For Quick Alerts
ALLOW NOTIFICATIONS  
For Daily Alerts

ಮುಳ್ಳುಸೌತೆಕಾಯಿಯಲ್ಲಿರುವ ಕೆಲವು ಅಚ್ಚರಿಯ ಗುಣಗಳು

|

ಮುಳ್ಳುಸೌತೆಯನ್ನು ವಿಶ್ವದಾದ್ಯಂತ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಸಲಾಡ್‌ಗೆ ಒಂದು ಉತ್ಕೃಷ್ಟ ತರಕಾರಿಯಾಗಿರುವ ಇದು ನಿಮ್ಮ ಆಹಾರದಲ್ಲಿ ನ್ಯೂಟ್ರೀಶಿಯನ್ ಅನ್ನು ಹೇರಳವಾಗಿ ಪೂರೈಸುತ್ತದೆ. ಹಸಿರು ತರಕಾರಿಗಳು, ಟೊಮೇಟೋ, ಮುಳ್ಳುಸೌತೆ ಬೆರೆತ ಸಲಾಡ್ ಒಂದು ಆರೋಗ್ಯಕರ ವಿಧಾನಕ್ಕೆ ಅಡಿಪಾಯವಾಗಿದೆ. ನಿಮ್ಮ ದಿನ ನ್ಯೂಟ್ರೀನ್ ಬೆರೆತ ಆಹಾರಗಳಿಂದ ಕೂಡಿದ್ದರೆ ಯಾವ ರೀತಿಯ ಕಾಯಿಲೆ ಕೂಡ ನಿಮ್ಮನ್ನು ಸೋಕುವುದಿಲ್ಲ.

ಮುಳ್ಳುಸೌತೆಯನ್ನು ತಿಂದರೆ ಅದರಲ್ಲಿ ನೀರಿನಂಶ ಅಧಿಕವಿರುವುದರಿಂದ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ, ದೇಹದಲ್ಲಿ ನೀರಿನಂಶ ಕಡಿಮೆ ಮಾಡುತ್ತದೆ ಅನ್ನುವ ವಿಷಯ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಇದಲ್ಲದೆ ಸೌತೆ ಕಾಯಿಯಲ್ಲಿ ಹತ್ತು ಹಲವು ಆರೋಗ್ಯಕರ ಗುಣಗಳಿವೆ, ಆ ಗುಣಗಳಾವುವು ಎಂದು ಗೊತ್ತಿದೆಯೇ? ಇಲ್ಲಿ ಅಂದರೆ, ಅವುಗಳ ಮಾಹಿತಿ ತಿಳಿಯಲು ಮುಂದೆ ಓದಿ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಬಿಸಿಲ ಝಳಕ್ಕೆ ಕೂಲ್ ಕೂಲ್ ವೆಜ್ಜೀಸ್!

1. ಬಿಪಿ ಸಮಸ್ಯೆಗಳ ನಿವಾರಣೆ:

1. ಬಿಪಿ ಸಮಸ್ಯೆಗಳ ನಿವಾರಣೆ:

ಅಧಿಕ ಹಾಗೂ ಕಡಿಮೆ ಬಿಪಿ ಸಮಸ್ಯೆಗಳಿಂದ ನೀವು ಬಳಲುತ್ತಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ನಿಮಗೆ ಪರಿಣಾಮಕಾರಿಯಾಗಿದೆ.

