For Quick Alerts
ALLOW NOTIFICATIONS  
For Daily Alerts

ಬದನೆಯಲ್ಲಿರುವ ಆರೋಗ್ಯಕರ ಬೆನಿಫಿಟ್ಸ್!

By Poornima Heggade
|

ನೆಲಗುಳ್ಳ ಅಥವಾ ಬದನೇಕಾಯಿ ಎಂದು ಕರೆಯಲ್ಪಡುವ ಬದನೆ, ಪೋಷಕಾಂಶಗಳ ವರ್ಣರಂಜಿತ ಸಂಗ್ರಹ. ಬದನೆಕಾಯಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಇದು ಸಸ್ಯಹಾರಿಗಳ ಪ್ರೀತಿಯ ತರಕಾರಿ!

ಕೆಲವು ಅಧ್ಯಯನಗಳ ಪ್ರಕಾರ ಬದನೆ ಬೇರೆ ಯಾವುದೇ ಸಸ್ಯಗಳಿಗಿಂತ ಹೆಚ್ಚು ನಿಕೋಟಿನ್ ನ್ನು ಹೊಂದಿರುತ್ತದೆ. ಇದರಿಂದಾಗಿ ಬದನೆ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಆದರೆ ಇದರ ಪರಿಣಾಮವು ಕಡಿಮೆ ಇರುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ನೀವು ಬದನೆಯ ಪ್ರಯೋಜನಗಳನ್ನು ತಿಳಿದರೆ ನಿಮಗೆ ಬದನೆ ಆರೋಗ್ಯಕರವೇ ಎನ್ನುವ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೈಸರ್ಗಿಕ ಹಣ್ಣುಗಳಿಂದ ತಲೆನೋವನ್ನು ಕಡಿಮೆಗೊಳಿಸಿ

ನಿಮ್ಮ ಆಹಾರದಲ್ಲಿ ಬದನೆಯನ್ನು ಅಳವಡಿಸಿಕೊಳ್ಳುಲು ಕಾರಣವಾಗುವ ಕೆಲವು ಆರೋಗ್ಯಕಾರಿ ಪರಿಣಾಮಗಳ ಕುರಿತು ಹೇಳಲಾಗಿದೆ.

ರಾಡಿಕಲ್ ಜೊತೆ ಹೋರಾಡುತ್ತದೆ

ರಾಡಿಕಲ್ ಜೊತೆ ಹೋರಾಡುತ್ತದೆ

ರಾಡಿಕಲ್ಸ್ ಗಳು ದೇಹದಲ್ಲಿರುವ ಜೀವಕೋಶಗಳನ್ನು ಹಾನಿಗೊಳಗಾಗಿಸುತ್ತವೆ. ಬದನೆ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವುದರಿಂದ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಕ್ಲೊರೋಜೆನಿಕ್ (Chlorogenic) ಆಮ್ಲ, ಬದನೆ ಯಲ್ಲಿರುವ ಪ್ರಮುಖ ಆಂಟಿ ಆಕ್ಸಿಡೆಂಟ್ ಎಂದು ಪರಿಗಣಿಸಲಾಗುತ್ತದೆ. ಇದು ರಾಡಿಕಲ್ಸ್ ನ್ನು ಹೋಗಲಾಡಿಸಿ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.

ಆರೋಗ್ಯಕರ ಹೃದಯ

ಆರೋಗ್ಯಕರ ಹೃದಯ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಬದನೆ ಸೇವನೆಯ ಮೂಲಕ ಕಡಿಮೆ ಮಾಡಬಹುದು. ಇದು ನಿಮ್ಮ ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.

ಮಿದುಳಿನ ಕಾರ್ಯ

ಮಿದುಳಿನ ಕಾರ್ಯ

ಇದು ಬದನೆ ಸೇವನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆ, ಯಾವುದೇ ಹಾನಿಯಿಂದ ಸುರಕ್ಷಿತವಾಗಿ ಕೋಶಪೊರೆಯನ್ನು ರಕ್ಷಿಸಲು ಸಹಾಯ ಮಾಡುವ ಫೈಟೋನ್ಯೂಟ್ರಿಯೆಂಟ್ಸ್ ನ್ನು ಹೊಂದಿದೆ. ಇದು ಆರೋಗ್ಯಕರ ನೆನಪಿನ ಶಕ್ತಿಯನ್ನು ಸುಧಾರಿಸಲೂ ಸಹಾಯ ಮಾಡುತ್ತದೆ.

