For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

|

ನಮ್ಮ ಮನೆಯಂಗಳದಲ್ಲಿ ಬೆಳೆದಿರುವ ಸಣ್ಣಪುಟ್ಟ ಔಷಧೀಯ ಸಸ್ಯಗಳ ಪ್ರಭಾವಗಳ ಬಗ್ಗೆ ಕೆಲವೊಮ್ಮೆ ನಮಗೆ ತಿಳಿದೇ ಇರುವುದಿಲ್ಲ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತಿರುವ ಈ ಸಸ್ಯಗಳು ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿರುತ್ತದೆ ಅಂತಹುದೇ ಒಂದು ಪುಟ್ಟ ಸಸ್ಯವೇ 'ತುಳಸಿ'.

"ಲ್ಯಾಮಿಯಾಸಿಸ್" ಎಂಬ ಕುಟುಂಬಕ್ಕೆ ಸೇರಿರುವ ತುಳಸಿಯ ವೈದ್ಯಕೀಯ ಹೆಸರು 'ಒಸಿಮಮ್ ಸೇಂಕ್ಟಮ್' ಹಸಿರು ಹಾಗೂ ತಿಳಿ ನೇರಳೆ ಬಣ್ಣದಲ್ಲಿ ದೊರೆಯುವ ತುಳಸಿಯ ತವರು ಮನೆ ಭಾರತ. ಆದ್ದರಿಂದ ಇದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿ ಹೋಗಿದೆ. ವೇದಗಳ ಕಾಲದಲ್ಲಿಯೇ ತುಳಸಿಗೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿತ್ತು.

ನಮ್ಮ ಸಂಪ್ರದಾಯದಂತೆ ಮನೆಯ ಯಜಮಾನಿ ಅಥವಾ ಹೆಂಗಸರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ ಒಂದು ತಂಬಿಗೆ ನೀರನ್ನು ತುಳಸಿ ಗಿಡಕ್ಕೆ ಹೊಯ್ದು ಪ್ರದಕ್ಷಿಣೆ ಬಂದು ತುಳಸಿ ದೇವರಿಗೆ ಪ್ರಾರ್ಥಿಸಿ ದಿನದ ಆರಂಭವನ್ನು ಮಾಡುತ್ತಾರೆ. ಇದು ಮನಸ್ಸಿಗೆ ತಾಜಾತನವನ್ನು ಆಹ್ಲಾದವನ್ನು ನೀಡಿ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ ಎಂಬುದು ಇದರ ಹಿಂದಿರುವ ಉದ್ದೇಶ.

ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಓದಿ: ಸರ್ವ ರೋಗಗಳಿಗೆ ಡಾಕ್ಟರ್ ಮನೆಯಲ್ಲೇ ಇದ್ದಾರೆ

ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ.

ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಓದಿ: ಹತ್ತಾರು ಬಗೆಯ ತುಳಸಿ ಗಿಡಗಳು

ತುಳಸಿಯ ವೈದ್ಯಕೀಯ ಅಂಶಗಳು:

ತುಳಸಿಯ ವೈದ್ಯಕೀಯ ಅಂಶಗಳು:

ತುಳಸಿಯ ಎಲೆಗಳು ನಮ್ಮ ಬುದ್ಧಿ ಶಕ್ತಿಯನ್ನು ಚುರುಕುಗೊಳಿಸುತ್ತದೆ ಹಾಗೂ ಉದರ ಬಾಧೆಗಳನ್ನು ನಿವಾರಿಸಿ ಶಕ್ತಿ ಕೊಡುತ್ತದೆ.

 ಜ್ವರ ಹಾಗೂ ಶೀತಕ್ಕೆ ರಾಮಬಾಣ:

ಜ್ವರ ಹಾಗೂ ಶೀತಕ್ಕೆ ರಾಮಬಾಣ:

ಜ್ವರ ಹಾಗೂ ಶೀತಕ್ಕೆ ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಮತ್ತು ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

ತಲೆನೋವು:

ತಲೆನೋವು:

ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.

ಕಿಡ್ನಿ ಸ್ಟೋನ್:

ಕಿಡ್ನಿ ಸ್ಟೋನ್:

ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ಬಾಧೆ ಕಡಿಮೆಯಾಗುತ್ತದೆ.ಹೀಗೆ ಬಹುವಿಧ ಕಾಯಿಲೆಗಳಿಗೆ ಮನೆಮದ್ದಾಗಿರುವ ತುಳಸಿಯು ವಾತಾವರಣಕ್ಕೂ ಒಳ್ಳೆಯದು. ಹೆಚ್ಚು ಖರ್ಚಿಲ್ಲದೆ ಬೆಳೆಸಬಹುದಾದ ತುಳಸಿಯಿಂದ ನಾವು ಪಡೆಯಬಹುದಾದ ಪ್ರಯೋಜನ ಅಪಾರವಾದುದು.

English summary

Home remedies of basil plant

The basil plant is holy to the Hindus. Basil usually grows in the wild too, but still it is a plant that has many specific requirements. You need to learn some specific things to care for a basil plant. So almost every Indian household has a Tulsi plant and need to know how to care for a holy basil plant.
Story first published: Friday, January 24, 2014, 16:22 [IST]
X
Desktop Bottom Promotion