For Quick Alerts
ALLOW NOTIFICATIONS  
For Daily Alerts

ತಿನ್ನಲು ರುಚಿಯಾಗಿರುವ ಕೋಳಿ ಮಾಂಸ ನಿಜಕ್ಕೂ ಆರೋಗ್ಯಕರವೇ?

By Super
|

ಮಾಂಸಾಹಾರಿಗಳಿಗೆ ಅತಿಪ್ರಿಯ ಖಾದ್ಯವೆಂದರೆ ಕೋಳಿಮಾಂಸದ ಪದಾರ್ಥ. ಕೋಳಿ ಮಾಂಸ ಬರೆಯ ಭಾರತದಲ್ಲಲ್ಲ, ಇಡಿಯ ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಿ ಬಳಸಲ್ಪಡುವ ಆಹಾರ, ಸರಿಸುಮಾರು ಗೋಧಿ ಮತ್ತು ಅಕ್ಕಿಯ ಬಳಿಕದ ಸ್ಥಾನ. ಈ ಬೇಡಿಕೆಗೆ ಅನುಗುಣವಾಗಿ ಕೋಳಿ ಫಾರಮ್ಮುಗಳಿಂದ ಪ್ರತಿದಿನವೂ ಲಕ್ಷಾಂತರ ಕೋಳಿಗಳು ಮಾರುಕಟ್ಟೆಗೆ ಬಂದು ಬಾಣಸಿಗನ ಬಾಣಲೆಗೆ ಬೀಳುತ್ತವೆ. ಇದಕ್ಕೆ ನೆರವಾಗಿರುವುದು ಕುಕ್ಕುಟ ತಂತ್ರಜ್ಞಾನ.

ಕೋಳಿಯ ಮಾಂಸದ ಬೆಳವಣಿಗೆ ಧಿಡೀರನೇ ಏರಲು ಕೋಳಿಗಳು ತಿನ್ನುವ ಖಾದ್ಯದಿಂದ ಹಿಡಿದು ಕುಡಿಸುವ ನೀರಿನಲ್ಲಿ ಕೃತಕ ರಾಸಾಯನಿಕಗಳನ್ನು ಸೇರಿಸಿ, ಫಾರಮ್ಮಿನ ತಾಪಮಾನ ಮೊದಲಾದವುಗಳನ್ನು ಮಾರ್ಪಾಡಿಸಿ ಒಂದು ಮಾಂಸದ ಮುದ್ದೆ ತಯಾರಾಗುವಂತೆ ಮಾಡಲಾಗುತ್ತದೆ. ತಿನ್ನಲು ರುಚಿಯಾಗಿರುವ ಈ ಮಾಂಸ ನಿಜಕ್ಕೂ ಆರೋಗ್ಯಕರವೇ?

ಈ ಬಗ್ಗೆ ಕುಕ್ಕುಟ ಉದ್ಯಮದಲ್ಲಿ ಪರಿಣಿತರನ್ನು ವಿಚಾರಿಸಿದರೆ ಅವರು ನೀಡುವ ಉತ್ತರ ಹೌದು. ಏಕೆಂದರೆ ಈ ಕುಕ್ಕುಟಗಳ ಹಿಂದೆ ಬಹಳಷ್ಟು ಸಂಶೋಧನೆ ನಡೆಸಿ ಸಾವಿರಾರು ಪ್ರಯೋಗಗಳ ಮೂಲಕ ಪ್ರಮಾಣಿಸಿದ ಬಳಿಕವೇ ಕೋಳಿಗಳನ್ನು ಮಾರಾಟಕ್ಕೆ ಬಿಡಲಾಗುತ್ತದೆ. ಕೋಳಿ ಫಾರಮ್ಮುಗಳಲ್ಲಿಯೂ ಪ್ರತಿ ಹಂತದಲ್ಲಿಯೂ ಎಲ್ಲಾ ವಿಷಯಗಳ ಬಗ್ಗೆ ಎಚ್ಚರಿಕೆಯನ್ನು ಕಾಯ್ದುಕೊಳ್ಳಲಾಗುತ್ತದೆ.

