For Quick Alerts
ALLOW NOTIFICATIONS  
For Daily Alerts

2020 ಹೊಸ ವರುಷಕ್ಕಾಗಿ ಫಿಟ್‌ನೆಸ್ ಸಲಹೆ

By Staff
|

ತಮ್ಮ ತೂಕದ ಕುರಿತು ಸ್ವಚಿಂತನೆಯುಳ್ಳವರು ಹಾಗೂ ಸ್ಮಾರ್ಟ್ ಆಗಿ ಕಾಣಲು ಬಯಸುವವರಿಗಾಗಿ, ನಾವು ಕೆಲವೊಂದು ಮಾಹಿತಿಯನ್ನು ನೀಡುತ್ತಿದ್ದೇವೆ, ಇದರಿಂದ ನಿಮ್ಮ ದೇಹದಲ್ಲಿರುವ ಬೊಜ್ಜು ಕಡಿಮೆ ಆಗುವುದರ ಜೊತೆಗೆ, ನೀವು ಇನ್ನೂ ಸ್ಮಾರ್ಟ್ ಆಗಿ ಕಾಣುವಂತೆ ಸಹಾಯವಾಗಲಿದೆ...!

ಈ ಹೊಸ ವರುಷದಲ್ಲಿ (2020) ಆದರೂ ತಮ್ಮ ತೂಕವನ್ನು ಕಡಿಮೆ ಮಾಡಬೇಕು ಎಂದು ಹೆಚ್ಚಿನವರ ಆಶಯವಾಗಿರುತ್ತದೆ. ದೈನಂದಿನ ಜೀವನದಲ್ಲಿ ತಮ್ಮ ದೇಹವನ್ನು ಸ್ಲಿಮ್ ಆಗಿ ಇಟ್ಟುಕೊಳ್ಳಲು ಹಲವಾರು ದಾರಿಗಳನ್ನು ನಾವು ಹುಡುಕುತ್ತೇವೆ ಆದರೆ ದೇಹದ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಹಾಗಾಗಿ ನೀವು ತೂಕವನ್ನು ಇಳಿಸಿಕೊಳ್ಳುವ ಮೊದಲು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುವುದು ಅವಶ್ಯಕ.

ಬೋಲ್ಡ್ ಸ್ಕೈ ನಿಮಗಾಗಿ ಕೆಲವೊಂದು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು, ಇದು ನಿಮ್ಮನ್ನು ಇನ್ನಷ್ಟು ಫಿಟ್ ಹಾಗೂ ಆರೋಗ್ಯಕರವಾಗಿ ಇರಿಸುತ್ತದೆ. ಹೊಸ ವರುಷದ ಆರಂಭದಲ್ಲಿಯೇ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಹಾಗೂ ನೀವು ಇನ್ನೂ ಸ್ಮಾರ್ಟ್ ಆಗಿ ಕಾಣಲು ಇದು ಸರಿಯಾದ ಸಮಯ. ಹೊಸ ವರುಷದಲ್ಲಿ ಇಂತಹ ಫಿಟ್‌ನೆಸ್ ಸಲಹೆಗಳನ್ನು ಅನುಸರಿಸಿದರೆ, ಖಂಡಿತವಾಗಿಯೂ ನೀವು ಇನ್ನಷ್ಟು ಅಂದವಾಗಿ ಕಾಣುವಿರಿ.

ಆಗಾದರೆ ಇನ್ನೇಕೆ ತಡ ? ಬನ್ನಿ ಹೊಸ ವರುಷಕ್ಕಾಗಿ ಕೆಲವೊಂದು ಫಿಟ್‌ನೆ್ಸ್ ಸಲಹೆಗಳ ಕಡೆ ಕಣ್ಣು ಹಾಯಿಸೋಣ

ಡಯಟ್

ಡಯಟ್

ಹೌದು, ಈ ವರುಷದ ಪ್ರಾರಂಭದಿಂದಲೇ, ನಿಮ್ಮ ಊಟದ ಮೆನುವಿನಲ್ಲಿ ಆರೋಗ್ಯಕರವಾಗಿರುವ ಡಯಟ್ ಚಾರ್ಟ್ ಅನ್ನು ಸಿದ್ದಪಡಿಕೊಳ್ಳಿ. ನಿಮ್ಮ ಪ್ರತಿ ನಿತ್ಯ ಊಟದ ಮೆನುವಿನಲ್ಲಿ ಡಯಟ್ ಆಹಾರಕ್ಕೆ ಹೆಚ್ಚು ಪ್ರಾಮುಖ್ಯ ನೀಡಿ, ಅಂದರೆ ಸೊಪ್ಪು, ತರಕಾರಿ, ಇಂತಹ ಆಹಾರವನ್ನು ಹೆಚ್ಚು ಬಳಸಿ. ನಿಮ್ಮ ದೇಹ ಫಿಟ್‌ನೆಸ್ ಅನ್ನು ಹೊಂದಿರಬೇಕಾದರೆ ನೀವು ಡಯಟ್ ಅನ್ನು ಅಚ್ಚುಕಟ್ಟಾಗಿ ಪಾಲಿಸಲೇಬೇಕು.

