For Quick Alerts
ALLOW NOTIFICATIONS  
For Daily Alerts

6 ಪ್ಯಾಕ್ ಆಬ್ಸ್ ಗೆ ಅತ್ಯುತ್ತಮ ವ್ಯಾಯಾಮಗಳು

By Hemanth P
|

ಇಂದಿನ ದಿನಗಳಲ್ಲಿ ಬಾಲಿವುಡ್ ನಟರನ್ನು ನೋಡಿ ಪ್ರತಿಯೊಬ್ಬರಿಗೂ ಸಿಕ್ಸ್ ಪ್ಯಾಕ್ ಆಬ್ಸ್ ನ ಬಯಕೆಯಾಗುತ್ತದೆ. ಯುವತಿಯರನ್ನು ಸೆಳೆಯುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಇದು ಕೇವಲ ಯುವತಿಯರನ್ನು ಸೆಳೆಯುವುದು ಮಾತ್ರವಲ್ಲದೆ, ಜೀವನದಲ್ಲಿ ನಿಮ್ಮ ಆತ್ಮವಿಶ್ವಾಸ ಹಾಗೂ ಮನೋಭಾವ ಸುಧಾರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಗಲ್ಲ ದೃಢವಾಗಿಸಲು ವ್ಯಾಯಾಮಗಳು

ಆದರೆ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಬಾಲಿವುಡ್ ನಟರು ಹಾಗೂ ಸ್ಟಾರ್ ಗಳು ಈ ಬಗ್ಗೆ ಒಂದು ಧನಾತ್ಮಕ ಭಾವನೆ ಮೂಡಿಸಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್ಸ್ ಇರುವವರು ಬಿಗಿಯಾದ ಶರ್ಟ್ ಹಾಕಿಕೊಂಡು ನಡೆದರೆ ಆಗ ಎಲ್ಲಾ ಯುವತಿಯರ ಕಣ್ಣು ಅವರ ಮೇಲಿರುತ್ತದೆ.

Best exercises to get 6 pack abs

ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು ಮಾನಸಿಕ ಹಾಗೂ ದೈಹಿಕವಾಗಿ ಅಧಿಕ ಶ್ರಮದ ಅಗತ್ಯವಿದೆ. ಇದಕ್ಕಾಗಿ ಮೊದಲಿಗೆ ನೀವು ಜೀವನಶೈಲಿಯನ್ನು ಅಂದರೆ ಆಹಾರ ಕ್ರಮ ಮತ್ತು ದೈಹಿಕ ಚಟುವಟಿಕೆ ಬದಲಾಯಿಸಬೇಕು. ನೀವು ಜಂಕ್ ಫುಡ್ ಹಾಗೂ ಕಾರ್ಬೋಹೈಡ್ರೆಟ್ಸ್ ಕಡಿಮೆ ಮಾಡಿ ಅಧಿಕ ಪ್ರೋಟೀನ್, ಕಡಿಮೆ ಕೊಬ್ಬು ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ಆಲೂ ಪರಾಟ ಮತ್ತು ಬರ್ಗರ್ ಬಿಟ್ಟುಬಿಡುವುದು ಅಷ್ಟು ಸುಲಭದ ಕೆಲಸವಲ್ಲ. ಸಿಕ್ಸ್ ಪ್ಯಾಕ್ ಆಬ್ಸ್ ನ್ನು ಪಡೆಯಲು ಆರೋಗ್ಯಕರ ಜೀವನಶೈಲಿಗೆ ಬಲವಾದ ಸಂಕಲ್ಪ ಅತ್ಯಗತ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : ಮಧುಮೇಹ ನಿಯಂತ್ರಿಸುವ ವ್ಯಾಯಾಮಗಳು

