For Quick Alerts
ALLOW NOTIFICATIONS  
For Daily Alerts

ಎದೆಯುರಿಗೆ ತಂಪು ನೀರು ನೈಸರ್ಗಿಕ ಪರಿಹಾರ ಹೇಗೆ?

|

ಎದೆ ಮತ್ತು ಗಂಟಲಲ್ಲಿ ಅಜೀರ್ಣದಿಂದ ಉಂಟಾಗುವ ಉರಿಯ ಅನುಭವವೇ ಎದೆಯುರಿಯಾಗಿದೆ. ಗ್ಯಾಸ್ಟ್ರಿಕ್ ಜ್ಯೂಸ್‌ಗಳ ಹೆಚ್ಚುವರಿ ಉತ್ಪಾದನೆ ಇದಕ್ಕೆ ಕಾರಣವಾಗಿದೆ. ಹೊಟ್ಟೆಯಿಂದ ಗ್ಯಾಸ್ಟ್ರಿಕ್ ಜ್ಯೂಸ್‌ಗಳು ಅನ್ನನಾಳಕ್ಕೆ ಬರುತ್ತವೆ ಮತ್ತು ಗ್ಯಾಸ್ಟ್ರಿಕ್ ಜ್ಯೂಸ್‌ನಲ್ಲಿರುವ ಏಸಿಡಿಕ್ ಸ್ವಭಾವವು ಉರಿತದ ಅನುಭವವನ್ನು ಉಂಟುಮಾಡುತ್ತದೆ. ಈ ಎದೆಯುರಿಯನ್ನು ನೈಸರ್ಗಿಕ ಪರಿಹಾರಗಳ ಮೂಲಕ ಗುಣಪಡಿಸಬಹುದು.

ಎದೆಯುರಿಯನ್ನು ಸಾಮಾನ್ಯವಾಗಿ ಹೆಚ್ಚಿನವರು ಅನುಭವಿಸುತ್ತಾರೆ. ಅತಿಯಾಗಿ ತಿನ್ನುವುದು, ಎಣ್ಣೆ ಅಂಶದ ಆಹಾರ ವಸ್ತುಗಳ ಅಧಿಕ ಸೇವನೆ, ಸಾಕಷ್ಟು ದೈಹಿಕ ಪರಿಶ್ರಮ ಮಾಡದಿರುವುದು ಅನಾರೋಗ್ಯಕರ ಜೀವನ ಕ್ರಮ ಎದೆಯುರಿಯನ್ನುಂಟು ಮಾಡುವ ಮೂಲ ಕಾರಣಗಳು. ಇಂದಿನ ಲೇಖನದಲ್ಲಿ ಎದೆಯುರಿಯನ್ನು ಉಪಚರಿಸುವ ಕೆಲವೊಂದು ಮನೆಮದ್ದುಗಳ ಬಗ್ಗೆ ಚರ್ಚಿಸೋಣ

ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

Cold Water: A Natural Remedy For Heartburn

1.ತಂಪು ನೀರು
ಎದೆಯುರಿಯನ್ನು ಉಪಚರಿಸುವಲ್ಲಿ ತಂಪು ನೀರಿನ ಪಾತ್ರ ಹಿರಿದು. ಒಂದು ಲೋಟದಷ್ಟು ಶೀತಲ ನೀರು ದೇಹದ ದ್ರವಗಳನ್ನು ಸ್ಥಿರ ಅಥವಾ ತಟಸ್ಥಗೊಳಿಸುತ್ತವೆ. ಗಂಟಲು ಮತ್ತು ಎದೆಯ ಉರಿಯನ್ನು ತಂಪು ನೀರು ಶಮನಗೊಳಿಸುತ್ತದೆ. ಆದ್ದರಿಂದ ನಿಮಗೆ ಎದೆಯುರಿ ಉಂಟಾದಾಗ ಒಂದು ಲೋಟದಷ್ಟು ತಂಪು ನೀರನ್ನು ಕುಡಿಯಿರಿ ಮತ್ತು ಸಣ್ಣ ವಾಕ್ ಮಾಡಿ. ನಿಮ್ಮ ಗಂಟಲಿನೆಡೆಗೆ ನುಗ್ಗಿ ಬರುವ ಏಸಿಡ್‌ನ ವೇಗ ನಿಧಾನಗೊಳ್ಳುತ್ತದೆ. ತುಂಬಾ ತಂಪಾಗಿರುವ ನೀರನ್ನು ಕುಡಿಯಬೇಡಿ ಎಂಬುದರ ಬಗ್ಗೆಯೂ ಕಾಳಜಿ ಇರಲಿ.

