For Quick Alerts
ALLOW NOTIFICATIONS  
For Daily Alerts

ಹ್ಯಾಂಡ್ ಬ್ಯಾಗ್‍‌ಗಳಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು

|

ಇಂದಿನ ಫ್ಯಾಷನ್ ಕೇವಲ ಬಟ್ಟೆ ಮತ್ತು ಆಭರಣಗಳಿಗೆ ಮಾತ್ರ ಸೀಮಿತವಲ್ಲ. ಇದು ವಿವಿಧ ಕವಲುಗಳಾಗಿ ಹರಡಿ ಹ್ಯಾಂಡ್ ಬ್ಯಾಗ್‍‍ಗಳವರೆಗು ಬಂದು ನಿಂತಿದೆ. ಬ್ಯಾಗ್‍ಗಳೆಂದರೆ ಸರಕುಗಳನ್ನು ತುಂಬಿಕೊಂಡು ಹೋಗುವ ಚೀಲಗಳಾಗಿಯೇ ಉಳಿದಿಲ್ಲ. ಇವು ಈಗ ಹೆಂಗಳೆಯರ ಭುಜಕ್ಕೆ ನೇತಾಡಿಕೊಂಡೆ ಅವರಿಗೆ ಒಂದು ಅಂದವನ್ನು ನೀಡುವ ಆಭರಣದಂತಾಗಿದೆ. ಈ ಹ್ಯಾಂಡ್‍ಬ್ಯಾಗ್‍ಗಳಿಲ್ಲದೆ ಹೆಂಗಸರ ಫ್ಯಾಷನ್ ಅಪೂರ್ಣವಾಗುತ್ತದೆ.

ಹೆಂಗಸರಿಗೆ ಈ ಹ್ಯಾಂಡ್‍ಬ್ಯಾಗ್‍ಗಳು ಯಾವ ಮಟ್ಟಿಗೆ ಹಿಡಿಸಿರುತ್ತವೆಯೆಂದರೆ ಅವುಗಳಿಲ್ಲದೆ ಅವರು ಮನೆಯಿಂದ ಒಂದು ಹೆಜ್ಜೆಯನ್ನು ಸಹ ಇಡುವುದಿಲ್ಲ. ಅದರಲ್ಲೂ ಬ್ಯಾಗ್ ಆರಿಸಿಕೊಳ್ಳುವಾಗ ಬಣ್ಣ, ಗಾತ್ರ ಮತ್ತು ಡಿಸೈನ್‍ಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಏಕೆಂದರೆ ಅವುಗಳು ನಿಮ್ಮ ಮೇಕಪ್ ಸಾಮಗ್ರಿಗಳು, ಕಾರ್ಡ್‍ಗಳು, ಕಾರ್ಡ್‍ಗಳು, ಹಣ, ಕೀಗಳು ಮತ್ತು ನಿಮಗೆ ಅಗತ್ಯವಿರುವ ಪ್ರತಿಯೊಂದನ್ನು ತೆಗೆದುಕೊಂಡು ಹೋಗಲು ನೆರವಾಗುತ್ತವೆ. ಅತ್ಯಗತ್ಯವಾಗಿ ಬೇಕಾಗಿರುವ ಆಕ್ಸೆಸರಿಗಳಲ್ಲಿ ಹ್ಯಾಂಡ್‍ಬ್ಯಾಗ್‍ಗಳಿಗೆ ಮೊದಲ ಆಧ್ಯತೆ ನೀಡುವುದು ತಪ್ಪಲ್ಲ ಬಿಡಿ.

ಎಚ್ಚರ: ನಿರ೦ತರ ಲ್ಯಾಪ್‌ಟಾಪ್‌ ಬಳಕೆದಾರರಿಗೆ ಕಾದಿದೆ ಅಪಾಯ!

ಆದರೆ ಈ ಹ್ಯಾಂಡ್‍ಬ್ಯಾಗ್‍ಗಳ ಉಪಯೋಗಕಾರಿ ವಿಚಾರಗಳ ನಡುವೆ ನೀವು ನಿಮ್ಮ ಆರೋಗ್ಯವನ್ನು ಮರೆತು ಬಿಟ್ಟಿರುತ್ತೀರಿ. ನಿಮ್ಮಗೆ ಅಚ್ಚರಿಯಾಗಬಹುದು, ನಿಮ್ಮ ಹ್ಯಾಂಡ್‍ಬ್ಯಾಗ್ ನಿಮಗೆ ಗೊತ್ತಿಲ್ಲದೆ ಹಲವಾರು ಕಾಯಿಲೆಗಳಿಗೆ ನಿಮ್ಮನ್ನು ಸಿಕ್ಕಿಸಬಹುದಾದ ಅಪಾಯವನ್ನು ಸಹ ತನ್ನೊಳಗೆ ಹೊತ್ತು ತಿರುಗುತ್ತದೆ ಎಂದರೆ ತಪ್ಪಾಗಲಾರದು.

