For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್‌ ಆರೋಗ್ಯಕ್ಕೆ ಹೇಗೆ ಸಹಕಾರಿಯಾಗಲಿದೆ?

|

ತರಕಾರಿಗಳಲ್ಲೇ ಸ್ವಾದಿಷ್ಟ ಮತ್ತು ಅಧಿಕ ಸತ್ವಗಳನ್ನು ತನ್ನೊಳಗೆ ಇರಿಸಿಕೊಂಡಿರುವ ತರಕಾರಿಯೆಂದರೆ ಕ್ಯಾರೆಟ್ ಆಗಿದೆ. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಕೂಡ ತಿನ್ನಬಹುದು. ಕ್ಯಾರೆಟ್‌ನ ಸಲಾಡ್, ಪಲ್ಯ, ಕೋಸಂಬರಿ ಹೀಗೆ ವಿಧ ವಿಧದಲ್ಲಿ ಇದರ ವ್ಯಂಜನಗಳನ್ನು ತಯಾರಿಸಿ ಸೇವಿಸಬಹುದು.

ಇದರಲ್ಲಿ ಅಧಿಕವಾಗಿರುವ ಬೇಟಾ ಕ್ಯಾರೊಟಿನ್ ಶಕ್ತಿಯುತ ಸಾರವಾಗಿದ್ದು ತ್ವಚೆಯನ್ನು ಸುಂದರಗೊಳಿಸಲು ಸಹಕಾರಿಯಾಗಿದೆ. ವಿಧ ವಿಧದ ಪ್ರೋಟೀನ್ ವಿಟಮಿನ್‌ಗಳನ್ನು ಹೇರಳವಾಗಿ ಬೆರೆತಿರುವ ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ.

Health benifits of Carrot

ಇಂದು ನಾವು ಬಹುರೂಪಿ ಕ್ಯಾರೆಟ್‌ನ ಕೆಲವಾರು ಉತ್ತಮ ಗುಣಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಕ್ಸ್ ಪ್ಯಾಕ್ ನೀಡಬಲ್ಲವು ಈ ಆಹಾರಗಳು!

ರೋಗನಿರೋಧಕ ಶಕ್ತಿಯನ್ನು ಹೊಂದಿದೆ:
ಕ್ಯಾರೆಟ್‌ನಲ್ಲಿ ಬೇಟಾ ಕ್ಯಾರೊಟಿನ್ ಅಧಿಕವಾಗಿದ್ದು ಶಕ್ತಿಯುತ ರೋಗನಿರೋಧಕ ಅಂಶವನ್ನು ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು ಹಲವಾರು ರೋಗಗಳನ್ನು ದೂರವಿಡುತ್ತದೆ. ಕ್ಯಾರೆಟ್ ಅನ್ನು ನಿತ್ಯವೂ ಸೇವಿಸುವುದರಿಂದ ತ್ವಚೆ, ಕೂದಲು, ಉಗುರುಗಳ ಹೊಳಪು ಸುಧಾರಣೆಯಾಗುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನೂ ಸಹ ಇದು ಹೆಚ್ಚಿಸುತ್ತದೆ.

ರಕ್ತದ ಶುದ್ಧತೆಗೆ ಸಹಕಾರಿಯಾಗಿದೆ:
ರಕ್ತದ ಶುದ್ಧತೆಗೆ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು ಕ್ಯಾರೆಟ್ ಯಥೇಚ್ಛವಾಗಿ ಒಳಗೊಂಡಿದೆ. ದೇಹದಲ್ಲಿನ ಆಸಿಡ್ ಆಲ್ಕಾಲೈನ್ ಪ್ರಮಾಣವನ್ನು ಅವು ನಿಯಂತ್ರಣದಲ್ಲಿಡುತ್ತವೆ. ಹೈಪರ್‌ಟೆನ್ಶನ್‌ನೊಂದಿಗೆ ಸಂಯೋಜಿತವಾಗಿರುವ ಸೋಡಿಯಂನ ಹೆಚ್ಚಿನ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಕ್ಯಾರೆಟ್‌ನಲ್ಲಿರುವ ಪೊಟ್ಯಾಶಿಯಂ ಸಹಾಯಕವಾಗಿವೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ದಂತಕ್ಷಯವನ್ನು ನಿವಾರಿಸುತ್ತದೆ:
ಬಾಯಿಯಲ್ಲಿರುವ ಉಪದ್ರವಕಾರಿ ಕೀಟಾಣುಗಳನ್ನು ನಾಶ ಮಾಡುತ್ತದೆ ಮತ್ತು ದಂತಕ್ಷಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ಕ್ಯಾರೆಟ್ ವಹಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಲೆನೋವಿಗೆ ನೈಸರ್ಗಿಕ ಪರಿಹಾರ ಹೀಗೆ ಮಾಡಿ!!

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:
ಕ್ಯಾರೆಟ್‌ನಲ್ಲಿ ಕರಗುವ ನಾರಿನಂಶ ಹೆಚ್ಚಿಗೆ ಇದ್ದು ಎಲ್‌ಡಿಎಲ್ ಅನ್ನು ಬಂಧಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್‌ನ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಹೃದಯಾಘಾತ ಹಾಗೂ ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುವಂತಹ ಎಚ್‌ಡಿಎಲ್ ಅನ್ನು ಏರಿಸುವಲ್ಲಿ ಸಹಾಯ ಮಾಡುತ್ತದೆ.

ತಾಯಂದಿರಲ್ಲಿ ಎದೆ ಹಾಲಿನ ಗುಣಮಟ್ಟ ಸುಧಾರಣೆಯಾಗುತ್ತದೆ:
ಕ್ಯಾರೆಟ್ ಅನ್ನು ನಿಯಮಿತವಾಗಿ ತಿನ್ನುವುದರಿಂದ ಹಾಗೂ ಅದರ ಜ್ಯೂಸ್ ಅನ್ನು ಬಳಸುವುದರಿಂದ ತಾಯಂದಿರಲ್ಲಿ ಎದೆ ಹಾಲಿನ ಗುಣಮಟ್ಟ ಸುಧಾರಣೆಯಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೊಲೆಸ್ಟ್ರಾಲ್ ಕಡಿಮೆ ಮಾಡುವ 10 ಬೆಸ್ಟ್ ಆಹಾರ

ಋತುಚಕ್ರಕ್ಕೆ ಸಹಕಾರಿ:
ಋತುಚಕ್ರದ ಹರಿವನ್ನು ಹೆಚ್ಚಿಸುವಲ್ಲಿ ಸಹ ಇದು ಸಹಾಯ ಮಾಡುತ್ತದೆ.

Read more about: health ಆರೋಗ್ಯ
English summary

Health benifits of Carrot

Carrots are rich in Beta carotene which is a powerful antioxidant which helps in maintaining a healthy skin and also keep one away from many diseases.
X
Desktop Bottom Promotion