For Quick Alerts
ALLOW NOTIFICATIONS  
For Daily Alerts

ನೀವು ಬಲಶಾಲಿಯಾಗಲು ಅಡ್ಡಿಯಾಗಿರುವ 7 ಅಡೆತಡೆಗಳು

By Deepak M
|

ನೀವು ಶಕ್ತಿಶಾಲಿಯಾಗಲು ಗಂಭೀರವಾಗಿ ಪ್ರಯತ್ನಗಳನ್ನು ಮುಂದುವರಿಸಿರುವಿರಾ? ಬಹುಶಃ ನೀವು ಈ ಪ್ರಯತ್ನದಿಂದ ವಿಶ್ವದ ಅತ್ಯಂತ ಶಕ್ತಿಶಾಲಿ ಗಂಡಸು ಅಥವಾ ಹೆಂಗಸಾಗಿ ಕಾಣಿಸದೆ ಇರಬಹುದು. ಆದರೆ ಈ ಪರಿಣಾಮವಾಗಿ ನೀವು ನಿಮ್ಮ ಐದು ವರ್ಷಗಳ ಯೌವನವನ್ನು ಅನಾಯಾಸವಾಗಿ ಮರಳಿ ಪಡೆಯುವಿರಿ. ಆದರೆ ನೀವು ಮಾಡಿದ ವರ್ಕ್ಔಟ್ ನಿಮಗೆ ಸರಿಯಾದ ಫಲಿತಾಂಶವನ್ನು ನೀಡಲಿಲ್ಲವಾದಲ್ಲಿ ಏನಾಗುತ್ತದೆ?

ಹಾಗಾದರೆ ಬನ್ನಿ ನಿಮ್ಮ ವರ್ಕ್ಔಟ್‌ನಿಂದ ನೀವು ಸರಿಯಾದ ಬೆಳವಣಿಗೆಯನ್ನು ಕಾಣಲಿಲ್ಲವೆಂದಾದಲ್ಲಿ ಅದಕ್ಕೆ ಇರುವ ಕಾರಣಗಳು ಯಾವುವು ಎಂಬುದನ್ನು ಕೆಲವನ್ನು ಇಲ್ಲಿ ನೀಡಿದ್ದೇವೆ. ಓದಿ ಆ ತಪ್ಪುಗಳನ್ನು ಸರಿಪಡಿಸಿಕೊಳ್ಳಿ....

ಬದಲಾವಣೆಯ ಕೊರತೆ
ಒಂದು ವೇಳೆ ನೀವು ಪ್ರತಿನಿತ್ಯದಂತೆ ಆರು ತಿಂಗಳವರೆಗೆ ವರ್ಕ್ಔಟ್ ಮಾಡಿದರೆ, ನಿಮ್ಮ ಸ್ನಾಯುಗಳು ವರ್ಕ್ಔಟ್‌ಗೆ ಹೊಂದಿಕೊಳ್ಳುವ ಮೂಲಕ ಬೆಳೆಯುತ್ತವೆ. ಇದಕ್ಕೆ ಮೂಲ ಕಾರಣ: ಬದಲಾವಣೆ. ಆದ್ದರಿಂದ ಒಂದೇ ಬಗೆಯ ವರ್ಕ್‍ಔಟ್ ಅನ್ನು ಪ್ರತಿ ದಿನದಂತೆ ನಾಲ್ಕರಿಂದ ಆರುವಾರಗಳವರೆಗೆ ಮಾಡಿ, ನಂತರ ಮತ್ತೊಂದಕ್ಕೆ ಬದಲಾಯಿಸಿ, ಇಲ್ಲವೇ ನೀವು ಎತ್ತುತ್ತಿರುವ ತೂಕವನ್ನು ಬದಲಾಯಿಸಿಕೊಳ್ಳಿ. ಆಗ ನೀವು ಗಣನೀಯವಾದ ಸುಧಾರಣೆಯನ್ನು ಕಾಣಬಹುದು.

