For Quick Alerts
ALLOW NOTIFICATIONS  
For Daily Alerts

ನೋವು ನಿವಾರಕ ಏಳು ಆಹಾರಗಳು

By Super
|

ನಮ್ಮ ದೇಹದಲ್ಲಿ ನಮ್ಮ ಕೆಲಸ, ಇಂದಿನ ಜೀವನ ಶೈಲಿ, ವಾತಾವರಣ ಹೀಗೆ ಹಲವಾರು ಕಾರಣಗಳಿಂದ ಹಲವಾರು ನೋವುಗಳು ಕಾಣಿಸಿಕೊಳ್ಳಬಹುದು. ಇಂತಹ ನೋವುಗಳಲ್ಲಿ ಜಂಟಿ ಕೀಲು ನೋವು, ಸ್ನಾಯು ನೋವು , ಹೃದಯದಲ್ಲಿ ಉರಿ ಇನ್ನೂ ಹಲವು ದಿನನಿತ್ಯವೂ ನಮ್ಮನ್ನು ಕಾಡುವಂತವು. ಆದರೆ ಇಂತಹ ನೋವುಗಳನ್ನು ಕೆಲವು ಆಹಾರಗಳ ಮೂಲಕ ಗುಣಪಡಿಸಬಹುದಾಗಿದೆ.

ನೀವು ಪ್ರತೀ ದಿನ ಸೇವಿಸಬಹುದಾದ 10 ಆಹಾರಗಳು

ಒಂದು ಮಾತ್ರೆ ತೆಗೆದುಕೊಂಡು ಸುಲಭವಾಗಿ ನೋವು ನಿವಾರಣೆಯಾದಂತೆ ಕಂಡುಬಂದರೂ ಆದರೆ ಮಾತ್ರೆಗಳು ಕೇವಲ ನೋವಿನ ಸಂಕೇತಗಳನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿವೆಯೇ ಹೊರತು ಸಂಪೂರ್ಣ ನಿಮ್ಮ ನರದ ನೋವುಗಳನ್ನಲ್ಲ.

ಇದು ಸಾಮಾನ್ಯವಾಗಿ ದೇಹಕ್ಕೆ ಹೊರಗಿನಿಂದ ಬರುವ ಸೋಂಕನ್ನುಂಟುಮಾಡುವ ಸೂಕ್ಷ್ಮ ಜೀವಾಣುಗಳಿಂದ ದೇಹವನ್ನು ರಕ್ಷಿಸಲು ರಕ್ಷಣಾ ತಂತ್ರವಾಗಿದೆ ಆದರೆ ಕೆಲವೊಮ್ಮೆ ಒತ್ತಡ ಅಥವಾ ಕೆಲವು ಇತರ ಅಂಶಗಳು ನೋವಿಗೆ ಕಾರಣವಾಗಿ ಈ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಕೆಲವು ನೋವಿನ ವಿರುದ್ಧ, ಹೋರಾಡುವ ಆಹಾರಗಳ ವಿವರಣೆಯನ್ನು ಕೆಳಗೆ ನೀಡಲಾಗಿದೆ :

ಮೆಂತ್ಯೆಯ 15 ಆರೋಗ್ಯ ಲಾಭಗಳು

ಅರಿಶಿನ:

ಅರಿಶಿನ:

ಇದು ಕರ್ಕ್ಯುಮಿನ್ ಎಂಬ ವಸ್ತುವನ್ನು ಹೊಂದಿರುವ ಒಂದು ಹಳದಿ ಮಸಾಲೆ ಪದಾರ್ಥವಾಗಿದೆ. ಈ ವಸ್ತುವಿನಲ್ಲಿರುವ ಉರಿಯೂತ ನಿಗ್ರಹಿಸುತ್ತವೆ, ದೀರ್ಘಕಾಲದ ನೋವಿನ ಚಿಕಿತ್ಸೆಗೆ ನೆರವಾಗುತ್ತದೆ. ಮೊಣಕಾಲಿನ ಅಸ್ಥಿಸಂಧಿವಾತದ ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ನೋವು ನಿವಾರಿಸಲು ಅನುಕೂಲಕರ ಎಂದು ಸಾಬೀತುಪಡಿಸಲಾಗಿದೆ.

ಶುಂಠಿ:

ಶುಂಠಿ:

ಕ್ಯಾನ್ಸರ್ ಮುಕ್ತ ರಾಡಿಕಲ್ಸ್ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡಲು, ವಾಕರಿಕೆ ಮತ್ತು ವಾಂತಿ ಮತ್ತು ನೋವು ನಿವಾರಣೆಗೆ ಪರಿಣಾಮಕಾರಿ ಪರಿಹಾರವಾಗಿ ಈ ಶುಂಠಿ ಬೇರನ್ನು ಪರಿಣಾಮಕಾರಿಯಾಗಿ. ಶುಂಠಿ, ಉರಿಯೂತ ವಿರೋಧಿ ಮತ್ತು ನೋವು ನಿವಾರಕ ಸಂಯುಕ್ತವನ್ನು ಹೊಂದಿದೆ. ಈ ಮಸಾಲೆಯನ್ನು ದೈನಂದಿನ ಆಹಾರದಲ್ಲಿ ಸೇರಿಸಿ ಅಥವಾ ವಿಶೇಷವಾಗಿ ಸ್ನಾಯು ನೋವು ಗುಣಪಡಿಸಲು ಚಹಾದಲ್ಲಿ ಮಿಶ್ರಣ ಮಾಡಿ ಕುಡಿಯಿರಿ.

