For Quick Alerts
ALLOW NOTIFICATIONS  
For Daily Alerts

ನಿಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು

|

ನೈಸರ್ಗಿಕವಾಗಿ, ಸಾಮರ್ಥ್ಯವನ್ನು ಹೆಚ್ಚಿಸುವ ಆಹಾರಗಳು ಹೆಚ್ಚಾಗಿ ಮಾಂಸಾಹಾರವಾಗಿರುತ್ತದೆ. ಆದರೂ ಸಸ್ಯಾಹಾರಿಗಳೂ ಮಾಂಸಾಹಾರಿಗಳಂತೆ ಕೂಡ ಶಕ್ತಿಯುತ ಮತ್ತು ಬಲಯುತವಾಗಿರುತ್ತಾರೆ. ಕೆಲವೊಮ್ಮೆ ಮೀನು ಮಾಂಸ ಒದಗಿಸದ ಸಹಾಯವನ್ನು ಸಸ್ಯಾಹಾರಿ ಆಹಾರಗಳು ಮಾಡುತ್ತವೆ. ನಿಮಗೆ ಅಗತ್ಯವಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಒದಗಿಸಲು ಸಸ್ಯಾಹಾರ ಸಹಕಾರಿ.

ಬಾಳೆಹಣ್ಣು ಮತ್ತು ದ್ರಾಕ್ಷಿ ಶಕ್ತಿಯನ್ನು ನೀಡುವ ಒಂದು ಉತ್ತಮ ಹಣ್ಣುಗಳಾಗಿವೆ. ನಿಮಗೆ ಅಗತ್ಯವಿರುವ ಪ್ರೋಟೀನ್ ವಿಟಮಿನ್‌ಗಳ ಸಾಕಷ್ಟು ಪ್ರಮಾಣವನ್ನು ಒದಗಿಸುವಲ್ಲಿ ಇವು ಸಿದ್ಧ ಹಸ್ತರಾಗಿರುವುದರಿಂದ ದೈನಂದಿನ ಜೀವನದಲ್ಲಿ ನೀವು ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಬಳಸಲೇಬೇಕು. ಮತ್ತೆ ತಡವೇಕೆ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವ ಹಣ್ಣು ತರಕಾರಿಗಳು ನಿಮ್ಮ ಮನೆಯಲ್ಲೇ ಇದೆ ಅವುಗಳ ಸರಿಯಾದ ಪ್ರಮಾಣದ ಬಳಕೆ ಮತ್ತು ಸೇವನೆಯನ್ನು ನೀವು ಮಾಡಬೇಕು.

ಬೀಟ್‌ರೋಟ್ ಜ್ಯೂಸ್
ಬೀಟ್‌ರೋಟ್ ಜ್ಯೂಸ್ ಅನ್ನು "ಕೊಬ್ಬು ಕೊಲ್ಲವಂಥದ್ದು" ಎಂದೂ ಸಹ ಕರೆಯಲಾಗುತ್ತದೆ. ನೀವು ವರ್ಕ್ಔಟ್ ಮಾಡುವ ಮುನ್ನ ಈ ಜ್ಯೂಸ್ ಅನ್ನು ಸೇವಿಸುವುದು ನಿಮ್ಮ ದೈಹಿಕ ವ್ಯಾಯಾಮವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೀಟ್‌ರೋಟ್ ವಿಟಮಿನ್ ಎ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಿದೆ. ಇವುಗಳು ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಪಪ್ಪಾಯ ನಿಜವಾಗಿಯೂ ಮುಟ್ಟಾಗುವಂತೆ ಮಾಡುತ್ತದೆಯಾ?

ಕುಂಬಳಕಾಯಿ
ಕುಂಬಳಕಾಯಿ ನಿಮಗೆ ಸಂಪೂರ್ಣ ಆರೋಗ್ಯವನ್ನು ಕೊಡುವ ಒಂದು ತರಕಾರಿಯಾಗಿದೆ. ಇದು ಕ್ಯಾಲೋರಿಯಿಂದ ಭರಿತವಾಗಿಲ್ಲದಿದ್ದರೂ ನಿಮ್ಮ ಹೊಟ್ಟೆಯನ್ನು ಭರ್ತಿಗೊಳಿಸುತ್ತದೆ ಮತ್ತು ನಿಮ್ಮ ಹಾರ್ಮೋನ್‌ಗಳನ್ನು ನಿಯಂತ್ರಿಸುತ್ತದೆ ಇದರಿಂದ ನೀವು ಸಮರ್ಥರು ಮತ್ತು ಸಾಮರ್ಥ್ಯವುಳ್ಳವರಾಗಿ ಪರಿವರ್ತಿತರಾಗುತ್ತೀರಿ.

ಬಾದಾಮಿ
ಬಾದಾಮಿಯು ವಿಟಮಿನ್ ಇ ಮತ್ತು ಒಮೇಗಾ - 3 ಕೊಬ್ಬು ಏಸಿಡ್ ಅನ್ನು ಒಳಗೊಂಡಿದೆ. ಈ ಕೊಬ್ಬು ನಿಮಗೆ ಸುಲಭವಾಗಿ ಜೀರ್ಣವಾಗುವಂತ್ತಿದ್ದು ಶಕ್ತಿಯನ್ನು ನೀಡುತ್ತದೆ.

ಬ್ರೌನ್ ರೈಸ್
ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಬಿ ಅಂಶಗಳನ್ನು ಒಳಗೊಂಡಿರುವ ಕಾರ್ಬೊಹೈಡ್ರೇಟ್ ಅನ್ನು ಒದಗಿಸುವಲ್ಲಿ ಬ್ರೌನ್ ರೈಸ್ ಸಹಕಾರಿ. ಇದು ನಿಧಾನವಾಗಿ ಜೀರ್ಣವಾಗುತ್ತದೆ.

ಸಿಟ್ರಸ್ ಹಣ್ಣುಗಳು
ಸಿಟ್ರಸ್ ಹಣ್ಣುಗಳು ನಿಮ್ಮ ಸಾಮರ್ಥ್ಯ ಮಟ್ಟಗಳನ್ನು ಏರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುವ ಹತ್ತು ಅತ್ಯುತ್ತಮ ತರಕಾರಿಗಳು

ಬಾಳೆಹಣ್ಣು
ಬಾಳೆಹಣ್ಣು ಫೈಬರ್ ಮತ್ತು ಸರಳ ಫ್ರುಕ್ಟೋಸ್ ಅಥವಾ ನೈಸರ್ಗಿಕ ಸಕ್ಕರೆಯನ್ನು ಒಳಗೊಂಡಿದೆ. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ನಿಮ್ಮನ್ನು ಆರೋಗ್ಯವಂತರನ್ನಾಗಿಸುತ್ತದೆ.

ಕೆಂಪು ದ್ರಾಕ್ಷಿ
ಕೆಂಪು ದ್ರಾಕ್ಷಿಯು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು ಇದನ್ನು ತ್ವರಿತವಾಗಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ದೀರ್ಘ ಕಾಲದವರೆಗೆ ಸಾಮರ್ಥ್ಯವನ್ನು ರಚಿಸುವ ರಿಸರ್ವಟೋಲ್ ರಾಸಾಯನಿಕವನ್ನು ದ್ರಾಕ್ಷಿ ಒಳಗೊಂಡಿದೆ.

English summary

Foods to increase stamina and strength

However, many vegetarian are just as energetic and fit as non-vegetarians. That means, vegetarian foods are also capable of increasing stamina.
Story first published: Tuesday, November 25, 2014, 19:25 [IST]
X
Desktop Bottom Promotion