For Quick Alerts
ALLOW NOTIFICATIONS  
For Daily Alerts

ದಿನವಿಡೀ ಸಂತಸದಿಂದಿರಲು ಇಲ್ಲಿವೆ ಸುಲಭ ಉಪಾಯಗಳು

By Gururaja Achar
|

ಮನಸ್ಸು ಮಾಡಿದರೆ ಏನನ್ನೂ ಸಾಧಿಸಲು ಸಮರ್ಥರಾಗಿರುವ ನಮಗೆ ನಮ್ಮ ದೇಹಾರೋಗ್ಯವನ್ನು ನಿರಂತರ ಜತನವಾಗಿಟ್ಟುಕೊoಡು ಯಾವಾಗಲೂ ಸಂತೋಷದಿಂದಿರುವುದು ಅಂತಹ ಕಠಿಣವಾದ ವಿಷಯವೇನೂ ಅಲ್ಲ. ಸಂತೋಷ ಅಥವಾ ಆನಂದವೆಂಬುದು ಒಂದು ಮನಸ್ಥಿತಿ. ಇಂತಹ ಮನಸ್ಥಿತಿಯನ್ನು ಕಾಪಿಟ್ಟುಕೊಳ್ಳುವುದು ನಾವು ಅಂದುಕೊಂಡಷ್ಟು ಕಷ್ಟವೇನೂ ಅಲ್ಲ.

ಹೆಚ್ಚು ಕಡಿಮೆ ಎಲ್ಲಾ ಸಂದರ್ಭಗಳಲ್ಲಿಯೂ ಸಹ ಆರೋಗ್ಯ ಮತ್ತು ಸಂತೋಷ ಇವೆರಡೂ ಸಹ ಒಂದಕ್ಕೊಂದು ನೇರ ಅನುಪಾತದಲ್ಲಿಯೇ ಇರುತ್ತವೆ. ಹೀಗಾಗಿ, ಒಂದು ವೇಳೆ ನೀವು ಆರೋಗ್ಯದಿಂದಿರುವಿರಿ ಎಂದಾದರೆ ನೀವು ಸಂತೋಷವಾಗಿರುವುದೂ ಕೂಡ ಸ್ವತಃ ನೀವೇ ನಂಬಲಾರದಷ್ಟು ಸುಲಭವಾಗಿದೆ.

ಆರೋಗ್ಯದಿಂದಿದ್ದುಕೊಂಡು ಸಂತೋಷವಾಗಿರಲು ಈ ಕೆಳಗೆ ಸುಲಭವಾಗಿ ಅನುಸರಿಸಲು ಸಾಧ್ಯವಿರುವ ಕೆಲವು ಸೂತ್ರಗಳನ್ನು ನೀಡಲಾಗಿದೆ.

ಮಾವಿನ ಹಣ್ಣಿನಿಂದ ಪುರುಷರಿಗಾಗುವ ಆರೋಗ್ಯದ ಲಾಭಗಳು

ಬುದ್ಧಿವಂತಿಕೆಯ ಆಹಾರಕ್ರಮ :

ಬುದ್ಧಿವಂತಿಕೆಯ ಆಹಾರಕ್ರಮ :

ಇತ್ತೀಚಿಗಿನ ಸಂಶೋಧನೆಯ ಪ್ರಕಾರ, ಮುಂಜಾನೆಯ ಉಪಹಾರದ ವೇಳೆ ಅತೀ ಹೆಚ್ಚು ಪ್ರೋಟೀನ್ ಅನ್ನು ಸೇವಿಸುವ ಮಹಿಳೆಯರು, ಬಹು ಅಪರೂಪಕ್ಕೆಂಬಂತೆ ಸಂಜೆಯ ವೇಳೆ ಹೆಚ್ಚು ಕೊಬ್ಬುಯುಕ್ತ ಹಾಗೂ ಹೆಚ್ಚು ಸಕ್ಕರೆಯ ಅಂಶವುಳ್ಳ ತಿಂಡಿ ತಿನಿಸುಗಳನ್ನು ಸೇವಿಸುತ್ತಾರೆ. ಮೊಟ್ಟೆಗಳು ಪ್ರೋಟೀನ್ ನಿಂದ ಸಮೃದ್ಧವಾಗಿವೆ ಮತ್ತು ಅವುಗಳ ಹಳದಿ ಲೋಳೆಯು ಅನ್ನಾಂಗ B12 ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ್ದು, ಇವು ನಿಮ್ಮ ಮನಸ್ಥಿತಿಯನ್ನು ಉಲ್ಲಾಸದಿಂದಿರುವಂತೆ ಮಾಡುತ್ತವೆ.