ಒಂದು ವೇಳೆ ಒಂದು ಗುಂಪಿನ ಯಾವುದೋ ಒಂದು ಕೋಳಿಗೆ ಕಾಯಿಲೆಯಾಗಿರುವ ಗುಮಾನಿಬಂದರೆ ಇಡಿಯ ದಳವನ್ನೇ ಪ್ರತ್ಯೇಕಿಸಿ ಪರೀಕ್ಷಿಸಲಾಗುತ್ತದೆ. ಈ ಕೋಳಿಗಳನ್ನು ತಿನ್ನುವುದರಿಂದ ಶೇಖಡಾ ೦.೧ರಷ್ಟು ಮಾನವರಿಗೆ ಹಾನಿಯಾಗಬಹುದು ಎಂದು ಗೊತ್ತಾದರೂ ಇಡಿಯ ದಳವನ್ನೇ ತ್ಯಜಿಸಲಾಗುತ್ತದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಆಗಮಿಸುವ ಈ ಕೋಳಿಮಾಂಸವನ್ನು ಯಾವುದೇ ತೊಂದರೆ ಇಲ್ಲದೆ ಸೇವಿಸಬಹುದು ಎಂದು ಪರಿಣಿತರು ವಿವರಿಸುತ್ತಾರೆ. ಕೆಮ್ಮಿನ ನಿವಾರಣೆಗೆ ಅತಿ ಸೂಕ್ತವಾಗಿರುವ 15 ಸಲಹೆಗಳು

ನಿಜವಾದ ತೊಂದರೆ ಕೋಳಿ ಮಾಂಸವನ್ನು ತಿನ್ನುವುದರಲ್ಲಲ್ಲ, ತಿನ್ನುವ ಪ್ರಮಾಣದಲ್ಲಿದೆ. ಏಕೆಂದರೆ ಆಹಾರತಜ್ಞರ ಪ್ರಕಾರ ನಮಗೆ ಅಗತ್ಯವಿರುವ ಪ್ರೋಟೀನು ಸುಮಾರು ನೂರು ಗ್ರಾಂ ಕೋಳಿ ಮಾಂಸದಿಂದ ಲಭ್ಯವಾಗಿಬಿಡುತ್ತದೆ. ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದ ಪ್ರೋಟೀನು ಕೊಬ್ಬಾಗಿ ಪರಿವರ್ತನೆಗೊಂಡು ದೇಹದಲ್ಲಿ ಶೇಖರವಾಗುತ್ತದೆ. ರುಚಿ ಇದೆ ಎಂದು ನಾವು ನಾಲ್ಕಾರು ತುಂಡುಗಳನ್ನು ತಿನ್ನುವುದರಿಂದ ದಿನದ ಮಿತಿಯನ್ನು ದಾಟಿಬಿಡುತ್ತೇವೆ. ಇದೇ ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ. ಕೋಳಿ ಮಾಂಸದ ಸೇವನೆಯ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ನೋಡಲು ಮುಂದೆ ಓದಿರಿ.

ಪ್ರೋಟೀನಿನ ಖನಿಜವಾಗಿರುವ ಕೋಳಿಮಾಂಸ

ಪ್ರೋಟೀನಿನ ಖನಿಜವಾಗಿರುವ ಕೋಳಿಮಾಂಸ

ನಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನುಗಳು ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದರೊಂದಿಗೆ ಹಲವು ಅಮೈನೋ ಆಮ್ಲಗಳು ಸಹಾ ಇವೆ. ಇವು ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪೋಷಕಾಂಶಗಳನ್ನು ನೀಡುತ್ತವೆ. ಪೋಷಕಾಂಶಗಳ ಕೊರತೆಯಿಂದ ದೇಹ ಬಳಲಿದ್ದರೆ ಶೀಘ್ರವೇ ಪುನಃಶ್ಚೇತನಗೊಳ್ಳುತ್ತದೆ.