ನಮ್ಮ ಬ್ಯಾಗನ್ನು ನಾವು ಎಲ್ಲೆಲ್ಲಿ ಹೋಗುತ್ತೇವೆಯೋ, ಅಲ್ಲೆಲ್ಲ ಹೊತ್ತು ತಿರುಗುತ್ತೇವೆ. ನೆಲದ ಮೇಲೆಲ್ಲ ಇಡುತ್ತೇವೆ. ಹೀಗೆ ನಮ್ಮ ಬ್ಯಾಗ್‍ಗೆ ಸುಲಭವಾಗಿ ಕೀಟಾಣುಗಳು ಬಂದು ಕೂರುತ್ತವೆ. ಹಾಗೆಂದ ಮಾತ್ರಕ್ಕೆ ಸೂಕ್ಷ್ಮಾಣು ಜೀವಿಗಳು ನಿಮ್ಮ ಬ್ಯಾಗ್‍ನ ಹೊರಭಾಗದಲ್ಲಿ ಮಾತ್ರ ಇರುತ್ತವೆ ಎಂದು ಭಾವಿಸಬೇಡಿ. ಬ್ಯಾಗಿನ ಒಳಗೆ ಸಹ ಇವುಗಳ ಸಾಮ್ರಾಜ್ಯವು ವ್ಯಾಪಿಸಿರುತ್ತದೆ ಎಂಬುದನ್ನು ಮರೆಯಬೇಡಿ. ನಿಜವೇ, ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಪೂರ್ತಿಯಾಗಿ ಓದಿ, ನಿಮ್ಮ ಬ್ಯಾಗಿನಲ್ಲಿರುವ ಅಪಾಯಗಳನ್ನು:

ನೀರಿನ ಬಾಟಲ್

ನೀರಿನ ಬಾಟಲ್

ಸಂಶಯವೇ ಬೇಡ, ನೀರಿನ ಬಾಟಲ್ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಆದರೆ ಯಾವಾಗಲು ಪ್ಲಾಸ್ಟಿಕ್ ಬಾಟಲಿನಲ್ಲಿಯೇ ನೀರನ್ನು ಕುಡಿಯುತ್ತಿದ್ದರೆ, ಅದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವುಂಟಾಗುತ್ತದೆ. ಅಧ್ಯಯನಗಳಿಂದ ತಿಳಿದು ಬಂದ ವಿಚಾರವೇನೆಂದರೆ, ಪ್ಲಾಸ್ಟಿಕ್‍ನಲ್ಲಿ 'ನ್ಯಾಫ್ತಾಲಿನ್' ಎಂಬ ಅಪಾಯಕಾರಿ ಅಂಶವು ಕಂಡು ಬರುತ್ತದೆ. ಇದು ನೀರಿನೊಂದಿಗೆ ಸುಲಭವಾಗಿ ಸೇರಿಬಿಡುತ್ತದೆ. ಇದರಿಂದ ಸಂತಾನೋತ್ಪತ್ತಿಯಲ್ಲಿ ಸಮಸ್ಯೆ ಮತ್ತು ಹಾರ್ಮೋನುಗಳ ಅಸಮತೋಲನವು ಕಂಡು ಬರುತ್ತದೆ. ನಾವು ಎಷ್ಟು ದಿನ ನೀರನ್ನು ಶೇಖರಿಸಿ ಇಡುತ್ತೇವೆಯೋ, ಅಷ್ಟು ಈ ರಾಸಾಯನಿಕವು ಪ್ರಬಲವಾಗುತ್ತ ಹೋಗುತ್ತದೆ.

ಈ ಸಮಸ್ಯೆಗೆ 'ಗ್ಲಾಸ್ ಬಾಟಲ್‍ಗಳು" ಪರಿಹಾರವನ್ನು ಒದಗಿಸಬಹುದು. ಆದರೆ ಗ್ಲಾಸ್ ಬಾಟಲ್‍ಗಳು ಒಡೆದು ಹೋಗುವ ಸಂಭವ ಹೆಚ್ಚಿರುವುದರಿಂದ, ಅಲ್ಯುಮಿನಿಯಂ ಅಥವಾ ಸ್ಟೈನ್‍ಲೆಸ್ ಸ್ಟೀಲ್ ಬಾಟಲ್‍ಗಳನ್ನು ತೆಗೆದುಕೊಂಡು ಹೋಗುವುದನ್ನು ಕಲಿಯಿರಿ. ಈ ನೆಪ ಹೇಳಿಕೊಂಡು ನೀರು ಕುಡಿಯುವುದನ್ನು ಬಿಡಬೇಡಿ. ಯಾವಾಗಲು ನೀರು ಸೇವಿಸಿ, ಆರೋಗ್ಯವಾಗಿರಿ.