ಬೆವರನ್ನು ಹರಿಸುವುದು (ದೈಹಿಕ ಶ್ರಮ):

ಬೆವರನ್ನು ಹರಿಸುವುದು (ದೈಹಿಕ ಶ್ರಮ):

ದೈಹಿಕ ವ್ಯಾಯಾಮವು ದೇಹಕ್ಕೆ ಅತೀ ಮುಖ್ಯ. ಸ್ವಲ್ಪ ದೂರದವರೆಗಿನ ವೇಗದ ನಡಿಗೆ ಅಥವಾ ಜಾಗಿಂಗ್, ಬೆಳಗ್ಗಿನ ಹೊತ್ತು ನಿಮಗೆ ತ್ವರಿತ ಶಕ್ತಿ ಮತ್ತು ಸಂತೋಷವನ್ನು ನೀಡಬಲ್ಲವು. ಹಾಗಿದ್ದ ಮೇಲೆ ಇನ್ನು ತಡವೇಕೆ ?! ನಿಮ್ಮ ಜಾಗಿಂಗ್ ಉಡುಪನ್ನು ಧರಿಸಿ ಮತ್ತು ರಸ್ತೆಯತ್ತ ನಡೆಯಿರಿ. ದಿನನಿತ್ಯ ಹೀಗೆ ಮಾಡುವುದರಿಂದ ನಿಮಗೆ ಶಕ್ತಿಸಂಚಯನವಾದಂತಹ ಅನುಭವವಾಗುತ್ತದೆ ಹಾಗೂ ಇದು ನಿಮ್ಮನ್ನು ದಿನವಿಡೀ ಉಲ್ಲಸಿತವಾಗಿಡುತ್ತದೆ.

ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸಿಕೊಳ್ಳಿರಿ:

ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸಿಕೊಳ್ಳಿರಿ:

ನಿಮ್ಮ ತ್ವಚೆಯ ಮೇಲೆ ಉಂಟಾಗಬಹುದಾದ ಸೂರ್ಯನ ಕಲೆಗಳಿಂದ ರಕ್ಷಿಸಿಕೊಳ್ಳಲು ನಿಮ್ಮ ತ್ವಚೆಗೆ SPF ನೊಂದಿಗೆ sunscreen lotion ಅನ್ನು ಉಪಯೋಗಿಸಿರಿ. ಚಳಿಗಾಲದಲ್ಲಿಯೂ ಸಹ ನಿಮ್ಮ ತ್ವಚೆಯು ಅತಿಯಾದ ಚಳಿಯ ಕಾರಣ ಬಿರುಬಿಡುವುದನ್ನು ತಡೆಯಲು sunscreen ನ ಅವಶ್ಯಕತೆ ಇರುತ್ತದೆ.

ಏನನ್ನಾದರೂ ತಿನ್ನುತ್ತಲೇ ಇರುವ ಅಭ್ಯಾಸವನ್ನು ಬಿಟ್ಟುಬಿಡಿರಿ:

ಏನನ್ನಾದರೂ ತಿನ್ನುತ್ತಲೇ ಇರುವ ಅಭ್ಯಾಸವನ್ನು ಬಿಟ್ಟುಬಿಡಿರಿ:

