For Quick Alerts
ALLOW NOTIFICATIONS  
For Daily Alerts

ಪಪ್ಪಾಯಿ ಹಣ್ಣಿನ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳು

|

ಪಪ್ಪಾಯಿ ಹಣ್ಣಿನಲ್ಲಿ (ಪರಂಗಿ ಹಣ್ಣು) ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇವೆ. ಪರಂಗಿ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರುತ್ತವೆ ಮತ್ತು ಪೋಷಕಾಂಶಗಳು ಅಧಿಕವಾಗಿರುತ್ತವೆ. ಡಯಟ್ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಹ ಆಹಾರವಾಗಿದೆ.

ಇದರಲ್ಲಿರುವ ಆರೋಗ್ಯಕರ ಮತ್ತು ವೈಧ್ಯಕೀಯ ಪ್ರಯೋಜನಗಳಿಂದಾಗಿ ಇದು ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಲ್ಲಿದೆ. ಇದರಿಂದಲೆ ಕ್ರಿಸ್ಟೋಫರ್ ಕೊಲಂಬಸ್ ಇದಕ್ಕೆ " ದ ಫ್ರೂಟ್ ಆಫ್ ದಿ ಏಂಜೆಲ್ಸ್"' ಎಂದು ಹೆಸರಿದನು. ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ

ಪಪ್ಪಾಯಿ ಹಣ್ಣು ಜೀರ್ಣಶಕ್ತಿಗೆ ಪ್ರಯೋಜನಕಾರಿ

ಪಪ್ಪಾಯಿ ಹಣ್ಣು ಜೀರ್ಣಶಕ್ತಿಗೆ ಪ್ರಯೋಜನಕಾರಿ

ಪರಂಗಿ ಹಣ್ಣಿನಲ್ಲಿ ಪಪೈನ್ ಮತ್ತು ಚಿಮೊಪಪೈನ್ ಎಂಬ ಅಂಶಗಳು ಇರುತ್ತವೆ, ಇವು ಸ್ವಾಭಾವಿಕವಾಗಿ ಜೀರ್ಣ ಕ್ರಿಯೆಗೆ ಸಹಕರಿಸುತ್ತವೆ. ಈ ಪ್ರೊಟಿಯೊಲಿಟಿಕ್ ಕಿಣ್ವಗಳು ಪ್ರೊಟೀನ್‍ಗಳನ್ನು ಸರಳ ರೂಪಕ್ಕೆ ಅಂದರೆ, ಅಮೈನೊ ಆಮ್ಲಗಳಾಗಿ ಪರಿವರ್ತಿಸುತ್ತದೆ. ಹೀಗೆ ಜೀರ್ಣ ಕ್ರಿಯೆಯು ಸುಗಮವಾಗಿ ಆಗುತ್ತದೆ. ಪಪ್ಪಾಯಿ ಹಣ್ಣು ತನ್ನಲ್ಲಿರುವ ಅಧಿಕ ಡಯಟೆರಿ ಫೈಬರ್‌ನಿಂದಾಗಿ ಮಲಬದ್ಧತೆ ಮತ್ತು ಅಜೀರ್ಣತೆಗೆ ಒಳ್ಳೆಯ ಔಷಧಿಯಾಗಿರುತ್ತದೆ. ಕೆಲವೊಮ್ಮೆ ಜೀರ್ಣಕ್ರಿಯೆಗೆ ಸಹಕರಿಸುವ ದ್ರವವು ಕಡಿಮೆಯಾಗಿಬಿಡುತ್ತದೆ. ಆದ್ದರಿಂದ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಈ ದ್ರವವು ಉತ್ಪಾದನೆಯಾಗಿ ಕಿಣ್ವಗಳು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಹೃದ್ರೋಗದ ಚಿಕಿತ್ಸೆಗೆ ಪಪ್ಪಾಯಿ ಹಣ್ಣು