7 reasons you are not getting stronger

ತೀವ್ರತೆಯ ಕೊರತೆ
ಯಾವಾಗ ನಿಮ್ಮನ್ನು ನೀವು ಸರಿಯಾಗಿ ಮುಂದಕ್ಕೆ ಕರೆದುಕೊಂಡು ಹೋಗುತ್ತೀರೋ, ಆಗ ನೀವು ವರ್ಕ್ಔಟ್ ಪೂರೈಸಿದ ಮೇಲೆ ನಿಮ್ಮಲ್ಲಿ, ಶಕ್ತಿಯು ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಅದಕ್ಕಾಗಿ ನೀವು ಶೇ.70 ರಿಂದ 100ರಷ್ಟು ತೀವ್ರತೆಯಿಂದ ಕೆಲಸ ಮಾಡಬೇಕು. ಅಂದರೆ ಅದರ ಅರ್ಥವೇನು? ಅಂದರೆ ನೀವು 12 ರಿಂದ 15 ರೆಪ್‍ಗಳನ್ನು ಮಾಡುತ್ತಿದ್ದೀರಿ ಎಂದು ಕೊಳ್ಳಿ. ಮೊದಲ ಸುತ್ತಿನಲ್ಲಿ ನೀವು 15ನ್ನು ಪೂರೈಸಿ, ಕಡೆಯ ಸುತ್ತಿನಲ್ಲಿ 12ನ್ನು ಮಾಡಬೇಕು. ಹೀಗೆ ನೀವು ಇದನ್ನು ಸರಿಯಾಗಿ ಮಾಡಿ ಮುಗಿಸಿದರೆ, ನೀವು ವರ್ಕ್ಔಟ್ ಸರಿಯಾಗಿ ಮಾಡುತ್ತಿದ್ದೀರಿ ಎಂದರ್ಥ. ಸಾಮಾಜಿಕ ಜಾಲತಾಣಗಳಿ೦ದ 5 ಜೀವನ ಮೌಲ್ಯದ ಕಲಿಕೆ

ತಪ್ಪಾದ ವಾತಾವರಣ
ನೀವು ಮನೆಯಲ್ಲಿ ಟ್ರೈನ್ ಆಗುತ್ತಿರುವಿರಾ? ಹಾಗಾದರೆ ನೀವು ಅಂದುಕೊಂಡಷ್ಟನ್ನು ಮಾಡುತ್ತಿರುವುದಿಲ್ಲ. ಏಕೆಂದರೆ ನೀವು ನಿಮ್ಮ ಮನೆಯ ಬೆಡ್‍ರೂಮ್ ಅಥವಾ ಗ್ಯಾರೇಜಿನಂತಹ ಸುಖಕರವಾದ ವಾತಾವರಣದಲ್ಲಿದ್ದರೆ, ಪ್ರತಿಯೊಂದು ಅಂಶಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತೀರಿ. ಅದಕ್ಕಾಗಿ ಏಕೆ ನೀವು ನಿಮ್ಮ ವಾತಾವರಣವನ್ನು ಬದಲಾಯಿಸಬಾರದು? ಇದಕ್ಕಾಗಿ ನೀವು ಸ್ಪಿನ್ನಿಂಗ್ ಕ್ಲಾಸ್‍ಗೆ ಸೇರಿಕೊಳ್ಳಬಹುದು, ಟ್ರೈನರ್ ಜೊತೆ ವರ್ಕ್ಔಟ್ ಮಾಡಬಹುದು ಅಥವಾ ಜಿಮ್‍ನಲ್ಲಿ ಜಾಗಿಂಗ್ ಮಾಡಬಹುದು. ಇದರಿಂದ ನಿಮ್ಮ ತೀವ್ರತೆಯು ಬಲಗೊಳ್ಳುತ್ತದೆ ಮತ್ತು ನಿಮಗೆ ಬೇಕಾದ ಫಲಿತಾಂಶವು ಸಿಗುತ್ತದೆ.

ಗುರಿಗಳ ಕೊರತೆ
ನೀವು ನಿಮ್ಮ ಪ್ರಗತಿಯನ್ನು ಯೋಜನೆ ಮಾಡಲಿಲ್ಲವೆಂದಾದಲ್ಲಿ, ಖಂಡಿತ ನೀವು ಸಾಧಿಸಲಾರಿರಿ. ಒಂದು ವೇಳೆ ನೀವು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಲ್ಲಿ, ಪ್ರತಿಯೊಂದಕ್ಕು ನಿರ್ದಿಷ್ಟ ಗುರಿಗಳನ್ನು ಹಾಕಿಕೊಳ್ಳಿ. ಉದಾಹರಣೆಗೆ" ಪ್ರತಿ ಮೂರು ವಾರಕ್ಕೊಮ್ಮೆ ಬೆಂಚ್ ಪ್ರೆಸ್ಸನ್ನು ಐದು ಪೌಂಡುಗಳಷ್ಟು ಹೆಚ್ಚಿಸಿ". ಈ ಸಣ್ಣ ಸಣ್ಣ ಗುರಿಗಳು ನಿಮ್ಮ ಗುರಿಯ ಮೇಲೆ ನೀವು ಗಮನ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ಬೇಗ ನೀವು ಸದೃಢರಾಗಲು ಸಹಾಯ ಮಾಡುತ್ತದೆ.