ಒಮ್ಮೆ ಆಹಾರಕ್ರಮ ಮತ್ತು ಜೀವನಶೈಲಿ ಸರಿಮಾಡಿಕೊಂಡರೆ ಮತ್ತೆ ಇರುವುದು ಕಠಿಣ ವ್ಯಾಯಾಮ. ನೀವು ಜಿಮ್ ಗೆ ಹೋಗಿ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಬಹುದು ಅಥವಾ ಮನೆಯಲ್ಲೇ ಕೆಲವೊಂದು ವ್ಯಾಯಾಮಗಳನ್ನು ಮಾಡಿಕೊಂಡು ನಿಮ್ಮ ದೇಹ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯುವಂತಾಗಬಹುದು. ಕ್ರಂಚ್ ನಿಂದ ಹಿಡಿದು ಪ್ರೆಸ್ ತನಕ ನೀವು ನಿಯಮಿತವಾಗಿ ಕಠಿಣ ವ್ಯಾಯಾಮ ಮಾಡುವ ಮೂಲಕ 6 ಪ್ಯಾಕ್ ಆಬ್ಸ್ ಪಡೆಯಬಹುದು.

1. ಲಾಂಗ್ ಆರ್ಮ್ ಕ್ರಂಚ್
ಬೆನ್ನ ಮೇಲೆ ಮಲಗಿಕೊಂಡು ಮಂಡಿಗಳನ್ನು ಬಾಗಿಸಿ ಮತ್ತು ಕೈಗಳನ್ನು ನೇರವಾಗಿಸಿಕೊಂಡು ಹಿಂದಕ್ಕಿಡಿ. ಕೈಗಳನ್ನು ನಿಮ್ಮ ತಲೆಯ ಹಿಂದಕ್ಕೆ ನೇರವಾಗಿಡಿ ಮತ್ತು ಸಾಂಪ್ರದಾಯಿಕ ಕ್ರಂಚ್ ಮಾಡಿ. ಚಲನೆಯು ತುಂಬಾ ನಿಧಾನ ಮತ್ತು ನಿಯಂತ್ರಿತವಾಗಿರಬೇಕು.

2. ರಿವರ್ಸ್ ಕ್ರಂಚ್
ಬೆನ್ನ ಮೇಲೆ ಮಲಗಿ ಮತ್ತು ಕೈಗಳನ್ನು ತಲೆಯ ಹಿಂದೆ ಹಿಟ್ಟುಕೊಳ್ಳಿ, ನಿಮ್ಮ ಎದೆಯ ಸಮೀಪಕ್ಕೆ ಮಂಡಿಗಳನ್ನು 90 ಡಿಗ್ರಿಯಲ್ಲಿ ಬಾಗಿಸಿ. ಕಾಲುಗಳು ಜತೆಗಿರಲಿ. ನಿಮ್ಮ ಆಬ್ಸ್ ಗಳು ಸಂಕುಚಿವಾಗುವಂತೆ ಸೊಂಟವನ್ನು ನೆಲದಿಂದ ಮೇಲೆತ್ತಿ, ಇದರ ಬಳಿಕ ಎರಡು ಕಾಲುಗಳನ್ನು ಆಕಾಶದತ್ತ ಮೇಲೆತ್ತಿ ಬಳಿಕ ನಿಧಾನವಾಗಿ ಅದರ ಮೂಲ ಭಂಗಿಗೆ ತಂದು ನೆಲಕ್ಕೆ ಮುಟ್ಟುವಂತೆ ಮಾಡಿದೆ. ಇದರಿಂದ ನಿಮ್ಮ ಆಬ್ಸ್ ಸತತವಾಗಿ ಕ್ರಿಯಾಶೀಲವಾಗುತ್ತದೆ.

3. ಜಾಕ್ನೈಫ್
ನೆಲದ ಮೇಲೆ ಒಂದು ಚಾಪೆ ಹಾಸಿ, ಬೆನ್ನನ್ನು ನೆಲಕ್ಕೆ ತಾಗಿಸಿ ಮಲಗಿ ಮತ್ತು ಕೈಗಳನ್ನು ತಲೆಯ ಮೇಲೆ ತೆಗೆದುಕೊಂಡು ಹೋಗಿ. ಕಾಲು ಮತ್ತು ಕೈಗಳನ್ನು ಜತೆಯಾಗಿ ಆಕಾಶದತ್ತ ಕೊಂಡುಹೋಗಿ. ನಿಮ್ಮ ಕಾಲ್ಬೆರಗಳು ಬೆರಳುಗಳನ್ನು ಮುಟ್ಟಲಿ, ಬಳಿಕ ನೀವು ಮೊದಲಿನ ಭಂಗಿಗೆ ಬನ್ನಿ.

