For Quick Alerts
ALLOW NOTIFICATIONS  
For Daily Alerts

ಪಿಯರ್ ಆಕಾರದ ಮಹಿಳೆಯರಿಗೆ ತೂಕ ಇಳಿಸಲು ಸೂಕ್ತ ಆಹಾರ!

By Poornima Heggade
|

ಪಿಯರ್ ಆಕಾರವನ್ನು ಹೊಂದುವುದು ದೊಡ್ಡ ಶಾಪ ಎಂದೇ ಅನೇಕ ಮಹಿಳೆಯರು ಭಾವಿಸುತ್ತಾರೆ! ಈ ಮಹಿಳೆಯರಿಗೆ ಕೆಲವು ಉತ್ತೇಜಕ ವಿಷಯವನ್ನು ಹೇಳಿದರೂ ಅವರು ಕೇಳುವುದೇ ಇಲ್ಲ ! ಆದರೆ ನೀವು ಗಂಡಸರ ಕಣ್ಣು ನಿಮ್ಮ ಮೇಲೆ ಬೀಳುವಷ್ಟು ಸುಂದರವಾದ ಆಕೃತಿಯನ್ನು ಹೊಂದಿದ್ದೀರಿ! ನಿಮಗೆ ಇನ್ನೂ ಗೊಂದಲವೇ?

ಕೊಬ್ಬು ತೊಡೆಗಳು ಮತ್ತು ಜಗ್ಗದ ಬಟ್ ಕಡಿಮೆ ಮಾಡುವುದು ಸಾಮಾನ್ಯವಾಗಿ ಕಷ್ಟದ ವಿಷಯ. ಪಿಯರ್ ಆಕಾರ ಅಷ್ಟು ಸುಂದರವಲ್ಲ. ಆದರೆ ಪಿಯರ್ ಆಕಾರವನ್ನು ಹೊಂದಿರುವುದು ಹೆಚ್ಚು ಚಿಂತೆ ಮಾಡುವ ವಿಷಯವಲ್ಲ, ನಿಮ್ಮ ದೇಹದ ಭಾಗವನ್ನು ತೆಳ್ಳಗೆ ಕಾಣುವಂತೆ ಮಾಡಲು ಕೆಲವು ಸರಳ ಆಹಾರಗಳನ್ನು ಅನುಸರಿಸಬಹುದು. ಈ ಆಹಾರಗಳು ನಿಮ್ಮಲ್ಲಿ ಕೊಬ್ಬು ಇಳಿಸಲು ಸಹಾಯ ಮಾಡಬಹುದು. ಇದು ನಿಮ್ಮನ್ನು ಸರಳ ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಸಂಶಯವಿಲ್ಲ! ಇಲ್ಲಿ ಪಿಯರ್ ಆಕಾರದ ದೇಹ ಸೌಂದರ್ಯವನ್ನು ಹೆಚ್ಚಿಸುವ ಕೆಲವು ಪ್ರಮುಖ ಆಹಾರಗಳನ್ನು ಇಲ್ಲಿ ನೀಡಲಾಗಿದೆ.

1.ಕಡಿಮೆ ಪ್ರಮಾಣದ ಕೊಬ್ಬಿನ ಆಹಾರ ಬಳಸಿ

1.ಕಡಿಮೆ ಪ್ರಮಾಣದ ಕೊಬ್ಬಿನ ಆಹಾರ ಬಳಸಿ

ಪಿಯರ್ ಆಕಾರದ ದೇಹದವರು ಸೇವಿಸಬೇಕಾದ ಆಹಾರ ಸಲಹೆಗಳಲ್ಲಿ ಒಂದು ನೀವು ಕಡಿಮೆ ಪ್ರಮಾಣದ ಕೊಬ್ಬಿನ ಆಹಾರ ವನ್ನು ಆಯ್ಕೆ ಮಾಡಬೇಕು. ನೀವು ಕಾರ್ಬೋಹೈಡ್ರೇಟ್ ಆಹಾರಗಳನ್ನು ತೆಗೆದುಕೊಳ್ಳಬಹುದು. ಟ್ಯೂನ, ಮಾಂಸ, ಕೋಳಿ ಸೇವನೆಗೆ ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಇವು ಹೆಚ್ಚು ಪ್ರೋಟೀನ್ ಹೊಂದಿದ್ದರೂ ಕೊಬ್ಬು ಕಡಿಮೆ ಪ್ರಮಾಣದಲ್ಲಿರುವ ಆಹಾರಗಳಾಗಿವೆ. ಸಾಕಷ್ಟು ಪ್ರೋಟೀನ್ ಸೇವಿಸುವುದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಪಿಯರ್ ಆಕಾರದ ದೇಹದ ತೂಕವನ್ನು ಇಳಿಸುವುದು ಹೇಗೆ ಎಂದು ಚಕಿತಗೊಂಡಿದ್ದರೆ ನೀವು ಅನುಸರಿಸಬಹುದಾದ ಆಹಾರ ಸಲಹೆಗಳಲ್ಲಿ ಇದು ಒಂದಾಗಿದೆ. ನಿಮ್ಮ ಆಹಾರದಲ್ಲಿ ಸಲಾಡ್, ಅಗಸೆ ಜೀಜದ ಎಣ್ಣೆ ಹಾಗೂ ಬೀಜಗಳನ್ನು ಸೇರಿಸಿಕೊಳ್ಳಬಹುದು.