2.ಕಣ್ಣಿಗೆ ಉತ್ತಮ:

2.ಕಣ್ಣಿಗೆ ಉತ್ತಮ:

ವಿಟಮಿನ್ ಎ ಮತ್ತು ಇತರ ಅಗತ್ಯ ಪ್ರೊಟೀನ್‌ಗಳೊಂದಿಗೆ ಮುಳ್ಳುಸೌತೆ ನಿಮ್ಮ ದೃಷ್ಟಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ನಿಮ್ಮ ಕಣ್ರೆಪ್ಪೆಗಳಿಗೆ ಮುಳ್ಳುಸೌತೆಯನ್ನು ತುಂಡರಿಸಿ ಇಡುವುದರಿಂದ ಕಣ್ಣು ತಂಪಾಗಿರುತ್ತದೆ. ಇಲ್ಲವೇ ಇದರ ಜ್ಯೂಸ್ ಸೇವನೆ ಕೂಡ ಕಣ್ಣಿಗೆ ಉತ್ತಮ.

3. ತೂಕ ಇಳಿಸುತ್ತದೆ:

3. ತೂಕ ಇಳಿಸುತ್ತದೆ:

ನೀವು ತೂಕವನ್ನು ಇಳಿಸುವ ಗುರಿಯನ್ನು ಹೊಂದಿರುವವರಾಗಿದ್ದಲ್ಲಿ, ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲೇಬೇಕು. ದೇಹಕ್ಕೆ ಬೇಕಾದ ನ್ಯೂಟ್ರೀಶಿಯನ್ ಪೂರೈಕೆ ಮಾಡುತ್ತಾ ದೇಹ ತೂಕವನ್ನು ಇಳಿಸಿಕೊಳ್ಳುವ ಸುಲಭ ವಿಧಾವಾಗಿದೆ ಮುಳ್ಳುಸೌತೆ ಜ್ಯೂಸ್ ಸೇವನೆ.

4. ಮಿನರಲ್ ಟ್ರೀಟ್‌ಮೆಂಟ್:

4. ಮಿನರಲ್ ಟ್ರೀಟ್‌ಮೆಂಟ್:

ಮುಳ್ಳುಸೌತೆ ಜ್ಯೂಸ್ ಮಿನರಲ್‌ಗಳನ್ನು ಅಧಿಕವಾಗಿ ಹೊಂದಿದೆ. ನಿಮ್ಮ ತ್ವಚೆಯ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಮಿನರಲ್ಸ್ ಮುಳ್ಳುಸೌತೆಯಲ್ಲಿದೆ. ನಿಮ್ಮ ಸಂಪೂರ್ಣ ದೇಹ ಕೂಡ ಅತ್ಯಗತ್ಯ ಮಿನರಲ್ಸ್ ಪೂರೈಕೆಯನ್ನು ಮುಳ್ಳುಸೌತೆಯಿಂದ ಪಡೆಯುತ್ತದೆ.

5. ವಿಟಮಿನ್ ಪೂರೈಕೆ:

5. ವಿಟಮಿನ್ ಪೂರೈಕೆ:

ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.

6. ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ:

6. ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ:

ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವಲ್ಲಿ ಮುಳ್ಳುಸೌತೆ ಮುಖ್ಯ ಸಾಮಾಗ್ರಿಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆ ನಿಮಗಿದ್ದಲ್ಲಿ ಮುಳ್ಳುಸೌತೆ ಜ್ಯೂಸ್ ಅನ್ನು ಸೇವಿಸಲು ಮರೆಯದಿರಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹಾಕಿ ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.

7. ಬಿಸಿಲಿನ ವಿರುದ್ಧ ತಂಪು:

7. ಬಿಸಿಲಿನ ವಿರುದ್ಧ ತಂಪು:

ಬಿಸಿಲಿನ ಬೇಗೆ ದೇಹಕ್ಕೆ ಪರಮ ಶತ್ರು. ಈ ಸಮಯದಲ್ಲಿ ತಂಪಿನ ಪರಿಹಾರವನ್ನು ನೀವು ಮಾಡಲೇಬೇಕು. ಮುಳ್ಳುಸೌತೆಯ ಜ್ಯೂಸ್ ದೇಹದ ಉಷ್ಣವನ್ನು ನಿವಾರಿಸಿ ತಂಪನ್ನೀಯುತ್ತದೆ. ಸನ್‌ಬರ್ನ್ ನಿಮಗುಂಟಾದಲ್ಲಿ ಕೂಡ ಮುಳ್ಳುಸೌತೆ ಜ್ಯೂಸ್ ಅನ್ನು ದೇಹಕ್ಕೆ ಸವರಿಕೊಳ್ಳಿ. ತುರ್ತು ಪರಿಹಾರ ನಿಮಗೆ ದೊರಕುತ್ತದೆ.

