For Quick Alerts
ALLOW NOTIFICATIONS  
For Daily Alerts

ತುಪ್ಪದ ಆರೋಗ್ಯಕಾರಿ ಪ್ರಯೋಜನಗಳು

By Manohar.v
|

ಭಾರತೀಯ ಸಮಾಜದಲ್ಲಿ, ಎಲ್ಲಾ ಖಾದ್ಯಗಳಿಗೂ ಹೆಚ್ಚಾಗಿ ಬಳಕೆಯಾಗುವ ಸಾಮಾಗ್ರಿಯೆಂದರೆ ಬೆಣ್ಣೆಯಿಂದ ಕರಗಿಸಲ್ಪಟ್ಟಿರುವ ತುಪ್ಪವಾಗಿದೆ. ತುಪ್ಪವನ್ನು ಬಳಸಿ ಮಾಡುವ ಪ್ರತಿಯೊಂದು ಖಾದ್ಯವೂ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಭಾರತದ ಹಲವೆಡೆಗಳಲ್ಲಿ, ಆಹಾರ ತಯಾರಿಸುವಾಗ ಇತರ ಎಣ್ಣೆಗಳಿಗಿಂತಲೂ ಮಿಗಿಲಾಗಿ ತುಪ್ಪವನ್ನು ಹೆಚ್ಚಾಗಿ ಬಳಸುತ್ತಾರೆ.

ತುಪ್ಪವನ್ನು ಆಹಾರ ಪದಾರ್ಥಗಳಲ್ಲಿ ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುತ್ತದೆ ಮತ್ತು ಮಾಡುವ ಅಡುಗೆಯು ಸ್ವಾದಿಷ್ಟವಾಗಿರುತ್ತದೆ. ಇದಲ್ಲದೆ ತುಪ್ಪವನ್ನು ನಮ್ಮ ಆರೋಗ್ಯದ ಸುಧಾರಣೆಗಾಗೂ ಬಳಸಬಹುದು.

ನೀವು ಗಮನ ಹರಿಸಲೇಬೇಕಾದಂತಹ ತುಪ್ಪದ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು ಬೋಲ್ಡ್‌ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಇದು ಬೊಜ್ಜನ್ನು ಮಾತ್ರ ಉತ್ಪಾದಿಸುತ್ತದೆ ಎಂದು ಭಾವಿಸುವವರೆಲ್ಲಾ ಆರೋಗ್ಯದ ಮೇಲೆ ಇದು ಉಂಟು ಮಾಡುವ ಸುಧಾರಣೆಗಳ ಕುರಿತು ಆಶ್ಚರ್ಯಪಡುವಮತಾಗಬೇಕು.

ತುಪ್ಪವನ್ನು ಯಾವುದೇ ಶೀತಲೀಕರಣದ ಅಗತ್ಯವಿಲ್ಲದೆ ಎಷ್ಟು ದಿನ ಬೇಕಾದರೂ ಸಂಗ್ರಹಿಸಡಬಹುದು. ಇದು ದೀರ್ಘ ಕಾಲ ಬಾಳಿಕೆ ಬರುತ್ತದೆ.

ತುಪ್ಪದ ಪ್ರಯೋಜನಗಳನ್ನು ಕುರಿತು ಮತ್ತು ಆರೋಗ್ಯದ ಮೇಲೆ ಉಂಟು ಮಾಡುವ ಜಾದೂ ಮೇಲೆ ಒಂದು ನೋಟ ಹರಿಸಿ.

ಜೀರ್ಣಕ್ರಿಯೆ ವ್ಯವಸ್ಥೆ

ಜೀರ್ಣಕ್ರಿಯೆ ವ್ಯವಸ್ಥೆ

ತುಪ್ಪದ ಒಂದು ಪ್ರಯೋಜನವೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಾಗಿದೆ. ಜೀರ್ಣಕ್ರಿಯೆಯ ಸಮಸ್ಯೆ ಇರುವ ಪ್ರತಿಯೊಬ್ಬರೂ ಇತರ ಎಣ್ಣೆಗಳನ್ನು ಬಳಸುವುದಕ್ಕಿಂತ ತುಪ್ಪವನ್ನು ಬಳಸಿ.

ವಿಟಮಿನ್ ಅಧಿಕ

ವಿಟಮಿನ್ ಅಧಿಕ

ತುಪ್ಪದಲ್ಲಿ ಎ,ಡಿ,ಇ,ಕೆ ಮುಂತಾದ ವಿಶೇಷ ವಿಟಮಿನ್‌ಗಳಿದ್ದು ಇವು ಶರೀರಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ನಿಮ್ಮ ಪ್ರತಿದಿನದ ವಿಟಮಿನ್‌ಗಾಗಿ ಆಹಾರದಲ್ಲಿ ತುಪ್ಪವನ್ನು ಬಳಸಿ.