2.ಕೊಬ್ಬು ಹೆಚ್ಚಾಗಿರುವ ಆಹಾರವನ್ನು ಸೇವಿಸದಿರಿ

2.ಕೊಬ್ಬು ಹೆಚ್ಚಾಗಿರುವ ಆಹಾರವನ್ನು ಸೇವಿಸದಿರಿ

ನಿಮ್ಮ ದೇಹದ ತೂಕ ಕಡಿಮೆ ಮಾಡಲು ಬಯಸಿದರೆ ಚೀಸ್, ಕೊಬ್ಬಿನ ಮಾಂಸ, ಮೊಸರು, ಬೆಣ್ಣೆ, ಕೆನೆ ಇತ್ಯಾದಿಗಳನ್ನು ತಿನ್ನುವುದನ್ನು ನಿಲ್ಲಿಸಿ. ಪಿಯರ್ ಆಕಾರದ ದೇಹದ ಆಹಾರ ಸಲಹೆಗಳ ಉತ್ತಮ ಫಲಿತಾಂಶಗಳನ್ನು ಕಾಣಲು ಗಂಭೀರವಾಗಿ ಇವುಗಳನ್ನು ಅನುಸರಿಸುವ ಅವಶ್ಯಕತೆಯಿದೆ. ಅಲ್ಲದೆ ಆರೋಗ್ಯಕರ ಉಪ್ಪು ಬಳಸಿ. ಇದು ಪಿಯರ್ ಆಕಾರದ ದೇಹದ ತೂಕವನ್ನು ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ಉತ್ತಮ ಸಲಹೆ.

3.ಇಷ್ಟಪಡುವ ಆಹಾರಗಳು

3.ಇಷ್ಟಪಡುವ ಆಹಾರಗಳು

ಪಿಯರ್ ಆಕಾರದ ದೇಹಕ್ಕೆ ಆಹಾರ ಸಲಹೆಗಳ ವಿಷಯಕ್ಕೆ ಬಂದಾಗ ನೀವು ಕೆಲವು ಆಹಾರಗಳನ್ನು ಇಷ್ಟಪಡಬೇಕಾದ ಅನಿವಾರ್ಯತೆ ಬರಬಹುದು! ಧಾನ್ಯಗಳು, ಗೋಧಿ, ತರಕಾರಿಗಳು, ಹಣ್ಣುಗಳು, ಕಾಳುಗಳು, ಓಟ್ಸ್, ಸಮುದ್ರ ಆಹಾರ (ಮೀನು), ಸ್ಕಿನ್ಲೆಸ್ಸ್ ಕೋಳಿ, ಟರ್ಕಿ ಸ್ತನ ಇತ್ಯಾದಿ ಆಹಾರಗಳನ್ನು ಕಟ್ಟುನಿಟ್ಟಾಗಿ ಸೇವಿಸಿ ಪಿಯರ್ ಆಕಾರದ ದೇಹದ ತೂಕವನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು.

4. ಕ್ಯಾಲ್ಸಿಯಂ ಸಮೃದ್ಧ ಆಹಾರ

4. ಕ್ಯಾಲ್ಸಿಯಂ ಸಮೃದ್ಧ ಆಹಾರ

ನೀವು ಪಿಯರ್ ಆಕಾರದ ದೇಹವನ್ನು ಹೊಂದಿದ್ದರೆ, ಆಸ್ಟಿಯೊಪೊರೋಸಿಸ್ ಬೆಳವಣಿಗೆಯ ಅಪಾಯವನ್ನು ಎದುರಿಸಬೇಕಾಗುತ್ತದೆ! ಆದ್ದರಿಂದ ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ನ್ನು ಹೆಚ್ಚಾಗಿ ಸೇರಿಸಿ. ಹಸಿರು ತರಕಾರಿ, ಬೆಳ್ಳುಳ್ಳಿ, ಹಾಲು, ಪಾಲಕ್ ಸೊಪ್ಪು, ಹೂಕೋಸು, ಮೊದಲಾದವುಗಳು ಪಿಯರ್ ಆಕಾರದ ದೇಹದ ತೂಕ ಇಳಿಸುವ ಆಹಾರ ಸಲಹೆಗಳಲ್ಲಿ ಕೆಲವು.

