For Quick Alerts
ALLOW NOTIFICATIONS  
For Daily Alerts

ಉಪಹಾರಕ್ಕೆ ಅಪ್ಪಿ ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ!

By Viswanath S
|

ಬೆಳಗಿನ ಉಪಹಾರ ನಮಗೆ ಮುಖ್ಯವಾದದ್ದು ಎಂದು ನಮಗೆಲ್ಲಾ ತಿಳಿದೇ ಇದೆ. ಅರೋಗ್ಯಕರ ಬೆಳಗಿನ ಉಪಹಾರದ ಸೇವನೆಯಿಂದ ಕ್ಯಾನ್ಸರ್ ಮತ್ತು ಮಧುಮೇಹದಂತ ರೋಗಗಳ ಅಪಾಯವನ್ನು ಕಡಿಮೆಮಾಡಬಹುದು.

ಆದರೆ ನಾವು ಕೆಲವು ಆಯ್ಕೆಗಳನ್ನು ಮೇಲೆ ಹೇಳಿದಂತೆ ಮಾಡಲು ಸಂಪೂರ್ಣವಾಗಿ ವಿಫಲವಾಗುತ್ತೇವೆ ಎಂಬುದು ನಮಗೆ ಗೊತ್ತಿದೆ. ಸಂಪೂರ್ಣ ಅನಾರೋಗ್ಯಕರ ಆಹಾರ ಮತ್ತು ಅದರ ಸೇವನೆಯಿಂದ ಹಲವು ವೇಳೆ ನಾವು ರೋಗಿಗಳಾಗಬಹುದಾದ ಉಪಹಾರಗಳ ಪಟ್ಟಿಯೊಂದನ್ನು ಇಲ್ಲಿ ಕೊಟ್ಟಿದ್ದೇವೆ

ಸಿಹಿ ಧಾನ್ಯಗಳು ಮತ್ತು ಬೇಕರಿ ವಸ್ತುಗಳು

ಸಿಹಿ ಧಾನ್ಯಗಳು ಮತ್ತು ಬೇಕರಿ ವಸ್ತುಗಳು

ಕೆಲವು ಧಾನ್ಯಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಗಳಿಂದ ತುಂಬಿರುತ್ತವೆ. ನೀವು ಅದನ್ನು ಸೇವಿಸಿದಾಗ ನಿಮ್ಮ ರಕ್ತದಲ್ಲಿರುವ ಸಕ್ಕರೆಯ ಅಂಶವು ವೇಗವಾಗಿ ಏರುತ್ತದೆ ಮತ್ತು ನಂತರ ಕಡಿಮೆಯಾಗುತ್ತದೆ. ಹೀಗೆ ದಿನದ ಆರಂಭದಲ್ಲಿ ನಿಮ್ಮ ಶಕ್ತಿ ಕುಸಿಯುವುದು ಸರಿಯಲ್ಲ ಮತ್ತು ಹಾಗಾಗಿ ಧಾನ್ಯಗಳು ಮತ್ತು ಬೇಕರಿ ವಸ್ತುಗಳನ್ನು ತಪ್ಪಿಸುವುದೇ ಬಹಳ ಉತ್ತಮ. ಬದಲಿಗೆ ಹೆಚ್ಚು ನಾರಿನಾಂಶವಿರುವ ಧಾನ್ಯಗಳು ಮತ್ತು ಪ್ರೋಟೀನ್ ಭರಿತ ಅಹಾರಗಳನ್ನು ನಿಮ್ಮ ಬೆಳಗಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಹೆಚ್ಚಾಗಿ ನಾರಿನಾಂಶ ಮತ್ತು ಪ್ರೋಟೀನ್ ಇರುವ ಪ್ಲಾಕ್ಸ್ ಸೀಡ್ ಅಥವ ವಾಲ್‌ನಟ್ಸ್ ಗಳನ್ನು ಸೇರಿಸಿಕೊಳ್ಳಿ.

