For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಹಣ್ಣುಗಳಿಂದ ತಲೆನೋವನ್ನು ಕಡಿಮೆಗೊಳಿಸಿ

|

ತಲೆ ಇದ್ದವನಿಗೆ ತಲೆ ನೋವು ಖಂಡಿತ ಎಂಬ ಮಾತಿನಂತೆ ಬದಲಾಗುತ್ತಿರುವ ವಾತಾವರಣದಿಂದ ಆಗಾಗ್ಗೆ ನಮ್ಮನ್ನು ಕಾಡುವ ಕಾಯಿಲೆಗಳಲ್ಲಿ ತಲೆನೋವೂ ಒಂದು. ಈ ತೆಲೆನೋವು ವಿಪರೀತವಾದರಂತೂ

ಇದರ ಕಿರಿಕಿರಿ ಪ್ರಾಣಸಂಕಟಕ್ಕಿಂತಲೂ ಮಿಗಿಲು. ಎದುರಿದ್ದವರನ್ನು ಚಚ್ಚಿ ಹಾಕಬೇಕೆನ್ನುವಷ್ಟು ಸಿಟ್ಟು ಈ ತಲೆನೋವುನಿಂದ ಉಂಟಾಗುತ್ತದೆ. ನೋಯುತ್ತಿರುವ ತಲೆನೋವಿಗೆ ಥಟ್ಟನೆ ಪರಿಹಾರ ನೀಡುವ ಹಲವಾರು ಮಾತ್ರೆಗಳು ಇಂದು ಮನೆ ಮನೆಗೆ ಲಗ್ಗೆ ಇಡುತ್ತಿವೆ.

ಪ್ರತಿಯೊಬ್ಬರೂ ತಮ್ಮ ಬಳಿ ಈ ಮಾತ್ರೆಗಳ ಸಂಗ್ರಹಣೆಯನ್ನೇ ಮಾಡಿಕೊಂಡಿರುತ್ತಾರೆ. ಒಂದು ರೀತಿ ಮಾತ್ರೆ ಇಲ್ಲದೆ ನಾವಿಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಈ ನೋವು ನಿವಾರಕ ಮಾತ್ರೆಗಳು ಕ್ಷಣದಲ್ಲೆ ತಮ್ಮ ಕೆಲಸ ಪ್ರಾರಂಭಿಸಿ ತಲೆನೋವನ್ನೇ ಹೇಳಹೆಸರಿಲ್ಲದಂತೆ ಮಾಡುತ್ತದೆ ಆದರೆ ಇದರ ದುಷ್ಪರಿಣಾಮ ಒಂದಕ್ಕೆರಡರಂತೆ ನಮ್ಮನ್ನು ಕಾಡುತ್ತದೆ. ಆದರೆ ಪರಿಸ್ಥಿತಿ ನಮ್ಮನ್ನು ಮಾತ್ರೆಗೆ ಒಳಪಡುವಂತೆ ಮಾಡಿದೆ.

ನಿಮಗೆ ಯಾವಾಗಲೂ ತಲೆನೋವು ಇದ್ದು ನೋಯುತ್ತಿರುವ ತಲೆಯನ್ನು ಸಂಭಾಳಿಸುತ್ತಿರುವಾಗ, ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಹಣ್ಣುಗಳಲ್ಲಿರುವ ಮಿಟಮಿನ್‌ನ ಸತ್ಯಾಂಶಗಳೇನು?

ಆದರೂ ನೋವು ನಿವಾರಕಗಳನ್ನು ತೆಗೆದುಕೊಳ್ಳದಂತೆ ತಲೆನೋವನ್ನು ನಿವಾರಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ, ತಾಜಾ ತರಕಾರಿಗಳು ಹಾಗೂ ಹಣ್ಣುಗಳು ನಿಮ್ಮ ಸಹಾಯಕ್ಕೆ ಬರಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ

ಹೌದು ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳು ಕೆಟ್ಟ ತಲೆನೋವನ್ನು ಹೊಡೆದೋಡಿಸುತ್ತವೆ, ಬೇಯಿಸಿದ ಆಲೂಗಡ್ಡೆಯ ತಿರುಳು 600 ಎಮ್‌ಜಿ ಯಷ್ಟು ಬೃಹತ್ ಪ್ರಯೋಜನವನ್ನು ಉಂಟುಮಾಡುತ್ತದೆ.