8. ಹೈಡ್ರೇಟೆಡ್‌ ಆಗಿ ಇರಿಸುತ್ತದೆ:

8. ಹೈಡ್ರೇಟೆಡ್‌ ಆಗಿ ಇರಿಸುತ್ತದೆ:

ಮುಳ್ಳುಸೌತೆ ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ. ದಿನವಿಡೀ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ನಿಮಗೆ ಸಾಕಷ್ಟು ನೀರಿನ ಪೂರೈಕೆ ಬೇಕೆಂದಲ್ಲಿ ಮುಳ್ಳುಸೌತೆಯನ್ನು ಆದಷ್ಟು ಸೇವಿಸಿ.

9. ಮುಳ್ಳುಸೌತೆ ರಾಯಿತ:

9. ಮುಳ್ಳುಸೌತೆ ರಾಯಿತ:

ಮುಳ್ಳುಸೌತೆ ರಾಯಿತ ಯೋಗರ್ಟ್ ಮತ್ತು ಸಾಂಬಾರು ಪದಾರ್ಥಗಳಾದ ಜೀರಿಗೆ, ಮೆಣಸಿನ ಹುಡಿ ಮತ್ತು ಈರುಳ್ಳಿಯೊಂದಿಗೆ ಬೆರೆತು ಒಂದು ಉತ್ತಮ ಸೈಡ್ ಡಿಶ್‌ನಂತೆ ರೂಪಿಸುತ್ತದೆ.

10. ಮುಳ್ಳುಸೌತೆ ಚನ್ನಾ ದಾಲ್:

10. ಮುಳ್ಳುಸೌತೆ ಚನ್ನಾ ದಾಲ್:

ಮುಳ್ಳುಸೌತೆ ಚನ್ನಾ ದಾಲ್ ಸರಳ ಮತ್ತು ಆರೋಗ್ಯಪೂರ್ಣ ರೆಸಿಪಿಯಾಗಿದೆ. ಕಡಲೆಬೇಳೆ ಒಂದು ನ್ಯೂಟ್ರಿಶಿಯನ್ ಉಳ್ಳ ಬೇಳೆಯಾಗಿದ್ದು ಇದು ಮುಳ್ಳುಸೌತೆಯೊಂದಿಗೆ ಬೆರೆತಾಗ, ಇದರ ರುಚಿ ಅಮೋಘವಾಗಿರುತ್ತದೆ. ಇವೆರಡರ ಮಿಶ್ರಣ ಕೊಂಚ ಭಿನ್ನವಾಗಿರುತ್ತದೆ. ಮುಳ್ಳುಸೌತೆಯ ಅಸಾಮಾನ್ಯ ರುಚಿಯು ಇದನ್ನು ಸ್ವಾದಿಷ್ಟಗೊಳಿಸುತ್ತದೆ.

11. ಮುಳ್ಳುಸೌತೆ ಮತ್ತು ಚೀಸ್ ಸ್ಯಾಂಡ್‌ವಿಚ್:

11. ಮುಳ್ಳುಸೌತೆ ಮತ್ತು ಚೀಸ್ ಸ್ಯಾಂಡ್‌ವಿಚ್:

ತರಕಾರಿ ಸ್ಯಾಂಡ್‌ವಿಚ್ ಅನ್ನು ಮುಳ್ಳುಸೌತೆಯನ್ನು ಪ್ರಧಾನ ಸಾಮಾಗ್ರಿಯೊಂದಿಗೆ ಮುಖ್ಯವಾಗಿಸಿ ಇದನ್ನು ತಯಾರಿಸಬಹುದು. ಕತ್ತರಿಸಿದ ಈರುಳ್ಳಿ, ಟೊಮೇಟೋ, ಹಾಗೂ ಚೀಸ್ ಬಳಸಿ ರುಚಿಕರ ಬ್ರೇಕ್‌ಫಾಸ್ಟ್ ತಯಾರಿಸಬಹುದು.