ಮನೆಯಲ್ಲಿಯೇ ಆಗಿರಲಿ ಅಥವಾ ಕಚೇರಿಯಲ್ಲಿಯೇ ಆಗಿರಲಿ ಕೆಲವೊಮ್ಮೆ ನೀವು ನೀರಡಿಕೆಯನ್ನೇ ಹಸಿವು ಎಂದು ತಪ್ಪಾಗಿ ಭಾವಿಸುವುದು ಇರುತ್ತದೆ. ನೀರನ್ನು ಧಾರಾಳವಾಗಿ ಕುಡಿಯಿರಿ. ಸಾಧ್ಯವಾದಷ್ಟು ಕೆಫಿನ್ ಯುಕ್ತ ಪೇಯಗಳನ್ನು ವರ್ಜಿಸಿರಿ. ಹೀಗೆ ಮಾಡುವುದರಿಂದ, ಸದಾ ಏನನ್ನಾದರೂ ತಿನ್ನುತ್ತಲೇ ಇರಬೇಕೆಂಬ ನಿಮ್ಮ ಹಪಹಪಿಕೆಯು ಕಡಿಮೆ ಆಗುತ್ತದೆ.

ಚ್ಯೂಯಿಂಗ್ ಗಮ್ ಅನ್ನು ಬಳಸಿರಿ:

ಚ್ಯೂಯಿಂಗ್ ಗಮ್ ಅನ್ನು ಬಳಸಿರಿ:

ದಿನದ ಪರಿಶ್ರಮದಿಂದ ನೀವು ಅಯಾಸಗೊಂಡಿದ್ದರೆ, ಸಕ್ಕರೆ-ಮುಕ್ತ ಚ್ಯೂಯಿಂಗ್ ಗಮ್ ನಿಮ್ಮ ಮೂಡ್ ಅನ್ನು ಸುಧಾರಿಸುತ್ತದೆ ಮತ್ತು ನೀವು ಶಕ್ತಿಯುತರಾಗಿರುವಂತೆ ಮಾಡುತ್ತದೆ. ಅಧ್ಯಯನಗಳಿಂದ ತಿಳಿದು ಬಂದಂತೆ, ಚ್ಯೂಯಿಂಗ್ ಗಮ್, ಕರ್ಕಶ ಧ್ವನಿಗಳಿಗೆ ಸಂಬoಧಿಸಿದಂತೆ ನಿಮ್ಮ ಮೆದುಳು ಶಾಂತವಾಗಿರುವಂತೆ ಮಾಡುತ್ತದೆ.

ಕಾರಿನೊಳಗೆ ಕುಳಿತುಕೊಳ್ಳುವ ಭಂಗಿ:

ಕಾರಿನೊಳಗೆ ಕುಳಿತುಕೊಳ್ಳುವ ಭಂಗಿ:

ಒಂದು ವೇಳೆ ನೀವು ಕಾರು ಚಾಲನೆಯಂತಹ ಐಷಾರಾಮೀ ಉದ್ಯೋಗಿಯಾಗಿದ್ದರೆ, ನೀವು ಟವೆಲ್ ಒಂದನ್ನು ಸುತ್ತಿ ನಿಮ್ಮ ಬೆನ್ನಿನ ಕೆಳಭಾಗ ಮತ್ತು ಕಾರಿನ ಆಸನದ ನಡುವೆ ಆಳವಡಿಸಿರಿ. ಇದು ನೀವು ನೇರವಾಗಿ ಕುಳಿತುಕೊಳ್ಳಲು ಸಹಕರಿಸುತ್ತದೆ ಮತ್ತು ನೀವು ಬೆನ್ನನ್ನು ವಕ್ರವಾಗಿ ಬಾಗಿಸುವುದನ್ನು ತಡೆಯುತ್ತದೆ ಹಾಗೂ ತನ್ಮೂಲಕ ನೀವು ಬೆನ್ನು ನೋವು ಮತ್ತು ಕುತ್ತಿಗೆ ನೋವಿಗೆ ತುತ್ತಾಗುವುದನ್ನು ತಪ್ಪಿಸುತ್ತದೆ.