ಚೇತರಿಕೆಗೆ ಸಾಕಷ್ಟು ಸಮಯವಿಲ್ಲದಿರುವುದು
ನಿಮ್ಮ ಸ್ನಾಯುಗಳನ್ನು ದುಡಿಸುವುದು ಎಷ್ಟು ಮುಖ್ಯವೋ, ಅದಕ್ಕೆ ಅಗತ್ಯ ವಿಶ್ರಾಂತಿ ನೀಡುವುದು ಸಹ ಅಷ್ಟೇ ಮುಖ್ಯ. ನೀವು ಒಂದೇ ಸ್ನಾಯುವಿನ ಮೇಲೆ ಎರಡು ದಿನಗಳ ಕಾಲ ವರ್ಕ್ಔಟ್ ಮಾಡುವುದು ಒಳ್ಳೆಯದಲ್ಲ. ಇದರಿಂದ ನೀವು ಅಂದುಕೊಂಡಂತೆ ಸ್ನಾಯುಗಳು ಬೆಳೆಯುವುದಿಲ್ಲ ಎಂಬುದು ನೆನಪಿರಲಿ. ಆದ್ದರಿಂದ ನಿಮ್ಮ ಸ್ನಾಯುಗಳಿಗೆ 48 ಅಥವಾ 72 ಗಂಟೆಗಳ ಕಾಲ ವಿಶ್ರಾಂತಿಯನ್ನು ನೀಡಿ. ಇದರಿಂದ ಅವುಗಳು ಚೇತರಿಕೆಗೆ ಮತ್ತು ಹೊಸ ಸ್ನಾಯುಗಳ ನರಗಳು ಬೆಳೆಯಲು ಸಮಯಾವಕಾಶ ನೀಡಿದಂತಾಗುತ್ತದೆ. ಇದರ ಜೊತೆಗೆ ಸ್ನಾಯುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಭರಿತ ಆಹಾರವನ್ನು ಸಹ ಸೇವಿಸಿ.

ಸುತ್ತುಗಳ ಮಧ್ಯೆ ಅಧಿಕ ಸಮಯ
ಇದು ವಿಚಿತ್ರವಾಗಿ ತೋರಬಹುದು, ಆದರೆ ಸತ್ಯ. ವರ್ಕ್ಔಟ್ ಮಾಡುವಾಗ ನೀವು ನಿಮ್ಮ ಸ್ನಾಯುಗಳಿಗೆ ವ್ಯಾಯಾಮದಿಂದ ವ್ಯಾಯಾಮಕ್ಕೆ ಕನಿಷ್ಠ 30 ರಿಂದ 45 ಸೆಕೆಂಡ್‍ಗಳ ಕಾಲ ವಿಶ್ರಾಂತಿಯನ್ನು ನೀಡಿ. ಇದಕ್ಕಿಂತ ಅಧಿಕ ಸಮಯ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಹೋಗಬೇಡಿ. ಈ ನಿಟ್ಟಿನಲ್ಲಿ ನಿಮ್ಮ ಸಹಾಯಕ್ಕಾಗಿ ಒಂದು ಸ್ಟಾಪ್ ವಾಚ್ ಇಟ್ಟುಕೊಳ್ಳುವುದು ಒಳ್ಳೆಯದು.

ಸೂಕ್ತವಲ್ಲದ ತಂತ್ರಗಳು
ಸೂಕ್ತವಲ್ಲದ ತಂತ್ರಗಳು ನಿಮಗೆ ಅಪಾಯವನ್ನು ತರುವುದರ ಜೊತೆಗೆ, ನಿಮಗೆ ಬೇಕಾದ ಫಲಿತಾಂಶಗಳನ್ನು ಸಹ ದೊರೆಯದಿರುವಂತೆ ಮಾಡುತ್ತವೆ. ಅದಕ್ಕಾಗಿ ಸೂಕ್ತವಾದ ತಂತ್ರಗಳನ್ನು ಬಳಸಿ. ನಿಮ್ಮ ಸ್ನಾಯುಗಳನ್ನು ಒಳಗೊಳ್ಳುವ ವ್ಯಾಯಾಮಗಳಲ್ಲಿ ಮಾತ್ರ ನಿಮ್ಮನ್ನು ತೊಡಗಿಸಿಕೊಳ್ಳಿ. ಸುಮ್ಮನೆ ಹೆಚ್ಚಿನ ತೂಕ ಎತ್ತುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ನೆನಪಿಡಿ.

English summary

7 reasons you are not getting stronger

Are you training furiously in an attempt to get stronger? You may not be looking to become the World’s Strongest Man or Woman, you may just want to be able to get through a tough workout or easily pick up your five-year-old. Here are a few possible reasons why you’re not seeing growth and progress:
X
Desktop Bottom Promotion