5. ತೇವಾಂಶ

5. ತೇವಾಂಶ

ದೇಹದಲ್ಲಿ ಡೀ ಹೈಡ್ರೇಶನ್ ಆಗದಂತೆ ನೋಡಿಕೊಳ್ಳುವುದು ನೀವು ನಿಮ್ಮ ಆಹಾರ ಕ್ರಮದಲ್ಲಿ ಪಾಲಿಸಬೇಕಾದ ಪ್ರಮುಖ ವಿಷಯಗಳಲ್ಲಿ ಒಂದು. ಇದು ಪಿಯರ್ ಆಕಾರದ ದೇಹದ ತೂಕ ಇಳಿಸಲು ಪ್ರಮುಖ ಆಹಾರ ಸಲಹೆಗಳಲ್ಲಿ ಒಂದಾಗಿದೆ. ದಿನವಿಡೀ ದೇಹದ ತೇವಾಂಶದಿಂದಿರುವುದು ನಿಮ್ಮ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದು ನಿಮ್ಮ ದೇಹದ ವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಪಿಯರ್ ಆಕಾರದಲ್ಲಿದ್ದು ಮಹಿಳೆಯರಿಗೆ ತೂಕವನ್ನು ಹೇಗೆ ಇಳಿಸುವುದು ಎಂಬ ಚಿಂತೆಯಾಗಿದ್ದರೆ ಈ ಮಾರ್ಗವನ್ನು ಮೊದಲು ಅನುಸರಿಸಿ.

6. ಸೂಕ್ತ ಪಿಯರ್ ಆಹಾರ

6. ಸೂಕ್ತ ಪಿಯರ್ ಆಹಾರ

ನೀವು ಪಿಯರ್ ಆಕಾರದ ದೇಹದದ ತೂಕ ಇಳಿಸಲು ಸೂಕ್ತವಾದ ಆಹಾರಗಳನ್ನು ಸೇವಿಸುತ್ತಿದ್ದರೆ, ಈ ಅಂಶಗಳನ್ನು ಗಮನದಲ್ಲಿಡಿ!

ಕ್ಯಾಲ್ಸಿಯಂ ಭರಿತ ಒಂದು ಆಹಾರ

10% ಆರೋಗ್ಯಕರ ಕೊಬ್ಬು

45% ಸಂಕೀರ್ಣ ಕಾರ್ಬೋಹೈಡ್ರೇಟ್

45% ನೇರ ಪ್ರೋಟೀನ್‌ಗಳು.

ನೀವು ಆಹಾರವನ್ನು ಸೇವಿಸುವ ಮೊದಲು ನಿಮ್ಮ ಆಹಾರ ಎಲ್ಲಾ ಅವಶ್ಯಕ ಅಂಶಗಳನ್ನು ಒಳಗೊಂಡಿದೆಯೇ ಎಂಬುದನ್ನು ನೋಡಿ. ಆಹಾರ ಸೇವನೆಯನ್ನು ತಪ್ಪಿಸುವುದು ನಿಮ್ಮ ದೇಹದ ತೂಕವನ್ನು ತಗ್ಗಿಸಲು ಯಾವುದೇ ರೀತಿಯಲ್ಲೂ ಆರೋಗ್ಯಕರ ಪರಿಹಾರವಲ್ಲ. ಇದು ಕೇವಲ ನಿಮ್ಮನ್ನು ದುರ್ಬಲ ಮತ್ತು ರೋಗ ಪೀಡಿತರನ್ನಾಗಿ ಮಾಡುತ್ತದೆ. ಕಟ್ಟುನಿಟ್ಟಾದ ವರ್ಕ್ ಔಟ್ ಜೊತೆಗೆ ಆರೋಗ್ಯಕರ ಆಹಾರ ಅನುಸರಿಸಿ ಮತ್ತು ನಿಮ್ಮ ದೇಹದಲ್ಲಾಗುವ ಬದಲಾವಣೆಯ ಮ್ಯಾಜಿಕ್ ನ್ನು ನೋಡಿ ! ಹೀಗೆ ಪಿಯರ್ ಆಕಾರದ ಮಹಿಳೆಯರಿಗೆ ತೂಕವನ್ನು ಇಳಿಸುವುದು ಹೇಗೆ ಎನ್ನುವ ಗೊಂದಲಗಳಿಗೆ ನಮ್ಮ ಉತ್ತರ !

Read more about: health ಆರೋಗ್ಯ
English summary

Diet tips for pear shaped women

Being pear shaped is one of the biggest curses, think many women! There is however something exciting for these women to hear! You are the most appealing in the eyes of your opposite sex! Are you still worried?
Story first published: Friday, February 21, 2014, 13:57 [IST]
X
Desktop Bottom Promotion