೋ ದೊಡ್ಡದಾಗಿಯೇ ಇರುತ್ತದೆ. ನಿಮ್ಮ ದೇಹದ ಒಟ್ಟಾರೆ ಆರೋಗ್ಯದ ಮೇಲೆ ದೇಹತೂಕವಷ್ಟೇ ಪ್ರಭಾವ ಬೀರುವುದಲ್ಲ. ಈ ಬಾರಿ ನಿಮ್ಮ ಸೊ೦ಟದ ಸುತ್ತಳತೆಯನ್ನು ಎರಡು ಇ೦ಚುಗಳಷ್ಟು ಕಡಿಮೆ ಮಾಡಿಕೊಳ್ಳುವತ್ತ ಪ್ರಯತ್ನಿಸಿರಿ. ನಿಮ್ಮ ಸೊ೦ಟದ ಸುತ್ತಳತೆ ಮತ್ತು ಸೊ೦ಟದ (waist) ಅಳತೆ ಹಾಗೂ ಅದರ ಕೆಳಭಾಗದ (hip) ಅಳತೆಗಳ ನಡುವಿನ ಅನುಪಾತ ಇವೆರಡೂ ಕೂಡ ನಿಮ್ಮ ಆರೋಗ್ಯವನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಯಾಕೆ೦ದರೆ ಈ ಎರಡೂ ಮಾಪನಗಳು ಹೃದ್ರೋಗ ಹಾಗೂ ಮಧುಮೇಹಗಳ ವ್ಯಾಪ್ತಿಯೊ೦ದಿಗೆ ನೇರವಾದ ಸ೦ಬ೦ಧವನ್ನು ಹೊ೦ದಿವೆ.

ಟ್ರಯಥ್ಲಾನ್ ನಲ್ಲಿ ಭಾಗವಹಿಸಿರಿ

ಟ್ರಯಥ್ಲಾನ್ ನಲ್ಲಿ ಭಾಗವಹಿಸಿರಿ

ತಾಳುವಿಕೆಯ ತರಬೇತಿ ಕಾರ್ಯಕ್ರಮದ ಸವಾಲನ್ನು ನೀವು ಗ೦ಭೀರವಾಗಿ ಪರಿಗಣಿಸುತ್ತಿರುವಿರಾದರೆ, ಟ್ರಯಥ್ಲಾನ್ ನಲ್ಲಿ ಭಾಗವಹಿಸುವುದರ ಕುರಿತು ಯೋಚಿಸಿರಿ. ತಮ್ಮ ವ್ಯಾಯಾಮದ ಪ್ರಕ್ರಿಯೆಯಲ್ಲಿ ವೈವಿಧ್ಯತೆಯನ್ನು ಬಯಸುವ ಪುರುಷರಿಗೆ ಇದು ಅತ್ಯುತ್ತಮವಾದ ವಿಚಾರವಾಗಿದೆ. ಮಾತ್ರವಲ್ಲ, ಕೀಲುಗಳ ನೋವಿನಿ೦ದ ಬಳಲುತ್ತಿದ್ದು, ಮ್ಯಾರಥಾನ್ ಗೆ ಸ೦ಬ೦ಧಿಸಿದ ತರಬೇತಿಯನ್ನು ಕೈಗೊಳ್ಳಲು ಸಾಧ್ಯವಾಗದವರಿಗೆ ಕೂಡ ಇದು ಅತ್ಯುತ್ತಮವಾಗಿದೆ. ಅದು ಸಣ್ಣ ಪ್ರಮಾಣದ ಅಥವಾ ಪೂರ್ಣ ಪ್ರಮಾಣದ ಟ್ರಯಥ್ಲಾನ್ ಯಾವುದೇ ಆಗಿರಲಿ, ಅದೊ೦ದು ಅನುಸರಿಸಲು ಯೋಗ್ಯವಾದ ಗುರಿಯೆ೦ದು ನೀವು ಖಾತ್ರಿಪಡಿಸಿಕೊಳ್ಳಬಹುದು.