12. ಮುಳ್ಳುಸೌತೆ ಸಲಾಡ್:

12. ಮುಳ್ಳುಸೌತೆ ಸಲಾಡ್:

ಮುಳ್ಳುಸೌತೆ ಸಲಾಡ್ ಒಂದು ಆರೋಗ್ಯಯುತ ಮತ್ತು ಹೊಟ್ಟೆ ಭರ್ತಿ ಮಾಡುವ ಡಿಶ್ ಆಗಿದ್ದು ಸೈಡ್ ಡಿಶ್ ನಂತೆ ಇಲ್ಲವೇ ಮುಖ್ಯ ಡಿಶ್ ಆಗಿ ಕೂಡ ಇದನ್ನು ಸೇವಿಸಬಹುದು. ಟೊಮೇಟೋ, ಲಿಂಬೆ, ಈರುಳ್ಳಿ ಮತ್ತು ಚಾಟ್ ಮಸಾಲಾವನ್ನು ಸೇರಿಸಿ ನಿಮ್ಮ ನಾಲಗೆಯ ರುಚಿಯನ್ನು ತಣಿಸಿ.

13. ಮುಳ್ಳುಸೌತೆ ಚಿಕನ್ ರೆಸಿಪಿ:

13. ಮುಳ್ಳುಸೌತೆ ಚಿಕನ್ ರೆಸಿಪಿ:

ಚಿಕನ್ ರೆಸಿಪಿಗೆ ಮುಳ್ಳುಸೌತೆಯನ್ನು ಸೇರಿಸುವುದು ಈ ಡಿಶ್‌ಗೆ ಹೆಚ್ಚಿನ ರುಚಿಯನ್ನು ಸೇರಿಸುತ್ತದೆ. ಇದು ತುಂಬಾ ಖಾರ ಇರದಿರುವುದರಿಂದ ಮತ್ತು ಯಮ್ಮಿ ಟೇಸ್ಟ್ ಅನ್ನು ಹೊಂದಿರುವುದರಿಂದ ಮಕ್ಕಳಿಗೆ ಇದು ಮೆಚ್ಚಿನ ರೆಸಿಪಿಯಾಗುವುದು ಖಂಡಿತ. ಸ್ಟೀಮ್ ರೈಸ್ ಮತ್ತು ಚಪಾತಿಯೊಂದಿಗೆ ಈ ಅನನ್ಯ ಡಿಶ್ ಚೆನ್ನಾಗಿ ಹೊಂದುತ್ತದೆ.

14. ಮುಳ್ಳುಸೌತೆ ರಾಯಿತದೊಂದಿಗೆ ಗ್ರಿಲ್ ಮಾಡಿದ ಸಾಲ್‌ಮನ್:

14. ಮುಳ್ಳುಸೌತೆ ರಾಯಿತದೊಂದಿಗೆ ಗ್ರಿಲ್ ಮಾಡಿದ ಸಾಲ್‌ಮನ್:

ಸಾಲ್‌ಮನ್ ಒಮೆಗಾ - 3 ಫ್ಯಾಟ್ಸ್ ಏಸಿಡ್‌ನೊಂದಿಗೆ ಹೆಚ್ಚು ನ್ಯೂಟ್ರೀನ್, ಅನ್ನು ಒಳಗೊಂಡಿದೆ. ಹೃದಯ ಕಾಯಿಲೆ, ಮಧುಮೇಹ, ವಿವಿಧ ಪ್ರಕಾರದ ಕ್ಯಾನ್ಸರ್ ಮತ್ತು ಸಂಧಿವಾತ ಸೇರಿದಂತೆ ನಮ್ಮ ದೇಹದಲ್ಲಿರುವ ಉರಿಯನ್ನು ತಗ್ಗಿಸಲು ಸಹಾಯ ಮಾಡಲು ಒಮೆಗಾ - 3 ಫ್ಯಾಟ್ಸ್ ಸಹಾಯ ಮಾಡುತ್ತದೆ.