ಸಂತುಲಿತ ಅಥವಾ ಸಮತೋಲನ ಆಹಾರಕ್ರಮ:

ಸಂತುಲಿತ ಅಥವಾ ಸಮತೋಲನ ಆಹಾರಕ್ರಮ:

ನಿಮ್ಮ ದೇಹವು ವಿಟಾಮಿನ್‌ಗಳಾದ A, D, E, ಮತ್ತು K ಗಳನ್ನು ಹೀರಿಕೊಂಡು ದಾಸ್ತಾನಿರಿಸಿಕೊಳ್ಳಲು ನಿಮ್ಮ ದೇಹಕ್ಕೆ ಕೊಬ್ಬಿನ ಅವಶ್ಯಕತೆಯಿದೆ ಮತ್ತು ಸಾಮಾನ್ಯವಾಗಿ ನಿಮ್ಮ ಸಂಜೆಯ ತಿನಿಸುಗಳು ಇದನ್ನು ಅತ್ಯಧಿಕ ಪ್ರಮಾಣದಲ್ಲಿ ಹೊಂದಿರುತ್ತವೆ. ನಿಮ್ಮ ಶರೀರದ ಅನ್ನಾಂಗ D ಯ ಪ್ರಮಾಣದ ಬಗ್ಗೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿರಿ. ಕೆಲವೊಮ್ಮೆ ನಿಮ್ಮ ಶರೀರಕ್ಕೆ ಇದರ ಪೂರೈಕೆಯು ಇತರ ರೂಪದಲ್ಲಿಯೂ ಸಹ ಬೇಕಾಗಬಹುದು.

ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ ತೊಳೆಯಿರಿ:

ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ ತೊಳೆಯಿರಿ:

ರಾತ್ರಿ ನಿದ್ರೆ ಹೋಗುವ ಮೊದಲು ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ 15 ನಿಮಿಷಗಳ ಕಾಲ ತೊಳೆಯಿರಿ. ಈ ಕ್ರಿಯೆಯು ನಿಮ್ಮನ್ನು ನೋವಿನಿಂದ ಮುಕ್ತರಾಗುವಂತೆ ಮಾಡುತ್ತದೆ ಮತ್ತು ನೀವು ಅರಾಮವಾಗಿರುವಂತೆ ಮಾಡುತ್ತದೆ. ಇದಾದ ಬಳಿಕ, ನಿಮ್ಮ ತ್ವಚೆಯನ್ನು ತೇವವಾಗಿರಿಸಲು ಪಾದದ ಕ್ರೀಂ ಅಥವಾ ಲೋಷನ್ ಅನ್ನು ಬಳಸಿರಿ.

ನಸುಕಿನಲ್ಲಿಯೇ ಹಾಸಿಗೆಯಿಂದೇಳುವುದು:

ನಸುಕಿನಲ್ಲಿಯೇ ಹಾಸಿಗೆಯಿಂದೇಳುವುದು:

ಸೂರ್ಯನು ನೆತ್ತಿಗೇರಿದ ಮೇಲೂ ಸಹ ಹಾಸಿಗೆಯ ಮೇಲೆ ಉರುಳಾಡುತ್ತಿರುವುದು ನಿಮ್ಮನ್ನು ದಿನವಿಡೀ ಆಲಸಿಯಾಗಿರುವಂತೆ ಮಾಡುತ್ತದೆ. ಅದ್ದರಿಂದ ಇದಕ್ಕೆ ಬದಲಾಗಿ, ಬೆಳಗ್ಗೆ ಬೇಗನೆ ಎದ್ದು ಕ್ರಿಯಾಶೀಲರಾಗಿ ಮತ್ತೊಂದು ದಿನದ ಅರoಭವನ್ನು ಮಾಡುವುದು ಉತ್ತಮ.

English summary

Tips to stay happy all day

Health and happiness are directly proportional to each other in most cases. So if you are healthy, then it's incredibly easy to be happy too.
Story first published: Saturday, May 24, 2014, 15:10 [IST]
X
Desktop Bottom Promotion