For Quick Alerts
ALLOW NOTIFICATIONS  
For Daily Alerts

ಕೊಬ್ಬಿನಿಂದ ಕೂಡಿದ ಯಕೃತ್ತಿಗೆ ಮನೆಮದ್ದು

By Poornima Heggade
|

ನಮ್ಮ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆ ನಮ್ಮ ಜೀವನದಲ್ಲಿ ಕಾಣದ ಮತ್ತು ಊಹಿಸಲಾಗದ ತೊಂದರೆಗಳನ್ನು ಉಂಟುಮಾಡುತ್ತವೆ. ಇಂತಹ ತೊಡಕುಗಳನ್ನು ನಾವು ಈಗಲೇ ನಿವಾರಿಸಿಕೊಳ್ಳದಿದ್ದರೆ, ಅದು ಮುಂದೆ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಿಮ್ಮ ಆರೋಗ್ಯದ ಮೇಲೆ ನಿಮಗೆ ಕಾಳಜಿಯಿದ್ದರೆ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಸರಿಪಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಯಕೃತ್ತಿನ ಕೊಬ್ಬಿಗೆ ಮನೆಯ ಮದ್ದನ್ನು ಮಾಡುವುದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ. ಮನೆಯಲ್ಲಿ ತಯಾರಿಸಲಾಗುವ ಔಷಧಗಳು ಹಲವು ತಲೆಮಾರುಗಳಿಂದ ಅನುಸರಿಸಲ್ಪಡುತ್ತಿವೆ. ಕೆಲವವಂತೂ ಮಾನವ ಯಕೃತ್ತಿನ ಆರೋಗ್ಯಕ್ಕೆ ಸಹಾಯಕಾರಿಯಾಗಿವೆ ಎಂದು ಸಾಬೀತಾಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ದೇಹಕ್ಕೆ ಬೇಕು ಕೊಲೆಸ್ಟ್ರಾಲ್!

ಕೊಬ್ಬಿನ ಅಂಶವಿರುವ ಯಕೃತ್ತು ಯಕೃತ್ತಿನ ಜೀವಕೋಶಗಳಲ್ಲಿ ಅನಗತ್ಯ ಕೊಬ್ಬನ್ನು ಹೆಚ್ಚಿಸಲು ಕಾರಣವಾಗುತ್ತದೆ. ಮತ್ತು ಕೆಲವು ಅಂಗಗಳ ಶಾಶ್ವತ ಹಾನಿಗೂ ಕಾರಣವಾಗುತ್ತದೆ. ಯಕೃತ್ತಿನ ಅಂಗಾಂಶಗಳಲ್ಲಿ ಉಂಟಾಗುವ ಉರಿಯೂತ ಕ್ರಿಯೆಯಿಂದ ಯಕೃತ್ತಿನ ಅಂಗಾಂಶಗಳು ಗಾಯ ಮತ್ತು ಗಟ್ಟಿಯಾಗುತ್ತದೆ.

ನೀವು ಸುರಕ್ಷಿತ ಮತ್ತು ಆರೋಗ್ಯಕರವಾಗಿ ಇರಲು ಬಯಸಿದರೆ ಯಕೃತಿನ ಕೊಬ್ಬನ್ನು ಕಡಿಮೆ ಮಾಡಲು ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಹೆಚ್ಚು ಅಗತ್ಯ. ಸೂಕ್ತವಲ್ಲದ ಆಹಾರ ಜೊತೆಗೆ, ಆಲ್ಕೊಹಾಲ್ ಸೇವನೆ, ಕೊಬ್ಬು ಲಿವರ್ ನಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗಬಹುದು.

ಅನಗತ್ಯ ಕೊಬ್ಬು ಹೆಚ್ಚಾಗಿ ನೀವು ಸೇವಿಸುವ ಆಹಾರ ವಿಧದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಸದಾ ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ. ಇಲ್ಲಿ ನಿಮ್ಮ ಯಕೃತ್ತನ್ನು ಕೊಬ್ಬಿನಿಂದ ರಕ್ಷಿಸಲು ಸಹಾಯ ಮಾಡಬಹುದಾದ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ.

ಒಂದು ಆರೋಗ್ಯಕರ ಯಕೃತ್ತಿಗೆ ಸಲಹೆಗಳು - ಕೊಬ್ಬಿನ ಯಕೃತಿನ ಕಾಳಜಿ

ಗ್ರೀನ್ ಟೀ

ಗ್ರೀನ್ ಟೀ

ಹಸಿರು ಚಹಾ ಅಥವಾ ಗ್ರೀನ್ ಟಿ ಕುಡಿಯುವುದರಿಂದ ನಿಮ್ಮ ಕೊಬ್ಬಿನ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ನಿವಾರಣೆಯಾಗಬಹುದು. ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಲುವಾಗಿ, ಆಕ್ಸಿಡೀಕರಣ ವಿರೋಧಿ ಗುಣಗಳಿರುವ ಗ್ರೀನ್ ಟಿಯನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ! ಮತ್ತು ಫಲಿತಾಂಶವನ್ನು ನೀವೇ ಕಾಣುವಿರಿ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ವಿಟಮಿನ್ ಸಿ ಅಧಿಕವಾಗಿರುವ, ಸಿಟ್ರಸ್ ರಸವನ್ನು ಮನೆಯಲ್ಲಿ ತಯಾರಿಸಿ ಸೇವಿಸಿದರೆ ಯಕೃತ್ತಿನ ಕೊಬ್ಬಿಗೆ ಗಮನಾರ್ಹ ರೀತಿಯಲ್ಲಿ ಚಿಕಿತ್ಸೆ ನೀಡುತ್ತದೆ. ಪರಿಣಾಮಕಾರಿ ಪರಿಹಾರಕ್ಕಾಗಿ ನೀವು ದಿನವೂ ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ಅಥವಾ ನಿಂಬೆ ರಸವನ್ನು ಸೇವಿಸುವುದು ಒಳ್ಳೆಯದು.