ಬಾಳೆಹಣ್ಣುಗಳು:

ಬಾಳೆಹಣ್ಣುಗಳು:

ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ನ ಸಂಮಿಶ್ರಣ ಈ ಹಣ್ಣಿನ ತುಂಡಿನಲ್ಲಿ ಸಮ್ಮಿಳಿತವಾಗಿದೆ. ನೋಯುತ್ತಿರುವ ತಲೆಯನ್ನು ಉಪಶಮನ ಮಾಡುವಲ್ಲಿ ಮೆಗ್ನೇಶಿಯಂನ ಪಾತ್ರ ಅಪಾರವಾದುದು.

ಕಲ್ಲಂಗಡಿ:

ಕಲ್ಲಂಗಡಿ:

ಹೆಚ್ಚಿನ ಸಮಯದಲ್ಲಿ ನಿಮಗೆ ತಲೆನೋವು ಉಂಟಾದಾಗ ನೀವು ನಿರ್ಜಲೀಕರಣದಿಂದ ಬಳಲುವ ಸಾಧ್ಯತೆ ಇರುತ್ತದೆ. ನೀರಿನಿಂದ ಸಮೃದ್ಧವಾದ ಕಲ್ಲಂಗಡಿ ಹಣ್ಣು ನಿಮಗೆ ಅಪಾರ ಶಕ್ತಿಯನ್ನು ನೀಡುವ ಘನ ಅಂಶಗಳಾದ ಪೊಟ್ಯಾಶಿಯಂ ಹಾಗೂ ಮೆಗ್ನೇಶಿಯಂನ್ನು ನಿಮಗೆ ಒದಗಿಸುತ್ತವೆ.

ಪೈನಾಪಲ್:

ಪೈನಾಪಲ್:

ನಿಮ್ಮ ತಲೆಶೂಲೆಯನ್ನು ನಿವಾರಿಸುವಲ್ಲಿ ಪೈನಾಪಲ್‌ನ ಕೊಡುಗೆ ಅಪಾರವಾದುದು.

ಬ್ರೊಮಿಲಿನ್ :

ಬ್ರೊಮಿಲಿನ್ :

ನೈಸರ್ಗಿಕ ಕಿಣ್ವವಾದ ಬ್ರೊಮಿಲಿನ್ ಶತಮಾನಗಳಿಂದ ನೈಸರ್ಗಿಕ ನೋವು ನಿವಾರಕವಾಗಿ ಸಂಬಂಧವನ್ನು ಹೊಂದಿದೆ. ನಿಮ್ಮ ನೋವಿನ ವಿರುದ್ಧ ಹೋರಾಡುವ ನಿರೋಧಕ ಶಕ್ತಿಯನ್ನು ಇದು

ಉಂಟುಮಾಡುತ್ತದೆ.

 ಮುಳ್ಳುಸೌತೆ:

ಮುಳ್ಳುಸೌತೆ:

ಕಲ್ಲಂಗಡಿ ಹಣ್ಣಿನಲ್ಲಿರುವ ಸತ್ವದಂತೆ, ಮುಳ್ಳುಸೌತೆ ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ 95 ಶೇಕಡಾ ನೀರು ಆವೃತವಾಗಿದ್ದು, ನಿರ್ಜಲೀಕರಣದ ಸಮಸ್ಯೆಯನ್ನು ಹೊಡೆದೋಡಿಸಿ ನಿಮ್ಮ ತಲೆನೋವಿನ ಸಮಸ್ಯೆಗೆ ತಾಜಾ ಪರಿಹಾರವನ್ನು ನೀಡುತ್ತದೆ.

ಹೀಗೆ ಈ ಸರಳವಾದ ನೈಸರ್ಗಿಕ ತರಕಾರಿ ಫಲಗಳ ಮೂಲಕ ನಿಮ್ಮ ತಲೆಶೂಲೆಯನ್ನು ನಿವಾರಿಸಿಕೊಂಡು ಮಾತ್ರೆಯನ್ನು ಬಿಟ್ಟುಬಿಡಿ.

Read more about: health ಆರೋಗ್ಯ
English summary

DO YOU EVER GET HEADACHES?

When dealing with an aching head, it's become so easy to pop some pills.If you're trying to steer clear of pain relievers, some of the best help can come from the produce aisle.
X
Desktop Bottom Promotion