2.ಸೋಡಾ ಬೆರೆತ ತಂಪು ನೀರು
ಎದೆಯುರಿಗೆ ಇದು ಇನ್ನೊಂದು ನೂಸರ್ಗಿಕ ಉಪಶಮನವಾಗಿದೆ. ನೀವು ಸಾಕಷ್ಟು ಏಸಿಡಿಟಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ನೀವು ತಂಪು ನೀರಿಗೆ ಬೇಕಿಂಗ್ ಸೋಡಾವನ್ನು ಸೇರಿಸಿ ಕುಡಿಯಲೇಬೇಕು. ಸೋಡಾ ಏಸಿಡ್ ಹಿಮ್ಮುಖವಾಗಿ ಹರಿಯುವುದನ್ನು ತಡೆಗಟ್ಟಿ ಉರಿತದ ಅನುಭವದಿಂದ ದೇಹಕ್ಕೆ ಬಿಡುಗಡೆ ನೀಡುತ್ತದೆ. ರಕ್ತದೊತ್ತಡದ ಸಮಸ್ಯೆ ಉಳ್ಳವರು ಮತ್ತು ಗರ್ಭಿಣಿಯರು ಸೋಡಾವನ್ನು ಉಪಯೋಗಿಸಬಾರದು. ರಕ್ತದೊತ್ತಡದ ಸಮಸ್ಯೆ ಮತ್ತು ಗರ್ಭಿಣಿಯರಿಗೆ ಆರೋಗ್ಯಕರವಾಗಿಲ್ಲದ ದೇಹದಲ್ಲಿ ನೀರನ್ನು ಉಳಿಸಿಕೊಳ್ಳುವ ಸಮಸ್ಯೆಯನ್ನು ಸೋಡಾವು ಉಂಟುಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಭರಿತ ಸಿಹಿ ಆಲೂಗಡ್ಡೆ ಸೇವನೆಯ ಪ್ರಯೋಜನ

3.ದಿನದಲ್ಲಿ ಅಂತಿಮವಾಗಿ ಸೇವಿಸುವುದು
ಇದು ಎದೆಯರಿಯನ್ನು ನಿವಾರಿಸುವ ಇನ್ನೊಂದು ಮನೆಮದ್ದಾಗಿದೆ. ಎದೆಯುರಿಯನ್ನು ಉಪಚರಿಸಲು, ಮಲಗುವ ಮುಂಚೆ ತಂಪು ನೀರನ್ನು ಕೊನೆಯದಾಗಿ ತೆಗೆದುಕೊಳ್ಳಬೇಕು. ಯಾವುದೇ ಅನಾರೋಗ್ಯಕರ ಆಹಾರ ಸೇವಿಸಿ ರಾತ್ರಿ ಉಂಟಾಗುವ ಎದೆಯುರಿಯನ್ನು ತಂಪು ನೀರು ನಿಲ್ಲಿಸುತ್ತದೆ. ರಾತ್ರಿಯಲ್ಲಿ ಉಂಟಾಗುವ ಎದೆಯುರಿಯನ್ನು ನಿವಾರಿಸಲು ಸ್ವಲ್ಪ ತಣ್ಣಗಿರುವ ನೀರನ್ನು ಸೇವಿಸಿ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹಗುರಗೊಳಿಸಿ ಏಸಿಡ್‌ಗಳ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

4.ಏಸಿಡಿಕ್ ಆಹಾರವನ್ನು ತಪ್ಪಿಸಿ
ಶೀತಲ ಅಥವಾ ತಂಪು ನೀರನ್ನು ಕುಡಿದಂತೆ ಎದೆಯುರಿ ನಿಯಂತ್ರಗೊಳ್ಳುತ್ತದೆ ಮತ್ತು ಇದರೊಂದಿಗೆ ನಾವು ಕೂಡ ಸೂಕ್ತವಾದ ಆಹಾರ ನಿಯಮಗಳನ್ನು ಪಾಲಿಸಬೇಕು. ನೀವು ತಿನ್ನುವುದರತ್ತ ಮೊದಲು ಗಮನ ಹರಿಸಿ. ತುಂಬಾ ಏಸಿಡಿಕ್ ಆಗಿರುವ ಖಾರವುಳ್ಳ ಮತ್ತು ಎಣ್ಣೆಯಿರುವ ಆಹಾರಗಳನ್ನು ಸೇವಿಸದಿರಿ. ಇದು ಏಸಿಡಿಕ್ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅದೇ ರೀತಿ ರಾತ್ರಿ ಸಮಯದಲ್ಲಿ ಹಾಲು ಅಥವಾ ತಂಪು ಪಾನೀಯಗಳನ್ನು ಸೇವಿಸದಿರಿ. ಪಾನೀಯದಲ್ಲಿರುವ ಕೊಬ್ಬಿನ ಅಂಶ ಎದೆಯ ಉರಿಯನ್ನು ವರ್ಧಿಸುತ್ತದೆ. ತಂಪು ಹಾಲು ನಿಮಗೆ ಸ್ವಲ್ಪ ಸಮಯದವರೆಗೆ ಎದೆಯುರಿಯನ್ನು ಕಡಿಮೆ ಮಾಡಬಹುದು. ತಂಪು ಹಾಲಿನಲ್ಲಿರುವ ಕೊಬ್ಬು ದೇಹದಲ್ಲಿ ಏಸಿಡ್ ಉತ್ಪಾದನೆಯನ್ನು ಏರಿಸುತ್ತದೆ.

Read more about: health ಆರೋಗ್ಯ
English summary

Cold Water: A Natural Remedy For Heartburn

Heartburn is the burning sensation in the chest and throat because of indigestion. This is due to excess production of gastric juices. The gastric juices tend to come up from the stomach to the oesophagus and the acidic nature of the gastric juices causes the burning sensation.
Story first published: Friday, February 14, 2014, 13:04 [IST]
X
Desktop Bottom Promotion