ಹೃದ್ರೋಗದ ಚಿಕಿತ್ಸೆಗೆ ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿಗು ಮತ್ತು ಹೃದಯದ ಆರೋಗ್ಯಕ್ಕು ಒಳ್ಳೆಯ ಸಂಬಂಧವಿದೆ. ಪಪ್ಪಾಯಿ ಹಣ್ಣಿನ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇವುಗಳು ಮೈಯೊಕಾರ್ಡಿಯಲ್ ಇನ್‍ಫ್ರಾಕ್ಷನ್, ಮಧುಮೇಹ ಮತ್ತು ಪಾರ್ಶ್ವವಾಯುಗಳನ್ನು ನಿಯಂತ್ರಿಸುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ ಪ್ರೊ-ಕ್ಯಾರೋಟಿನೋಯ್ಡ್ ಫೈಟೋನ್ಯೂಟ್ರಿಯೆಂಟ್‍ಗಳು ಸಹ ಹೃದಯಕ್ಕೆ ತುಂಬ ಒಳ್ಳೆಯದು. ಇನ್ನು ಇದರಲ್ಲಿರುವ ಪೊಟಾಶಿಯಂ ಹೃದಯದ ಎದೆ ಬಡಿತಕ್ಕೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಮದ್ದಾಗಿರುತ್ತದೆ.

ಕ್ಯಾನ್ಸರ್ ನಿಯಂತ್ರಣಕ್ಕೆ ಪಪ್ಪಾಯಿ ಹಣ್ಣು

ಕ್ಯಾನ್ಸರ್ ನಿಯಂತ್ರಣಕ್ಕೆ ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣಿನಲ್ಲಿರುವ ಆಂಟಿ-ಆಕ್ಸಿಡೆಂಟ್‍ಗಳು ದೇಹವನ್ನು ಕ್ಯಾನ್ಸರ್ ಕಾರಕ ಕೋಶಗಳ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಪಪ್ಪಾಯಿಯಲ್ಲಿರುವ ಡಯಟೆರಿ ಫೈಬರ್‌ಗಳು ಕೋಲನ್‍ನಲ್ಲಿ ಕ್ಯಾನ್ಸರ್ ಉಂಟು ಮಾಡುವ ಕೋಶಗಳನ್ನು ಹೊರ ದಬ್ಬುತ್ತದೆ. ವಿಟಮಿನ್ ಸಿ,ಇ, ಲೈಕೊಪೀನ್, ಬೀಟಾ-ಕ್ಯಾರೋಟಿನ್ ಮತ್ತು ಬೀಟಾ-ಕ್ರೈಪ್ಟೊಕ್ಸಾಂತಿನ್‍ಗಳು ಕ್ಯಾನ್ಸರನ್ನು, ಅದರಲ್ಲೂ ಕೋಲನ್ ಕ್ಯಾನ್ಸರನ್ನು ತಡೆಯುವಲ್ಲಿ ಯಶಸ್ವಿಯಾಗಿ ಸಹಕರಿಸುತ್ತದೆ.

ನಾಸಿಯಾ ಚಿಕಿತ್ಸೆಯಲ್ಲಿ ಪಪ್ಪಾಯಿ ಹಣ್ಣು

ನಾಸಿಯಾ ಚಿಕಿತ್ಸೆಯಲ್ಲಿ ಪಪ್ಪಾಯಿ ಹಣ್ಣು

ಪರಂಗಿಹಣ್ಣು ನಾಸಿಯಾ, ಮಾರ್ನಿಂಗ್ ಸಿಕ್‍ನೆಸ್ ಮತ್ತು ಬೇಧಿಯಾದಾಗ ಕಾಡುವ ಮಂಕುತನದ ಚಿಕಿತ್ಸೆಯಲ್ಲಿ ಅತ್ಯುತ್ತಮವಾಗಿ ಸಹಕರಿಸುತ್ತದೆ. ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಇದು ಗರ್ಭಿಣಿಯರಿಗು ಸಹ ಉಪಕಾರಿ. ಗರ್ಭಿಣಿಯಾದಾಗ ಕಾಡುವ ಮುಂಜಾನೆಯ ಮಂಕುತನದ ನಿವಾರಣೆಗಾಗಿ ಪರಂಗಿ ಹಣ್ಣನ್ನು ಸೇವಿಸಬಹುದು. ಆದರೆ ಇದನ್ನು ಸೇವಿಸುವ ಮೊದಲು ವೈಧ್ಯರನ್ನು ಕಂಡು ಸಲಹೆಗಳನ್ನು ಪಡೆಯುವುದು ಉತ್ತಮ. ನಾಸಿಯಾ ಆದಾಗ ಪರಂಗಿಹಣ್ಣನ್ನು ಅನಾನಸ್ ಜೊತೆಗೆ ತೆಗೆದುಕೊಳ್ಳುವುದರಿಂದ ಒಳ್ಳೆಯ ಬೆಳವಣಿಗೆಯನ್ನು ಕಾಣಬಹುದು. ಪರಂಗಿಹಣ್ಣಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಫೋಲೆಟ್‍ಗಳು ಬೇಧಿಯಾದಾಗ ನಿಮಗೆ ಆರಾಮವನ್ನು ನೀಡುತ್ತವೆ.

