For Quick Alerts
ALLOW NOTIFICATIONS  
For Daily Alerts

ಡಯಟಿಂಗ್ ಪ್ರಭಾವ ಬೀರದಿರಲು ಏಳು ಕಾರಣಗಳು

By Poornima Hegde
|

ಏನೇ ಮಾಡಿದರೂ ತೂಕ ಕಡಿಮೆ ಆಗುವುದಿಲ್ಲ. ಎಷ್ಟೇ ವ್ಯಾಯಾಮ ಮಾಡಿದರೂ ಹೊಟ್ಟೆ ಕರಗುವುದಿಲ್ಲ. ಗೆಳೆಯರ ಜೊತೆಗೆ ಸೇರುವಾಗ ಎಲ್ಲರೂ ಡುಮ್ಮ ಎಂದ ತಮಾಷೆ ಮಾಡುತ್ತಾರೆ ಏನು ಮಾಡುವುದು ತಿಳಿಯುತ್ತಿಲ್ಲ. ಎಂದು ಆಪಾದನೆ ಮಾಡುವ ಅದೆಷ್ಟೋ ಜನರನ್ನು ನಾವು ಕಾಣುತ್ತೇವೆ. ಇದು ನಿಜ ಕೂಡ. ಎಲ್ಲರೂ ಆಹಾರದಲ್ಲಿ ನಿಯಂತ್ರಣ ಮಾಡುತ್ತಾರೆ, ವ್ಯಾಯಾಮ ಮಾಡುತ್ತಾರೆ ಆದರೂ ತೂಕ ಹೆಚ್ಚಾಗುತ್ತದೆ.

ಹೆಚ್ಚಿನ ಜನರಲ್ಲಿ ಡಯಟಿಂಗ್ ಯಾಕೆ ಕೆಲಸ ಮಾಡುವುದಿಲ್ಲ ಎನ್ನುವುದಕ್ಕೆ ಹಲವು ಕಾರಣಗಳಿವೆ. ನಾವು ಡಯಟಿಂಗ್ ನ ಮೂಲ ಗುಣಗಳನ್ನು ತಿಳಿಯದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ನಮ್ಮ ಇಂಗಾಲದ ಸೇವನೆಯನ್ನು ಕಡಿಮೆ ಮಾಡಿದಷ್ಟೂ ನಮಗೆ ಲಾಭ ಹೆಚ್ಚು. ಸಾಮಾನ್ಯವಾಗಿ ಡಯಟಿಂಗ್ ಯಾಕೆ ಕೆಲಸ ಮಾಡುವುದಿಲ್ಲ ಎಂದರೆ ನಮ್ಮ ಮಾನವರ ಸಾಮಾನ್ಯ ಲಕ್ಷಣಗಳಿಂದಾಗಿ.

ಹೊಟ್ಟೆಯ ಕೊಬ್ಬು ಕರಗಿಸುವ ಅತ್ಯುತ್ತಮ 10 ಉಪಾಯಗಳು

ಬಹಳ ಬ್ಯುಸಿಯಾಗಿರುತ್ತವೆ.

ಬಹಳ ಬ್ಯುಸಿಯಾಗಿರುತ್ತವೆ.

ಸಣ್ಣ ಅವಧಿಯಲ್ಲಿ ಡಯಟಿಂಗ್ ಅನ್ನು ಮಾಡುತ್ತೇವೆ ಆದರೆ ಇದನ್ನೇ ಸತತವಾಗಿ ಮುಂದುವರಿಸಲು ನಮ್ಮಲ್ಲಿ ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಮ್ಮಲ್ಲಿ ಡಯಟಿಂಗ್ ಕೆಲಸ ಮಾಡುವುದಿಲ್ಲ. ಒಮ್ಮೆ ಆರಂಭಿಸಿ ಸ್ವಲ್ಪ ಪ್ರಭಾವ ಕಂಡ ಕೂಡಲೇ ಬಿಟ್ಟು ಬಿಡುತ್ತೇವೆ. ಹೀಗಾಗಿ ಡಯಟಿಂಗ್ ಪ್ರಭಾವ ಬೀರುವುದಿಲ್ಲ.

ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನಬಹುದು:

ಅಗತ್ಯಕ್ಕಿಂತ ಹೆಚ್ಚಾಗಿ ತಿನ್ನಬಹುದು:

ನಿಧಾನವಾಗಿ ತಿನ್ನಿ ನಿಮ್ಮ ಹಸಿವನ್ನು ಸರಿಯಾಗಿ ಅಂದಾಜಿಸಿ ತಿನ್ನಿ. ಬೇಕು ಎಂದೆನಿಸಿದಷ್ಟು ತಿನ್ನಿವುದು ಸರಿಯಲ್ಲ.

ಗಟ್ಟಿ ನಿರ್ಧಾರ ಬೇಕು,

ಗಟ್ಟಿ ನಿರ್ಧಾರ ಬೇಕು,

ಜೀವನ ಶೈಲಿಯ ಬದಲಾವಣೆಗಳಲ್ಲ: ಗಟ್ಟಿಯಾಗಿ ನಿರ್ಧಾರ ಮಾಡಿ ಅದರಂತೆ ನಡೆಯಬೇಕು. ಇಲ್ಲಿ ಯಾವುದೇ ಜಾದೂ ನಡೆಯದು ಕಷ್ಟ ಪಟ್ಟರಷ್ಟೇ ಸುಖವಿದೆ. ಬೇರೆಯವರ ನಿಯಮಗಳು ನಮಗೆ ಆಗಬೇಕೆಂದಿಲ್ಲ. ನಮ್ಮ ನಿರ್ಧಾರಗಳನ್ನು ಪಾಲಿಸಿದರೆ ಸಾಕು.