ಸಿದ್ಧಪಡಿಸಿದ (ಪ್ಯಾಕ್ ಮಾಡಲಾದ) ಆಹಾರ

ಸಿದ್ಧಪಡಿಸಿದ (ಪ್ಯಾಕ್ ಮಾಡಲಾದ) ಆಹಾರ

ಸಿದ್ಧಪಡಿಸಿದ ಪ್ಯಾನ್ಕೇಸಕ್, ಡೋನಟ್ಸ್, ಇತ್ಯಾದಿ, ಇವುಗಳು ಸಕ್ಕರೆ ಲೇಪಿತವಾಗಿದ್ದು ನಿಮ್ಮ ನಾಲಿಗೆ ರುಚಿಯನ್ನು ಮಾತ್ರ ಪೂರೈಸುತ್ತವೆ. ನಿಮ್ಮ ಸೊಂಟದ ಸುತ್ತಳತೆಗೆ ಹೆಚ್ಚಾಗಿವುದನ್ನು ತಪ್ಪಿಸುವ ಕಡೆ ಗಮನ ಕೊಟ್ಟು ಸ್ವತಃ ನೀವೇ ಸಂಪೂರ್ಣ ಗೋಧಿಯಿಂದ ಮಾಡಿದ ಬ್ರೆಡ್ ಮತ್ತು ಕಾರ್ಬೋಹೈಡ್ರೈಟ್ ಕಮ್ಮಿ ಇರುವ ಬೆಣ್ಣೆ ಉಪಯೋಗಿಸಿ ಟೋಸ್ಟ್ ಮಾಡಿಕೊಳ್ಳಿ.

ಕೊಬ್ಬು ಮತ್ತು ಕ್ಯಾಲೋರಿ ಇರುವ ಆಹಾರ

ಕೊಬ್ಬು ಮತ್ತು ಕ್ಯಾಲೋರಿ ಇರುವ ಆಹಾರ

ಅಂಗಡಿಯಲ್ಲಿ ದೊರಕುವ ಸಮಾರು ಎಲ್ಲಾ ತಿನಿಸುಗಳು ಜೇನುತುಪ್ಪ, ಸಕ್ಕರೆ, ಓಟ್ಸ್ ಮತ್ತು ಒಣಗಿದ ಹಣ್ಣುಗಳು (ಡ್ರೈಡ್ ಫ್ರೂಟ್ಸ್) ನೋಡುವುದಕ್ಕೆ ಆರೋಗ್ಯಕರವೆಂದು ಕಂಡರೂ ಅವುಗಳಲ್ಲಿ ವಾಸ್ತವವಾಗಿ ಸಾಕಷ್ಟು ಕೊಬ್ಬು ಮತ್ತು ಕ್ಯಾಲೋರಿ ಇರುತ್ತವೆ. ಪ್ಯಾಕ್ ಆಗಿರುವ ಅನೇಕ ಗ್ರಾನೋಲದಲ್ಲಿ ಸಾಕಷ್ಟು ಸಕ್ಕರೆಯನ್ನು ಗುಪ್ತವಾಗಿ ಸೇರಿಸಿರುತ್ತಾರೆ. ನೀವು ಆ ಡಬ್ಬಿಗಳ ಮೇಲೆ ಬಳಸಿರುವ ಪದಾರ್ಥಗಳನ್ನು ಹೆಚ್ಚು ಗಮನದಿಂದ ಓದಿದರೆ ಮಾತ್ರ ನಿಜಾಂಶ ಗೊತ್ತಾಗುವುದು. ಆದ್ದರಿಂದ ಆರ್ಗಾನಿಕ್ ಅಥವ ನೈಸರ್ಗಿಕ ಸರಳ ಸಕ್ಕರೆಯಿಂದ ತಯಾರಿಸಿದ ಪದಾರ್ಥಗಳನ್ನು ಗಮನವಿಟ್ಟು ಕೊಳ್ಳಬೇಕು. ಇಲ್ಲದಿದ್ದಲ್ಲಿ ನೀವು ಬ್ರೇಕ್‌ಫಾಸ್ಟ್ ಬದಲು ಊಟವಾದನಂತರ ತಿನ್ನುವ ಸಿಹಿತಿನಿಸು (ಡಸ್ಸರ್ಟ್) ಸೇವಿಸಿದಹಾಗಿರುತ್ತದೆ.

