For Quick Alerts
ALLOW NOTIFICATIONS  
For Daily Alerts

ತಿನ್ನುವ ಆಹಾರದ ಪ್ರಮಾಣ ನಿಯಂತ್ರಣಕ್ಕೆ ಟಿಪ್ಸ್

By Hemanth
|

ನಾವು ಊಟ ಮಾಡುವಾಗ ನಮ್ಮ ಆಹಾರದ ಪ್ರಮಾಣವು ಮಿತಿಗಿಂತ ಹೆಚ್ಚಾಗಿಯೇ ಇರುತ್ತದೆ ಎನ್ನುವುದು ಸಾಮಾನ್ಯ. ಅದರಲ್ಲೂ ರೆಸ್ಟೋರೆಂಟ್ ಗೆ ಹೋದಾಗ ಅದು ನಮ್ಮ ಅಳತೆ ಮೀರುತ್ತದೆ. ಇದು ಮನೆಯಲ್ಲೂ ನಡೆಯುತ್ತಲೇ ಇರುತ್ತದೆ. ಕೆಲವು ಮಂದಿ ದಿನವಿಡೀ ಸ್ವಲ್ಪ ಮಾತ್ರ ಆಹಾರ ಸೇವಿಸಿ ರಾತ್ರಿ ವೇಳೆ ದೊಡ್ಡ ಪ್ರಮಾಣದಲ್ಲಿ ಊಟ ಮಾಡಿ ಪೌಷ್ಠಿಕಾಂಶಗಳನ್ನು ಪಡೆಯಬಹುದು ಎಂದು ಭಾವಿಸುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ಕರಗಬೇಕೆಂದರೆ ಈ ರೀತಿ ಮಾಡಲೇಬೇಕು

ದುರಾದೃಷ್ಟವೆಂದರೆ ಇದು ಒಳ್ಳೆಯದಲ್ಲ. ಯಾಕೆಂದರೆ ದಿನವಿಡಿ ನೀವು ತುಂಬಾ ವ್ಯಸ್ತ ಮತ್ತು ಕ್ರಿಯಾಚಟುವಟಿಕೆಯಲ್ಲಿ ತೊಡಗಿರುವಾಗ ಹೆಚ್ಚಿನ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಆದರೆ ಹೆಚ್ಚಿನ ಜನರು ದಿನದ ಅಂತ್ಯಕ್ಕೆ ಅಂದರೆ ಮಲಗುವ ಮೊದಲು ಕಡಿಮೆ ಕ್ರಿಯಾಚಟುವಟಿಕೆಗಳಲ್ಲಿ ತೊಡಗಿರುವ ವೇಳೆ ಹೆಚ್ಚಿನ ಆಹಾರ ಸೇವಿಸುತ್ತಾರೆ.

ನೀವು ಯಾವುದೇ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ದೊಡ್ಡ ಪ್ರಮಾಣದ ಆಹಾರವು ನಿಮ್ಮ ತೂಕ ಹೆಚ್ಚಳ ಮಾಡಲಿದೆ. ಭವಿಷ್ಯದಲ್ಲಿ ನೀವು ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಯಲು ಆಹಾರದ ಪ್ರಮಾಣ ನಿಯಂತ್ರಿಸಲು ಇಲ್ಲಿರುವ ಕೆಲವೊಂದು ಟಿಪ್ಸ್ ಗಳನ್ನು ಪಾಲಿಸಿ ಮತ್ತು ತೂಕ ಹೆಚ್ಚಳದ ಸಮಸ್ಯೆ ಬರದಂತೆ ತಡಯಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಗಮನಿಸಲೇಬೇಕಾದ ಶೀತದ 6 ಲಕ್ಷಣಗಳು

