For Quick Alerts
ALLOW NOTIFICATIONS  
For Daily Alerts

ಪ್ರೊಸ್ಟೇಟ್ ಕ್ಯಾನ್ಸರ್ ತಡೆಯಲು 8 ಮಾರ್ಗಗಳು

By Deepak M
|

ಪ್ರೊಸ್ಟೇಟ್ ಎಂಬುದು ಜನನೇಂದ್ರಿಯಗಳಲ್ಲಿ ಕಂಡು ಬರುವ ಒಂದು ಗ್ರಂಥಿಯಾಗಿದೆ. ಪ್ರತಿ ಆರು ಜನ ಗಂಡಸರಲ್ಲಿ ಒಬ್ಬರಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರು ಪ್ರೊಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿರುತ್ತದೆ. 2012ರಲ್ಲಿ ಸುಮಾರು 2.41,000 ಗಂಡಸರಲ್ಲಿ ಇದು ಇರುವುದು ಪತ್ತೆಯಾಗಿತ್ತು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಿತ್ತಜನಕಾಂಗದ ರೋಗಕ್ಕೆ ಪರಿಣಾಮಕಾರಿ ಮನೆ ಮದ್ದುಗಳು

ಒಂದಾನೊಂದು ಕಾಲದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ "ಮುದುಕರ ಕಾಯಿಲೆ" ಯಾಗಿ ಹೆಸರಾಗಿತ್ತು. ಆದರೆ ಇಂದು ಇದು ಯುವಕರಲ್ಲಿಯು ಸಹ ಕಂಡು ಬರುತ್ತಿದೆ. ಅದರಲ್ಲೂ ಅಮೆರಿಕಾದಲ್ಲಿ ಈ ಕಾಯಿಲೆ ಇಂದು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದ್ದೆ. ಈ ಕ್ಯಾನ್ಸರನ್ನು "ಗುಣಪಡಿಸಲಾಗುತ್ತದೆಯೇ?" ಎಂಬ ವಿಚಾರವನ್ನು ನಿಮ್ಮ ವೈಧ್ಯರು ನಿಮಗೆ ತಿಳಿಸುತ್ತಾರೆ.

ಇದರ ಕುರಿತಾಗಿ ಹೆದರುವ ಮೊದಲು ಈ ಕಾಯಿಲೆಯಿಂದ ಭಾದಿತರಾದವರನ್ನು ಒಮ್ಮೆ ಸಂಪರ್ಕಿಸಿ. ಅವರ ಜೀವನಗಳು ಒಂದೇ ರೀತಿಯಾಗಿರುವುದಿಲ್ಲ.ಈ ಕ್ಯಾನ್ಸರ್ ಬಂದಾಗ ತೆಗೆದುಕೊಳ್ಳುವ ಚಿಕಿತ್ಸೆಯ ಪರಿಣಾಮವಾಗಿ ಹಲವು ಅಡ್ಡ ಪರಿಣಾಮಗಳನ್ನು ನಾವು ಕಾಣಬಹುದು. ಅದರಲ್ಲಿ ನಿಮಿರುವಿಕೆಯ ಸಮಸ್ಯೆ ಮತ್ತು ಇಂದ್ರಿಯ ನಿಗ್ರಹದ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಇದರ ಜೊತೆಗೆ ಮತ್ತೆ ಕ್ಯಾನ್ಸರ್ ಕಾಡುವ ಸಮಸ್ಯೆ ಇದ್ದದ್ದೆ. ಆದರೂ ಸಹ ಪ್ರೊಸ್ಟೇಟ್ ಕ್ಯಾನ್ಸರನ್ನು ತಡೆಯಲು ಹಲವಾರು ಮಾರ್ಗೋಪಾಯಗಳು ಇವೆ. ಅದರ ಕುರಿತಾಗಿ ಹೆದರುವವರಿಗೆ ಮತ್ತು ಅದರಿಂದ ಹೊರಬರಲು ಹವಣಿಸುತ್ತಿರುವವರಿಗಾಗಿ ನಾವು ಇಲ್ಲಿ ಕೆಲವೊಂದು ನಿವಾರಣೋಪಾಯಗಳನ್ನು ನೀಡಿದ್ದೇವೆ.

ಪ್ರೊಸ್ಟೇಟ್ ಕ್ಯಾನ್ಸರ್‌ನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರತಿ ಯುವಕರು ತಿಳಿದಿರಬೇಕಾದ 9 ಮಾರ್ಗಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿ ತಿಳಿದುಕೊಳ್ಳಿ.

ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರಲ್ಲಿ ಪರೀಕ್ಷೆ ನಡೆಸಿ.

ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯರಲ್ಲಿ ಪರೀಕ್ಷೆ ನಡೆಸಿ.

ಮೊದಲಿಗೆ ಗಂಡಸರು ಪ್ರೊಸ್ಟೇಟ್ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸಬೇಕೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಈ ಕ್ಯಾನ್ಸರ್ ಇರುವುದನ್ನು ಪ್ರೊಸ್ಟೇಟ್ - ಸ್ಪೆಸಿಫಿಕ್ ಅಂಟಿಜೆನ್ (PSA) ಪರೀಕ್ಷೆಯ ಮುಖಾಂತರ ಖಚಿತ ಪಡಿಸಿಕೊಳ್ಳಲಾಗುತ್ತದೆ. ಈ ಚರ್ಚೆ ಏನೇ ಇರಲಿ ಪ್ರತಿಯೊಬ್ಬರೂ ತಾವು ಈ ವ್ಯಾಧಿಗೆ ತುತ್ತಾಗಿದ್ದೇವೆಯೇ ಅಥವಾ ಇಲ್ಲವೆ ಎಂದು ತಿಳಿದುಕೊಳ್ಳುವ ಹಕ್ಕು ಇದ್ದೇ ಇದೆ. PSA ಪರೀಕ್ಷೆಯ ಜೊತೆಗೆ ಡಿಜಿಟಲ್ ರೆಕ್ಟಲ್ ಎಕ್ಸಾಮಿನೇಷನ್ (DRE) ಗಳು ಈ ಕಾಯಿಲೆಯ ಕುರಿತಾಗಿ ಪ್ರತಿಯೊಬ್ಬರಿಗೂ ಖಚಿತ ಮಾಹಿತಿಗಳನ್ನು ನೀಡುತ್ತವೆ.

ಕ್ಯಾನ್ಸರನ್ನು ಕೊಲ್ಲುವ ಆಹಾರವನ್ನು ಸೇವಿಸಿ:

ಕ್ಯಾನ್ಸರನ್ನು ಕೊಲ್ಲುವ ಆಹಾರವನ್ನು ಸೇವಿಸಿ:

ಪ್ರೊಸ್ಟೇಟ್ ಕ್ಯಾನ್ಸರನ್ನು ಕೊಲ್ಲುವ ಆಹಾರವನ್ನು ನಾವು ನಿತ್ಯ ಸೇವಿಸಿ ಈ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಕ್ಯಾನ್ಸರನ್ನು ಕೊಲ್ಲುವಂತಹ ಆಹಾರವು ಸಹ ನಮಗೆ ಸುಲಭವಾಗಿ ದೊರೆಯುತ್ತದೆ. ಏಕೆಂದರೆ ನೈಸರ್ಗಿಕವಾಗಿ ಕ್ಯಾನ್ಸರನ್ನು ಕೊಲ್ಲುವ ಆಹಾರಗಳು ನಮ್ಮ ದೈನಂದಿನ ಜೀವನದಲ್ಲಿ ದೊರೆಯುತ್ತವೆ. ಯಾವುದು ಅಂತಹವುಗಳೆಂದು ಕುತೂಹಲವೇ?, ಬ್ರೊಕ್ಕೊಲಿ, ಹೂ ಕೋಸು, ಸೊಪ್ಪು, ಮತ್ತು ಎಲೆ ಕೋಸುಗಳು ಕ್ಯಾನ್ಸರನ್ನು ನಿಯಂತ್ರಿಸುತ್ತವೆ. ಈ ಎಲ್ಲಾ ತರಕಾರಿಗಳಲ್ಲಿ ಗ್ಲುಕೊಸಿನೊಲೇಟ್ಸ್ ಎಂಬ ಕ್ಯಾನ್ಸರ್ ನಿರೋಧಕ ಅಂಶಗಳು ಇರುತ್ತವೆ.

 ಎಚ್ಚರಿಕೆಯ ಕಡೆ ಗಮನ ಕೊಡಿ:

ಎಚ್ಚರಿಕೆಯ ಕಡೆ ಗಮನ ಕೊಡಿ:

