For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ಅನ್ನು ತಡೆಗಟ್ಟುವ ವ್ಯಾಯಾಮ ವಿಧಗಳು

|

ಏಷ್ಯಾದಲ್ಲಿ ಸಾಮಾನ್ಯವಾಗಿರುವ ಅತೀ ದೊಡ್ಡ ಕಾಯಿಲೆ ಎಂದೇ ಹೆಸರುಪಡೆದಿರುವುದು ಕ್ಯಾನ್ಸರ್ ಆಗಿದೆ. ಇದೊಂದು ಮಾನಸಿಕ ಹಾಗೂ ದೈಹಿಕ ಹಾನಿಯನ್ನುಂಟು ಮಾಡುವ ಕಠೋರ ಕಾಯಿಲೆಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರುಳನ್ನು ಹಣ್ಣುಗಳಿಂದ ಸ್ವಚ್ಛಗೊಳಿಸಬಹುದೇ?

ಈ ಕಾಯಿಲೆಯಿಂದ ಅಪರಿಮಿತ ಸಾವು ನೋವುಗಳೂ ಸಂಭವಿಸಿವೆ. ಈ ಕ್ಯಾನ್ಸರ್ ಅನ್ನು ತಡೆಗಟ್ಟಲು ಅನುಸರಿಸಬೇಕಾದ ಒಂದು ಸುಲಭ ವಿಧಾನವೆಂದರೆ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುವುದಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ನಿಯಂತ್ರಿಸಬಹುದಾದ ಕ್ಯಾನ್ಸರ್ ಕಾರಣಗಳು!

ವ್ಯಾಯಾಮವು ನಿಮ್ಮ ದೇಹವನ್ನು ಆರೋಗ್ಯಪೂರ್ಣವಾಗಿ ಇರಿಸುವುದು ಮಾತ್ರವಲ್ಲದೆ ವಿನಾಶಕಾರಿ ರೋಗಗಳನ್ನು ಬುಡದಿಂದಲೇ ಕಿತ್ತೊಗೆಯುತ್ತದೆ. ಆರೋಗ್ಯಪೂರ್ಣ ಆಹಾರಗಳನ್ನು ತೆಗೆದುಕೊಂಡು ಕೆಲವೊಂದು ಸತ್ವಯುತ ವಿಧಾನಗಳಲ್ಲಿ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು.

ಮೈಕ್ರೋವೇವ್ ಪಾಪ್‌ಕಾರ್ನ್, ಮುಂತಾದವುಗಳನ್ನು ತ್ಯಜಿಸುವುದು ಕ್ಯಾನ್ಸರ್ ಕೋಶಗಳನ್ನು ದೇಹದಲ್ಲಿ ಕಡಿಮೆ ಮಾಡುತ್ತವೆ. ಈ ರೀತಿಯ ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಖಂಡಿತ ನಿಮಗೆ ಫಲಕಾರಿಯಾಗುತ್ತದೆ.

ಆದ್ದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟುವ ಕೆಲವೊಂದು ವ್ಯಾಯಾಮ ವಿಧಾನಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಈ ವ್ಯಾಯಾಮಗಳು ನಿಮಗೆ ಉತ್ತಮ ಆರೋಗ್ಯ, ಬಳಲಿಕೆಯಿಲ್ಲದ ಚಟುವಟಿಕೆಯುಕ್ತ ಜೀವನವನ್ನು ಮತ್ತು ಉಲ್ಲಾಸ ಪೂರ್ಣ ಮಾನಸಿಕ ಸ್ವಾಸ್ಥ್ಯವನ್ನು ನೀಡುತ್ತವೆ. ಇವುಗಳನ್ನು ನೀವು ನಿಯಮಿತವಾಗಿ ಅನುಸರಿಸುವುದು ನಿಮ್ಮಲ್ಲಿ ಪವಾಡವನ್ನೇ ಸೃಷ್ಟಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಪ್ಪಾಯಿಯ 11 ಆರೋಗ್ಯಕಾರಿ ಪ್ರಯೋಜನಗಳು

ನಡಿಗೆ:

ನಡಿಗೆ:

ವ್ಯಾಯಾಮದ ಒಂದು ಉತ್ತಮ ವಿಧಾನವಾಗಿದೆ ನಡಿಗೆ. ನಿಮ್ಮ ನಡಿಗೆಯು ನಿಮ್ಮ ಹೃದಯ ಮತ್ತು ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸಿ ಶಾಂತಗೊಳಿಸುತ್ತದೆ. ದಿನಕ್ಕೆ ಕನಿಷ್ಟ ಪಕ್ಷ 30 ನಿಮಿಷಗಳಾದರೂ ನೀವು ನಡೆಯಲೇಬೇಕು.