ಮನಸ್ಸನ್ನು ನಿರಾಳವಾಗಿರಿಸಲು ಸಹಕರಿಸುತ್ತದೆ

ಮನಸ್ಸನ್ನು ನಿರಾಳವಾಗಿರಿಸಲು ಸಹಕರಿಸುತ್ತದೆ

ದೈಹಿಕ ಚಟುವಟಿಕೆಗೆ ಹೆಚ್ಚಿನ ಪ್ರೋಟೀನಿನ ಅಗತ್ಯವಿದೆ. ಸಾಮಾನ್ಯವಾಗಿ ಆಟೋಟಗಳ ಮೂಲಕ ಮನಸ್ಸು ಮುದಗೊಳ್ಳುತ್ತದೆ. ಈ ಆಟೋಟಗಳಿಗೆ ಕೋಳಿಮಾಂಸದ ಸೇವನೆ ಹೆಚ್ಚಿನ ಶಕ್ತಿಯನ್ನು ನೀಡಿ ಆಯಾಸವನ್ನು ಪರಿಹರಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸಿ ಯಾವುದೇ ಸಂದರ್ಭದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಪಡೆಯಲು ನೆರವಾಗುತ್ತದೆ.

ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ

ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ

ಚಿಕ್ಕ ವಯಸ್ಸಿನಿಂದಲೇ ಕೋಳಿಮಾಂಸವನ್ನು ಸೇವಿಸುತ್ತಾ ಬರುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ. ಅಲ್ಲದೇ ಮೂಳೆಗಳನ್ನೂ ಗಟ್ಟಿಯಾಗಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯದ ಕಾರ್ಯವೂ ಸುಗಮಗೊಂಡು ಆರೋಗ್ಯ ಉತ್ತಮಗೊಳ್ಳುತ್ತದೆ.

ಪ್ರಾಣಾಂತಕ ಕಾಯಿಲೆಗಳಿಂದ ಕಾಪಾಡುತ್ತದೆ

ಪ್ರಾಣಾಂತಕ ಕಾಯಿಲೆಗಳಿಂದ ಕಾಪಾಡುತ್ತದೆ

ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ಈ ವ್ಯಾಯಾಮಕ್ಕೆ ಹೆಚ್ಚಿನ ಪ್ರೋಟೀನುಗಳ ಅವಶ್ಯಕತೆಯಿದ್ದು ಕೋಳಿಮಾಂಸದ ಸೇವನೆಯಿಂದ ವ್ಯಾಯಾಮಕ್ಕೆ ಹೆಚ್ಚಿನ ಶಕ್ತಿ ದೊರಕಿದಂತಾಗುತ್ತದೆ. ಇದರಲ್ಲಿರುವ ಹಲವು ಪೋಷಕಾಂಶಗಳು ಪ್ರಮುಖ ಕಾಯಿಲೆಗಳಾದ ಖಿನ್ನತೆ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹಲವು ಶ್ವಾಸ ಸಂಬಂಧಿ ರೋಗಗಳಿಂದ ಕಾಪಾಡುತ್ತದೆ. ಏಕೆಂದರೆ ಆರೋಗ್ಯಕ್ಕೆ ಬಿಳಿಯ ಮಾಂಸ ಉತ್ತಮವಾಗಿದೆ. ಮೀನು ಮತ್ತು ಕೋಳಿಮಾಂಸ ಬಿಳಿಯ ಮಾಂಸಗಳಾದುದರಿಂದ ಆರೋಗ್ಯಕ್ಕೆ ಪೂರಕವಾಗಿವೆ.

