For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಲು ಸೂಪ್ ಡಯಟ್

By poornima heggade
|

ಪ್ರತಿಯೊಬ್ಬರೂ ಫಿಟ್ ಮತ್ತು ಸ್ಲಿಮ್ ಆಗಿರುವ ದೇಹವನ್ನೇ ಹೊಂದಬೇಕೆಂದು ಇಷ್ಟಪಡುತ್ತಾರೆ. ಆದರೆ ಹಸಿವಿನಿಂದ ಇರುವುದು, ಅಥವಾ ವಿವಿಧ ಬಗೆಯ ಆಹಾರಗಳನ್ನು ಸೇವಿಸುವುದರ ಮೂಲಕ ಉತ್ತಮ ಫಿಗರ್ ಪಡೆಯಲು ಪ್ರಯತ್ನಿಸುತ್ತೇವೆ.

ನಾವು ಏನೇ ಸೇವಿಸಿದರೂ ಅದು ಕೊಬ್ಬಿನ ರೂಪದಲ್ಲಿ ನಮ್ಮ ದೇಹವನ್ನು ಪ್ರತಿಬಿಂಬಿಸುವುದಂತೂ ನಿಜ. ಆದ್ದರಿಂದ, ಬೇಡದ ಕೊಬ್ಬನ್ನು ದೇಹದಿಂದ ತೊಡೆದುಹಾಕಲು ಮತ್ತು ನಿಮ್ಮ ತೂಕವನ್ನು ಉತ್ತಮ ರೀತಿಯಲ್ಲಿ ಕಡಿಮೆ ಮಾಡಲು ಒಂದು ವಿಶೇಷ ಆಹಾರ ಕ್ರಮವನ್ನು ಅನುಸರಿಸಬೇಕು. ಅದುವೇ - ಸೂಪ್ ಸೇವಿಸುವುದು!

ತೂಕ ಇಳಿಸಿಕೊಳ್ಳಲು ಸೂಪ್ ನ್ನು ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಕ್ಯಾಲೋರಿಯನ್ನು ನಿಯಂತ್ರಿಸಲು ಮತ್ತು ಬುದ್ಧಿವಂತಿಕೆಯಿಂದ ನಿಮ್ಮ ಆರೋಗ್ಯ ಸುಧಾರಿಸಲು ಸಾಧ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಲು ನಿಂಬೆ ಹಣ್ಣಿಗೆ ನಿಂಬೆ ಹಣ್ಣೆ ಸಾಟಿ

ತೂಕ ಇಳಿಸಿಕೊಳ್ಳಲು ಸರಿಯಾದ ರೀತಿಯಲ್ಲಿ ಡಯಟ್ ನ್ನು ಅನುಸರಿಸಬೇಕು. ಆದರೆ, ಬಿಡುವಿಲ್ಲದ ಜೀವನಶೈಲಿ ಮತ್ತು ಉದ್ರಿಕ್ತ ಉದ್ಯೋಗಗಳು ನಿಮ್ಮ ಅಸಮತೋಲನವಾಗಿರುವ ಆಹಾರ ಕ್ರಮದಿಂದಾಗಿ ನಿಮ್ಮ ತೂಕದ ಮೇಲೆ ಪರಿಣಾಮ ಬೀರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಲು ಸೆಲೆಬ್ರೆಟಿ ಡಯಟ್ ಮಾಡಿನೋಡಿ

ತೂಕವನ್ನು ಕಡಿಮೆ ಮಾಡಲು ಸೂಪ್ ನ್ನು ಆಯ್ದುಕೊಳ್ಳುವ ಮೂಲಕ, ನೀವು ಸಮಯವನ್ನು ಉಳಿಸುವುದು ಮಾತ್ರವಲ್ಲದೆ, ಎಲ್ಲಾ ಅಗತ್ಯ ಪೌಷ್ಟಿಕಾಂಶಗಳೂ ನಿಮ್ಮ ದೇಹಕ್ಕೆ ದೊರೆಯುವಂತೆ ಮಾಡಬಹುದು.

ಬಿಳಿ ಹುರುಳಿ ಸೂಪ್

ಬಿಳಿ ಹುರುಳಿ ಸೂಪ್

ಸಕ್ಕರೆ, ಕೊಬ್ಬು ಮತ್ತು ಸೋಡಿಯಂ ಪ್ರಮಾಣವು ಕಡಿಮೆ ಇರುವ, ಈ ಆರೋಗ್ಯಕರ ಸೂಪ್ ನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ನಿಮ್ಮ ತೂಕ ಇಳಿಸುವಲ್ಲಿ ಸಹಾಯ ಮಾಡಬಹುದು. ಇದು ಬಹಳ ರುಚಿಕರವಾಗಿದ್ದು, ತಯಾರಿಸಲೂ ಸುಲಭ ಮತ್ತು ಪ್ರೋಟೀನ್ ಗಳ ಉತ್ತಮ ಪ್ರಮಾಣವನ್ನು ಹೊಂದಿದೆ.

