For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ನಿಮ್ಮ ತೂಕ ಇಳಿಸಲು ಈ ಹಣ್ಣುಗಳು ಸಾಕು!

|

ಬೇಸಿಗೆಯು ನಿಮ್ಮ ದೇಹ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಎಂಬುದನ್ನು ಕೇಳಿ ಆಶ್ಚರ್ಯಚಕಿತರಾಗಿದ್ದೀರಾ? ಏನೂ ಚಿಂತೆ ಬೇಡ ಪ್ರಕೃತಿಯಲ್ಲಿ ಕೆಲವು ಇಂತಹ ಹಣ್ಣುಗಳಿದ್ದು ಅವು ನಿಮ್ಮ ದೇಹ ತೂಕವನ್ನು ಇಳಿಸುವಲ್ಲಿ ಪರಿಣಾಮಕಾರಿಯಾಗಿವೆ. ಇನ್ನುಳಿದ ಕಾಲಕ್ಕಿಂತ ಬೇಸಿಗೆ ನಿಮ್ಮ ತೂಕ ಇಳಿಸಲು ಹೇಳಿ ಮಾಡಿಸಿದ ಸಮಯವಾಗಿದೆ. ಈ ಕಾಲವು ನಿಮಗೆ ಹೆಚ್ಚು ಬೆವರುವಂತೆ ಮಾಡುವುದರಿಂದ ನಿಮಗೆ ಅಧಿಕ ಲಾಭ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು

ಬೇಸಿಗೆಯಲ್ಲಿ ನಿಮಗೆ ವರ್ಕ್ಔಟ್ ಮಾಡಲು ಹೆಚ್ಚಿನ ಪ್ರೋಟೀನ್ ನ್ಯೂಟ್ರೀನ್‌ಗಳ ಅವಶ್ಯಕತೆಯಿದೆ. ನಿಮ್ಮ ದೇಹವು ಅತಿಯಾಗಿ ಬೆವರುವುದರಿಂದ ದೇಹಕ್ಕೆ ಶಕ್ತಿ ನೀಡುವಂತಹ ಹಣ್ಣು ತರಕಾರಿಗಳನ್ನು ನೀವು ಸೇವಿಸಲೇಬೇಕು. ನಿಮ್ಮ ದಿನವನ್ನು ಹಣ್ಣುಗಳೊಂದಿಗೆ ಪ್ರಾರಂಭಿಸಿ ಸ್ಟ್ರಾಬೆರಿ ಮಿಲ್ಕ್‌ಶೇಕ್, ಅಥವಾ ತಾಜಾ ಆರೆಂಜ್ ಜ್ಯೂಸ್ ನಿಮ್ಮ ಬೆಳಗ್ಗಿನ ಬ್ರೇಕ್‌ಫಾಸ್ಟ್‌ನ ಮೆನುವಿನಲ್ಲಿರಲಿ. ಹೀಗೆ ಹಣ್ಣುಗಳೊಂದಿಗಿನ ನಿಮ್ಮ ದಿನದ ಪ್ರಾರಂಭ ತಾಜಾ ಮತ್ತು ಫ್ರುಟ್‌ಫುಲ್ ಆಗಿರುತ್ತದೆ.

ನಿಮ್ಮ ಈ ಬೇಸಿಗೆಯನ್ನು ಇಲ್ಲಿ ನಾವು ನೀಡಿರುವ ಕೆಲವೊಂದು ತೂಕ ನಿಯಂತ್ರಕ ಹಣ್ಣುಗಳಿಂದ ವಿಶೇಷವನ್ನಾಗಿಸಿ. ಇಲ್ಲಿರುವ ಹಣ್ಣುಗಳು ನಿಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ನಿತ್ಯವೂ ನೀವದನ್ನು ಸೇವಿಸುತ್ತೀರುವಿರಿ ಎಂಬುದನ್ನು ಗಮನದಲ್ಲಿಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ

ಸ್ಟ್ರಾಬೆರಿ:

ಸ್ಟ್ರಾಬೆರಿ:

ಹೌದು,ಬಿರು ಬೇಸಿಗೆಯಲ್ಲಿ ನಿಮ್ಮ ದೇಹ ತೂಕ ಇಳಿಸುವಲ್ಲಿ ಸ್ಟ್ರಾಬೆರಿ ಪಾತ್ರ ಅತ್ಯಂತ ಹಿರಿದು. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಂ, ಫೋಲೇಟ್ ಮತ್ತು ಫೈಬರ್ ಅಡಗಿದ್ದು ಪ್ರತಿ ಕಪ್‌ನಲ್ಲಿ ನಿಮಗೆ 50 ಕ್ಯಾಲೋರಿಯಷ್ಟು ಹೊಟ್ಟೆ ತುಂಬಿದಂತೆ ನಿಮ್ಮನ್ನು ಮಾಡುತ್ತದೆ. ಆಶ್ಚರ್ಯಕರವಾಗಿದೆ ಅಲ್ಲವೇ?

