For Quick Alerts
ALLOW NOTIFICATIONS  
For Daily Alerts

ದಿನಾಲೂ ಸೇವಿಸಬಾರದ ಆಹಾರಗಳು

By Hemanth P
|

ಕೆಲವೊಮ್ಮೆ ಆಹಾರ ರುಚಿಯಾಗಿರುವ ಕಾರಣವೋ ಅಥವಾ ಮತ್ತೊಂದು ಕಾರಣಕ್ಕೊ ಕೆಲವೊಂದು ತುತ್ತು ಹೆಚ್ಚು ಊಟ ಮಾಡುತ್ತೇವೆ ಅಥವಾ ತಿನ್ನುತ್ತೇವೆ. ಇದು ನಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣವೆಂದು ಭಾವಿಸುತ್ತೇವೆ. ಆದರೆ ಕೆಲವೊಂದು ಆಹಾರಗಳನ್ನು ನಾವು ನಿಯಮಿತವಾಗಿ ತಿನ್ನಬೇಕು ಎನ್ನುವುದನ್ನು ಮರೆತಿರುತ್ತೇವೆ. ನೀವು ಪ್ರೋಟೀನ್ ಶೇಕ್ ನ ಒಂದು ಗ್ಲಾಸ್ ಪ್ರತೀದಿನ ಸೇವಿಸುತ್ತಿರುವಾಗ ಜಂಕ್ ಫುಡ್ ನ್ನು ದೂರವಿರಿಸಿದ್ದರೆ ಆಗ ನೀವು ಪ್ರತಿನಿತ್ಯ ಸಣ್ಣ ತಪ್ಪನ್ನು ಮಾಡುತ್ತಿದ್ದೀರಿ ಎಂದರ್ಥ. ಸಮತೋಲದ ತೂಕ ಕಾಯ್ದುಕೊಳ್ಳಲು ನೀವು ಕೆಲವೊಂದು ಆಹಾರಗಳನ್ನು ಕಡೆಗಣಿಸಬೇಕಾಗುತ್ತದೆ. ಅವುಗಳ ಪಟ್ಟಿ ಇಲ್ಲಿದೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ನಾವು ತುಂಬಾ ಹಿಂದಿನಿಂದಲೂ ಪ್ರೀತಿಸುತ್ತೇವೆ. ಆದರೆ ಎಷ್ಟು ವರ್ಷಗಳಿಂದ ಎಂದು ಮಾತ್ರ ತಿಳಿದಿಲ್ಲ. ಯಾವುದೇ ಪದಾರ್ಥದ ರುಚಿ ಹೆಚ್ಚಿಸಲು ಅಥವಾ ಅದರ ಪ್ರಮಾಣ ಹೆಚ್ಚಿಸಲು ಯಾವುದಾದರೂ ಒಂದು ಕಾರಣದಿಂದ ಆಲೂಗಡ್ಡೆ ದೈನಂದಿನ ಆಹಾರದಲ್ಲಿ ಇದ್ದೇ ಇರುತ್ತದೆ. ಆಲೂಗಡ್ಡೆ ನಿಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮುಂದಿನ ಸಲ ನೀವು ತಾಜಾ ತರಕಾರಿಯನ್ನು ಆಲೂಗಡ್ಡೆ ಹಾಕದೆ ತಿನ್ನಿ.

