For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗಿಗಳಿಗಾಗಿ 8 ನೈಸರ್ಗಿಕ ಆಹಾರಗಳು

By poornima Heggade
|

ಕ್ಯಾನ್ಸರ್ ರೋಗಿಗಳಿಗೆ ಒಂದು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ತುಂಬಾ ಮುಖ್ಯ ಮತ್ತು ಅದು ಅವರ ಚೇತರಿಕೆಯ ವಿಷಯದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಚಿಕಿತ್ಸೆಯ ಸಮಯದಲ್ಲಿ, ಸರಿಯಾದ ಆಹಾರ ಸೇವಿಸುವುದರಿಂದ ರೋಗಿಗಳು ಧನಾತ್ಮಕ ಮತ್ತು ಪ್ರಬಲವಾಗಿರಲು ಸಾಧ್ಯ .

ಪೌಷ್ಟಿಕ ಆಹಾರ ತಾಜಾ ತರಕಾರಿಗಳು ಮತ್ತು ಹಣ್ಣುಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ರೋಗಿಯ ಚೇತರಿಕೆಯ ವೇಗವನ್ನು ಹೆಚ್ಚಿಸುವ ಶಕ್ತಿಯುತ ರಾಸಾಯನಿಕಗಳು ಸಾಕಷ್ಟು ಇರತ್ತವೆ. ಇಲ್ಲಿ ದೈನಂದಿನ ಆಹಾರದಲ್ಲಿ ಬಳಸಬೇಕದ ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಮ್ಮ ದಿನದ ಆಹಾರದಲ್ಲಿ ಈ ಆಹಾರಗಳನ್ನು ಸೇರಿಸುವುದಕ್ಕೂ ಮೊದಲು ನಿಮ್ಮ ವೈದ್ಯರಲ್ಲಿ ಸಲಹೆಗಳನ್ನು ಪಡೆದುಕೊಳ್ಳಿ.

ಕ್ಯಾನ್ಸರ್ ರೋಗಿಗಳಿಗೆ ನೀಡುವ ಆಹಾರ ಸಮೃದ್ಧ ಮತ್ತು ಆರೋಗ್ಯಕರವಾಗಿರಬೇಕು. ಕ್ಯಾನ್ಸರ್ ಚಿಕಿತ್ಸೆ ಕಠಿಣ ಮತ್ತು ಕೆಲವು ಅಡ್ಡ ಪರಿಣಾಮಗಳೂ ಕೂಡ ಇದರಲ್ಲಿದೆ. ಕೆಲವು ಅಡ್ಡ ಪರಿಣಾಮಗಳೆಂದರೆ ಕೂದಲು ಉದುರುವುದು, ವಾಂತಿ, ಹೊಟ್ಟೆ ನೋವು , ಬಾಯಿ ಒಣಗುವುದು, ಬಲಹೀನ ದೇಹ ಮತ್ತು ತೂಕ ಕಳೆದುಕೊಳ್ಳುವುದು ಇತ್ಯಾದಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಲೆನೋವಿನ ಪರಿಹಾರ ನೈಸರ್ಗಿಕವಾದ ತರಕಾರಿ ಹಣ್ಣುಗಳಿಂದ!

ಆರೋಗ್ಯಕರ ಆಹಾರ ಸೇವನೆ ಈ ಅಡ್ಡಪರಿಣಾಮಗಳನ್ನು ಎದುರಿಸಲು ಮತ್ತು ಕ್ಯಾನ್ಸರ್ ರೋಗಿ ಚೇತರಿಕೆಯನ್ನು ಸಹ ಉಂಟುಮಾಡಲು ಸಹಾಯ ಮಾಡುತ್ತದೆ. ನೈಸರ್ಗಿಕ ಆಹಾರಗಳಲ್ಲಿ ಕ್ಯಾನ್ಸರ್ ನಿರೋಧಕ ಗುಣಲಕ್ಷಣಗಳು ಸಾಕಷ್ಟು ಕಂಡುಬಂದಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಲೂ ಜ್ಯೂಸಿನಲ್ಲಿರುವ ಸತ್ವಗಳ ಸತ್ಯಾಂಶಗಳೇನು?