ಬಳಸಿದ ಕರವಸ್ತ್ರಗಳು /ಟಿಶ್ಯೂಗಳು

ಬಳಸಿದ ಕರವಸ್ತ್ರಗಳು /ಟಿಶ್ಯೂಗಳು

ಬಹುತೇಕ ಮಂದಿ ಹೆಂಗಸರಿಗೆ ಒಂದು ದುರಭ್ಯಾಸವಿರುತ್ತದೆ. ಅವರು ಸದಾ ತಮ್ಮ ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂಗಳಿಂದ ಒರೆಸಿಕೊಳ್ಳುತ್ತಲೆ ಇರುತ್ತಾರೆ ಮತ್ತು ಅದನ್ನು ಪುನಃ ಬ್ಯಾಗ್‍ನಲ್ಲಿಯೇ ಇಡುತ್ತಾರೆ. ಶೀತ ಮತ್ತು ಫ್ಲೂ ಮುಂತಾದ ಕಾಯಿಲೆಗಳ ವೈರಸ್‍ಗಳು ಈ ಟಿಶ್ಯೂ ಮತ್ತು ಕರವಸ್ತ್ರಗಳ ಮೇಲೆ ದೀರ್ಘ ಕಾಲ ಬದುಕಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತವೆ. ಇದರ ಫಲಿತಾಂಶವಾಗಿ, ನಿಮ್ಮ ಬ್ಯಾಗ್‍ನಲ್ಲಿ ಈ ವೈರಸ್‍ಗಳು ಸುಖವಾಗಿ ಜೀವನ ಮಾಡುತ್ತವೆ. ಪ್ರತಿ ಬಾರಿ ನಿಮ್ಮ ಬ್ಯಾಗ್‍ನಲ್ಲಿ ಕೈ ಇಟ್ಟು ಹೊರಗೆ ತೆಗೆದಾಗೆಲ್ಲ ಈ ವೈರಸ್‍ಗಳು ಹೊರಗೆ ಬಂದು ನಿಮ್ಮ ಸುತ್ತ-ಮುತ್ತ ಹರಡಿಕೊಳ್ಳುತ್ತವೆ. ಹೀಗೆ ನಿಮ್ಮ ಬ್ಯಾಗ್ ವೈರಸ್ ಫಾರ್ಮ್ ಆಗಿ ಪರಿವರ್ತನೆಯಾಗುತ್ತದೆ.

ಕಾಸ್ಮೆಟಿಕ್ಸ್

ಕಾಸ್ಮೆಟಿಕ್ಸ್

ಒಂದೊಮ್ಮೆ ನೀವು ನಿಮ್ಮ ಬ್ಯಾಗ್‍ನಲ್ಲಿ ಮೇಕಪ್ ಸಾಮಗ್ರಿಗಳನ್ನು ಇರಿಸಿದ್ದರೆ ಅದರಿಂದಲೂ ನಿಮಗೆ ಅಪಾಯವುಂಟಾಗುತ್ತದೆ. ಅದು ಹೇಗೆಂದರೆ, ನಿಮ್ಮ ಮನೆಯಲ್ಲಿ ನೀವು ಬಳಸಿ ಉಳಿದ ಆಹಾರವನ್ನು ಕೆಡುವ ಮುನ್ನ ಹೇಗೆ ಖಾಲಿ ಮಾಡುತ್ತೀರೋ, ಹಾಗೆಯೇ ನಿಮ್ಮ ಬ್ಯಾಗಿನಲ್ಲಿರುವ ಮೇಕಪ್ ಸಾಮಗ್ರಿಗಳನ್ನು ಅವಧಿ ಮುಗಿದ ಕೂಡಲೆ ಖಾಲಿ ಮಾಡಿ. ಸಾಮಾನ್ಯವಾಗಿ ಪ್ರತಿ ಹೊಸ ಮೇಕಪ್ ಸಾಮಗ್ರಿ 18 ತಿಂಗಳ ಅವಧಿಯವರೆಗೆ ಬರುತ್ತದೆ. ಅದರ ಒಳಗೆ ಅದನ್ನು ಬಳಸಿ ಎಸೆಯುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಹುದು. ವಿಶೇಷವಾಗಿ ಮಸಕರ ಟ್ಯೂಬ್‍ಗಳನ್ನು ಬಳಸುವಾಗ ಈ ನಿಯಮವನ್ನು ತಪ್ಪದೆ ಪಾಲಿಸಿ.