ಆರೋಗ್ಯಕರವಾದ ಆಹಾರದ ಜೊತೆಗೆ ಸ್ವಾಭಾವಿಕ ಪೂರಕಗಳನ್ನು ಸಹ ತೆಗೆದುಕೊಳ್ಳುವ ಮೂಲಕ ಆರೋಗ್ಯಕರವಾದ ಪ್ರೊಸ್ಟೇಟನ್ನು ಹೊಂದಬಹುದು. ಇದರ ಜೊತೆಗೆ ಪ್ರೊಸ್ಟೇಟ್ ಬೆಳೆಯದಂತೆ ( ಬೆನಿಗ್ನ್ ಪ್ರೊಸ್ಟಟಿಕ್ ಹೈಪರ್‌ಲಸಿಯ, BPH) ತಡೆಯುವ ಮತ್ತು ಪ್ರೊಸ್ಟಾಟಿಸ್ ಬರದಂತೆ ತಡೆಯಬೇಕು. ಏಕೆಂದರೆ ಈ ಎರಡು ಸ್ಥಿತಿಗಳು ಗಂಡಸರನ್ನು ಪ್ರೊಸ್ಟೇಟ್ ಕ್ಯಾನ್ಸರಿನ ಅಪಾಯಕ್ಕೆ ಸಿಲುಕಿಸುತ್ತವೆ. ನಿಮಗೆ ಪ್ರೊಸ್ಟೇಟ್ ಕ್ಯಾನ್ಸರಿನ ಅಪಾಯದ ಮುನ್ಸೂಚನೆಗಳು ಸಿಗುವವರೆಗು ಕಾಯುತ್ತ ಕೂರಬೇಡಿ. ಅಂದರೆ ಮೂತ್ರ ವಿಸರ್ಜನೆಗೆ ಆತುರವಾಗುವುದು, ನಿಯಮಿತವಾಗಿ ಮೂತ್ರ ವಿಸರ್ಜನೆಯಾಗುವುದು ಅಥವಾ ಪೆಲ್ವಿಕ್ ನೋವು ಮುಂತಾದವುಗಳು ಕಾಣಿಸಿಕೊಳ್ಳುವವರೆಗು ಕೂರಬೇಡಿ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆಗಳು ಒಳ್ಳೆಯದೆಂಬುದನ್ನು ಮನಗಾಣಿರಿ.

ಪ್ರೊಸ್ಟೇಟ್ ಕ್ಯಾನ್ಸರ್‌ಕಾರಕ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ.

ಪ್ರೊಸ್ಟೇಟ್ ಕ್ಯಾನ್ಸರ್‌ಕಾರಕ ಆಹಾರಗಳನ್ನು ಸೇವಿಸುವುದನ್ನು ನಿಯಂತ್ರಿಸಿ.

ಗ್ರಿಲ್ ಮಾಡಿರುವ ಆಹಾರಗಳನ್ನು ಸೇವಿಸುವ ಮೊದಲು ಒಮ್ಮೆ ಆಲೋಚಿಸಿ, ಏಕೆಂದರೆ ಈ ಆಹಾರಗಳು ಪ್ರೊಸ್ಟೇಟ್ ಕ್ಯಾನ್ಸರನ್ನು ಉಂಟು ಮಾಡಬಹುದು. ಇದಲ್ಲದೆ ಪ್ರೊಸ್ಟೇಟ್ ಕ್ಯಾನ್ಸರನ್ನು ಉಂಟು ಮಾಡುವ ಹಲವಾರು ಆಹಾರಗಳ ಪಟ್ಟಿಯೇ ಇದೆ. ಅಂತಹ ಆಹಾರಗಳನ್ನು ತಿಳಿದುಕೊಂಡು ಅವುಗಳನ್ನು ಸೇವಿಸುವುದನ್ನು ಬಿಡಬೇಕು.

ಗ್ರೀನ್ ಟೀಯನ್ನು ಸೇವಿಸಿ.

ಗ್ರೀನ್ ಟೀಯನ್ನು ಸೇವಿಸಿ.

ಗ್ರೀನ್ ಟೀಯನ್ನು ಸೇವಿಸುವ ಗಂಡಸರಲ್ಲಿ ಆರೋಗ್ಯಕರ ಪ್ರೊಸ್ಟೇಟ್ ಇರುತ್ತದೆ. ಇವರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಿರುತ್ತದೆ. ನಿಮ್ಮ ಪ್ರೊಸ್ಟೇಟಿನ ಆರೋಗ್ಯಕ್ಕಾಗಿ ಪ್ರತಿದಿನ ಗ್ರೀನ್ ಟೀಯನ್ನು ನಿತ್ಯ ಸೇವಿಸಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಬಿಸಿ ಗ್ರೀನ್ ಟೀಯನ್ನು ಯಾವ ಆಹಾರದ ಜೊತೆಗೆ ಬೇಕಾದರು ಸೇವಿಸಬಹುದು. ಗ್ರೀನ್ ಟೀಯನ್ನು ಲಘು ಆಹಾರಗಳ ಜೊತೆಗೆ ಸೇವಿಸಬಹುದು.

ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳನ್ನು ಮತ್ತು ವಿಷಕಾರಕಗಳನ್ನು ನಿಯಂತ್ರಿಸಿ.

ಕ್ಯಾನ್ಸರ್‌ಗೆ ಕಾರಣವಾಗುವ ರಾಸಾಯನಿಕಗಳನ್ನು ಮತ್ತು ವಿಷಕಾರಕಗಳನ್ನು ನಿಯಂತ್ರಿಸಿ.

ಇವುಗಳು ಕಣ್ಣಿಗೆ ಕಾಣುವುದಿಲ್ಲ. ಆದರೂ ಸಹ ಇವುಗಳು ವಿಷಕಾರಿ; ರಾಸಾಯನಿಕಗಳು ಮತ್ತು ವಿಷಕಾರಕಗಳು ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಪ್ರೆಸಿಡೆಂಟ್ಸ್ ಕ್ಯಾನ್ಸರ್ ಪ್ಯಾನೆಲ್ ರಿಪೋರ್ಟ್ ಆನ್ ಎನ್‍ವಿರಾನ್‍ಮೆಂಟಲ್ ಕ್ಯಾನ್ಸರ್ ರಿಸ್ಕ್ ಪ್ರಕಾರ "ಪ್ರಾಕೃತಿಕವಾಗಿ ಬರುವ ಕ್ಯಾನ್ಸರನ್ನು ಅತಿಯಾಗಿ ಉಪೇಕ್ಷೆ ಮಾಡಲಾಗಿದೆಯಂತೆ" . ಏಕೆ ಮತ್ತು ಹೇಗೆ ಕಡಿಮೆಯಾಗಿ ಅಂದಾಜು ಮಾಡಬಾರದು ಎಂಬ ಅಂಶಗಳನ್ನು ಇದು ನೀಡಿದೆ. ಆದರೂ ಸಹ ನೀವು ಪ್ರೊಸ್ಟೇಟ್ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕ ಮತ್ತು ವಿಷಕಾರಕಗಳಿಗೆ ನಿಮ್ಮನ್ನು ನೀವು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡಿ, ಕ್ಯಾನ್ಸರಿನಿಂದ ದೂರವಿರಿ.

ಒಮೆಗಾ - 3 ಯಥೇಚ್ಛವಾಗಿರುವ ಮೀನುಗಳನ್ನು ಸೇವಿಸಿ

ಒಮೆಗಾ - 3 ಯಥೇಚ್ಛವಾಗಿರುವ ಮೀನುಗಳನ್ನು ಸೇವಿಸಿ

ವಾರಕ್ಕೊಮ್ಮೆಯಾದರು ಮೀನನ್ನು ಸೇವಿಸುವ ಗಂಡಸರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಪ್ರಮಾಣ ಶೇ,63%ರಷ್ಟು ಕಡಿಮೆಯಂತೆ. ಸ್ಯಾನ್ ಫ್ರಾನ್ಸಿಸ್ಕೊದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದ ಪ್ರಕಾರ ಇದು ನಿಜ. ಅವರ ಪ್ರಕಾರ ಒಮೆಗಾ - 3 ಇರುವ ಕಡು ಬಣ್ಣದ, ಕೊಬ್ಬಿದ ಮೀನುಗಳನ್ನು ವಾರಕ್ಕೊಮ್ಮೆಯಾದರು ಸೇವಿಸಬೇಕಂತೆ. ಒಮೆಗಾ -3 ಇರುವ ಮೀನುಗಳಲ್ಲಿ EPA ( ಇಕೊಸಪೆಂಟನೊಯಿಕ್ ಆಮ್ಲ) ಮತ್ತು DHA (ಡೊಕೊಸಹೆಕ್ಸಾನೊಯಿಕ್ ಆಮ್ಲ)ಗಳು ಇರುತ್ತವಂತೆ. ಇವುಗಳು ಪ್ರೊಸ್ಟೇಟ್ ಕ್ಯಾನ್ಸರ್‌ಕಾರಕಗಳ ವಿರುದ್ಧ ಸೆಣಸುತ್ತವಂತೆ.

ಧ್ಯಾನವನ್ನು ಮಾಡಿ ಪ್ರೊಸ್ಟೇಟ್ ಕ್ಯಾನ್ಸರನ್ನು ದೂರವಿಡಿ.

ಧ್ಯಾನವನ್ನು ಮಾಡಿ ಪ್ರೊಸ್ಟೇಟ್ ಕ್ಯಾನ್ಸರನ್ನು ದೂರವಿಡಿ.

