For Quick Alerts
ALLOW NOTIFICATIONS  
For Daily Alerts

ನಿಮ್ಮ ಬ್ಲಡ್ ಶುಗರ್‌ ಕಡಿಮೆ ಮಾಡುವುದು ಹೇಗೆ?

|

ಹೆಚ್ಚಿನ ಬ್ಲಡ್ ಶುಗರ್‌ ಮಾನವನ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮಧುಮೇಹವು ಒಂದು ಕುಟುಂಬಕ್ಕಿದ್ದರೆ ಆ ಕುಟುಂಬದ ಸದಸ್ಯರು ಮಧುಮೇಹಿಗಳಾಗಿರುತ್ತಾರೆ. ಈ ಮಧುಮೇಹಿಗಳ ಮೇಲೆ ಹೆಚ್ಚಿನ ಬ್ಲಡ್ ಶುಗರ್‌ ಪರಿಣಾಮ ಬೀರುತ್ತವೆ. ಹೆಚ್ಚಿನ ಬ್ಲಡ್ ಶುಗರ್‌ನ ಲಕ್ಷಣಗಳೆಂದರೆ ದೃಷ್ಟಿ ಮಂದವಾಗುವುದು, ಹೆಚ್ಚುವರಿ ಬಾಯಾರಿಕೆ, ಬಳಲಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಹಸಿವು, ತೂಕ ಇಳಿಕೆ ಇತ್ಯಾದಿ.

ಇತ್ತೀಚೆಗೆ ಮಧುಮೇಹವಿರುವುದಾಗಿ ಪರೀಕ್ಷಿಸಿಕೊಂಡ ವ್ಯಕ್ತಿ ಭಯಕ್ಕೆ ಒಳಗಾಗಿರುತ್ತಾನೆ ಆದ್ದರಿಂದ ಒತ್ತಡಕ್ಕೆ ಒಳಗಾದ ವ್ಯಕ್ತಿಯ ಹಾರ್ಮೋನ್ ನಿಮ್ಮ ರಕ್ತದ ಸಕ್ಕರೆಯನ್ನು ಏರಿಸುವಂತೆ ಬಿಡುಗಡೆಯಾಗುತ್ತದೆ. ನಿಮ್ಮ ರಕ್ತದ ಸಕ್ಕರೆಯನ್ನು ಇಳಿಸಲು ಕ್ಯಾಮೋಮೈಲ್ನ ಟೀ ಯನ್ನು ತೆಗೆದುಕೊಳ್ಳಿ ಮತ್ತು ದೀರ್ಘವಾಗಿ ಉಸಿರಾಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರುಳನ್ನು ಹಣ್ಣುಗಳಿಂದ ಸ್ವಚ್ಛಗೊಳಿಸಬಹುದೇ ?

How to control Blood pressure

ನಿಮ್ಮ ಬ್ಲಡ್ ಶುಗರ್‌ ಕಡಿಮೆ ಮಾಡುವ ಆಹಾರಗಳು

*ಬ್ಲೂಬೆರ್ರಿ, ಅವೊಕ್ಕಾಡೊ, ಚಿಯಾ ಬೀಜಗಳು, ಆಲೀವ್ ಆಯಿಲ್, ಚೆರ್ರಿಗಳು ಸಹಕಾರಿಯಾಗಿವೆ.
*ಸೋಡಾ ಹಾಗೂ ಜ್ಯೂಸ್‌ಗಳು ಬ್ಲಡ್ ಶುಗರ್ ಅನ್ನು ಏರಿಸುತ್ತವೆ ಆದ್ದರಿಂದ ದ್ರಾವಾಹಾರವನ್ನು ಸಾಕಷ್ಟು ತೆಗೆದುಕೊಳ್ಳಿ.
*ದಿನಕ್ಕೆ ಕಡಿಮೆ ಎಂದರೂ 6-8 ಲೋಟ ನೀರು ಕುಡಿಯಿರಿ.
*ನಿಮ್ಮ ದೈನಂದಿನ ಆಹಾರದಲ್ಲಿ ಸ್ಟ್ರಾಬೆರ್ರಿ, ಲಿಂಬೆ, ಅಥವಾ ಲಿಂಬೆಯ ಹೋಳುಗಳನ್ನು ಇಲ್ಲವೇ ಆರೆಂಜ್ ಜ್ಯೂಸ್ ಅನ್ನು ಕಡ್ಡಾಯವಾಗಿಸಿ.
*ಲಿಂಬೆ ಹೋಳುಗಳನ್ನು ನೀರಿಗೆ ಹಾಕಿ ನಂತರ ಅದನ್ನು ರೆಫ್ರಿಜರೇಟರ್‌ನಲ್ಲಿ ಇಡಿ. ಈ ಹೋಳುಗಳನ್ನು ಎರಡು ದಿನಗಳಿಗೊಮ್ಮೆ ತೆಗೆದು ಹೊಸದನ್ನು ಹಾಕುತ್ತಿರಿ ಮತ್ತು ಆ ನೀರನ್ನು ಸೇವಿಸಿ. ಇತರ ಸಿಟ್ರಸ್ ಅಂಶವುಳ್ಳ ಹಣ್ಣುಗಳನ್ನು ಕೂಡ ನೀವು ಬಳಸಬಹುದು.
*ಹಣ್ಣಿನ ಜ್ಯೂಸ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಳ್ಳಿ ಏಕೆಂದರೆ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಇರುತ್ತವೆ.
*ಊಟಕ್ಕಿಂತ ಮುಂಚೆ 2 ಟೇಬಲ್ ವಿನೇಗರ್ ಅನ್ನು ತೆಗೆದುಕೊಳ್ಳುವುದು ತುಂಬಾ ಉತ್ತಮ.
*ದಾಲ್ಚಿನ್ನಿ ಪೌಡರ್ ಅನ್ನು ಮೊಸರಿಗೆ ಹಾಕಿ ತೆಗೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

*ಒಂದು ಕಪ್ ಗ್ರೀನ್ ಟೀ ಬ್ಲಡ್ ಶುಗರ್‌ಗೆ ಪರಿಣಾಮಕಾರಿ ಚಿಕಿತ್ಸೆ.
*ಎಲೆಗಳಿರುವ ತರಕಾರಿಗಳನ್ನು ಹೆಚ್ಚು ಸೇವಿಸಿ ಇವುಗಳಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ನಿಮ್ಮ ಬ್ಲಡ್ ಶುಗರ್ ಅನ್ನು ನಿಯಂತ್ರಿಸಿ ಉತ್ತಮ ಸ್ವಾಸ್ಥ್ಯವನ್ನು ನಿಮಗೆ ಒದಗಿಸುತ್ತವೆ.
*ಮೀನು, ಬೀನ್ಸ್, ಚಿಕನ್ ಮುಂತಾದ ಪ್ರೋಟೀನ್ ಅಧಿಕವುಳ್ಳ ಆಹಾರವನ್ನು ತೆಗೆದುಕೊಳ್ಳಿ.
*ಕಾರ್ಬೋಹೈಡ್ರೇಟ್ ಆಹಾರಗಳಾದ ಬ್ರೆಡ್, ಅನ್ನ, ಆಲೂಗಡ್ಡೆಯನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ.

English summary

How to control Blood pressure

Blood pressure usually refers to the arterial pressure of the systemic circulation. During each heartbeat, blood pressure varies between a maximum and a minimum pressure.The blood pressure in the circulation is principally due to the pumping action of the heart.
Story first published: Monday, January 27, 2014, 14:33 [IST]
X
Desktop Bottom Promotion