1. ಮಾಪನ

1. ಮಾಪನ

ಆಹಾರದ ಪ್ರಮಾಣ ನಿಯಂತ್ರಿಸುವ ಒಂದು ಒಳ್ಳೆಯ ಟಿಪ್ಸ್ ಎಂದರೆ ಆಹಾರವನ್ನು ಮಾಪನ ಮಾಡುವುದು. ನಿಮ್ಮ ಮುಂದಿನ ಜೀವನದ ಆಹಾರ ಪ್ರಮಾಣದ ಬಗ್ಗೆ ಮಾಪನ ಮಾಡಿ ಎಂದು ನಾನು ಹೇಳುತ್ತಿಲ್ಲ. ಒಂದು ವಾರ ಅಥವಾ ನಿಮ್ಮ ಕಣ್ಣು ಮತ್ತು ಮೆದುಳು ನಿಮಗೆ ಎಷ್ಟು ಪ್ರಮಾಣದ ಆಹಾರ ಬೇಕೆಂದು ತಿಳಿದುಕೊಳ್ಳುವ ತನಕ ಇದನ್ನು ಮುಂದುವರಿಸಿ. ಅನ್ನ, ಪಾಸ್ತಾ ಮತ್ತು ಧಾನ್ಯಗಳನ್ನು ಮಾಪನ ಮಾಡಿ. ಆಲೀವ್ ಆಯಿಲ್, ಬೆಣ್ಣೆ, ಸ್ಪ್ರೆಡ್, ಡಿಪ್ಸ್ ಮತ್ತು ನೆಲಕಡಲೆ ಬೆಣ್ಣೆಯನ್ನು ಚಮಚದಲ್ಲಿ ಮಾಪನ ಮಾಡಿ. ನಿಮಗೆ ಯಾವ ರೀತಿಯ ಆಹಾರ ಮತ್ತು ಎಷ್ಟು ಕ್ಯಾಲರಿ ಬೇಕಾಗಿದೆ ಎಂದು ನೀವು ತಿಳಿದುಕೊಂಡರೆ ಆಗ ನಿಮ್ಮ ಪ್ಲೇಟ್ ನಲ್ಲಿನ ಆಹಾರದ ಪ್ರಮಾಣದ ಬಗ್ಗೆ ಮಾಪನ ಮಾಡಬಹುದು.

2. ನಿಧಾನವಾಗಿ ತಿನ್ನಿ

2. ನಿಧಾನವಾಗಿ ತಿನ್ನಿ

ನಿಮ್ಮ ಆಹಾರದ ಪ್ರಮಾಣ ನಿಯಂತ್ರಿಸುವ ಮತ್ತೊಂದು ವಿಧಾನವೆಂದರೆ ನಿಧಾನವಾಗಿ ಊಟ ಮಾಡಿ. ನಿಮ್ಮ ಹೊಟ್ಟೆಯನ್ನು ತಿಳಿದುಕೊಳ್ಳಲು ಮೆದುಳಿಗೆ 20 ನಿಮಿಷ ಬೇಕಾಗುತ್ತದೆ. ಇದರಿಂದ ನಿಧಾನವಾಗಿ ಊಟ ಮಾಡಿದರೆ ಆಗ ಮೆದುಳಿಗೆ ನಿಮ್ಮ ಹೊಟ್ಟೆ ತುಂಬಿದೆ ಎಂದು ತಿಳಿಯುತ್ತದೆ. ಅತಿಯಾಗಿ ತಿನ್ನುವುದರಿಂದ ನಿಮಗೆ ತಪ್ಪಿತಸ್ಥ ಮತ್ತು ಅನಾರೋಗ್ಯ ಭಾವನೆಯಾಗುತ್ತದೆ. ನೀವು ನಿಧಾನವಾಗಿ ಊಟ ಮಾಡಿದರೆ ಆಗ ತುತ್ತಿನ ನಡುವಿನ ಸಮಯದಲ್ಲಿ ಮೆದುಳು ನಿಮ್ಮ ಹೊಟ್ಟೆ ಸಂಪೂರ್ಣವಾಗಿ ತುಂಬಿದೆ ಎಂದು ಹೇಳುತ್ತದೆ. ಊಟ ಮಾಡುವಾಗ ಮಾತುಕತೆಯಲ್ಲಿ ತೊಡಗುವುದರಿಂದ ಅಥವಾ ಯಾವುದಾದರೂ ಆಲೋಚನೆ ಮಾಡುವುದರಿಂದ ನಿಧಾನವಾಗಿ ಊಟ ಮಾಡಬಹುದು.

3. ಪ್ಯಾಕ್ ನಿಂದ ನೇರವಾಗಿ ತಿನ್ನಬೇಡಿ

3. ಪ್ಯಾಕ್ ನಿಂದ ನೇರವಾಗಿ ತಿನ್ನಬೇಡಿ

ಆಹಾರ ಪ್ರಮಾಣ ನಿಯಂತ್ರಿಸಲು ಒಳ್ಳೆಯ ವಿಧಾನವೆಂದರೆ ನೇರವಾಗಿ ಪ್ಯಾಕ್ ನಿಂದ ತಿನ್ನಬೇಡಿ. ಬ್ಯಾಗ್, ಬಾಕ್ಸ್ ಅಥವಾ ಕಂಟೈನರ್ ಇತ್ಯಾದಿಯಿಂದ ನೀವು ತಿನ್ನುವ ಆಹಾರವನ್ನು ಹೊರಗಿಡಿ. ಒಂದು ಬೌಲ್ ಅಥವಾ ಪ್ಲೇಟ್ ಗೆ ಹಾಕಿ. ಉಳಿದಿರುವುದನ್ನು ತೆಗೆದಿಡಿ. ಕೆಲವು ಸಲ ತಿಂಡಿ ಎದುರುಗಿದೆಯೆಂದು ನಾವು ತಿನ್ನುತ್ತಲೇ ಇರುತ್ತೇವೆ. ನೀವು ತಿನ್ನಲು ಬಯಸುವಷ್ಟು ಮಾತ್ರ ತೆಗೆದು ಉಳಿದಿರುವುದನ್ನು ಬದಿಗಿಡಿ. ಆಹಾರ ಎದುರಿಗಿದ್ದರೆ ಆಗ ಅದನ್ನು ತಿನ್ನುವ ಕಡುಬಯಕೆ ಮೂಡುತ್ತದೆ.