4. ಎಕ್ಸ್ಟೆಂಡೆಡ್ ಪ್ಲ್ಯಾಂಕ್
ಪ್ರೆಸ್ ಅಪ್ ಭಂಗಿಗೆ ಬನ್ನಿ, ನಿಮ್ಮ ಕೈಗಳನ್ನು 10 ಇಂಚಿನಲ್ಲಿ ನಿಮ್ಮ ಭುಜದ ನೇರಕ್ಕಿರಲಿ. ನಿಮ್ಮ ಕಾಲ್ಬೆರಳುಗಳು ನೆಲಕ್ಕೆ ವಿರುದ್ಧ ದಿಕ್ಕಿನಲ್ಲಿರಲಿ. ಬೆನ್ನು ನೇರವಾಗಿಟ್ಟುಕೊಂಡು ಈ ಭಂಗಿಯಲ್ಲಿರಿ ಮತ್ತು ಸಾಮಾನ್ಯವಾಗಿ ಉಸಿರಾಡುವುದನ್ನು ಮುಂದುವರಿಸಿ.

5. ಬೈಸಿಕಲ್
ಈ ವ್ಯಾಯಾಮವು ನಿಮ್ಮ ಬೆನ್ನು ಮತ್ತು ಬದಿಗಳನ್ನು ಗುರಿಯಾಗಿಸುತ್ತದೆ. ಅದೇ ರೀತಿ ಮೇಲಿನ ಹಾಗೂ ಕೆಳಭಾಗದ ಆಬ್ಸ್ ಗಳನ್ನು ಕೂಡ. ಯೋಗ ಮ್ಯಾಟ್ ನಂತಹ ಅತ್ಯಂತ ಮೃದುವಾದ ನೆಲದಲ್ಲಿ ಮಲಗಿ ಮತ್ತು ಗಾಳಿಯಲ್ಲಿ ಸೈಕಲ್ ತುಳಿಯುವಂತೆ ಮಾಡಿ. ಇದೇ ವೇಳೆ ಭುಜಗಳನ್ನು ಮಂಡಿಯ ವಿರುದ್ಧಕ್ಕೆ ಎತ್ತಿ. ಎರಡು ಬದಿಯಲ್ಲಿ ಇದೇ ರೀತಿ ಮಾಡಿ. 12 ರೆಪ್ಸ್ ಗಳ 2 ಸೆಟ್ಸ್ ಮಾಡುವುದು ಒಳ್ಳೆಯ ಆರಂಭ.

6. ಟ್ರಂಕ್ ರೊಟೇಶನ್
ಡಮ್ ಬೆಲ್ ಅಥವಾ ಮೆಡಿಸಿಲ್ ಬಾಲ್ ನೊಂದಿಗೆ ಕುಳಿತುಕೊಳ್ಳುವ ಭಂಗಿಗೆ ಬನ್ನಿ, ಮಂಡಿಗಳನ್ನು ಮಡಚಿ ಮತ್ತು ಪಾದಗಳು ನೆಲದ ಮೇಲೆ ನೇರವಾಗಿರಲಿ. ಆಬ್ಸ್ ಕಾರ್ಯನಿರ್ವಹಿಸುವಂತೆ ಆಗಲು ಸ್ವಲ್ಪ ಹಿಂದಕ್ಕೆ ಬಾಗಿ. ಮೊಣಕೈಯನ್ನು ಬಾಗಿಸಿ, ಭಾರವನ್ನು ಕೋರ್ ಗೆ ಹತ್ತಿರವಾಗಿ ಹಿಡಿಯಿರಿ ಮತ್ತು ಒಂದು ಬದಿಯಿಂದ ಇನ್ನೊಂದು ಬದಿಗೆ ಇದನ್ನು ವರ್ಗಾಯಿಸಿ. ಪ್ರತೀ ಸಲ ರೊಟೇಶನ್ ನ ಅಂತ್ಯದ ವೇಳೆ ವಿರಾಮ ತೆಗೆದುಕೊಳ್ಳಿ.

English summary

Best exercises to get 6 pack abs

There is no better way to impress a pretty lady than with a 6 pack abs. It works wonders in not only impressing and scoring on females, it also improves ones confidence and attitude in life.
X
Desktop Bottom Promotion