15. ಮುಳ್ಳುಸೌತೆ ಗೊಜ್ಜು:

15. ಮುಳ್ಳುಸೌತೆ ಗೊಜ್ಜು:

ಮುಳ್ಳುಸೌತೆಯನ್ನು ಕತ್ತರಿಸಿ ರುಚಿಕರ ಗೊಜ್ಜು ತಯಾರಿಸುತ್ತಾರೆ (ಕರ್ನಾಟಕ ರೆಸಿಪಿ) ಇದನ್ನು ದಕ್ಷಿಣಭಾರತದಲ್ಲಿ ಖಾರ ಪೊಂಗಲ್‌ನೊಂದಿಗೆ ಬಡಿಸಲಾಗುತ್ತದೆ.

16. ಕೀರಾ ಚಾಟ್: ಅನ್ನ

16. ಕೀರಾ ಚಾಟ್: ಅನ್ನ

ಹಾಗೂ ರೋಟಿಯೊಂದಿಗೆ ಚೆನ್ನಾಗಿ ಹೊಂದುವ ಸೈಡ್ ಡಿಶ್ ಆಗಿದೆ ಕೀರಾ ಚಾಟ್. ತುರಿದ ಮುಳ್ಳುಸೌತೆಯನ್ನು ಲಿಂಬೆ ಹಾಗೂ ಖಾರ ಸಾಮಾಗ್ರಿಗಳಾದ ಕೆಂಪು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ ಇದನ್ನು ತಯಾರಿಸಲಾಗುತ್ತದೆ.

17. ಟೊಮೇಟೋ ಮತ್ತು ಮುಳ್ಳುಸೌತೆ ಸಲಾಡ್:

17. ಟೊಮೇಟೋ ಮತ್ತು ಮುಳ್ಳುಸೌತೆ ಸಲಾಡ್:

ಹೆಚ್ಚಾಗಿ ಸಲಾಡ್‌ಗಳಲ್ಲಿ ಮುಳ್ಳುಸೌತೆಯನ್ನು ಬಳಸುತ್ತಾರೆ. ಈ ಕ್ರಂಚಿ ತರಕಾರಿಯೊಂದಿಗೆ ಟ್ಯಾಂಗಿ ಟೊಮೇಟೋಗಳನ್ನ ಬಳಸಿ ಮಸಾಲೆಯನ್ನು ಬೆರೆಸಿ ರುಚಿಕರ ಸಲಾಡ್ ಅನ್ನು ತಯಾರಿಸಬಹುದು.

18. ತಂಪಾದ ಮುಳ್ಳುಸೌತೆ ಸೂಪ್:

18. ತಂಪಾದ ಮುಳ್ಳುಸೌತೆ ಸೂಪ್:

ಈ ಬೇಸಿಗೆಗಾಗಿ ತಂಪಾದ ಮತ್ತು ರುಚಿರವಾದ ಸೂಪ್‌ಗಳನ್ನು ತಯಾರಿಸಬಹುದು. ಮುಳ್ಳುಸೌತೆ ಮತ್ತು ಬೇಯಿಸಿದ ತರಕಾರಿಗಳಾದ ಕ್ಯಾರೇಟ್, ಆಲೂಗಡ್ಡೆ ಮೊದಲಾದ ತರಕಾರಿಗಳನ್ನು ಬಳಸಿ ತಂಪಾದ ಸೂಪ್ ಅನ್ನು ನಿಮಗೆ ತಯಾರಿಸಬಹುದು. ರುಚಿಕರವಾದ ಕ್ಯಾಲೋರಿ ಕಡಿಮೆ ಇರುವ ಈ ಸೂಪ್ ಡಯೆಟ್ ಮಾಡುವವರಿಗೆ ಹೇಳಿ ಮಾಡಿಸಿರುವಂಥದ್ದು.