ವ್ಯಾಯಾಮ

ವ್ಯಾಯಾಮ

ವ್ಯಾಯಾಮ ಮಾಡುವುದನ್ನು ಎಂದಿಗೂ ಮರೆಯಬೇಡಿ. ಇದು ಕೂಡ ನಿಮ್ಮ ಹೊಸವರುಷದ ಮೊದಲ ಫಿಟ್‌ನೆಸ್ ಆಗಿದೆ. ಪ್ರತಿ ದಿನ ನೀವು ವ್ಯಾಯಾಮ ಮಾಡುವುದರಿಂದ ಕೂಡ ನಿಮ್ಮ ದೇಹದಲ್ಲಿರುವ ಬೊಜ್ಜನ್ನು ಕಡಿಮೆಗೊಳಿಸಬಹುದು.

ಊಟದ ಸಮಯದಲ್ಲಿ ಟಿವಿ ನೋಡಬೇಡಿ

ಊಟದ ಸಮಯದಲ್ಲಿ ಟಿವಿ ನೋಡಬೇಡಿ

ಯಾವುದೇ ಕಾರಣಕ್ಕೂ ಟಿವಿ ಮುಂದೆ ಕುಳಿತುಕೊಂಡು ಊಟ ಮಾಡಬೇಡಿ. ಏಕೆಂದರೆ ನೀವು ಟಿವಿ ಮುಂದೆ ಕುಳಿತು ಊಟ ಮಾಡುತ್ತಿರುವಾಗ ನಿಮಗೆ ಗೊತ್ತಿಲ್ಲದೇ ಅವಶ್ಯಕತೆಕ್ಕಿಂತ ಹೆಚ್ಚಿನ ಆಹಾರವನ್ನು ನೀವು ಸೇವಿಸುತ್ತೀರಿ..! ಇದು ಕೂಡ ನಿಮ್ಮ ಡಯಟ್‌ಗೆ ತೊಡಕುಂಟಾಗಬಹುದು.

ಏಕಾಂಗಿಯಾಗಿ ವ್ಯಾಯಾಮ ಮಾಡಿ

ಏಕಾಂಗಿಯಾಗಿ ವ್ಯಾಯಾಮ ಮಾಡಿ

ಬೇರೆಯವರ ಸಹಾಯದೊಂದಿಗೆ ವ್ಯಾಯಾಮ ಮಾಡುವುದಕ್ಕಿಂತ, ಏಕಾಂಗಿಯಾಗಿ ವ್ಯಾಯಾಮ ಮಾಡುವುದು ಎಂದಿಗೂ ಉತ್ತಮ. ಹಾಗಾಗಿ ಹೊಸವರುಷದಲ್ಲಿ ಏಕಾಂಗಿಯಾಗಿ ತಾಲೀಮು ಮಾಡುವುದನ್ನು ಮುಂದುವರೆಸಿ.

ಆರೋಗ್ಯಯುಕ್ತ ಆಹಾರ

ಆರೋಗ್ಯಯುಕ್ತ ಆಹಾರ

ನೀವು ಡಯಟ್‌ನಲ್ಲಿರುವಾಗ, ಮೊದಲು ಆರೋಗ್ಯಕರವಾಗಿರುವ ಸಂತುಲಿತ ಆಹಾರ ಕಡೆ ಗಮನ ನೀಡುವುದು ಅತ್ಯವಶ್ಯಕ. ಸಾಮಾನ್ಯವಾಗಿ ಸೊಪ್ಪು, ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶ, ಹಾಗೂ ಪ್ರೊಟೀನ್ ಅಂಶವಿರುವುದರಿಂದ, ನಿಮ್ಮ ದೇಹವನ್ನು ಸಮತೋಲನದಲ್ಲಿಡಲು ಇದು ಸಹಕಾರಿಯಾಗಲಿದೆ.

ಹೆಚ್ಚಾಗಿ ತರಕಾರಿಗಳನ್ನು ಸೇವಿಸಿ

ಹೆಚ್ಚಾಗಿ ತರಕಾರಿಗಳನ್ನು ಸೇವಿಸಿ

ಹೊಸ ವರುಷದ ಪ್ರಾರಂಭದಿಂದಲೇ ಅಂದರೆ ಈ ತಿಂಗಳು ಪೂರ್ತಿ ತರಕಾರಿಗಳನ್ನು ಸೇವಿಸಿ ಹಾಗೂ ನಿಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಯನ್ನು ಗಮನಿಸಿ..! ಪರಿಣಿತರ ಪ್ರಕಾರ ಹೆಚ್ಚಿನ ಪ್ರಮಾಣದ ನಾನ್-ವಜ್ ಆಹಾರವು ನಿಮ್ಮನ್ನು ದೀರ್ಘ ಕಾಲದವರೆಗೆ ಆರೋಗ್ಯಕರವಾಗಿಡುವುದಿಲ್ಲ.

English summary

Fitness Tips For The New Year

source: For those of you who are self conscious about your weight and wanting to look great, we have in store for you some of the possibilities which might help you loose that flab to become fab. This year 2014, the first thing on most of your resolutions list is to loose weight and to look great.
X
Desktop Bottom Promotion