ಪರಂಗಿಹಣ್ಣು ಜಂತು ಹುಳುಗಳನ್ನು ನಿವಾರಿಸುತ್ತದೆ

ಪರಂಗಿಹಣ್ಣು ಜಂತು ಹುಳುಗಳನ್ನು ನಿವಾರಿಸುತ್ತದೆ

ಪರಂಗಿಹಣ್ಣು ಹೊಟ್ಟೆಯಲ್ಲಿರುವ ಜಂತು ಹುಳುಗಳನ್ನು ನಿವಾರಿಸುತ್ತದೆ. ಪರಂಗಿಹಣ್ಣನ್ನು ಜೇನು ತುಪ್ಪದೊಂದಿಗೆ ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳುವುದರಿಂದ ಇದಕ್ಕೆ ಪರಿಹಾರವನ್ನು ಕಾಣಬಹುದು. ಪರಂಗಿ ಹಣ್ಣಿನ ಬೀಜಗಳು, ಎಲೆಗಳು ಮತ್ತು ಹಾಲಿನ ಮಿಶ್ರಣವು ಸಹ ಜಂತು ಹುಳುಗಳನ್ನು ಸಾಯಿಸಬಲ್ಲವು.

ಪರಂಗಿಹಣ್ಣು ಲೈಂಗಿಕ ಕ್ರಿಯೆಗೆ ಪ್ರಯೋಜನಕಾರಿ

ಪರಂಗಿಹಣ್ಣು ಲೈಂಗಿಕ ಕ್ರಿಯೆಗೆ ಪ್ರಯೋಜನಕಾರಿ

ಪರಂಗಿಹಣ್ಣು ಗಂಡಸರಲ್ಲಿ ವೀರ್ಯಾಣುಗಳನ್ನು ಅಧಿಕ ಮಾಡುತ್ತದೆ. ಪರಂಗಿಹಣ್ಣಿನಲ್ಲಿ ಅರ್ಗನೈನ್ ಎಂಬ ಕಿಣ್ವಗಳು ಇರುತ್ತವೆ. ಇವುಗಳು ಜನನಾಂಗದ ಸುತ್ತ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತದೆ. ಅರ್ಗನೈನ್ ನೈಟ್ರಿಕ್ ಆಮ್ಲದ ಜೊತೆಗೆ ಪ್ರಬಲವಾಗಿ ವರ್ತಿಸುತ್ತವೆ. ಇದು ಜನನಾಂಗದ ಸುತ್ತ ಇರುವ ಸ್ನಾಯುಗಳನ್ನು ಮೃದುಗೊಳಿಸುತ್ತದೆ. ಪರಂಗಿಹಣ್ಣನ್ನು ನಿತ್ಯ ಸೇವಿಸುವುದರಿಂದ ಲಿಂಗ ನಿಮಿರುವಿಕೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ಪರಂಗಿಹಣ್ಣು ವಯಸ್ಸಾಗುವುದನ್ನು ತಡೆಯುತ್ತದೆ

