For Quick Alerts
ALLOW NOTIFICATIONS  
For Daily Alerts

ಕ್ರೀಡಾಪಟುಗಳಿಗೆ ಶಕ್ತಿಯನ್ನು ಪೂರೈಸುವ ಸರಳ ವ್ಯಾಯಾಮಗಳು

By Super
|

ಓಟವು ನಾವೆಲ್ಲರು ಮಾಡಬಹುದಾದ ಒಂದು ಅದ್ಭುತವಾದ ವ್ಯಾಯಾಮಗಳಲ್ಲಿ ಒಂದು. ಇದು ನಿಮ್ಮ ದೇಹದ ಆಕಾರಕ್ಕೆ ಸಹ ತನ್ನದೇ ಆದ ಕೊಡುಗೆಯನ್ನು ಕೊಡುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಓಟವನ್ನು ರೂಢಿಸಿಕೊಳ್ಳಲು ನಮ್ಮ ಶಕ್ತಿಯನ್ನು ಹೆಚ್ಚಿಸುವ ತರಬೇತಿಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕು. ವೃತ್ತಿಪರ ಓಟಗಾರರನ್ನು ಗಮನದಲ್ಲಿರಿಸಿಕೊಂಡು ನೋಡಿದಾಗ, ಅವರು ಕೆಲವೊಂದು ಓಟಕ್ಕೆ ಪೂರಕವಾದ ವ್ಯಾಯಾಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಕಂಡು ಬಂದಿದೆ.

ಈ ವ್ಯಾಯಾಮಗಳು ಅವರ ಓಟದ ವೇಗವನ್ನು ಬಲಗೊಳಿಸುತ್ತವೆ. ಅದರಲ್ಲೂ ಸ್ನಾಯುಗಳು ಶಕ್ತಿಶಾಲಿಯಾಗಿರಬೇಕಾದುದು ಓಟಕ್ಕೆ ತೀರಾ ಅತ್ಯಗತ್ಯ. ನಾವೆಲ್ಲರು ಅಂದುಕೊಂಡಿರಬಹುದು ಓಟಕ್ಕೆ ದೇಹದ ಕೆಳಭಾಗವು ಶಕ್ತಿಶಾಲಿಯಾಗಿದ್ದರೆ ಸಾಕು ಎಂದು, ಆದರೆ ವಾಸ್ತವ ಏನೆಂದರೆ, ದೇಹದ ಮೇಲ್ಭಾಗವು ಸಹ ಓಟದಲ್ಲಿ ಗಣನೀಯ ಪಾತ್ರವನ್ನು ನಿರ್ವಹಿಸುತ್ತದೆ. ಸ್ನಾಯು ಶಕ್ತಿ ಮತ್ತು ಚಟುವಟಿಕೆಗಳನ್ನು ಸುಧಾರಿಸಿಕೊಳ್ಳಲು ಕ್ರೀಡಾಪಟುಗಳಿಗೆ ಕೆಲವೊಂದು ವ್ಯಾಯಾಮಗಳು ಸಹಕರಿಸುತ್ತವೆ. ಬನ್ನಿ ಆ ವ್ಯಾಯಾಮಗಳು ಯಾವುವು ಮತ್ತು ಅವುಗಳಿಂದ ಸಿಗುವ ಪ್ರಯೋಜನಗಳು ಯಾವುವು ಎಂಬುದನ್ನು ಈ ಕೆಳಗೆ ನೀಡಿದ್ದೇವೆ ಓದಿಕೊಳ್ಳಿ... ತೋಳಿನ ಬೊಜ್ಜು ಕಮ್ಮಿ ಮಾಡುವ ವ್ಯಾಯಾಮಗಳು

ಬರ್ಪೀಗಳು

ಬರ್ಪೀಗಳು ಓಟಗಾರರಿಗೆ ಹೇಳಿ ಮಾಡಿಸಿದಂತಹ ವ್ಯಾಯಾಮವಾಗಿದೆ. ಬರ್ಪೀಗಳು ಸ್ನಾಯು ಶಕ್ತಿಯನ್ನು ಮತ್ತು ದೇಹದ ಆಕಾರವನ್ನು ಸುಧಾರಿಸುವ ವ್ಯಾಯಾಮಗಳಾಗಿವೆ. ಬರ್ಪೀಗಳನ್ನು ಮಾಡುತ್ತಿದ್ದರೆ, ಕೊಬ್ಬು ಸಹ ವೇಗವಾಗಿ ಕರಗುತ್ತದೆ. ಈಗಾಗಿ ಬರ್ಪೀಗಳನ್ನು ಓಟಗಾರರು ಹೆಚ್ಚಾಗಿ ಅಭ್ಯಾಸ ಮಾಡುತ್ತಿರುತ್ತಾರೆ.