19. ಬೇಸಿಗೆಯಲ್ಲಿ ಮುಳ್ಳುಸೌತೆಕಾಯಿಯನ್ನು ಸಾಧ್ಯವಾದಷ್ಟು ತಿನ್ನಿ:

19. ಬೇಸಿಗೆಯಲ್ಲಿ ಮುಳ್ಳುಸೌತೆಕಾಯಿಯನ್ನು ಸಾಧ್ಯವಾದಷ್ಟು ತಿನ್ನಿ:

ನೀವು ಬಿಡುವಿಲ್ಲದ ಕೆಲಸದ ಒತ್ತಡವುಳ್ಳವರಾಗಿದ್ದು, ಪದೇ ಪದೇ ನಿಮಗೆ ಸಾಕಷ್ಟು ನೀರನ್ನು ಕುಡಿಯುವುದು ಸಾಧ್ಯವಿಲ್ಲವಾದರೆ, ಈ ತಂಪಾದ ಸೌತೆಕಾಯಿಯನ್ನು ತಿಂದುಬಿಡಿರಿ. ಯಾಕೆಂದರೆ, ಇದರಲ್ಲಿ ಶೇ. 90 ರಷ್ಟು ನೀರಿನಂಶವಿದೆ. ಈ ಸೌತೆಕಾಯಿಯು ನಿಮಗಾದ ನೀರಿನ ನಷ್ಟವನ್ನು ಸಂತೋಷದಿಂದ ಭರಿಸುತ್ತದೆ.

20. ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ:

20. ತ್ವಚೆಯ ತೇವಾಂಶವನ್ನು ಕಾಪಾಡುತ್ತದೆ:

ಈ ಮುಳ್ಳುಸೌತೆಕಾಯಿಯನ್ನು ನಿಮ್ಮ ತ್ವಚೆಯ ಮೇಲೆ ಇರಿಸಿದರೆ ಅಥವಾ ಲೇಪಿಸಿದರೆ, ನಿಮ್ಮ ತ್ವಚೆಯು ಸೌರಕಲೆಯಿಂದ (ಬಿಸಿಲಿನಿಂದ ಕಪ್ಪಾಗುವುದು) ವಿಮುಕ್ತಗೊಳ್ಳುತ್ತದೆ.

21. ಸೌತೆಕಾಯಿಯು ನಂಜುನಿವಾರಕವಾಗಿದೆ:

21. ಸೌತೆಕಾಯಿಯು ನಂಜುನಿವಾರಕವಾಗಿದೆ:

ಮುಳ್ಳುಸೌತೆಕಾಯಿಯಲ್ಲಿರ ಬಹುದಾದ ಯಾವತ್ತೂ ಜಲವು ಒಂದು ಕಸಬರಿಕೆಯಂತೆ ವರ್ತಿಸಿ, ನಿಮ್ಮ ಶರೀರದ ತ್ಯಾಜ್ಯವನ್ನು ಗುಡಿಸಿ ನಿವಾರಿಸಿಬಿಡುತ್ತದೆ. ನಿಯಮಿತವಾದ ಸೌತೆಕಾಯಿಗಳ ಸೇವನೆಯು, ಮೂತ್ರಪಿಂಡದ ಕಲ್ಲುಗಳನ್ನೂ ಸಹ ಕರಗಿಸಿ ಬಿಡುತ್ತದೆ ಎಂದು ತಿಳಿದು ಬಂದಿದೆ.

22. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ:

22. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ:

ಮುಳ್ಳುಸೌತೆಕಾಯಿ ರೋಗನಿರೋಧಕ ಶಕ್ತಿಯನ್ನು ಸಂವರ್ಧಿಸಿ ನಿಮ್ಮನ್ನು ಉಲ್ಲಾಸಭರಿತರನ್ನಾಗಿಸಿ, ನಿಮ್ಮ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ.

23. ಮುಳ್ಳುಸೌತೆಕಾಯಿ ತ್ವಚೆಗೆ ಹಿತವನ್ನುಂಟು ಮಾಡುವ ಖನಿಜಗಳನ್ನು ಒದಗಿಸುತ್ತದೆ:

23. ಮುಳ್ಳುಸೌತೆಕಾಯಿ ತ್ವಚೆಗೆ ಹಿತವನ್ನುಂಟು ಮಾಡುವ ಖನಿಜಗಳನ್ನು ಒದಗಿಸುತ್ತದೆ:

ಸೌತೆಕಾಯಿಯು ಪೊಟ್ಯಾಸಿಯಂ, ಮೆಗ್ನೀಷಿಯಂ, ಮತ್ತು ಸಿಲಿಕಾನ್ ಅನ್ನು ಸಮೃದ್ಧವಾಗಿ ಹೊಂದಿದೆ. ಆದ್ದರಿಂದಲೇ, ಜಲ ಚಿಕಿತ್ಸಕರು (spa) ಸೌತೆಕಾಯಿ ಆಧಾರಿತ ಚಿಕಿತ್ಸೆಗೆ ಮೊರೆಹೋಗುತ್ತಾರೆ.

24. ಮುಳ್ಳುಸೌತೆಕಾಯಿ ಜೀರ್ಣಕಾರ್ಯಕ್ಕೆ ಮತ್ತು ತೂಕ ನಷ್ಟಕ್ಕೆ ಸಹಕಾರಿ:

24. ಮುಳ್ಳುಸೌತೆಕಾಯಿ ಜೀರ್ಣಕಾರ್ಯಕ್ಕೆ ಮತ್ತು ತೂಕ ನಷ್ಟಕ್ಕೆ ಸಹಕಾರಿ:

ಮುಳ್ಳುಸೌತೆಕಾಯಿ ಅಧಿಕ ಪ್ರಮಾಣದ ನೀರಿನ ಅಂಶವಿದ್ದು , ಕಡಿಮೆ ಕ್ಯಾಲರಿಯನ್ನು ಒಳಗೊಂಡಿರುವುದರಿಂದ, ತೂಕ ನಷ್ಟವನ್ನು ಹೊಂದಲು ಬಯಸುವವರಿಗೆ ಹಾಗೂ ಜೀರ್ಣಕ್ರಿಯೆಗೆ ಮುಳ್ಳುಸೌತೆಕಾಯಿ ವರದಾನವಾಗಿದೆ.

25. ನಿಮ್ಮ ಕಣ್ಣುಗಳಿಗೆ ಪುನಶ್ಚೇತನವನ್ನು ನೀಡುತ್ತದೆ:

25. ನಿಮ್ಮ ಕಣ್ಣುಗಳಿಗೆ ಪುನಶ್ಚೇತನವನ್ನು ನೀಡುತ್ತದೆ:

ತಂಪಾದ ಸೌತೆಯೊಂದರ ತುಣುಕನ್ನು ನಿಮ್ಮ ಊದಿಕೊಂಡ ಕಣ್ಣಿನ ಮೇಲಿರಿಸಿದರೆ, ಅದು ಹೊರನೋಟಕ್ಕೆ ಸೌಂದರ್ಯದ ಚಿಕಿತ್ಸೆಗೆ ಎಂದು ಅನಿಸಿದರೂ ಕೂಡ, ಮುಳ್ಳು ಸೌತೆಕಾಯಿಯು ತನ್ನ ಉರಿ ಪ್ರತಿಬಂಧಕ ಗುಣಗಳಿಂದಾಗಿ, ನಿಮ್ಮ ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಬಲ್ಲುದಾಗಿದೆ.

