For Quick Alerts
ALLOW NOTIFICATIONS  
For Daily Alerts

ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು

|

ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸಲು ನಾವು ವಿಭಿನ್ನ ರೀತಿಯ ಪಾನಿಯಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ನೀರಿನ ಅಂಶ ಹೆಚ್ಚಿರುವ ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಿಸಿಲಿನ ಧಗೆ ಹೆಚ್ಚಿರುವಾಗ ಇವುಗಳನ್ನು ತಿನ್ನಬೇಡಿ

ಬೇಸಿಗೆಯ ಕಾಲದಿನ ಕಳೆದಂತೆ ಬಿಸಿಲಿನ ಧಗೆಗೆ ಆಗಾಗ ಬಾಯಾರಿಕೆಯಾಗುತ್ತಿರುತ್ತದೆ. ನೀರು, ಜ್ಯೂಸ್ ಕುಡಿದರೂ ಬಾಯಾರಿಕೆ ನಿಲ್ಲುವುದಿಲ್ಲ. ಅಲ್ಲದೆ ಬೇಗನೆ ಸುಸ್ತಾಗುತ್ತದೆ. ಈ ಸಮಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರಕ್ರಮದಲ್ಲಿ ಕೆಲವೊಂದು ಬದಲಾವಣೆ ತರಬೇಕು. ಬೇಸಿಗೆಯ ಡಯಟ್‌ನಲ್ಲಿ ಈ ಕೆಳಗಿನ ಆಹಾರವನ್ನು ಸೇರಿಸಿದರೆ ತೂಕ ಕಡಿಮೆಯಾಗುವುದು ಮತ್ತು ದೇಹದ ಆರೋಗ್ಯ ಕೂಡ ಹೆಚ್ಚುತ್ತದೆ

ಹಣ್ಣುಗಳನ್ನು ತಿಂದು ರೋಗವನ್ನು ದೂರವಿರಿಸಿ ಎಂಬ ನಾಣ್ಣುಡಿ ನಮಗೆಲ್ಲಾ ತಿಳಿದಿರುವಂಥದ್ದು. ಪ್ರತಿಯೊಂದು ಹಣ್ಣೂ ಕೂಡ ಅತ್ಯಧಿಕ ಪೋಷಕಾಂಶಗಳು ನ್ಯೂಟ್ರಿನ್‌ಗಳನ್ನು ತನ್ನಲ್ಲಿ ಯಥೇಚ್ಛವಾಗಿ ತುಂಬಿಕೊಂಡಿವೆ. ಊಟದ ನಂತರ ಅಥವಾ ಮೊದಲು ಹಣ್ಣನ್ನು ತಿನ್ನುವುದು ಒಳ್ಳೆಯದು ಎಂಬ ಪ್ರತೀತಿ ಆರೋಗ್ಯಕಾರಿ ದೇಹಕ್ಕೆ ಹೇಳಿ ಮಾಡಿಸಿದಂತಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ

ಅದರಲ್ಲೂ ಹಣ್ಣುಗಳು ದೇಹದ ಹೆಚ್ಚಿನ ಕೊಬ್ಬನ್ನು ಇಳಿಸುವಲ್ಲಿ ಸಹಾಯಕವಾಗಿವೆ. ನಿಮಗೆಷ್ಟು ಸಾಧ್ಯವೋ ಅಷ್ಟು ಹಣ್ಣನ್ನು ಸೇವಿಸಿ ನಿಮ್ಮ ಪರಿಪೂರ್ಣ ತೂಕವನ್ನು ತಲುಪಬಹುದೆಂದು ಯಾವಾಗಲೂ ಜನರು ಸೂಚಿಸುತ್ತಾರೆ.
ಬೇಸಿಗೆಯ ಡಯಟ್‌ನಲ್ಲಿ ಈ ಕೆಳಗಿನ ಆಹಾರವನ್ನು ಸೇರಿಸಿದರೆ ತೂಕ ಕಡಿಮೆಯಾಗುವುದು ಮತ್ತು ದೇಹದ ಆರೋಗ್ಯ ಕೂಡ ಹೆಚ್ಚುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಸಿಗೆಯಲ್ಲಿ ಬರುವ ಮೊಡವೆ ನಿವಾರಿಸಲು 10 ಟಿಪ್ಸ್