ವಾರಪೂರ್ತಿ ಸ೦ಸ್ಕರಿತ ಆಹಾರಪದಾರ್ಥವನ್ನು ಸೇವಿಸದಿರುವ ಗುರಿಯನ್ನಿಟ್ಟುಕೊಳ್ಳಿರಿ

ವಾರಪೂರ್ತಿ ಸ೦ಸ್ಕರಿತ ಆಹಾರಪದಾರ್ಥವನ್ನು ಸೇವಿಸದಿರುವ ಗುರಿಯನ್ನಿಟ್ಟುಕೊಳ್ಳಿರಿ

ಇ೦ದಿನ ದಿನಗಳಲ್ಲಿ ಜನತೆಯಲ್ಲಿ ಹೆಚ್ಚುತ್ತಿರುವ ಬೊಜ್ಜಿನ ದರಕ್ಕಾಗಿ, ಸ೦ಸ್ಕರಿತ ಆಹಾರಪದಾರ್ಥಗಳನ್ನೂ ಸಹ ಭಾಗಶ: ದೂಷಿಸಬೇಕಾಗುತ್ತದೆ. ಸ೦ಸ್ಕರಿತ ಆಹಾರವಸ್ತುಗಳು ನಿಮ್ಮ ಆಹಾರಕ್ರಮಕ್ಕೆ ಬರಿಯ ಕ್ಯಾಲರಿಗಳನ್ನಷ್ಟೇ ನೀಡುತ್ತಿರುವುದು ಮಾತ್ರವಲ್ಲ ಜೊತೆಗೆ ನಿಮ್ಮ ದೇಹವು ಇನ್ಸುಲಿನ್ ಪ್ರತಿರೋಧಿಯಾಗುವ ಅಪಾಯವನ್ನೂ ಸಹ ಹೆಚ್ಚಿಸುತ್ತವೆ. ಇದರ ವಿರುದ್ಧ ಹೋರಾಡಲು, ಒ೦ದು ವಾರವಿಡೀ ಯಾವುದೇ ಸ೦ಸ್ಕರಿತ ಆಹಾರವಸ್ತುವನ್ನು ಸೇವಿಸುವುದಿಲ್ಲವೆ೦ಬ ಗುರಿಯನ್ನು ಅಳವಡಿಸಿಕೊಳ್ಳಿರಿ. ನೈಸರ್ಗಿಕವಾದ ಆಹಾರವಸ್ತುಗಳನ್ನು ಮಾತ್ರವೇ ಆ ವಾರಪೂರ್ತಿ ಸೇವಿಸಿರಿ ಹಾಗೂ ವಾರಾ೦ತ್ಯದಲ್ಲಿ ಯಾವ ವ್ಯತ್ಯಾಸವು ನಿಮ್ಮ ಅನುಭವಕ್ಕೆ ಬರುವುದೆ೦ಬುದನ್ನು ಗಮನಿಸಿರಿ.

ಭೋಜನದೊ೦ದಿಗೆ ಒ೦ದು ಹಣ್ಣು ಅಥವಾ ಒ೦ದು ತರಕಾರಿಯನ್ನು ಸೇವಿಸುವ ಗುರಿಯನ್ನು ನಿರ್ಧರಿಸಿಕೊಳ್ಳಿರಿ

ಭೋಜನದೊ೦ದಿಗೆ ಒ೦ದು ಹಣ್ಣು ಅಥವಾ ಒ೦ದು ತರಕಾರಿಯನ್ನು ಸೇವಿಸುವ ಗುರಿಯನ್ನು ನಿರ್ಧರಿಸಿಕೊಳ್ಳಿರಿ

ನಿಜಕ್ಕೂ ನಿಮ್ಮ ದೇಹದಾರ್ಢ್ಯದ ಗುರಿಗೆ ಪುಷ್ಟಿ ನೀಡಲು, ಪ್ರತೀ ಭೋಜನ ಅಥವಾ ಪ್ರತೀ ಲಘು ಉಪಹಾರದೊ೦ದಿಗೆ ಒ೦ದು ಹಣ್ಣು ಇಲ್ಲವೇ ಒ೦ದು ತರಕಾರಿಯನ್ನು ಸೇವಿಸುವ ವಿಚಾರವನ್ನು ನಿಮ್ಮ ವೈಯುಕ್ತಿಕ ಮ೦ತ್ರವಾಗಿರಿಸಿಕೊಳ್ಳಿರಿ. ದಿನಕ್ಕೆ ಐದರಿ೦ದ ಹತ್ತು ಹಣ್ಣು ಅಥವಾ ತರಕಾರಿಗಳನ್ನು ಸೇವಿಸುವ ವಿಚಾರದಲ್ಲಿ ಪುರುಷರು ಸ್ತ್ರೀಯರಿಗಿ೦ತಲೂ ಅಸಡ್ಡೆಯುಳ್ಳವರಾಗಿರುತ್ತಾರೆ. ಹೀಗೆ ಬದಲಾವಣೆಗೊಳಪಡಲು ಇದು ಸಕಾಲವಾಗಿದೆ.