26. ಕ್ಯಾನ್ಸರ್‌ನ ವಿರುದ್ಧ ಹೊರಡುತ್ತದೆ:

26. ಕ್ಯಾನ್ಸರ್‌ನ ವಿರುದ್ಧ ಹೊರಡುತ್ತದೆ:

ಮುಳ್ಳು ಸೌತೆಕಾಯಿಯನ್ನು ಸೇವಿಸುವುದರಿಂದ ಅನೇಕ ವಿಧದ ಕ್ಯಾನ್ಸರ್‌ಗಳ ಅಪಾಯವನ್ನು ತಪ್ಪಿಸಬಹುದು ಎಂದು ಅಧ್ಯಾಯನದಿಂದ ತಿಳಿದುಬಂದಿದೆ.

27. ಮಧುಮೇಹ, ಕೊಲೆಸ್ಟ್ರಾಲ್ ದೂರವಿಡುತ್ತದೆ:

27. ಮಧುಮೇಹ, ಕೊಲೆಸ್ಟ್ರಾಲ್ ದೂರವಿಡುತ್ತದೆ:

ಮುಳ್ಳುಸೌತೆಕಾಯಿಯು ಮಧುಮೇಹವನ್ನು ಗುಣಪಡಿಸುತ್ತದೆ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

28. ರೋಗಪೀಡಿತ ವಸಡುಗಳನ್ನು ಗುಣಪಡಿಸುತ್ತದೆ:

28. ರೋಗಪೀಡಿತ ವಸಡುಗಳನ್ನು ಗುಣಪಡಿಸುತ್ತದೆ:

ಮುಳ್ಳುಸೌತೆಕಾಯಿಯ ರಸವು ರೋಗಪೀಡಿತ ವಸಡುಗಳನ್ನು ಗುಣಪಡಿಸಿ ಅವುಗಳನ್ನು ತಾಜಾಗೊಳಿಸುತ್ತದೆ.

29. ಸೌತೆಕಾಯಿಯು ಕೂದಲು ಮತ್ತು ಉಗುರುಗಳನ್ನು ನಯವಾಗಿರಿಸುತ್ತದೆ:

29. ಸೌತೆಕಾಯಿಯು ಕೂದಲು ಮತ್ತು ಉಗುರುಗಳನ್ನು ನಯವಾಗಿರಿಸುತ್ತದೆ:

ಸೌತೆಕಾಯಿಯಲ್ಲಿರುವ ಚಮತ್ಕಾರಿ ಖನಿಜವಾದ ಸಿಲಿಕಾವು ನಿಮ್ಮ ಕೂದಲು ಮತ್ತು ಉಗುರುಗಳನ್ನು ಹೊಳಪು ಮತ್ತು ಶಕ್ತಿಯುತವಾಗಿಸುತ್ತವೆ.

30. ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ:

30. ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ:

ಮುಳ್ಳುಸೌತೆಕಾಯಿಯಯು ಕೀಲುಗಳ ಆರೋಗ್ಯವನ್ನು ಸುಧಾರಿಸುತ್ತದೆ, ಕೀಲುಗಳ ಮತ್ತು ಸಂದುಗಳ ಬೇನೆಯಿಂದ (ಸಂಧಿವಾತ) ವಿಮುಕ್ತಿಗೊಳಿಸುತ್ತದೆ.

English summary

Health Benefit In Cucumber

Cucumber is a healthy food in summer its not only just a piece of adding attraction or taste to salad, but it is a treasure of health benefits a person can get by its consumption.
Story first published: Monday, April 14, 2014, 12:51 [IST]
X
Desktop Bottom Promotion