ಕಲ್ಲಂಗಡಿ:

ಕಲ್ಲಂಗಡಿ:

ಕಲ್ಲಂಗಡಿ, ಕರ್ಬೂಜ ಹಣ್ಣುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ತಿನ್ನಬೇಕು. ಈ ಹಣ್ಣುಗಳನ್ನು ತಿನ್ನುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಕೂಡ ಒಳ್ಳೆಯದು. ಸೆಕೆಗೆ ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ಮಾವಿನ ಹಣ್ಣು:

ಮಾವಿನ ಹಣ್ಣು:

ಮಾವಿನ ಹಣ್ಣಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಸನ್ ಟ್ಯಾನ್ ಹೋಗಲಾಡಿಸಲು, ಸೆಕೆಯಲ್ಲಿ ಕೂದಲಿಗೆ ಕವಲೊಡೆಯದಂತೆ ತಡೆಯಲು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆ ಹೊಳಪು ಹೆಚ್ಚುತ್ತದೆ. ಅಲ್ಲದ ವಿಟಮಿನ್ ಸಿ ಇದ್ದು ಇದು ದೇಹದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ತುಂಬಾ ತೆಳ್ಳಗೆ ಇದ್ದವರು ಇದನ್ನು ತಿನ್ನುವುದು ಒಳ್ಳೆಯದು. ದಪ್ಪಗಿದ್ದವರು ಮಿತಿಯಲ್ಲಿ ತಿನ್ನಬೇಕು.

ಬೀಟ್‌ರೂಟ್:

ಬೀಟ್‌ರೂಟ್:

ಬೀಟ್‌ರೂಟ್‌ನಲ್ಲಿ ವಿಟಮಿನ್ ಸಿ, ಬಿ3, ಬಿ6 ಇದ್ದು ದೇಹದಲ್ಲಿರುವ ಕಶ್ಮಲಗಳನ್ನು ಹೊರಗೆ ಹಾಕುತ್ತದೆ. ಅಲ್ಲದೆ ದೇಹದಲ್ಲಿ ರಕ್ತ ಹೆಚ್ಚಾಗುವಂತೆ ಮಾಡುತ್ತದೆ.

ಸೇಬುಹಣ್ಣುಗಳು:

ಸೇಬುಹಣ್ಣುಗಳು:

ಇವುಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಸಕ್ಕರೆ ಅಂಶ ಕಡಿಮೆ ಇರುವ ಹೊರತಾಗಿಯೂ, ಸೇಬು ತನ್ನಲ್ಲಿ ವಿಟಮಿನ್ ಸಿ ಮತ್ತು ಜೀವಾಣುಗಳನ್ನು ವರ್ಜಿಸುವ ನಾರಿನಂಶ ಮತ್ತು ಕೊಲೆಸ್ಟ್ರಾಲ್ ನಿರ್ವಹಣೆಗೆ ಸಹಾಯ ಮಾಡುತ್ತದೆ, ಬೇಸಿಗೆಯ ಕಾಲದಲ್ಲಿ ಈ ಹಣ್ಣು ನಿಮಗೆ ಇನ್ನಷ್ಟು ತಂಪು ನೀಡುವುದರ ಜೊತೆಗೆ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

ನಿಂಬೆ ಹಣ್ಣಿನ ಜ್ಯೂಸ್:

ನಿಂಬೆ ಹಣ್ಣಿನ ಜ್ಯೂಸ್:

ದಿನಕ್ಕೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಒಂದು ಲೋಟ ನಿಂಬೆ ಜ್ಯೂಸ್ ಕುಡಿದರೆ ತೂಕ ಕಮ್ಮಿಯಾಗುವುದರ ಜೊತೆಗೆ ಆಹಾರದಲ್ಲಿರುವ ಅಸಿಡಿಟಿ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

English summary

Best Food To Beat Summer Heat

In the time of summer to stay hydrated and active for the whole day, you can opt for healthy fluids like fruit juices and cold drinks. At the same time if you want fit and to beat summer heat.
X
Desktop Bottom Promotion