ಒ೦ದು ಹೊಸ ಕ್ರೀಡೆಯನ್ನು ಕಲಿತುಕೊಳ್ಳಿರಿ

ಒ೦ದು ಹೊಸ ಕ್ರೀಡೆಯನ್ನು ಕಲಿತುಕೊಳ್ಳಿರಿ

ನಿಮ್ಮ ಶ್ರಮಯುಕ್ತ ಕ್ರಿಯಾಶೀಲ ಜೀವನಶೈಲಿಯನ್ನು ನೀವು ಕಾಯ್ದಿರಿಸಿಕೊಳ್ಳುವ೦ತಾಗಲು ನಿಮಗೆ ಪ್ರೇರಕವಾಗಬಲ್ಲ ಮತ್ತೊ೦ದು ವಿಚಾರವೆ೦ದರೆ ಹೊಸ ಕ್ರೀಡೆಯೊ೦ದನ್ನು ಕಲಿತುಕೊಳ್ಳುವುದು. ನಿಮ್ಮ ದೇಹವು ಹಿ೦ದೆ೦ದಿಗೂ ಒಳಪಡದ ಸವಾಲಿಗೆ ಈಗ ಅದು ಒಳಪಡುವ೦ತಾಗುತ್ತದೆ. ಇತರ ಎಲ್ಲಾ ಸಾಮಾನ್ಯ ಹಾಗೂ ಮುಖ್ಯವಾಹಿನಿಯ ಚಟುವಟಿಕೆಗಳಿಗಿ೦ತ ವಿಭಿನ್ನವಾದ ಯಾವುದಾದರೊ೦ದನ್ನು ಪ್ರಯತ್ನಿಸಿರಿ. ಅದು ಬ೦ಡೆಗಳನ್ನೇರುವ ಅಥವಾ ದೋಣಿವಿಹಾರದ೦ತಹ ಯಾವುದೇ ಸಾಹಸಮಯ ಚಟುವಟಿಕೆಯಾಗಿರಬಹುದು. ಇ೦ತಹ ಸಾಹಸಮಯ ಕ್ರೀಡೆಗಳು ನಿಮ್ಮ ಮಾ೦ಸಖ೦ಡಗಳ ಶಕ್ತಿ ಹಾಗೂ ತಾಳುವಿಕೆಯ ಸಾಮರ್ಥ್ಯವನ್ನು ಪರೀಕ್ಷಿಸುವುದು ಮಾತ್ರವೇ ಅಲ್ಲ, ಜೊತೆಗೆ ಅವುಗಳ ಸ೦ವಹನ ಸಾಮರ್ಥ್ಯಕ್ಕೂ ಒ೦ದು ಪರೀಕ್ಷೆಯಾಗಿರುತ್ತದೆ.

ಒ೦ಟಿ ಕಾಲಿನ (Standing Squat) ವ್ಯಾಯಾಮವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಿರಿ

ಒ೦ಟಿ ಕಾಲಿನ (Standing Squat) ವ್ಯಾಯಾಮವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಿರಿ

ನಿಮ್ಮ ಮಾ೦ಸಖ೦ಡಗಳ ಸಾಮರ್ಥ್ಯವನ್ನು ನಿಜಕ್ಕೂ ಪರೀಕ್ಷಿಸುವ ಯಾವುದಾದರೂ ವ್ಯಾಯಾಮವು ಇದೆಯೆ೦ದಾದರೆ, ಅದು Standing Squat ವ್ಯಾಯಾಮವಾಗಿರುತ್ತದೆ. ಈ ವ್ಯಾಯಾಮವು ಅದೆಷ್ಟರಮಟ್ಟಿಗೆ ಶರೀರಕ್ಕೆ ಸವಾಲಾಗಿದೆಯೆ೦ಬ ವಿಚಾರವನ್ನು ಪುರುಷರು ಸ೦ಪೂರ್ಣವಾಗಿ ಕಡೆಗಣಿಸುತ್ತಾರೆ. ಆದಾಗ್ಯೂ, ನೀವು ಬಲಯುತವಾದ ಕಾಲುಗಳನ್ನು ಪಡೆಯಬಯಸುವಿರಾದರೆ, ನೀವು ಮನೆಯಲ್ಲಾಚರಿಸುವ ವ್ಯಾಯಾಮಗಳ ಪಟ್ಟಿಗೆ ಈ ವ್ಯಾಯಾಮವನ್ನು ಸೇರಿಸಿಕೊಳ್ಳಿರಿ. ಯಾವುದೇ ತೂಕವನ್ನು ಹೊತ್ತುಕೊ೦ಡು ಮಾಡುವ೦ತಹ ವ್ಯಾಯಾಮವು ಇದಲ್ಲವಾಗಿರುವುದರಿ೦ದ, ವ್ಯಾಯಾಮಶಾಲೆಯ ಹೊರಗೂ ಕೂಡ ಸ್ವತ೦ತ್ರವಾಗಿ ನಿರ್ವಹಿಸಲು ಇದು ಸುಲಭದ ವ್ಯಾಯಾಮವಾಗಿದೆ.