ಹಾಗಲಕಾಯಿ

ಹಾಗಲಕಾಯಿ

ಕಹಿ ರುಚಿಯನ್ನು ಹೊಂದಿರುವ ತರಕಾರಿಗಳು ಪರಿಣಾಮಕಾರಿಯಾಗಿ ಯಕೃತ್ತಿನಲ್ಲಿ ಹೆಚ್ಚುವ ಕೊಬ್ಬಿನ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ನಿಮ್ಮ ಆಹಾರದಲ್ಲಿ ಪ್ರತಿ ದಿನವೂ ಒಂದು ಲೋಟ ಈ ತರಕಾರಿಯನ್ನು ಅಳವಡಿಸಿಕೊಂಡರೆ ಉಪಶಮನವಂತೂ ಖಂಡಿತ. ನೀವು ಇದನ್ನು ರಸದ ರೂಪದಲ್ಲಿಯೂ ಬಳಸಬಹುದು.

ಹಾಲು ಕಳ್ಳಿ

ಹಾಲು ಕಳ್ಳಿ

ಹಾಲು ಕಳ್ಳಿ ಸಸ್ಯದ ಉತ್ಪನ್ನ ದೇಹದ ಅನಗತ್ಯ ಜೀವಾಣುಗಳನ್ನು ತೆಗೆದುಹಾಕಿ, ಮಾನವ ಯಕೃತ್ತಿನ ಮೇಲೆ ಅದ್ಭುತ ಪರಿಣಾಮವನ್ನು ಉಂಟುಮಾಡಬಹುದು. ಪರಿಣಾಮಕಾರಿಯಾಗಿ ಯಕೃತ್ತಿನ ಹಾನಿಗೊಳಗಾದ ಜೀವಕೋಶಗಳನ್ನು ಮೊದಲಿನಂತಾಗಿಸಲು ನಿಯಮಿತವಾಗಿ ಇದನ್ನು ಸೇವಿಸಿ.

ಧಾನ್ಯಗಳು

ಧಾನ್ಯಗಳು

ಕೊಬ್ಬಿನ ಅಂಶವುಳ್ಳ ಯಕೃತ್ತಿನ ಸಮಸ್ಯೆಯನ್ನು ನಿವಾರಿಸಲು ನೀವು ಧಾನ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಸೇವಿಸಬೇಕು. ನಿತ್ಯದ ಅಡುಗೆಯಲ್ಲಿ ಧಾನ್ಯಗಳನ್ನು ಸುಧಾರಿತ ಫಲಿತಾಂಶ ಪಡೆಯಬಹುದು. ಜೊತೆಗೆ, ಸಂಸ್ಕರಿಸಿದ ಧಾನ್ಯಗಳು ಮತ್ತು ಅದರ ಉತ್ಪನ್ನಗಳನ್ನು ಸೇವಿಸುವುದರಿಂದ ಶೀಘ್ರವಾಗಿ ಉಪಶಮನ ಕಾಣಬಹುದು.

ಟೊಮ್ಯಾಟೊ

ಟೊಮ್ಯಾಟೊ

ಈ ದೈನಂದಿನ ಅಡುಗೆಯಲ್ಲಿ ಟೊಮ್ಯಾಟೋವನ್ನು ಸೇರಿಸಿ ತಿನ್ನುವುದು ಯಕೃತ್ತಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಟೊಮ್ಯಾಟೊ, ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದೆ ಮತ್ತು ಮನೆಯಲ್ಲಿ ಕೊಬ್ಬಿನ ಚಿಕಿತ್ಸೆಗಾಗಿ ದಿನವೂ ಸೇವಿಸಬಹುದು.

ಇತರ ಮನೆಮದ್ದುಗಳು

ಇತರ ಮನೆಮದ್ದುಗಳು

ಯಕೃತ್ತಿನಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ನೈಸರ್ಗಿಕ ರೀತಿಯಲ್ಲಿ ಹಲವಾರು ಔಷಧಗಳು ಲಭ್ಯ. ಅವುಗಳಲ್ಲಿ ಕೆಲವು ರೋಸ್ಮರಿ , ಲೈಕೋರೈಸ್ , ಸೇವಂತಿಗೆ , ಮತ್ತು ನಿಮ್ಮ ದೈನಂದಿನ ಆಹಾರಗಳಲ್ಲಿ ಬಳಸಬಹುದುದಾದ ಇತರ ಗಿಡಮೂಲಿಕೆಗಳು ಸೇರಿವೆ. ಆದಾಗ್ಯೂ, ಈ ಗಿಡಮೂಲಿಕೆಗಳನ್ನು ಕೊಬ್ಬು ನಿವಾರಕವಾಗಿ ಗರ್ಭಿಣಿ ಮಹಿಳೆಯರು ಬಳಸಬಾರದು!

Read more about: health ಆರೋಗ್ಯ
English summary

Fatty Liver Cure at Home

Busy lifestyle and unhealthy food can cause unseen and unimaginable complications in our life. While some of these complications might be very minute and of no concern right now,
X
Desktop Bottom Promotion