ಆರೆಂಜ್:

ಆರೆಂಜ್:

ರಸದಿಂದ ಕೂಡಿದ ಈ ಹಣ್ಣು ನಿಮ್ಮ ಬೇಸಿಗೆಯ ಬಿಸಿಯಲ್ಲಿ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ನಿಮ್ಮ ತೂಕವನ್ನು ಆರೆಂಜ್ ಹೇಗೆ ಇಳಿಸುತ್ತದೆ ಎಂದು ಕಾತರಗೊಂಡಿರುವಿರಾ? ಈ ಹಣ್ಣು 80 ಕ್ಯಾಲೋರಿಗಳನ್ನು ತನ್ನೊಳಗೆ ಅಡಗಿಸಿದ್ದು ಇದರ ರಸ ಸೇವಿಸಿದೊಡನೆ ನಿಮ್ಮ ಹೊಟ್ಟೆ ತುಂಬಿ ಹೋದಂತೆ ನಿಮಗನಿಸುತ್ತದೆ. ಬೇಸಿಗೆಯಲ್ಲಿ ಹೈಡ್ರೇಟೆಡ್ ಆಗಿ ಆರೆಂಜ್ ನಿಮ್ಮನ್ನು ಮಾಡುತ್ತದೆ.

ರಸ್‌ಬೆರ್ರಿ:

ರಸ್‌ಬೆರ್ರಿ:

ಸ್ಟ್ರಾಬೆರಿಗಿಂತಲೂ ರಸ್‌ಬೆರ್ರಿಯಲ್ಲಿರುವ ಫೈವರ್ ಅಂಶ ಅತ್ಯಂತ ಹೆಚ್ಚಿನದು. ವಿಟಮಿನ್ ಸಿ, ಕೆ, ತೂಕ ಇಳಿಸುವ ಮ್ಯಾಗ್ನೇಸ್‌ನೊಂದಿಗೆ 64 ಕ್ಯಾಲೋರಿಯನ್ನು ಈ ಹಣ್ಣು ನಿಮಗೆ ಒದಗಿಸುತ್ತದೆ.

ಪೀಚಸ್:

ಪೀಚಸ್:

ನೀವು ನಿಮ್ಮ ತೂಕ ಇಳಿಸುವಲ್ಲಿ ಸ್ವಲ್ಪ ಕಠಿಣರಾಗಿದ್ದರೆ, ಹೆಚ್ಚು ಕೊಬ್ಬನ್ನು ನಷ್ಟ ಮಾಡುವಲ್ಲಿ ಬೇಸಿಗೆಯ ಈ ಹಣ್ಣು ಪೀಚಸ್ ನಿಮಗೆ ಸಹಕಾರಿ. ಈ ಹಣ್ಣು 60 ಕ್ಯಾಲೋರಿಗಳನ್ನು ಹೊಂದಿದ್ದು ನಿಮ್ಮ ತೂಕವನ್ನು ಖಂಡಿತ ಇಳಿಸುತ್ತದೆ.

ಕಲ್ಲಂಗಡಿ:

ಕಲ್ಲಂಗಡಿ:

ನಿಮ್ಮ ದೇಹ ತೂಕ ಈ ಬೇಸಿಗೆಯಲ್ಲಿ ಇಳಿಯಲೇಬೇಕೆಂಬ ಛಲ ನಿಮ್ಮದಾಗಿದ್ದರೆ ನಿಮ್ಮ ಒಲವು ಕಲ್ಲಂಗಡಿಗೆ ಇರಲಿ. ಈ ಹಣ್ಣಿನಲ್ಲಿ ಅತ್ಯಧಿಕ ನೀರಿನಂಶವಿದ್ದು ನಿಮ್ಮ ಹಸಿವನ್ನು ಮಾಯಮಾಡಿ ಬಿಡುತ್ತದೆ.

ಮಾವಿನ ಹಣ್ಣು:

ಮಾವಿನ ಹಣ್ಣು:

ಹೆಚ್ಚಿನವರ ಪ್ರಕಾರ ಮಾವು ಹೆಚ್ಚು ಕ್ಯಾಲೋರಿ ಹಣ್ಣಾಗಿದೆ. ಬೇಸಿಗೆಯ ಹಣ್ಣಾಗಿರುವ ಮಾವು ನಿಮ್ಮ ದೇಹ ತೂಕವನ್ನು ಇಳಿಸುವಲ್ಲಿ ಪಾತ್ರ ವಹಿಸುತ್ತದೆ. ದೇಹದ ಕೊಬ್ಬನ್ನು ನಿವಾರಿಸಿ, ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟು ಬೊಜ್ಜು ಮತ್ತು ಮಧುಮೇಹವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

ದ್ರಾಕ್ಷಿ:

ದ್ರಾಕ್ಷಿ:

ಹೆಚ್ಚು ಫೈಬರ್ ಅಂಶ ಅಡಗಿರುವ ಹಣ್ಣಾಗಿರುವ ದ್ರಾಕ್ಷಿ, ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತದೆ.

Read more about: health ಆರೋಗ್ಯ
English summary

Summer Fruits To Help You Lose Weight

Wondering whether summer will play havoc with your weight loss? No worries, for there are some fruits that will help you cut that extra flab. Losing weight during summer is a lot more better than other seasons as you tend to sweat a lot in the hot season.
Story first published: Friday, March 14, 2014, 12:36 [IST]
X
Desktop Bottom Promotion