ಜಾಗಿಂಗ್:

ಜಾಗಿಂಗ್:

ಜಾಗಿಂಗ್ ಅಥವಾ 45 ನಿಮಿಷಗಳಷ್ಟು ಕಾಲ ಓಡುವುದು ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಸಹಕಾರಿ. ನೀವು ಓಡಿದಾಗ ನಿಮ್ಮ ಹೃದಯ ಬಡಿತ ವೇಗಗೊಳ್ಳುತ್ತದೆ ಮತ್ತು ನಿಮ್ಮ ಬೆವರು ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಈಜುವಿಕೆ:

ಈಜುವಿಕೆ:

ಈಜುವಿಕೆ ನಿಮ್ಮನ್ನು ದಿನಪೂರ್ತಿ ಸಕ್ರಿಯಗೊಳಿಸುವ ವ್ಯಾಯಾಮದ ವಿಧಾನವಾಗಿದೆ. ನೀವು ಯಾವುದೇ ವಯಸ್ಸಿನಲ್ಲಿ ಈ ವ್ಯಾಯಾಮ ವಿಧಾನವನ್ನು ಅನುಸರಿಸಬಹುದು. ಒಂದು ಅಥವಾ ಎರಡು ಗಂಟೆ ಈಜಿ ನಂತರ ನಿಮ್ಮ ಜೀವನ ಶೈಲಿಯ ಬದಲಾವಣೆಯನ್ನು ನೀವೇ ಸ್ವತಃ ಆನಂದಿಸಿ.

ಸೈಕ್ಲಿಂಗ್:

ಸೈಕ್ಲಿಂಗ್:

ನಿಮ್ಮ ಮನೆಯ ಸದಸ್ಯರ ಅಥವಾ ಸ್ನೇಹಿತರ ಸೈಕಲ್ ಅನ್ನು ಬಳಸಿಕೊಂಡು ಬೆಳಗ್ಗಿನ ಜಾವ ಸೈಕ್ಲಿಂಗ್ ಮಾಡಿ, ಬೆಳಗ್ಗಿನ ಜಾವದ ಉತ್ತಮ ಹವೆ ನಿಮ್ಮ ಶ್ವಾಸಕೋಶಗಳಿಗೆ ಉತ್ತಮವಾಗಿರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ನಿರ್ಮೂಲನೆಗೊಳ್ಳುತ್ತದೆ.

ಥೈಚಿ:

ಥೈಚಿ:

ನಿಮಗೆ ಥೈಚಿಯ ಬಗ್ಗೆ ಜ್ಞಾನವಿಲ್ಲದಿದ್ದರೆ ನಿಮ್ಮ ನಗರದಲ್ಲಿರುವ ಥೈಚಿ ತರಗತಿಗಳನ್ನು ಸೇರಿಕೊಳ್ಳಿ. ಇದೊಂದು ಚೈನೀಸ್ ಪದ್ಧತಿಯ ವ್ಯಾಯಾಮ ಕ್ರಮವಾಗಿದ್ದು ನಿಧಾನವಾಗಿರುವ ಚಲನಾ ವ್ಯಾಯಾಮಗಳಿಂದ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಕ್ಯಾನ್ಸರ್ ನಿವಾರಣೆಯಲ್ಲಿ ಈ ವ್ಯಾಯಾಮದ ಪಾತ್ರ ಮಹತ್ವದ್ದಾಗಿದೆ.

ಹೈಕಿಂಗ್:

ಹೈಕಿಂಗ್:

ಕ್ಯಾನ್ಸರ್ ಅನ್ನು ಬುಡದಿಂದಲೇ ನಿವಾರಿಸುವ ಸಾಮರ್ಥ್ಯ ವ್ಯಾಯಾಮದ ಒಂದು ವಿಧಾನವಾಗಿರುವ ಹೈಕಿಂಗ್‌ಗಿದೆ. ಒತ್ತಡವನ್ನು ಮತ್ತು ಕ್ಯಾನ್ಸರ್ ಪರಿಣಾಮವನ್ನು ಈ ವ್ಯಾಯಾಮ ಪ್ರಕಾರ ನಿರ್ಬಂಧಿಸುತ್ತದೆ. ಹೈಕಿಂಗ್ ಮಾಡುವಾಗ ನಿಮ್ಮ ದೇಹ ಅದಕ್ಕೆ ತಕ್ಕಂತೆ ಸ್ಪಂದಿಸುತ್ತಿರುತ್ತದೆ ಇದರಿಂದ ರೋಗಮುಕ್ತ ಶರೀರ ಆರೋಗ್ಯ ಕೂಡ ನಿಮ್ಮದಾಗುತ್ತದೆ.