ಬ್ರೊಕೋಲಿ ಸೂಪ್

ಬ್ರೊಕೋಲಿ ಸೂಪ್

ನಿಮಗೆ ಬ್ರೊಕೋಲಿಯನ್ನು ಸೇವಿಸುವುದು ಇಷ್ಟವಾಗದೇ ಇರಬಹುದು. ಆದರೆ ಇದು ನಿಮ್ಮ ತೂಕ ಇಳಿಸುವಲ್ಲಿ ವೇಗವಾಗಿ ಪರಿಣಾಮ ಬೀರುವ ಸೂಪ್. 100 ಗ್ರಾಂ ನಲ್ಲಿ ಕೇವಲ 1.2 ಗ್ರಾಂ ಮಾತ್ರ ಕೊಬ್ಬನ್ನು ಒಳಗೊಂಡಿದೆ. ಅಲ್ಲದೆ, ಇದು ಫೈಬರ್ (ನಾರಿನಾಂಶ) ಮತ್ತು ಅತ್ಯಾವಶ್ಯಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಕುಂಬಳಕಾಯಿ ಸೂಪ್

ಕುಂಬಳಕಾಯಿ ಸೂಪ್

ಕುಂಬಳಕಾಯಿ ಸೂಪ್ ಸೇವಿಸುವುದರಿಂದ, ನೀವು ತ್ವರಿತ ಮತ್ತು ಸುಲಭ ರೀತಿಯಲ್ಲಿ ಅನಗತ್ಯ ಕೊಬ್ಬನ್ನು ದೇಹದಿಂದ ಹೊರಹಾಕಬಹುದು. ಕಡಿಮೆ ಪ್ರಮಾಣದಲ್ಲಿ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿದ್ದು ಇದು ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಮತ್ತು ಫೈಬರ್ ಉತ್ತಮ ಮೂಲವನ್ನು ಹೊಂದಿದೆ.

ಕಂದು ಅಕ್ಕಿ (ಬ್ರೌನ್ ರೈಸ್) ಮತ್ತು ಚಿಕನ್ ಸೂಪ್

ಕಂದು ಅಕ್ಕಿ (ಬ್ರೌನ್ ರೈಸ್) ಮತ್ತು ಚಿಕನ್ ಸೂಪ್

ವೇಗವಾಗಿ ತೂಕವನ್ನು ಇಳಿಸಬಲ್ಲ ಸೂಪ್ ಗಳ ನಡುವೆ, ಈ ಸೂಪ್ ಉತ್ತಮ ರುಚಿ ಹೊಂದಿರುವುದು ಮಾತ್ರವಲ್ಲದೆ ಕಡಿಮೆ ಪ್ರಮಾಣದಲ್ಲಿ ಸೋಡಿಯಂ ಮತ್ತು ಹೆಚ್ಚು ಪ್ರೋಟೀನ್ ನನ್ನು ಹೊಂದಿದೆ. ಸೇವಿಸುವ 100 ಗ್ರಾಂ ನಲ್ಲಿ, ಕೊಬ್ಬಿನ ಪ್ರಮಾಣ ಕೇವಲ 0.7 ಗ್ರಾಂ ನಷ್ಟು!

ಲೀಕ್ ಮತ್ತು ಆಲೂಗಡ್ಡೆ ಸೂಪ್

ಲೀಕ್ ಮತ್ತು ಆಲೂಗಡ್ಡೆ ಸೂಪ್

ತೂಕ ಇಳಿಸಿಕೊಳ್ಳಲು ಈ ಸೂಪ್ ನ್ನು ಸೇವಿಸುವುದರ ಮೂಲಕ, ನಿಮಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಗಳನ್ನೂ ನಿಮ್ಮ ದೇಹಕ್ಕೆ ಒದಗಿಸಬಹುದು. ಕಡಿಮೆ ಕೊಬ್ಬನ್ನು ಹೊಂದಿರುವ ಈ ಬಹು ಧಾನ್ಯಗಳಿಂದ ತಯಾರಾದ ಸೂಪ್ ರುಚಿಯಲ್ಲೂ ಅಷ್ಟೇ ಉತ್ತಮವಾದುದು.

ಕ್ಯಾರೆಟ್ ಸೂಪ್

ಕ್ಯಾರೆಟ್ ಸೂಪ್

ಕೊತ್ತಂಬರಿ ಅಲಂಕರಿಸಲ್ಪಟ್ಟ ರುಚಿಕರವಾದ ಕ್ಯಾರೆಟ್ ಸೂಪ್ ಅಂಟು ರಹಿತ ಮತ್ತು ಕಡಿಮೆ ಸಕ್ಕರೆ ಪ್ರಮಾಣವನ್ನು ಹೊಂದಿದೆ. ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗುವ ಈ ಸೂಪ್ ಆಹಾರ ಪ್ರತಿ 100 ಗ್ರಾಂ ಗೆ ಕೇವಲ 1.2 ಗ್ರಾಂ ಕೊಬ್ಬಿನ ಅಂಶವನ್ನು ಒಳಗೊಂಡಿದೆ .