ಸ್ನಾಯುಗಳ ಬೆಳವಣಿಗೆಗೆ ಸಹಕರಿಸುತ್ತದೆ

ಸ್ನಾಯುಗಳ ಬೆಳವಣಿಗೆಗೆ ಸಹಕರಿಸುತ್ತದೆ

ಉತ್ತಮ ಹುರಿಕಟ್ಟಿನ ಸ್ನಾಯುಗಳಿಗೆ ವ್ಯಾಯಾಮದ ಜೊತೆ ಉತ್ತಮ ಆಹಾರವೂ ಅವಶ್ಯವಾಗಿದೆ. ಕೋಳಿಮಾಂಸದ ಸೇವನೆಯಿಂದ ಸ್ನಾಯುಗಳು ಬೇಗನೇ ಹುರಿಗಟ್ಟುತ್ತವೆ. ಈ ಸ್ನಾಯುಗಳು ಸದೃಢವಾಗಿ, ಆರೋಗ್ಯಕರವಾಗಿದ್ದು ದೇಹಕ್ಕೆ ಆಕರ್ಷಕ ರೂಪ ನೀಡುತ್ತವೆ ಮತ್ತು ತನ್ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ಕೋಳಿಮಾಂಸದ ಹಾನಿಕಾರಕ ಗುಣಗಳು

ಕೋಳಿಮಾಂಸದ ಹಾನಿಕಾರಕ ಗುಣಗಳು

ವಾಸ್ತವವಾಗಿ ಹಾನಿಯಾಗುವುದು ಮಾಂಸದ ಸೇವೆನೆಯಿಂದ ಅಲ್ಲ, ಇದಕ್ಕೆ ಸಂಬಂಧಿಸಿದ ಇತರ ಗುಣಗಳಿಂದ. ಅಂದರೆ ಸರಿಯಾಗಿ ತೊಳೆಯದೇ ಇರುವುದು, ಪೂರ್ಣವಾಗಿ ಬೇಯುವ ಮೊದಲೇ ರುಚಿ ನೋಡುವುದು, ತಯಾರಿಕೆಯ ಸಮಯದಲ್ಲಿ ಶುದ್ಧತೆಯನ್ನು ಕಾಪಾಡದೇ ಇರುವುದು, ಖಾದ್ಯದ ತಯಾರಿಕೆಯ ವೇಳೆ ಕೀಟಗಳು ಬಂದು ಬೀಳುವುದು ಮೊದಲಾದವು. ನಿಜವಾದ ಹಾನಿಕಾರಕ ಅಂಶವೆಂದರೆ ಕೋಳಿಮಾಂಸದಲ್ಲಿರುವ ಹೆಚ್ಚಿನ ನಾರು. ಇದರಿಂದಾಗಿ ಹೊಟ್ಟೆಯಲ್ಲಿ ಜೀರ್ಣವಾಗಲು ಹೆಚ್ಚಿನ ಸಮಯ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆಯ ಜೀರ್ಣರಸಗಳನ್ನು ಉಪಯೋಗಿಸಬೇಕಾಗಿ ಬರುತ್ತದೆ. ಇದಕ್ಕಾಗಿ ಆಹಾರತಜ್ಞರು ಎಂಟು ವಾರಕ್ಕಿಂತ ಹೆಚ್ಚು ವಯಸ್ಸಿನ ಕೋಳಿಗಳನ್ನು ತಿನ್ನದಿರಲು ಸಲಹೆ ನೀಡುತ್ತಾರೆ. ಎಂಟು ವಾರಗಳ ಬಳಿಕ ಈ ಮಾಂಸದಲ್ಲಿ ನಾರು ಹೆಚ್ಚುತ್ತಾ ಹೋಗುತ್ತದೆ. ಇದೇ ಕಾರಣದಿಂದ ನಾಟಿ ಕೋಳಿಗಳಲ್ಲಿ ತುಂಬಾ ದೊಡ್ಡದಾಗಿರುವ ಹುಂಜದ ಮಾಂಸ ರಬ್ಬರಿನ ಅಟ್ಟೆಯಂತಿರುತ್ತದೆ.

ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು

ಕೋಳಿ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು

ಕೋಳಿ ಮಾಂಸ ಮಾನವರಿಗೂ ಪ್ರಿಯವಾಗಿರುವಂತೆ ಹಲವು ಬ್ಯಾಕ್ಟೀರಿಯಾಗಳಿಗೂ ಅತಿ ಪ್ರಿಯವಾಗಿದೆ. ಫ್ರಿಜ್ಜಿನಿಂದ ಹೊರಬಂದ ಕ್ಷಣದಲ್ಲಿಯೇ ಇವು ಕೋಳಿಮಾಂಸದ ಮೇಲೆ ಧಾಳಿಯಿಡುತ್ತವೆ. ಇದಕ್ಕಾಗಿ ಕೋಳಿಮಾಂಸವನ್ನು ನಿಗದಿತ ತಾಪಮಾನದಲ್ಲಿ ಹಾಗೂ ಸೂಕ್ತ ಸಮಯದವರೆಗೆ ಒಲೆಯಲ್ಲಿಡಬೇಕು. ತಾಪಮಾನವನ್ನು ಅಳೆಯುವ ಥರ್ಮೋಮೀಟರ್ ಒಂದನ್ನು ಒಲೆಯ ಬಳಿ ಸ್ಥಾಪಿಸಿ ಒಂದೇ ತೆರನಾದ ಬಿಸಿಯನ್ನು ನಿಯಂತ್ರಿಸಬಹುದು. ಒಂದು ವೇಳೆ ಪೂರ್ಣವಾಗಿ ಬೇಯದಿರುವ ಮಾಂಸವನ್ನು ಸೇವಿಸಿದರೆ ಹಲವು ಕ್ರಿಮಿಗಳು ಹೊಟ್ಟೆ ಸೇರಬಹುದು. ಲಾಡಿಹುಳ ಇದಕ್ಕೊಂದು ಉದಾಹರಣೆಯಾಗಿದೆ.

 ಹಾರ್ಮೋನುಗಳ ಫಲದಿಂದ ಬೆಳೆದ ಕೋಳಿ ನಾಟಿ ಕೋಳಿಗೆ ಸಾಟಿಯಲ್ಲ

ಹಾರ್ಮೋನುಗಳ ಫಲದಿಂದ ಬೆಳೆದ ಕೋಳಿ ನಾಟಿ ಕೋಳಿಗೆ ಸಾಟಿಯಲ್ಲ

ಫಾರಂ ಕೋಳಿಗಳ ಬೆಳವಣಿಗೆಗೆ ಹಲವು ಹಾರ್ಮೋನುಗಳನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಇದು ಮಾಂಸದಲ್ಲಿಯೂ ಉಳಿಯಬಹುದಾದ ಸಂಭವವಿದೆ. ಇದರಿಂದ ಮಾಂಸದ ಹಲವು ಉತ್ತಮ ಗುಣಗಳು ಅಳಿಯುತ್ತವೆ. ಈ ಮಾಂಸವನ್ನು ಸೇವಿಸುವುದರಿಂದ ಇಂದಲ್ಲ ನಾಳೆ ಏನಾದರೂ ತೊಂದರೆಯಾಗಬಹುದೆಂಬ ಅನುಮಾನ ಮೂಡುತ್ತದೆ.

 ಹಾರ್ಮೋನುಗಳ ಫಲದಿಂದ ಬೆಳೆದ ಕೋಳಿ ನಾಟಿ ಕೋಳಿಗೆ ಸಾಟಿಯಲ್ಲ

ಹಾರ್ಮೋನುಗಳ ಫಲದಿಂದ ಬೆಳೆದ ಕೋಳಿ ನಾಟಿ ಕೋಳಿಗೆ ಸಾಟಿಯಲ್ಲ

ಆದರೆ ನಾಟಿಕೋಳಿಗಳು ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುತ್ತವೆ. ಈ ಕೋಳಿಗಳ ಮಾಂಸದಲ್ಲಿ ಯಾವುದೇ ಕೃತಕ ಹಾರ್ಮೋನು ಇರುವುದಿಲ್ಲವಾದ್ದರಿಂದ ಧೈರ್ಯವಾಗಿ ಸೇವಿಸಬಹುದು.

English summary

Is Eating Chicken Good Or Bad For Health?

Chicken is the first thing in our minds when we want to eat something irresistible. Juicy, yummy taste of the chicken chunks make you feel lost in the heaven. Don't they? But we surely cannot deny the fact these diverse dishes put a question on the back of our mind - Is eating chicken good or bad for health?
X
Desktop Bottom Promotion