ಮೊಬೈಲ್ ಫೋನ್‍ಗಳು

ಮೊಬೈಲ್ ಫೋನ್‍ಗಳು

ಮೊಬೈಲ್ ಫೋನ್‍ಗಳನ್ನು ನಿಮ್ಮ ಪರ್ಸ್‍ನಲ್ಲಿ ಇಟ್ಟುಕೊಂಡು ಓಡಾಡುವುದರಿಂದ ಬ್ರೈನ್ ಟ್ಯೂಮರ್ ಮತ್ತು ಬಂಜೆತನದಂತಹ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಆರೋಗ್ಯದ ಸಮಸ್ಯೆಗಳ ಜೊತೆಗೆ ಸೆಲ್ ಫೋನ್‍ನಿಂದ ಇನ್‍ಫೆಕ್ಷನ್ ಸಹ ಹರಡುತ್ತದೆ. ಸಾಮಾನ್ಯವಾಗಿ ಈಗ ಹೆಬ್ಬೆರಳು ಮತ್ತು ತೋರು ಬೆರಳುಗಳಲ್ಲಿ ನಾವು ಆಹಾರ ಮುಂತಾದ ಪದಾರ್ಥಗಳನ್ನು ಮುಟ್ಟುತ್ತಲೆ ಇರುತ್ತೇವೆ. ಇದನ್ನು ಸದಾ ತೊಳೆದು ಮೊಬೈಲನ್ನು ಮುಟ್ಟಲು ಆಗುವುದಿಲ್ಲ. ಅಲ್ಲಿನ ಎಲ್ಲಾ ಪದಾರ್ಥಗಳ ಸಾರಾಂಶವನ್ನು ನಾವು ಸೆಲ್ ಫೋನ್‍ಗೆ ಅಂಟಿಸುತ್ತೇವೆ. ಅದರಲ್ಲು ಕೈ ಬೆರಳುಗಳಿಗೆ ಗಾಯಗಳಾದಾಗ ಈ ಇನ್‍ಫೆಕ್ಷನ್ ಅಪಾಯಕಾರಿಯಾಗುವ ಸಂಭವಗಳು ಅಧಿಕವಾಗಿರುತ್ತವೆ. ಇದು ಎಲ್ಲಾ ಸೆಲ್‍ಫೋನ್ ಬಳಕೆದಾರರಿಗೆ ಅನ್ವಯವಾಗುತ್ತದೆ!.

ಭಾರವಾದ ವಸ್ತುಗಳು

ಭಾರವಾದ ವಸ್ತುಗಳು

ನೀವು ಮನೆ ಬಿಡುವ ಮೊದಲು ನಿಮಗೆ ಬೇಕಾಗಿರುವುದನ್ನೆಲ್ಲ ಬ್ಯಾಗ್‍ನಲ್ಲಿ ತುರುಕಲು ಆರಂಭಿಸುತ್ತೀರಿ. ಅದು ಮೇಕಪ್‍ನಿಂದ ಹಿಡಿದು ಊಟದ ಡಬ್ಬದವರೆಗೆ ಇರಬಹುದು. ಕಾಸ್ಮೆಟಿಕ್ಸ್, ಪುಸ್ತಕಗಳು, ಟಿಶ್ಯೂಗಳು, ಕರವಸ್ತ್ರ, ಪೆನ್ ಮುಂತಾದವನ್ನೆಲ್ಲ ನೀವು ಬ್ಯಾಗಿನಲ್ಲಿ ತುರುಕಿಕೊಂಡು ಮನೆಯಿಂದ ಬೆಳಗ್ಗೆ ಹೊರಡುತ್ತೀರಿ. ಇದರ ಜೊತೆಗೆ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‍ಗಳು ಸಹ ಇರುತ್ತವೆ. ಹೀಗೆ ಕಂಡ ಕಂಡದ್ದನ್ನೆಲ್ಲ ನೀವು ಬ್ಯಾಗಿನಲ್ಲಿ ತುಂಬಿಕೊಂಡು ಹೋಗುವುದರಿಂದ ತಕ್ಷಣಕ್ಕೆ ಯಾವುದೇ ಅಪಾಯವು ನಿಮ್ಮನ್ನು ಕಾಡುವುದಿಲ್ಲ. ಆದರೆ ಕಾಲ ಕ್ರಮೇಣ, ಈ ಭಾರದಿಂದ ನೀವು ಕುಗ್ಗಿ ಹೋಗುತ್ತೀರಿ. ಕತ್ತು, ಬೆನ್ನು ಮತ್ತು ಭುಜದ ನೋವು ನಿಮ್ಮನ್ನು ಭಾದಿಸಬಹುದು.

English summary

Health Hazards in Hand-Bags

This handbag mania has made you to forget the brunt that your accessorize sack may have on our health. You will be surprised to know that your handbag carries numerous hidden hazards and can make you sick.
Story first published: Thursday, September 18, 2014, 17:56 [IST]
X
Desktop Bottom Promotion