ನಮಗೆ ನಾವೇ ವಂಚನೆ ಮಾಡುತ್ತೇವೆ:

ನಮಗೆ ನಾವೇ ವಂಚನೆ ಮಾಡುತ್ತೇವೆ:

ಡಯಟಿಂಗ್ ಮಾಡುವವರಲ್ಲಿ ಒಂದು ಗುಣ ಎಂದರೆ ಮೊದಲೆರಡು ವಾರ ಬಹಳ ಕಟ್ಟುನಿಟ್ಟಿನ ಡಯಟಿಂಗ್ ನಡೆಯುತ್ತದೆ ಹಾಗೂ ನಂತರ ಹಿಂದಿನ ವಾರದಲ್ಲಿ ಸಾಕಷ್ಟು ಕಟ್ಟು ನಿಟ್ಟು ಮಾಡಿದ್ದೆ ಹಾಗಾಗಿ ಈ ವಾರದಲ್ಲಿ ಅಷ್ಟೇನೂ ಮಾಡುವುದಿಲ್ಲ ಎಂದು ತಿನ್ನಲು ಆರಂಭಿಸುತ್ತಾರೆ ಹಾಗೂ ಇದು ಮುಂದುವರೆಯುತ್ತಾ ಹೋಗುತ್ತದೆ. ನಾಳೆಯಿಂದ ಬಹಳ ಶಿಸ್ತು ಎಂದು ಹೇಳುತ್ತಾ ಹೋಗುತ್ತಾರೆ ಹಾಗೂ ಈ ನಾಳೆ ಬರುವುದೇ ಇಲ್ಲ.

ನಿಮ್ಮ ಭಾವನೆಗಳಿಗೆ ಹೆಚ್ಚು ಬೆಲೆ ಬೇಡ:

ನಿಮ್ಮ ಭಾವನೆಗಳಿಗೆ ಹೆಚ್ಚು ಬೆಲೆ ಬೇಡ:

ನಮ್ಮ ಭಾವನೆಗಳಿಗಿಂತ ನಮ್ಮ ಉದ್ದೇಶದ ಕಡೆಗೆ ಹೆಚ್ಚಿನ ಗಮನ ಇರಲಿ. ಏನೂ ತಿನ್ನಬೇಡ ಎಂದಾಕ್ಷಣ ಎಲ್ಲವನ್ನೂ ಬಿಟ್ಟಿಬಿಡಬೇಡಿ. ತಿನ್ನಿ ಆದರೆ ಆರೋಗ್ಯಕರ ಆಹಾರವನ್ನು ಸೇವಿಸಿ. ಯಾರಾದರೂ ತಿಂಡಿಗೆ ಕರೆದರೆ ಬರುವುದಿಲ್ಲ ಎನ್ನುವ ಬದಲು ಹೋಗಿ ಸ್ವಲ್ಪವೇ ಆಹಾರ ಸೇವಿಸಿ. ಹೆಚ್ಚು ತಿನ್ನುವ ಸಮಸ್ಯೆಯನ್ನು ಕಡಿಮೆ ಮಾಡಿ.

ಆಹಾರ ಸೇವನೆ ಸುಖ ನೀಡಲಿ:

ಆಹಾರ ಸೇವನೆ ಸುಖ ನೀಡಲಿ:

ಆಹಾರ ಸೇವನೆ ಖುಷಿಯ ಕೆಲಸ ನಿಜ. ನಿಮ್ಮ ಇಷ್ಟದ ಆಹಾರ ಸೇವನೆ ಮಾಡಿದಾಗ ನೀವು ಹೊಂದುವ ಭಾವನೆ ಹೇಳತೀರದು. ಆದರೆ ಇದು ಬಹಳ ಮಿತಿಮೀರದಂತೆ ಎಚ್ಚರ ವಹಿಸಿ. ಆದಷ್ಟು ಎಷ್ಟು ಬೇಕೋ ಅಷ್ಟೇ ತಿನ್ನಿ. ಹೆಚ್ಚು ಹೆಚ್ಚು ತಿನ್ನಬೇಡಿ. ಖುಷಿಗೆ ಆಹಾರ ಬೇಡ.

ಶಕ್ತಿಗೆ ಇವು ಅಗತ್ಯ:

ಶಕ್ತಿಗೆ ಇವು ಅಗತ್ಯ:

ಆಹಾರ ಸೇವನೆಯಲ್ಲಿ ಆನಂದ ಹೊಂದಿ ಆದರೆ ಅದನ್ನು ನಿಯಂತ್ರಣದಲ್ಲೂ ಇಡಿ. ಇದರಿಂದಾಗಿ ನಿಮ್ಮ ಜೀವನವೇ ನಿಯಂತ್ರಣದಲ್ಲಿರುತ್ತದೆ ಎಂದು ನೆನಪಿರಲಿ.

Read more about: health ಆರೋಗ್ಯ
English summary

7 Reasons Dieting Doesn't Work for Most People

There are many reasons dieting doesn’t work for most people. Some of those reasons rest in the basic concepts behind diets.
Story first published: Monday, May 12, 2014, 17:00 [IST]
X
Desktop Bottom Promotion