For Quick Alerts
ALLOW NOTIFICATIONS  
For Daily Alerts

ಅಲೋವೆರಾ ಜ್ಯೂಸ್ ನ ಆರೋಗ್ಯ ಲಾಭಗಳು

By Hemanth P
|

ಕೈಂಗಟಿಕೊಳ್ಳುವಂತಹ ಲೋಳೆ ಇರುವಂತಹ ಹಸಿರು ಬಣ್ಣದ ಎಲೆ ಅಲೋವೆರಾದ ಅದು ಕಂಡುಬರುವುದಕ್ಕಿಂತ ಹೆಚ್ಚಿನ ಗುಣಗಳನ್ನು ಹೊಂದಿದೆ. ಅಲೋವೆರಾವನ್ನು ಗಾಯ, ಸುಟ್ಟುಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುತ್ತದೆ. ಅಲೋವೆರಾ ಜ್ಯೂಸ್ ನಲ್ಲಿ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳಿವೆ.

ಅಲೋ ಜ್ಯೂಸ್ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದ್ದು, ಇದನ್ನು ದಿನದಲ್ಲಿ ಒಂದು ಸಲ ಕುಡಿಯಬೇಕು. ಆಲೋವೆರಾದಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಜ್ಯೂಸ್ ನಲ್ಲಿ ಒಳ್ಳೆಯ ಪ್ರಮಾಣದ ಅಮಿನೋ ಆ್ಯಸಿಡ್ ಮತ್ತು ಫ್ಯಾಟಿ ಆ್ಯಸಿಡ್ ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು.

ಅಲೋವೆರಾ ಜ್ಯೂಸ್ ನಲ್ಲಿರುವ ಹಲವಾರು ರೀತಿಯ ಪೌಷ್ಠಿಕಾಂಶಗಳು ದೇಹದಲ್ಲಿನ ಹಾನಿಗೊಳಗಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸಲು ನೆರವಾಗುತ್ತದೆ. ಜ್ಯೂಸ್ ದೇಹದ ಪ್ರತಿರಕ್ಷಣೆ ಹೆಚ್ಚಿಸಿ ಹೊರಗಿನ ವಾತಾವರಣಕ್ಕೆ ದೇಹವು ಹೊಂದಿಕೊಳ್ಳುವಂತೆ ಮಾಡುತ್ತದೆ. ದೇಹಕ್ಕೆ ಅಗತ್ಯವಿರುವ ಮತ್ತು ಕಡಿಮೆಯಿರುವ ಕೆಲವೊಂದು ಪೌಷ್ಠಿಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಋತುಚಕ್ರದ ವೇಳೆ ಮಾಡಬಹುದಾದ 7 ವ್ಯಾಯಾಮಗಳು

ಜ್ಯೂಸ್ ಬಹುಪಯೋಗಿ ಮತ್ತು ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ. ಇದರಲ್ಲಿನ ಕೆಲವೊಂದು ಆರೋಗ್ಯ ಲಾಭಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