ರೋಲರ್‌ ಬ್ಲೇಡಿಂಗ್:

ರೋಲರ್‌ ಬ್ಲೇಡಿಂಗ್:

ದೇಹದ ಎಲ್ಲಾ ಸ್ನಾಯುಗಳು ಮತ್ತು ಮೂಳೆಗಳಿಗೆ ಚೆನ್ನಾಗಿ ವ್ಯಾಯಾಮ ನೀಡುವ ಒಂದು ವ್ಯಾಯಾಮ ಪ್ರಕಾರ ರೋಲರ್‌ಬ್ಲೇಡಿಂಗ್. ಮಕ್ಕಳು ಮಾತ್ರವಲ್ಲದೆ ದೊಡ್ಡವರೂ ಕೂಡ ಈ ವ್ಯಾಯಾಮವನ್ನು ಮಾಡಬಹುದಾಗಿದೆ.

ನೃತ್ಯ:

ನೃತ್ಯ:

ದಿನಕ್ಕೆ 30 ನಿಮಿಷಗಳಷ್ಟು ಕಾಲ ನಿಮ್ಮ ಮೆಚ್ಚಿನ ಹಾಡಿಗೆ ನೃತ್ಯ ಮಾಡಿ ನಿಮ್ಮ ದೇಹವನ್ನು ಕ್ರಿಯಾಶೀಲವಾಗಿಡುವುದೂ ಕೂಡ ವ್ಯಾಯಾಮದ ವಿಧಾನವಾಗಿದೆ. ಈ ವ್ಯಾಯಾಮವನ್ನು ಅನುಸರಿಸಿ ಆರೋಗ್ಯದಿಂದಿರಿ.

ಯೋಗ:

ಯೋಗ:

ನಿಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಯೋಗ ತುಂಬಾ ಉತ್ತಮ. ನೀವು ಯೋಗವನ್ನು ಅನುಷ್ಠಾನಿಸಿಕೊಂಡಾಗ ನಿಮ್ಮ ದೇಹದ ವಿಷಕಾರಿ ಅಂಶಗಳು ನಿಮ್ಮಿಂದ ದೂರಾಗುತ್ತವೆ. ನಿಯಮಿತವಾಗಿ ಯೋಗವನ್ನು ರೂಢಿಸಿಕೊಂಡು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ.

ಟೆನ್ನೀಸ್:

ಟೆನ್ನೀಸ್:

ನೀವು ಚಟುವಟಿಕೆಯಿಂದ ಇರಲು ಸಹಾಯ ಮಾಡುವ ಒಂದು ಉತ್ತಮ ಕ್ರೀಡೆಯಾಗಿದೆ ಟೆನ್ನೀಸ್. ನಿಮಗೆ ಸುತ್ತಮುತ್ತಲೂ ಓಡಾಡುವಂತೆ ಮಾಡುವ ಮತ್ತು ಹೆಚ್ಚುವರಿ ಕ್ಯಾಲೋರಿಗಳನ್ನು ದೇಹದಿಂದ ಹೊರಹಾಕಿ. ವಿಷಕಾರಿ ಅಂಶಗಳನ್ನು ಬೆವರಿನ ಮೂಲಕ ತೊಡೆದುಹಾಕುವ ಕ್ರೀಡೆ, ವ್ಯಾಯಾಮ ಪ್ರಕಾರ ಟೆನ್ನೀಸ್ ಆಗಿದೆ.

Read more about: health ಆರೋಗ್ಯ
English summary

Forms Of Exercises To Prevent Cancer

One of the greatest illness which is common in Asia is cancer. This illness is said to be the worst kind of disease since patients witness a lot of pain mentally and physically. Cancer is the main cause for a number of deaths which have increased rapidly as well.
X
Desktop Bottom Promotion