ಹಿಟ್‍ಗಳು

ಹಿಟ್‍ಗಳು ಸಹ ಮತ್ತೊಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಇದೊಂದು ಕಾರ್ಡಿಯೊ ವ್ಯಾಯಾಮವಾಗಿರುವುದರಿಂದ ಕೇವಲ ಓಟಗಾರರಿಗಷ್ಟೇ ಅಲ್ಲದೆ, ಇತರರಿಗು ಸಹ ಪ್ರಯೋಜನಕಾರಿಯಾಗಿದೆ. ಓಟಗಾರರ ಸ್ನಾಯು ಶಕ್ತಿ ಮತ್ತು ಚಟುವಟಿಕೆಗಳನ್ನು ಸುಧಾರಿಸುವ ಈ ವ್ಯಾಯಾಮವು ಮಾಡಲು ಸಹ ಸುಲಭ.

ರೋಯಿಂಗ್

ಓಟಗಾರರಿಗೆ ದೇಹದ ಮೇಲ್ಭಾಗದ ಶಕ್ತಿಯು ಸಹ ತುಂಬಾ ಮುಖ್ಯ. ಅದಕ್ಕಾಗಿ ರೋಯಿಂಗ್ ಹೇಳಿ ಮಾಡಿಸಿದ ವ್ಯಾಯಾಮವಾಗಿದೆ. ಇದು ದೇಹದ ಮೇಲ್ಭಾಗಕ್ಕೆ ಒಳ್ಳೆಯ ವ್ಯಾಯಾಮವನ್ನು ಒದಗಿಸುತ್ತದೆ. ನಿಮ್ಮ ವೇಗ ಮತ್ತು ಚಟುವಟಿಕೆಶೀಲತೆ ಸುಧಾರಿಸಬೇಕೆಂದರೆ, ರೋಯಿಂಗ್ ಅಭ್ಯಾಸ ಮಾಡಿ. ಗಲ್ಲ ದೃಢವಾಗಿಸಲು ವ್ಯಾಯಾಮಗಳು

ಈಜು

ಈಜು ಸ್ನಾಯುಗಳಿಗೆ ಒಂದು ಪರಿಪೂರ್ಣವಾದ ವಿಶ್ರಾಂತಿಯನ್ನು ನೀಡುವ ವ್ಯಾಯಾಮವಾಗಿದೆ. ಜೊತೆಗೆ ಇದು ಓಟಗಾರರಿಗೆ ಒಳ್ಳೆಯ ವ್ಯಾಯಾಮವನ್ನು ಸಹ ಒದಗಿಸುತ್ತದೆ. ಓಟವಾದ ನಂತರ, ಈಜುವುದರಲ್ಲಿ ತೊಡಗಿಸಿಕೊಂಡರೆ ನಿಮ್ಮ ಶಕ್ತಿ, ದೇಹದ ನಮ್ಯತೆ ಮತ್ತು ಚಟುವಟಿಕೆಶೀಲತೆ ದುಪ್ಪಟ್ಟಾಗುತ್ತದೆ. ಆದ್ದರಿಂದ ಓಟಗಾರರು ಈಜನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಈ ಎಲ್ಲಾ ಗುಣಗಳಿಂದ ನಿಸ್ಸಂಶಯವಾಗಿ ಈಜು ಒಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಆಕರ್ಷಕ ಮೈಕಟ್ಟು ನಿಮ್ಮದಾಗಿಸಿಕೊಳ್ಳಲು 20 ಸೂಕ್ತ ಸಲಹೆಗಳು

ಸ್ಕಿಪ್ಪಿಂಗ್

ಸ್ಕಿಪ್ಪಿಂಗ್ ಸಹ ಒಂದು ಒಳ್ಳೆಯ ವ್ಯಾಯಾಮ. ಇದು ನಿಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಶರವೇಗದಲ್ಲಿ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ನಿಮ್ಮ ತೊಡೆಗಳನ್ನು ಮತ್ತು ಹಿಂಗಾಲುಗಳನ್ನು ಸಹ ಬಲಗೊಳಿಸುತ್ತದೆ. ಇದರಿಂದ ನಿಮ್ಮ ದೇಹವು ಮತ್ತಷ್ಟು ಚಟುವಟಿಕೆಶೀಲಗೊಳಿಸುತ್ತದೆ. ಹೀಗಾಗಿ ಓಟಗಾರರಿಗೆ ಸ್ಕಿಪ್ಪಿಂಗ್ ಒಂದು ಪರಿಣಾಮಕಾರಿಯಾದ ವ್ಯಾಯಾಮವಾಗಿದೆ.

English summary

Powerful Exercises Every Runner Should Do

Running is easily one of the most brilliant exercises to get yourself in shape. We are aware of the fact that in order to make the most out of running, strength training is the key. Keeping runners in mind, we look at some exercises every runner has to do.
X
Desktop Bottom Promotion