ಮೊಟ್ಟೆಗಳು

ಮೊಟ್ಟೆಗಳು

ಜೀವಸತ್ವ ಬಿ,ಡಿ,ಈ ಮತ್ತು ಪ್ರೋಟೀನ್ ಗಳ ಸಮೃದ್ಧ ಮೂಲವನ್ನು ಹೊಂದಿವೆ. ಮೊಟ್ಟೆಗಳಲ್ಲಿರುವ ಸೆಲೆನಿಯಮ್ ಅಂಶ ಕಿಮೋಥೆರಫಿ (ಚಿಕಿತ್ಸೆಯ) ಯ ಅಡ್ಡ ಪರಿಣಾಮಗಳನ್ನು ತಗ್ಗಿಸಲು ಸಹಾಯಮಾಡುತ್ತದೆ. ಇದು ವಾಕರಿಕೆ, ಕೂದಲು ಉದುರುವಿಕೆ, ಹೊಟ್ಟೆ ನೋವು ಮತ್ತು ದೌರ್ಬಲ್ಯವನ್ನೂ ಕಡಿಮೆ ಮಾಡುತ್ತದೆ.

ಶುಂಠಿ

ಶುಂಠಿ

ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸಸ್ಯ. ಶುಂಠಿ ತಿನ್ನುವುದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಕೀಮೋ ಚಿಕಿತ್ಸೆಗಿಂತ ಮೊದಲು ಶುಂಠಿಯನ್ನು ಕ್ಯಾನ್ಸರ್ ರೋಗಿಗಳು ತಿಂದರೆ ವಾಕರಿಕೆಯ ಭಾವನೆ ಕಡಿಮೆಯಾಗುತ್ತದೆ ಎಂದು ವರದಿಗಳು ಹೇಳಿವೆ.

ಏಕಿ (Acai)

ಏಕಿ (Acai)

ಬೆರ್ರಿ ಆಂಟಿ ಆಕ್ಸಿಡೆಂಟ್ ಸಮೃದ್ಧ ಗುಣಲಕ್ಷಣಗಳನ್ನು ಹೊಂದಿದೆ. ಈ ಸಣ್ಣ ಹಣ್ಣುಗಳನ್ನು ಕ್ಯಾನ್ಸರ್ ಅಷ್ಟೇ ಅಲ್ಲದೆ ಹಲವಾರು ಇತರ ರೋಗಗಳನ್ನು ನಿವಾರಿಸಲು ಬಳಸಲಾಗುತ್ತದೆ. ಒಂದು ಬೆರ್ರಿ, ಒಂದು ಸೇಬುವಿಗಿಂತ 11 ಪಟ್ಟು ಅಧಿಕ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ.

ಪುದೀನಾ

ಪುದೀನಾ

ಕ್ಯಾನ್ಸರ್ ಚಿಕಿತ್ಸೆಯ ನಂತರದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯಕವಾಗುವ ಉತ್ತಮ ಸಸ್ಯವಾಗಿದೆ. ಇದು ಒಣ ಬಾಯಿ ಮತ್ತು ವಾಕರಿಕೆಗೆ ಉಪಶಮನ ನೀಡುತ್ತದೆ. ಇದು ಆತಂಕ ಶಮನಕಾರಿಯೂ ಹೌದು. ವಾಕರಿಕೆ ನಿಯಂತ್ರಣವು ಡಿಹೈಡ್ರೇಶನ್ ತಡೆಯಲು ಸಹಾಯ ಮಾಡುತ್ತದೆ.

ಸೋಯಾ

ಸೋಯಾ

ಸೋಯಾದಲ್ಲಿ ಪ್ರೋಟೀನ್ ಮತ್ತು ಈಸ್ಟ್ರೊಜೆನ್ ಸಮೃದ್ಧವಾಗಿದೆ. ಸಂಶೋಧನೆಯ ಪ್ರಕಾರ, ಸೋಯಾ ಸ್ತನ ಕ್ಯಾನ್ಸರ್ ರೋಗಿಗಳಲ್ಲಿ ಗೆಡ್ಡೆಯ ಗಾತ್ರ ಕಡಿಮೆ ಮಾಡಲು ಸಹಾಯಕವಾಗಿದೆ ಎಂಬುದನ್ನು ಸಾದರ ಪಡಿಸಿದೆ. ಕ್ಯಾನ್ಸರ್ ಕೋಶಗಳಿಗೆ ಅತ್ಯಂತ ವಿಷಕಾರಿಯಾಗಿರುವ ಜೈನ್ಟೀನ್ (geinstein) ಎಂಬ ಘಟಕಾಂಶವನ್ನು ಹೊಂದಿದೆ. ಕ್ಯಾನ್ಸರ್ ಕೋಶಗಳನ್ನು ಇದು ನಾಶಗೊಳಿಸುತ್ತದೆ. ಆದಾಗ್ಯೂ ನೆನಪಿನಲ್ಲಿಡಬೇಕಾದ ಅಂಶವೆಂದರೆ, ಸೋಯಾ ಎಲ್ಲರಿಗೂ ಸೂಕ್ತವಾದ ಪದಾರ್ಥ ಎಂದು ಹೇಳಲು ಸಾಧ್ಯವಿಲ್ಲ.