ಹಾಲು

ಹಾಲು

ಹಾಲು ಹಲವಾರು ಸಮಸ್ಯೆಗಳಿಗೆ ಪರಿಹಾರ. ಆದರೆ ಪ್ರತೀ ದಿನ ಇದನ್ನು ಸೇವಿಸಿದರೆ ಅದು ನಿಮ್ಮ ಬೆಳವಣಿಗೆಗೆ ಅಡ್ಡಿಯುಂಟುಮಾಡಬಹುದು. ನೀವು ಒಂದು ಗ್ಲಾಸ್ ಹಾಲನ್ನು ರಾತ್ರಿ ಮಲಗುವ ಮೊದಲು, ಬೆಳಗ್ಗೆ ಉಪಹಾರದ ವೇಳೆ ಅಥವಾ ಸಂಜೆಯ ತಿಂಡಿಯ ವೇಳೆ ಸೇವಿಸುತ್ತಿದ್ದರೆ ಇದಕ್ಕೆ ಬ್ರೇಕ್ ಹಾಕಿ. ನೀವು ಹಾಲು ಕುಡಿಯದೆ ಇದ್ದರೆ ಜಡ ಕಡಿಮೆಯಾಗಿ ತೂಕ ಕಡಿಮೆ ಮಾಡಲು ನೆರವಾಗುತ್ತದೆ ಅಥವಾ ಭಾರ ಇಳಿಸುತ್ತದೆ. ಹೀಗೆ ಆದರೆ ಸಮಸ್ಯೆ ಎಲ್ಲಿದೆಯೆಂದು ನಿಮಗೆ ತಿಳಿಯುತ್ತದೆ.

ಊಟದ ಬಳಿಕ ಸಿಹಿ

ಊಟದ ಬಳಿಕ ಸಿಹಿ

ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವುದನ್ನು ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇದು ಅನಗತ್ಯವೆಂದು ನಮಗೆಲ್ಲರಿಗೂ ತಿಳಿದಿದೆ. ನೀವು ತೂಕ ಇಳಿಸಲು ಪ್ರಯತ್ನಿಸುವ ಪ್ರತಿಯೊಂದು ಹೆಜ್ಜೆಗೂ ಸಿಹಿಯಲ್ಲಿರುವ ಸಕ್ಕರೆಯ ಪ್ರಮಾಣ ತುಂಬಾ ನೆರವಾಗುತ್ತದೆ. ಪ್ರತೀನಿತ್ಯ ಸಿಹಿ ಸೇವಿಸುವುದನ್ನು ಕಡಿಮೆ ಮಾಡಿದರೆ ನೀವು ತುಂಬಾ ಆರೋಗ್ಯಕರವಾಗಿರಬಹುದು. ವಾರಾಂತ್ಯ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಿಹಿ ಸೇವಿಸುವುದನ್ನು ಅಭ್ಯಾಸ ಮಾಡಿ.

ಸಂಜೆಯ ತಿಂಡಿ

ಸಂಜೆಯ ತಿಂಡಿ

ಸಂಜೆಯ ತಿಂಡಿ ನಮಗೆಲ್ಲರಿಗೂ ತುಂಬಾ ಕಠಿಣ ಆಯ್ಕೆ. ಸಂಜೆ ತುಂಬಾ ಹಸಿವಾದಾಗ ನಾವು ಸ್ಯಾಂಡ್ ವಿಚ್ ಅಥವಾ ಸಮೋಸ ಸೇವಿಸುತ್ತೇವೆ. ನಮಗೆ ತುಂಬಾ ಹಸಿವಾದಾಗ ನಾವು ಏನು ತಿನ್ನಬೇಕೆನ್ನುವುದನ್ನು ಮರೆತು ಸಿಕ್ಕಿದ್ದನ್ನು ತಿನ್ನುತ್ತೇವೆ. ಇದು ನಿಮ್ಮ ದೈನಂದಿನ ಅಭ್ಯಾಸವಾದರೆ ಆಗ ನಿಮ್ಮ ದೇಹಕ್ಕೆ ಯೋಚಿಸಿದಕ್ಕಿಂತ ಹೆಚ್ಚು ಹಾನಿಯಾಗುತ್ತದೆ. ಆರೋಗ್ಯಕರ ತಿಂಡಿಗಳಾದ ಬೀಜಗಳು, ಕಾಟೆಜ್ ಚೀಸ್ ಅಥವಾ ಮೊಸರನ್ನು ತಿನ್ನಿ.

English summary

Foods you shouldn't eat daily

While most of the time we conveniently hold the extra morsels we eat as culprit for our weight gain, we often forget that there are a few foods which we should not dig in too often. Even if you are downing a glass of protein shake and keeping junk out of your sight,
Story first published: Wednesday, January 1, 2014, 17:23 [IST]
X
Desktop Bottom Promotion