ಧ್ಯಾನಕ್ಕು ಪ್ರೊಸ್ಟೇಟ್ ಕ್ಯಾನ್ಸರಿಗು ಯಾವ ಸಂಬಂಧ? ಎಂದು ಭಾವಿಸಬೇಡಿ. ಇದನ್ನು ಕಡಿಮೆಯಾಗಿ ಅಂದಾಜು ಮಾಡಬೇಡಿ. ಮನಸ್ಸಿನ ದೃಡತ್ವವು ಸದೃಢ ಆರೋಗ್ಯವನ್ನು ಸಹ ನೀಡುತ್ತದೆ. ಧ್ಯಾನವು ಕೇವಲ ದಣಿದ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಎಂದು ತಪ್ಪಾಗಿ ತಿಳಿಯಬೇಡಿ. ನಮ್ಮ ದೇಹದಲ್ಲಿ ಉಂಟಾಗುವ ಸರ್ವ ವಿಧವಾದ ಏರುಪೇರುಗಳಿಗೆ ಮನಸ್ಸೇ ಪ್ರಧಾನ ಕಾರಣ ಎಂಬುದನ್ನು ಮರೆಯಬಾರದು. ಅದಲ್ಲದೆ ಪ್ರೊಸ್ಟೇಟ್ ಕ್ಯಾನ್ಸರಿಗೆ ಮನಸ್ಸಿನ ಮೇಲೆ ಉಂಟಾಗುವ ವಿಪರೀತ ಒತ್ತಡವು ಒಂದು ಕಾರಣ ಎಂಬುದು ಹಲವು ತಙ್ಞರ ಅಭಿಮತ. ಒತ್ತಡವು ನಮ್ಮ ದೇಹದ ಜೀವಕೋಶಗಳ ಮೇಲೆ ದುಷ್ಪರಿಣಾಮವನ್ನು ಬೀರಿ, ರೋಗ ನಿರೋಧಕ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಧ್ಯಾನದ ಮೊರೆ ಹೋಗುವುದು ಉತ್ತಮ.

ಪ್ರೊಸ್ಟೇಟ್ ಕ್ಯಾನ್ಸರನ್ನು ನಿಯಂತ್ರಿಸಲು ವ್ಯಾಯಾಮ ಮಾಡಿ.

ಪ್ರೊಸ್ಟೇಟ್ ಕ್ಯಾನ್ಸರನ್ನು ನಿಯಂತ್ರಿಸಲು ವ್ಯಾಯಾಮ ಮಾಡಿ.

ಹೃದಯದ ಆರೋಗ್ಯ ಮತ್ತು ತೂಕವನ್ನು ಕಡಿಮೆ ಮಾಡಿಕೊಳ್ಳಲು ವ್ಯಾಯಾಮ ಒಳ್ಳೆಯದೆಂಬುದನ್ನು ನೀವು ಸಹಾ ಬಲ್ಲಿರಿ. ಇದರ ಜೊತೆಗೆ ವ್ಯಾಯಾಮ ಮಾಡುವುದರಿಂದ ಪ್ರೊಸ್ಟೇಟ್ ಕ್ಯಾನ್ಸರನ್ನು ಸಹ ನಿಯಂತ್ರಿಸಬಹುದು ಎಂಬುದನ್ನು ಬಲ್ಲಿರಾ? ವ್ಯಾಯಾಮ ಮಾಡುವುದರಿಂದ ಪ್ರೊಸ್ಟೇಟಿಗೆ ಹಲವು ವಿಧದಲ್ಲಿ ಪ್ರಯೋಜನವಾಗುತ್ತದೆ. ಸ್ಯಾನ್‍ ಫ್ರಾನ್ಸಿಸ್ಕೊದ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾನಿಲಯವು ನಡೆಸಿದ ಒಂದು ಅಧ್ಯಯನವು ವ್ಯಾಯಾಮ ಮಾಡುವುದರಿಂದ ಪ್ರೊಸ್ಟೇಟ್ ಕ್ಯಾನ್ಸರ್ ಬರುವ ಪ್ರಮಾಣವನ್ನು ಶೇ.19% ರಷ್ಟು ಕಡಿಮೆ ಮಾಡುತ್ತದೆಯೆಂದು ಸಾಭೀತು ಮಾಡಿದೆ.

Read more about: health ಆರೋಗ್ಯ
English summary

8 Ways To Prevent Prostate Cancer

Prostate cancer is often seen as an “old man’s disease” but the reality is that it is striking men younger and younger, particularly in the US. Here are 9 ways to prevent prostate cancer that every man can take today.
X
Desktop Bottom Promotion