ರೋಗನಿರೋಧಕ ಶಕ್ತಿ

ರೋಗನಿರೋಧಕ ಶಕ್ತಿ

ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ತುಪ್ಪ ಮಾಡುತ್ತದೆ. ಬೆಳೆಯುವ ಮಕ್ಕಳಿಗೆ ನೀಡುವ ಆಹಾರದಲ್ಲಿ ತುಪ್ಪವನ್ನು ಬಳಸುವುದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾಯಿಲೆ ಬೀಳುವ ಸಂಭವ ಕಡಿಮೆ ಇರುತ್ತದೆ.

ಹೃದಯಕ್ಕಾಗಿ

ಹೃದಯಕ್ಕಾಗಿ

ತುಪ್ಪದಲ್ಲಿ ಆಂಟಿಆಕ್ಸಿಡೆಂಟ್, ಕಂಜ್ಯೂಗೇಟೆಡ್ ಲಿನೋಲಿಕ್ ಏಸಿಡ್ (ಸಿಎಲ್‌ಎ) ಅಧಿಕವಾಗಿದ್ದು, ಕೊಬ್ಬು ಕರಗಿಸುವ ಅಂಶಗಳಿಂದ ಹೇರಳವಾಗಿದೆ ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ಇನ್ನೊಂದು ಆಶ್ಚರ್ಯಕರವಾದ ಪ್ರಯೋಜನವೆಂದರೆ ತುಪ್ಪವು ಆರೋಗ್ಯದಲ್ಲಿ ಅಧಿಕವಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಅದರೊಂದಿಗೆ ಹೋರಾಡುತ್ತದೆ. ಚಯಾಪಚಯಕ್ಕಾಗಿ ಬೇಕಾದ ಪೋಷಕಾಂಶಗಳನ್ನು ಅಧಿಕಗೊಳಿಸಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ತರುತ್ತದೆ.

ನಿಮ್ಮ ಸ್ನಾಯುಗಳಿಗಾಗಿ

ನಿಮ್ಮ ಸ್ನಾಯುಗಳಿಗಾಗಿ

ಹಿರಿಯರು ತಾವು ತಿನ್ನುವ ಆಹಾರದಲ್ಲಿ ತುಪ್ಪವನ್ನು ಬಳಸುವ ಕಾರಣವೇನೆಂದರೆ ಇದು ಸ್ನಾಯುಗಳಿಗೆ ಮತ್ತು ಕೀಲುಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಅದನ್ನು ಬಲಯುತಗೊಳಿಸಲು ಸಹಾಯ ಮಾಡುತ್ತದೆ. ಮತ್ತು ಇವುಗಳಲ್ಲಿ ಉಂಟಾಗುವ ನೋವನ್ನು ಕಡಿಮೆಗೊಳಿಸುತ್ತದೆ.

ಡೈರಿ ಪದಾರ್ಥಗಳ ಅಲರ್ಜಿ ಉಳ್ಳವರಿಗಾಗಿ

ಡೈರಿ ಪದಾರ್ಥಗಳ ಅಲರ್ಜಿ ಉಳ್ಳವರಿಗಾಗಿ

ನಮ್ಮಲ್ಲಿ ಹಲವಾರು ಜನರು ಡೈರಿ ಪದಾರ್ಥಗಳಾದ ಹಾಲು, ಬೆಣ್ಣೆ, ಮೊಸರು ಮಜ್ಜಿಗೆಯ ಸೇವನೆಯನ್ನು ಮಾಡುವುದಿಲ್ಲ. ಇವುಗಳ ಸೇವನೆ ಅವರಿಗೆ ಅಲರ್ಜಿ ಉಂಟುಮಾಡುತ್ತದೆ. ಆದರೆ ತುಪ್ಪದಲ್ಲಿ ಅಲರ್ಜಿ ಉಂಟು ಮಾಡುವ ಅಂಶಗಳು ಇಲ್ಲದಿರುವುದರಿಂದ ಈ ರೀತಿಯ ತೊಂದರೆ ಇರುವವರು ತುಪ್ಪದ ಸೇವನೆಯನ್ನು ಮಾಡಬಹುದು.

ಎದೆ ಉರಿಗಾಗಿ

ಎದೆ ಉರಿಗಾಗಿ

ಗರ್ಭಿಣಿ ಹೆಂಗಸರು ಸೇರಿದಂತೆ ಕೆಲವರು ಎದೆ ಉರಿಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ರೀತಿಯ ತೊಂದರೆಯಿಂದ ಮುಕ್ತಿ ಪಡೆಯಲು ನಿಮ್ಮ ಊಟಕ್ಕೆ ತುಪ್ಪವನ್ನು ಮಿಶ್ರ ಮಾಡಿ ತೆಗೆದುಕೊಳ್ಳಿ, ಈ ಸಮಸ್ಯೆ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.

English summary

Health Benefits Of Ghee

In Indian society, one of the main ingredients added to almost every meal is clarified butter, also known as ghee. It is this clarified butter that enhances the taste of those sumptuous Indian dishes that you seemingly cannot get enough of.
X
Desktop Bottom Promotion