ಸಿದ್ಧಮಾಡಿದ ಸ್ಯಾಂಡ್‌ವಿಚ್

ಸಿದ್ಧಮಾಡಿದ ಸ್ಯಾಂಡ್‌ವಿಚ್

ನೀವು ಸಿದ್ಧಮಾಡಿದ ಸ್ಯಾಂಡ್‌ವಿಚ್ ತೆಗೆದುಕೊಂಡಾಗ ಅದು ಸಮತೋಲಿತ ಉಪಹಾರ - ಮೊಟ್ಟೆ, ಮಾಂಸ, ಚೀಸ್ ಮತ್ತು ಬ್ರೆಡ್ - ಕೂಡಿದ ಆಹಾರ ಎಂದೆಣಿಸಬಹುದು. ಆದರೆ ಅದನ್ನು ನೀವು ಸರಿಯಾಗಿ ಬಿಚ್ಚಿ ನೋಡಿದಾಗ ಅದರಲ್ಲಿ ನಿಮಗೆ ಕಾಣುವುದು - ಒಂದು ಕಳಪೆ ಹುರಿದ ಮೊಟ್ಟೆ, ಸಂಸ್ಕರಿಸಿದ ಹ್ಯಾಮ್ ಅಥವ ಬೇಕನ್ ಮತ್ತು ಪೂರ್ಣ ಕೊಬ್ಬಿರುವ ಚೀಸ್ ತುಂಬಿರುತ್ತವೆ. ಬದಲಿಗೆ ನೀವೇ ಮನೆಯಲ್ಲಿ ಬೇಯಿಸಿದ ಮೊಟ್ಟೆ ಮತ್ತು ಕಡಿಮೆ ಕೊಬ್ಬಿರುವ ಚೀಸ್ ಬಳಸಿ ತಯಾರಿಸಿ.

ಸ್ಮೂತೀಸ್

ಸ್ಮೂತೀಸ್

ಸ್ಮೂತೀಸ್‍ (ಒಂದು ನಯ ತಾಜಾ ಹಣ್ಣು ಮತ್ತು ಚಾಕೊಲೇಟ್ ಅಥವಾ ಕಡಲೆಕಾಯಿ ಬೆಣ್ಣೆ ಹೊಂದಿರುವ ವಿಶೇಷ ಸಂದರ್ಭಗಳಲ್ಲಿ ಮಾಡಿದ ಒಂದು ಸಂಯೋಜಿತ ಮತ್ತು ಕೆಲವೊಮ್ಮೆ ಸಿಹಿ ಪಾನೀಯ) ಸುಧಾರಿಸಿದ ಸಕ್ಕರೆಯಿಂದ ತುಂಬಿರುತ್ತವೆ. ಬಹಳಷ್ಟು ಅಂಗಡಿಯಿಂದ ಕೊಂಡ ವಿವಿಧ ಸ್ಮೂತೀಸ್ ನಲ್ಲಿ ಗಟ್ಟಿಯಾದ ಕೊಬ್ಬಿರುವ ಹಾಲು ಅಥವ ಕ್ರೀಮ್ ಇರುತ್ತವೆ. ಹಾಗಾಗಿ ಇದರ ಬದಲಿಗೆ ಮೊಸರು, ಬಾದಾಮಿ, ಕೆನೆರಹಿತ ಹಾಲು ಮತ್ತು ತಾಜಾ ಹಣ್ಣು ಮತ್ತು ನಟ್ಸ್ ಗಳನ್ನು ಬಳಸಿ ಒಂದು ಆರೋಗ್ಯಕರ ಉಪಹಾರವನ್ನು ತಯಾರಿಸಿಕೊಳ್ಳಿ.

English summary

Most Unhealthy breakfast ideas

We all know that breakfast is the most important meal for us. Eating a healthy breakfast every morning can reduce the risk for diseases such as cancer and diabetes. Here go the foods to avoid for breakfast because these are totally unhealthy and sometime make you a patient.
Story first published: Wednesday, September 17, 2014, 18:01 [IST]
X
Desktop Bottom Promotion