1. ವಿಷ ಹೊರಹಾಕುತ್ತದೆ

1. ವಿಷ ಹೊರಹಾಕುತ್ತದೆ

ಅಲೋವೆರಾ ಜ್ಯೂಸ್ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ನಮ್ಮ ದೇಹದಲ್ಲಿರುವ ಕೆಲವೊಂದು ವಿಷಕಾರಿ ಅಂಶಗಳು ಚರ್ಮದ ಜೀವಕೋಶಗಳು, ದೇಹದ ವ್ಯವಸ್ಥೆಯ ಕಾರ್ಯನಿರ್ವಹಣೆ ಮತ್ತು ಅಂಗಾಂಗಗಳ ಕಾರ್ಯಚಟುವಟಿಕೆಗೆ ತೊಂದರೆ ಉಂಟುಮಾಡುತ್ತದೆ. ಮಾಲಿನ್ಯ, ಜಂಕ್ ಫುಡ್, ಅನಾರೋಗ್ಯಕರ ಜೀವನಶೈಲಿ ಮತ್ತು ಧೂಮಪಾನ ಮತ್ತು ಆಲ್ಕೋಹಾಲ್ ನಂತಹ ಕೆಲವೊಂದು ಕೆಟ್ಟ ಹವ್ಯಾಸಗಳು ವಿಷಕಾರಿ ಅಂಶಗಳ ಶೇಖರಣೆಗೆ ಪ್ರಮುಖ ಕಾರಣಗಳು. ಅಲೋವೆರಾ ಜ್ಯೂಸ್ ನಲ್ಲಿ ಮಿನರಲ್ಸ್, ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಮತ್ತು ಇತರ ಕೆಲವೊಂದು ಪೌಷ್ಠಿಕಾಂಶಗಳಿವೆ. ಇವು ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ಶುದ್ದವಾಗಿಡುತ್ತದೆ.

2. ದೇಹದ ತೂಕ ಕಳಕೊಳ್ಳಲು

2. ದೇಹದ ತೂಕ ಕಳಕೊಳ್ಳಲು

ದಿನಕ್ಕೆ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ನಿಂದ ದೇಹದ ತೂಕ ಕಡಿಮೆ ಮಾಡಿ ಅದನ್ನು ನಿರ್ವಹಿಸಲು ನೆರವಾಗುತ್ತದೆ. ಇದು ಹೊಟ್ಟೆ ಕ್ಲೀನ್ ಮಾಡಿ ಚಯಾಪಚಯಾ ಕ್ರಿಯೆ ಸರಿಯಾಗಿರಲು ನೆರವಾಗುತ್ತದೆ. ತೂಕ ಹೆಚ್ಚಿಸುವ ಅನಗತ್ಯ ಅಂಶಗಳನ್ನು ಅದು ತೆಗೆದುಹಾಕುತ್ತದೆ. ಅಲೋವೆರಾ ಜ್ಯೂಸ್ ನಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿರುವ ಬೊಜ್ಜು ಕಡಿಮೆ ಮಾಡಲು ನೆರವಾಗುತ್ತದೆ. ಅಲೋವೆರಾ ಜ್ಯೂಸ್ ಕುಡಿದರೆ ಹಸಿವಿನ ಕಡುಬಯಕೆ ನಿವಾರಣೆಯಾಗುತ್ತದೆ. ಇದರಿಂದ ಆಹಾರ ಸೇವನೆ ಕಡಿಮೆಯಾಗುತ್ತದೆ. ತೂಕ ಕಳಕೊಳ್ಳುವಂತೆ ಮಾಡಲು ಅಲೋವೆರಾ ಜ್ಯೂಸ್ ನೆರವಾಗುತ್ತದೆ.

3. ಹಲ್ಲಿನ ಆರೋಗ್ಯ

3. ಹಲ್ಲಿನ ಆರೋಗ್ಯ

ಆಲೋವೆರಾ ಜ್ಯೂಸ್ ನಲ್ಲಿ ಸೂಕ್ಷ್ಮಜೀವಿ ಪ್ರತಿರೋಧಕ ಗುಣಗಳಿವೆ. ಇದು ನಿಮ್ಮ ಒಸಡು ಮತ್ತು ಹಲ್ಲುಗಳನ್ನು ಶುಚಿಯಾಗಿಡುತ್ತದೆ. ಅಲೋವೆರಾ ಜ್ಯೂಸ್ ಮೌಥ್ ಪ್ರೆಶನರ್ ರೀತಿ ಕೆಲಸ ಮಾಡಿ, ಬಾಯಿ ದುರ್ವಾಸನೆ ತಡೆಯುತ್ತದೆ. ಅಲೋವೆರಾ ಜ್ಯೂಸ್ ಬಾಯಿಯ ಹುಣ್ಣು ಮತ್ತು ಒಸಡಿನಿಂದ ರಕ್ತ ಬರುವ ಸಮಸ್ಯೆಯನ್ನು ತಡೆಯುತ್ತದೆ. ಹಲ್ಲಿನ ಸಮಸ್ಯೆಗಳಿಗೆ ಅಲೋವೆರಾ ಜ್ಯೂಸ್ ಅತ್ಯುತ್ತಮ.