ಮಿತಿಮೀರಿದ ಕಬ್ಬಿಣಾಂಶ ತೆಗೆದುಹಾಕುತ್ತದೆ

ಮಿತಿಮೀರಿದ ಕಬ್ಬಿಣಾಂಶ ತೆಗೆದುಹಾಕುತ್ತದೆ

ನಿಯಮಿತವಾಗಿ ಬದನೆ ಸೇವಿಸುವುದರಿಂದ ಇದು ದೇಹದಲ್ಲಿ ಹೆಚ್ಚುವರಿ ಕಬ್ಬಿಣದ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಬದನೆಯಲ್ಲಿರುವ ನಸುಯೈನ್ (Nasunin) ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ .

ಜೀವಿರೋಧಿ/ ಬ್ಯಾಕ್ಟೀರಿಯಾ ವಿರೋಧಿ ಗುಣಗಳು

ಜೀವಿರೋಧಿ/ ಬ್ಯಾಕ್ಟೀರಿಯಾ ವಿರೋಧಿ ಗುಣಗಳು

ಸೋಂಕುಗಳಿಂದ ನಿಮ್ಮನ್ನು ದೂರ ಇರಿಸುವ ಸಾಮರ್ಥ್ಯ ಬದನೆ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ. ಈ ಪ್ರಯೋಜನವನ್ನು ಅನುಭವಿಸಲು ನಿಮ್ಮ ಆಹಾರದ ಒಂದು ಭಾಗವಾಗಿ ಬದನೆಯನ್ನು ಸೇವಿಸಿ.

ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ

ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಬದನೆ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮನ್ನು ಆರೋಗ್ಯಕರ ಮತ್ತು ಸದೃಢರಾಗಿರುವಂತೆ ಮಾಡುತ್ತದೆ. ಆಂಟಿ ಆಕ್ಸಿಡೆಂಟ್, ಪೋಷಕಾಂಶಗಳು ಮತ್ತು ಸಿ ಜೀವಸತ್ವದ ಉಪಸ್ಥಿತಿ ಬದನೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿಸಿವೆ.

ಧೂಮಪಾನ ತ್ಯಜಿಸಲು ಸಹಾಯ

ಧೂಮಪಾನ ತ್ಯಜಿಸಲು ಸಹಾಯ

ನೀವು ಧೂಮಪಾನ ಬಿಡಲು ನಿಕೊಟೀನ್ ಬದಲಾವಣೆಯ ಚಿಕಿತ್ಸೆಯ ನೈಸರ್ಗಿಕ ವಿಧಾನವನ್ನು ಹುಡುಕುತ್ತಿದ್ದರೆ, ಬದನೆ ಅತ್ಯುತ್ತಮ ಆಯ್ಕೆ. ಈ ಏಕೆಂದರೆ ಬದನೆಯಲ್ಲಿ ನಿಕೋಟಿನ್ ಅಂಶ ಹೇರಳವಾಗಿದೆ.

ಆರೋಗ್ಯಕರ ತ್ವಚೆ

ಆರೋಗ್ಯಕರ ತ್ವಚೆ

ನಿಮ್ಮ ತ್ವಚೆಯ ಹೊಳಪಿಗೆ ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದರಿಂದ ನಿಮ್ಮ ತ್ವಚೆಯನ್ನು ಬಲವಾಗಿ ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಬಹುದು.

ಕೂದಲಿನ ಆರೈಕೆ

ಕೂದಲಿನ ಆರೈಕೆ

ಬದನೆ ಸೇವಿಸುವುದರಿಂದ ನಿಮ್ಮ ನೆತ್ತಿ ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಈ ಕೂದಲು ಬೆಳವಣಿಗೆ ಉಂಟು ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.

ತೇವಾಂಶಯುಕ್ತ ತ್ವಚೆ

ತೇವಾಂಶಯುಕ್ತ ತ್ವಚೆ

ಇದು ಬದನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಅಂಶವಿದೆ. ಇದು ನಿಮ್ಮ ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಶುಷ್ಕ ತ್ವಚೆಯಿಂದ ಮುಕ್ತಿ ನೀಡುತ್ತದೆ ಮತ್ತು ನಿಮ್ಮ ದೇಹದ ಸಹವರ್ತಿಯಂತೆ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

Read more about: health ಆರೋಗ್ಯ
English summary

Health Benefits Of Brinjal

The brinjal, also called eggplant or aubergine is a colourful collection of nutrients. The numerous health benefits of brinjal make it one of the favourite veggies of food lovers.
Story first published: Tuesday, January 21, 2014, 13:01 [IST]
X
Desktop Bottom Promotion