4. ಸಣ್ಣ ಪ್ಲೇಟ್ ಗಳನ್ನು ಬಳಸಿ

4. ಸಣ್ಣ ಪ್ಲೇಟ್ ಗಳನ್ನು ಬಳಸಿ

ನೀವು ಬಯಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸುತ್ತಿದ್ದೀರಿ ಎಂದು ನಿಮಗನಿಸುತ್ತಿದ್ದರೆ ನೀವು ಸಣ್ಣ ಪ್ಲೇಟ್, ಬೌಲ್, ಗ್ಲಾಸ್ ಇತ್ಯಾದಿಗಳನ್ನು ಬಳಸಿ. ಸಣ್ಣ ಪ್ಲೇಟ್ ಅಥವಾ ಬೌಲ್ ಬಳಸುವುದರಿಂದ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬಹುದು. ಈ ತಂತ್ರ ಬಳಸುವುದರಿಂದ ನೀವು ಆಹಾರವನ್ನು ತಪ್ಪಿಸದೆ ತಿನ್ನುವ ಪ್ರಮಾಣ ಕಡಿಮೆ ಮಾಡಬಹುದು.

5. ಸಣ್ಣ ಪ್ರಮಾಣದಲ್ಲಿ ಹಾಕಿಕೊಳ್ಳಿ

5. ಸಣ್ಣ ಪ್ರಮಾಣದಲ್ಲಿ ಹಾಕಿಕೊಳ್ಳಿ

ಇದು ಬುದ್ದಿಗೇಡು ಎಂದು ಹೇಳಬಹುದು. ಆದರೆ ಇದನ್ನು ಪಾಲಿಸುವುದು ತುಂಬಾ ಕಠಿಣ. ನೀವು ನಿಜವಾಗಿಯೂ ತಿನ್ನಲು ಬಯಸಿದ್ದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ಆಹಾರವನ್ನು ಪ್ಲೇಟ್‌ಗೆ ಹಾಕಿಕೊಳ್ಳಿ. ಇದರಿಂದ ನೀವು ನಿಧಾನವಾಗಿ ಆಹಾರದ ಪ್ರಮಾಣ ಮತ್ತು ಕ್ಯಾಲರಿ ಕಡಿಮೆ ಮಾಡಬಹುದು. ಧಾನ್ಯಗಳು, ಬೀಜಗಳು, ಮೊಳಕೆಗಳು, ಕಡಲೆಕಾಯಿ ಬೆಣ್ಣೆ ಮತ್ತು ಇತರ ಕೆಲವೊಂದು ಕೊಬ್ಬಿನ ಆಹಾರಗಳು ಸಣ್ಣ ಪ್ರಮಾಣದಲ್ಲೂ ನಿಮಗೆ ಶಕ್ತಿ ನೀಡಬಹುದು. ಉದಾಹರಣಿಗೆ ನೀವು ಕಡಲೆಕಾಯಿ ಬೆಣ್ಣೆಯನ್ನು ಸ್ಯಾಂಡ್ ವಿಚ್ ಮಾಡಲು ಬಳಸುತ್ತಿದ್ದೀರಿ ಎಂದಾದರೆ ಆಗ ನೀವು ಬಯಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಸೇವಿಸುತ್ತೀರಿ. ಒಂದು ಚಮಚ ಕಡಲೆಕಾಯಿ ಬೆಣ್ಣೆಯಲ್ಲಿ 100 ಕ್ಯಾಲರಿ ಇದೆ ಎಂದು ನಿಮಗೆ ತಿಳಿದಾಗ ಒಂದು ಚಮಚ ಕಡಲೆಕಾಯಿ ಬೆಣ್ಣೆ ಹೇಗೆ ಬಳಸಬಹುದು ಎಂದು ನಿಮಗೆ ತಿಳಿಯುತ್ತದೆ.

Read more about: health ಆರೋಗ್ಯ
English summary

7 Tips for Controlling Your Portion Sizes

It’s easy to let the size of your meals get out of hand unless you follow a few of these tips for controlling portion sizes. It’s quite obvious that restaurant portion sizes are out of control, but it seems to be happening more and more at home too.
Story first published: Saturday, March 1, 2014, 11:45 [IST]
X
Desktop Bottom Promotion