4. ಶಕ್ತಿ ಹೆಚ್ಚಿಸುತ್ತದೆ

4. ಶಕ್ತಿ ಹೆಚ್ಚಿಸುತ್ತದೆ

ಅಲೋವೆರಾ ಜ್ಯೂಸ್ ನ್ನು ಪ್ರತೀದಿನ ಶಕ್ತಿ ವರ್ಧಕ ಪಾನೀಯವಾಗಿ ಬಳಸಬಹುದು. ಯಾಕೆಂದರೆ ಇದರಲ್ಲಿ ಪೌಷ್ಠಿಕಾಂಶ, ವಿಟಮಿನ್ ಮತ್ತು ಮಿನರಲ್ ಅಗಾಧ ಪ್ರಮಾಣದಲ್ಲಿದೆ ಮತ್ತು ಇದು ದೇಹದ ವ್ಯವಸ್ಥೆಗೆ ಶಕ್ತಿ ನೀಡುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಅಂಗಾಂಗಗಳ ಚಟುವಟಿಕೆಯನ್ನು ಇದು ಪ್ರಚೋದಿಸುತ್ತದೆ. ಇದರಿಂದ ಅಲೋವೆರಾ ಜ್ಯೂಸ್ ಆರೋಗ್ಯಕ್ಕೆ ಲಾಭಕಾರಿ. ಜ್ಯೂಸ್ ನಲ್ಲಿ ಬಹುಉಪಯೋಗಿ ಮಟ್ಟದ ಪೌಷ್ಠಿಕಾಂಶಗಳಿದ್ದು, ಇದು ದೇಹದ ಆರೋಗ್ಯ ಮತ್ತು ಪ್ರತಿರಕ್ಷಣೆಯನ್ನು ಸುಧಾರಿಸುತ್ತದೆ.

5. ಆರೋಗ್ಯಕರ ಚರ್ಮ ಮತ್ತು ಕೂದಲು

5. ಆರೋಗ್ಯಕರ ಚರ್ಮ ಮತ್ತು ಕೂದಲು

ಅಲೋವೆರಾ ಜ್ಯೂಸ್ ಹಾನಿಗೊಳಗಾದ ಚರ್ಮದ ಜೀವಕೋಶಗಳನ್ನು ಸರಿಪಡಿಸಿ, ಚರ್ಮ ಕಾಂತಿಯುಕ್ತ ಮತ್ತು ಸುಂದರವಾಗುವಂತೆ ಮಾಡುತ್ತದೆ. ಅಲೋವೆರಾ ಜ್ಯೂಸ್ ಚರ್ಮ ಸರಿಪಡಿಸಲು ಮತ್ತು ಪುನರ್ಚೇತನ ಪಡೆಯಲು ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ. ನಿಯಮಿತವಾಗಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ ಮತ್ತು ಚರ್ಮವು ಯುವ ಹಾಗೂ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ. ಅದೇ ರೀತಿ ಕೂದಲನ್ನು ಕೂಡ. ಅಲೋವೆರಾ ಜ್ಯೂಸ್ ಕೂದಲಿನ ಕಿರುಚೀಲಗಳ ಬೆಳವಣಿಗೆ ಮತ್ತು ವಿನ್ಯಾಸವನ್ನು ಸುಧಾರಿಸುತ್ತದೆ. ಇದು ಅಲೋವೆರಾ ಜ್ಯೂಸ್ ನ ಕೆಲವೊಂದು ಆರೋಗ್ಯ ಲಾಭಗಳು.

English summary

Aloe vera juice health benefits

Aloe vera juice consists of ample amount of nutrients, minerals and vitamins that are essential for the body. Aloe juice is thus considered healthy and should be taken once a day.
X
Desktop Bottom Promotion