ಬೀನ್ಸ್

ಬೀನ್ಸ್

ಬೀನ್ಸ್, ಕಾಳುಗಳು ಮತ್ತು ಅವರೆಕಾಳು ಮೊದಲಾದ ತಾಜಾ ತರಕಾರಿಗಳಲ್ಲಿ ವಿಟಮಿನ್ ಬಿ ಅಂಶವನ್ನು ಅಧಿಕವಾಗಿ ಒಳಗೊಂಡಿರುತ್ತದೆ. ಇವು ಚಿಕಿತ್ಸೆ ಮತ್ತು ಕೋಶಗಳ ದುರಸ್ತಿಗೆ ಸಹಾಯ ಮಾಡುತ್ತವೆ. ಅಲ್ಲದೇ ಇವು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿಯೂ ಒಳ್ಳೆಯದು. ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಮತ್ತು ರೋಗದ ಚೇತರಿಕೆಗೂ ತರಕಾರಿ ಸೇವನೆ ಸಹಾಯ ಮಾಡುತ್ತದೆ.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆಯಲ್ಲಿ ಉತ್ತಮ ಪ್ರೋಬಯಾಟಿಕ್ ಮೂಲವಿದೆ. ಇದು 100ಕ್ಕೂ ಹೆಚ್ಚು ಪ್ರಯೋಜನಕಾರಿ ಕಿಣ್ವಗಳನ್ನು ಹೊಂದಿದೆ. ಈ ಕಿಣ್ವಗಳು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಜ್ಜಿಗೆ ಸಾಮಾನ್ಯ ಶೀತ ಮತ್ತು ಕೆಮ್ಮು ವಿರುದ್ಧವೂ ಹೋರಾಟ ಮಾಡುತ್ತದೆ. ಇದು ಕ್ಯಾನ್ಸರ್ ವಿರೋಧಿ ಲಕ್ಷಣಗಳನ್ನು ಹೊಂದಿದೆ.

ತಾಜಾ ಹಸಿರು ಎಲೆಗಳ ತರಕಾರಿಗಳು

ತಾಜಾ ಹಸಿರು ಎಲೆಗಳ ತರಕಾರಿಗಳು

ವಿಟಮಿನ್ ಬಿ ಸಮದ್ಧ ಅಂಶಗಳನ್ನು ಹೊಂದಿರುತ್ತವೆ. ಇವು ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯ ಹಾನಿಕಾರಕ ಪರಿಣಾಮಗಳನ್ನು ಪರಿಣಾಮಕಾರಿ ಕಡಿಮೆ ಮಾಡುತ್ತವೆ. ಎಲೆಗಳಲ್ಲಿ ಕ್ಯಾಲ್ಸಿಯಂ ಅಂಶಗಳೂ ಹೇರಳವಾಗಿವೆ ಮತ್ತು ಇದು ಮೂಳೆಗಳನ್ನು ಬಲಪಡಿಸಲು ಮತ್ತು ಜೀವ ಕೋಶಗಳನ್ನು ದುರಸ್ತಿ ಮಾಡಲು ನೆರವಾಗುತ್ತವೆ.

Read more about: health ಆರೋಗ್ಯ
English summary

8 Natural Foods To Include In A Cancer Patients Diet

A healthy and nutritious diet for cancer patients is very important and plays a huge role in their recovery. During the treatment, eating the right kind of diet helps one to stay positive and strong.
Story first published: Monday, January 20, 2014, 17:12 [IST]
X
Desktop Bottom Promotion