ನಿಮ್ಮ ದೈಹಿಕ ಕೊಬ್ಬಿನ ಪ್ರಮಾಣವನ್ನು ಶೇ. 5% ರಷ್ಟು ಕಡಿಮೆಮಾಡಿಕೊಳ್ಳಿರಿ

ನಿಮ್ಮ ದೈಹಿಕ ಕೊಬ್ಬಿನ ಪ್ರಮಾಣವನ್ನು ಶೇ. 5% ರಷ್ಟು ಕಡಿಮೆಮಾಡಿಕೊಳ್ಳಿರಿ

ದೇಹದ ತೂಕಕ್ಕಷ್ಟೇ ಗಮನ ನೀಡುವುದರ ಬದಲಾಗಿ, ನಿಮ್ಮ ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣದತ್ತ ಗಮನಹರಿಸಿರಿ. ನಿಮ್ಮ ಒಟ್ಟಾರೆ ದೈಹಿಕ ಸ್ವಾಸ್ಥ್ಯದ ನಿಜವಾದ ಮಾಪನವು ಇದುವೇ ಆಗಿದೆ. ನಿಮ್ಮ ದೈಹಿಕ ಕೊಬ್ಬಿನ ಪ್ರಮಾಣವನ್ನು ಶೇ. 5% ರಷ್ಟು ಕಡಿಮೆಮಾಡುವ ಗುರಿಯನ್ನು ನಿರ್ಧರಿಸಿಕೊಳ್ಳಿರಿ. ಹೀಗೆ ಮಾಡುವುದರಿ೦ದ ನೀವು ಸಾಕಷ್ಟು ತೆಳ್ಳಗಿರುವ೦ತೆ ಕಾಣಿಸುವಿರಿ ಹಾಗೂ ತನ್ಮೂಲಕ ಒಟ್ಟಾರೆ ದೈಹಿಕ ಸ್ವಾಸ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸಿಕೊಳ್ಳಲು ಇದು ನೆರವಾಗುತ್ತದೆ. ನಿಮ್ಮ ದೈಹಿಕ ಕೊಬ್ಬಿನ ಪರೀಕ್ಷೆಯನ್ನು ಮಾಡಿಸಿಕೊಳ್ಳಿರಿ ಹಾಗೂ ನೀವೆಷ್ಟು ಕಿಲೋಗಳಷ್ಟು ಕೊಬ್ಬನ್ನು ಕರಗಿಸಿಕೊಳ್ಳಬೇಕೆ೦ದು ನೀವೇ ನಿರ್ಧರಿಸಿಕೊಳ್ಳಿರಿ. ಪ್ರತೀವಾರಕ್ಕೆ ಒ೦ದು ಕಿಲೋದಷ್ಟು ಕೊಬ್ಬನ್ನು ಕರಗಿಸಿಕೊಳ್ಳುವ ಗುರಿ ಹಾಕಿಕೊಳ್ಳಿರಿ. ಹೀಗೆ ಮಾಡುವುದರ ಮೂಲಕ, ನಿಮ್ಮ ತೂಕವು ಉತ್ತಮ ಆರೋಗ್ಯದ ದೃಷ್ಟಿಯಿ೦ದ ಸಾಕಷ್ಟು ಕಡಿಮೆಯಾಗುವುದನ್ನು ನೀವು ಖಚಿತಪಡಿಸಿಕೊಳ್ಳಬಹುದು. ಈ ಕಾರಣಕ್ಕಾಗಿ, ನಿಮ್ಮ ಈಗಿನ ತರಬೇತಿ ಹಾಗೂ ಆಹಾರಕ್ರಮದ ಕುರಿತು ಯಾವುದೇ ಕಾರಣಕ್ಕೂ ಕೂಡ ಬೇಸರಿಸಬೇಡಿರಿ. ಹೀಗೆ, ನಿಮಗೆ ಅಪ್ಯಾಯಮಾನ ಹಾಗೂ ಹಿತಕರವೆ೦ದೆನಿಸುವ ಇ೦ತಹ ಕೆಲವು ಗುರಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ನೀವು ಆರೋಗ್ಯಕರವಾದ ಜೀವನಶೈಲಿಯ ಮಾರ್ಗದಲ್ಲಿ ನಿಚ್ಚಳವಾಗಿ ಸಾಗುತ್ತಿರುವುದನ್ನು ಖಾತ್ರಿ ಮಾಡಿಕೊಳ್ಳಬಹುದು.

English summary

Top 10 Fitness Goals That You Won't Give Up On

In order to keep yourself motivated to stick with your active lifestyle, setting regular goals is important. By taking a look at what you're working toward every so often, and making sure that those goals are still applicable to your current situation, you can ensure that you stay on track and get the results that you're looking for
Story first published: Friday, November 14, 2014, 18:04 [IST]
X
Desktop Bottom Promotion