ಬಟಾಣಿ ಸೂಪ್

ಬಟಾಣಿ ಸೂಪ್

ನಿಮ್ಮ ನಿತ್ಯದ ಆಹಾರದಲ್ಲಿ ಬಟಾಣಿ ಸೂಪ್ ಆಯ್ಕೆ ಮಾಡಿಕೊಂಡು ನಿಮಗಿಷ್ಟವಾದ ತರಕಾರಿಗಳನ್ನು ಸೇರಿಸಿ ಸೂಪ್ ತಯಾರಿಸಿ ಸೇವಿಸಬಹುದು. ಇದು ನಿಮ್ಮ ತೂಕವನ್ನು ಆರೋಗ್ಯಕರ ರೀತಿಯಲ್ಲಿ ನಿಯಮಿತವಾಗಿ ಕಡಿಮೆ ಮಾಡಲು ಸಹಾಯ ಮಾಡಬಹುದು. ಪ್ರೋಟೀನ್ ನ್ನು ಸಮೃದ್ಧವಾಗಿ ಹೊಂದಿರುವ ಬಟಾಣಿ ಸೂಪ್ ಕೇವಲ ಕಡಿಮೆ ಕೊಬ್ಬು ಮಾತ್ರವಲ್ಲದೆ, ಸೋಡಿಯಂ ಮತ್ತು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿದೆ.

ಅಣಬೆ ಸೂಪ್

ಅಣಬೆ ಸೂಪ್

ಪ್ರತಿ 100 ಗ್ರಾಂಗೆ ಕೇವಲ 1.2 ಗ್ರಾಂ ಕೊಬ್ಬನ್ನು ಹೊಂದಿರುವ ಈ ಸೂಪ್ ತೂಕ ಇಳಿಸುವ ಉತ್ತಮ ಆಹಾರಗಳಲ್ಲಿ ಒಂದಾಗಿದೆ. ಇದು ಬೇಕಾಗುವ ಪ್ರೋಟೀನ್ ಗಳನ್ನು ದೇಹಕ್ಕೆ ಒದಗಿಸುತ್ತದೆ ಮತ್ತು ನೀವು ಪರಿಣಾಮಕಾರಿಯಾಗಿ ಅನಗತ್ಯ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಲೆಂಟಿಲ್ ಸೂಪ್ (ಮಸೂರ ಅವರೆ ಸೂಪ್)

ಲೆಂಟಿಲ್ ಸೂಪ್ (ಮಸೂರ ಅವರೆ ಸೂಪ್)

ಆರೋಗ್ಯಕರ ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಗಳಾನ್ನು ಹೊಂದಿರುವ ಲೆಂಟಿಲ್ ಸೂಪ್, ನೀವು ಹುಡುಕುತ್ತಿರುವ ಸರಿಯಾದ ಆಹಾರ. ಪ್ರತಿ 100 ಗ್ರಾಂ ಗೆ ಕೇವಲ 0.8 ಗ್ರಾಂ ಕೊಬ್ಬನ್ನು ನೀಡುತ್ತದೆ.

ಟೊಮೆಟೊ ಸೂಪ್

ಟೊಮೆಟೊ ಸೂಪ್

ರುಚಿಕರವಾದ ಆಹಾರವನ್ನು ಸೇವಿಸುವುದರ ಜೊತೆಗೆ ತೂಕವನ್ನು ಇಳಿಸಿಕೊಳ್ಳಬೇಕೆಂದಿದ್ದರೆ, ಟೊಮೆಟೊ ಸೂಪ್ ನಿಮ್ಮ ಆಯ್ಕೆಯಾಗಿರಲಿ. ಇದರಲ್ಲಿ ಪೊಟ್ಯಾಶಿಯಂ , ಪ್ರೋಟೀನ್ ಮತ್ತು ಫೈಬರ್ ಗಳು ಹೇರಳವಾಗಿವೆ. ಕೊಬ್ಬು ಮತ್ತು ಸಕ್ಕರೆ ಕಡಿಮೆ ಪ್ರಮಾಣದಲ್ಲಿದ್ದು ಸಿ ಜೀವಸತ್ವದ ಉತ್ತಮ ಮೂಲವಾಗಿದೆ.

English summary

Soups Diet For Weight Loss

Everyone loves to have a fit, slim and toned body. From starving to eating different types of food, we would do anything possible to attain a good figure.
X
Desktop Bottom Promotion