ಪರಂಗಿಹಣ್ಣು ವಯಸ್ಸಾಗುವುದನ್ನು ತಡೆಯುತ್ತದೆ

ಪರಂಗಿಹಣ್ಣು ಅವಧಿ ಪೂರ್ವ ವಯಸ್ಸಾಗುವುದನ್ನು ತಡೆಯುತ್ತದೆ. ಇದರಲ್ಲಿರುವ ಫೈಟೊ-ನ್ಯೂಟ್ರಿಯೆಂಟ್‍ಗಳ ಪರಿಣಾಮವಾಗಿ, ಇದು ಜಠರದಲ್ಲಿರುವ ಆಹಾರ ಸುಲಭವಾಗಿ ಕರಗುವಂತೆ ಮಾಡುತ್ತದೆ. ಇದರ ಸಿಪ್ಪೆಯನ್ನು 5 ನಿಮಿಷಗಳ ಕಾಲ ಮುಖದ ಮೇಲೆ ಉಜ್ಜಿದರೆ, ಅದು ತ್ವಚೆಗೆ ಹೊಳಪನ್ನು ನೀಡುತ್ತದೆ. ಇದಕ್ಕೆ ಕಾರಣ ಇದರಲ್ಲಿರುವ ಅಲ್ಫ್ಸ್-ಹೈಡ್ರಾಕ್ಸಿ ಆಮ್ಲಗಳು. ಆದರೂ ಪರಂಗಿಹಣ್ಣನ್ನು ಅಧಿಕ ಸಮಯದವರೆಗೆ ಮುಖದ ಮೇಲೆ ಹಚ್ಚಿ ಸುಮ್ಮನೆ ಬಿಡಬಾರದು. ಅದು ಮುಖದಲ್ಲಿ ತುರಿಕೆಯನ್ನು ತರುತ್ತದೆ. ಪರಂಗಿಹಣ್ಣು ಮತ್ತು ಹಾಲಿನ ಮಿಶ್ರಣವನ್ನು ಮುಖದ ಮೇಲೆ ಹಚ್ಚಿದಾಗ, ಅದು ಬ್ಲಾಕ್ ಹೆಡ್, ಮೊಡವೆ ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಇ, ಮತ್ತು ಕ್ಯಾರೊಟಿನ್‍ಗಳು ಸಹ ನೆರಿಗೆಗಳನ್ನು ನಿವಾರಿಸಲು ಸಹಕರಿಸುತ್ತವೆ. ಪರಂಗಿಹಣ್ಣು ದೇಹವನ್ನು ತನ್ನಲ್ಲಿರುವ ನಂಜು ನಿವಾರಕ ಗುಣಗಳಿಂದ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ ಮತ್ತು ತ್ವಚೆಗೆ ಹೊಳಪನ್ನು ಮತ್ತು ಮೃದುತ್ವವನ್ನು ನೀಡುತ್ತದೆ.

ತೂಕ ಇಳಿಸಿಕೊಳ್ಳಲು ಪರಂಗಿಹಣ್ಣು

ತೂಕ ಇಳಿಸಿಕೊಳ್ಳಲು ಪರಂಗಿಹಣ್ಣು

ಪರಂಗಿಹಣ್ಣು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಹೇಳಿ ಮಾಡಿದ ಹಣ್ಣಾಗಿದೆ. ಇದರಲ್ಲಿ ಕ್ಯಾಲೊರಿಗಳು ಸ್ವಾಭಾವಿಕವಾಗಿ ಕಡಿಮೆಯಿರುತ್ತವೆ. ಜೊತೆಗೆ ಪೋಷಕಾಂಶಗಳು ಅಧಿಕವಾಗಿರುತ್ತವೆ. ಇದರ ಜೊತೆಗೆ ಇದು ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಅಧಿಕ ಆಹಾರ ಸೇವನೆಯನ್ನು ತಡೆಯುತ್ತದೆ. ಇದಕ್ಕೆ ಇದರಲ್ಲಿರುವ ಅಧಿಕ ನಾರಿನಂಶವೇ ಕಾರಣ. ಜೊತೆಗೆ ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಹೀಗೆ ಇದು ದೇಹದ ಕಾರ್ಯ ವೈಖರಿಯ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತದೆ.

English summary

Best Health Benefits of Eating Papaya

Papaya has many health benefits. Papaya is low in calories, nutritionally rich; therefore, it is one of the best foods for those who are on diet. Due to its many health and medicinal benefits; it is used widely all over the world. The fruit has given the name “The Fruit of the Angels” by Christopher Columbus.
Story first published: Friday, November 14, 2014, 15:45 [IST]
X
Desktop Bottom Promotion