ದಾಲ್ಚಿನ್ನಿ :

ದಾಲ್ಚಿನ್ನಿ :

ದಾಲ್ಚಿನ್ನಿ, ಕಾಫಿ, ಮೊಸರು ಅಥವಾ ಕಡಿಮೆ ಕೊಬ್ಬಿನ ಹಾಲಿನೊಂದಿಗೆ ಬೆರೆಸಿ ಸೇವಿಸಬಹುದಾಗಿದೆ. ಇದು ನೋವನ್ನು ನಿವಾರಿಸುವುದು ಮತ್ರವಲ್ಲದೆ, ಬ್ಯಾಕ್ಟೀರಿಯಾದ ಸೋಂಕುಗಳು, ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಮತ್ತು ಸರಿಯಾದ ಮೆದುಳಿನ ಕಾರ್ಯಚಟುವಟಿಕೆಯನ್ನು ಹೆಚ್ಚಿಸಲು ನೆರವಾಗುವ ಅತ್ಯುತ್ತತ್ತಮ ಮಸಾಲೆ ಇದಾಗಿದೆ.

ಚೆರ್ರಿಗಳು:

ಚೆರ್ರಿಗಳು:

ಐಬ್ರುಫೇನ್ ನೋವು ನಿವಾರಣೆಯಲ್ಲಿ ಎಷ್ಟು ಹೆಸರುವಾಸಿಯೋ ಟಾರ್ಟ್ ಚೆರ್ರಿಗಳೂ ಅಷ್ಟೇ ಪ್ರಭಾವಶಾಲಿ. ಒಂದು ಸಂಶೋಧನೆಯ ಫಲಿತಾಂಶದ ಪ್ರಕಾರ ಪ್ರತಿ ದಿನ ನಾಲ್ಕರಿಂದ ಐದು ಚೆರ್ರಿಗಳನ್ನು ಸೇವಿಸಿದರೆ ಆರ್ಥರಿಟಿಸ್ ನಿಂದಾದ ನೋವನ್ನು ಸುಮಾರು 25 % ಕಡಿಮೆ ಮಾಡುತ್ತದೆ. ಚೆರ್ರಿಗಳು ಸಿ ರಿಯಾಕ್ಟಿವ್ ಪ್ರೊಟೀನ್ ಅನ್ನು ಕಡಿಮೆ ಮಾಡುವ ಮೂಲಕ ಕೆಲಸ ಮಾಡುತ್ತವೆ ಇದು ಉರಿಯೂತ ಕ್ರಿಯೆಯ ರಚನೆಗೆ ಬಹಳ ಅಗತ್ಯ. ಇದರ ಇನ್ನಿತರ ಪ್ರಮುಖ ಉಪಯೋಗಗಳೆಂದರೆ ಕೊಲೆಸ್ಟರಾಲ ಮಟ್ಟವನ್ನು ಕಡಿಮೆ ಮಾಡುವುದು ಹಾಗೂ ಸ್ನಾಯುಗಳ ನೋವನ್ನು ಕಡಿಮೆ ಮಾಡುವುದು.

ಬೀಜಗಳು:

ಬೀಜಗಳು:

ವಿವಿಧ ಬೀಜಗಳಲ್ಲಿ ಬೇರೆ ಬೇರೆ ರೀತಿಯ ಉರಿಯೂತ ನಿವಾರಕ ಗುಣಗಳಿದ್ದು ಎಲ್ಲವೂ ನೋವು ನಿವಾರಕಗಳಾಗಿ ಕೆಲಸ ಮಾಡುತ್ತವೆ. ಆಕ್ರೋಟ ಬೀಜಗಳು ಒಮೆಗಾ - 3 ಕೊಬ್ಬಿನ ಅಂಶಗಳಿಂದ ತುಂಬಿದ್ದು ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ. ಬಾದಾಮಿಗಳು ರಿಬೊಫ್ಲೆವಿನ್ ನಿಂದ ಕೂಡಿವೆ. ಇವುಗಳು ಸ್ನಾಯು ಸೆಳೆತ ಮತ್ತು ಮೆದುಳಿನ ಮಂಜು ಉಂಟಾಗುವ ಪಿ.ಎಮ್.ಎಸ್ ಅನ್ನು ಗುಣಪಡಿಸಲು ಬಳಸುತ್ತಾರೆ. ಪಿಸ್ತಾಗಳು ವಿಟಮಿನ್ ಬಿ6 ಅನ್ನು ಹೊಂದಿದ್ದು ಇದು ಕೂಡ ಸ್ನಾಯು ಸೆಳೆತ, ಹಾಗೂ ಪಿ.ಎಮ್.ಎಸ್ ನೊಂದಿಗೆ ನಂಟು ಹೊಂದಿರುವ ಇತರೆ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಕಾಳುಗಳು:

ಕಾಳುಗಳು:

ನೊವು ನಿವಾರಕ ಗುಣಗಳಿರುವ ಮೂರು ಕಾಳುಗಳಿವೆ. ಕುಂಬಳಕಾಯಿಯ ಬೀಜಗಳಲ್ಲಿ ಮ್ಯಾಗ್ನೇಶಿಯಂ ಇದ್ದು ಇದು ಮೈಗ್ರೇನ್ ನ ನಿವಾರಣೆಗೆ ಬಹಳ ಸಹಕಾರಿ. ಮೈಗ್ರೇನ್ ನೋವು ಮ್ಯಾಗ್ನೇಷಿಯಂ ನ ಕೊರತೆಯಿಂದಾಗಿಯೇ ಬರುತ್ತದೆ. ಸಾಮಾನ್ಯ ತಲೆನೋವಿನ ಸಂದರ್ಭದಲ್ಲಿ ಮೆದುಳಿನ ನರಗಳು ಹಿಗ್ಗಲ್ಪಟ್ಟು ನೋವನ್ನು ಉಂಟುಮಾಡುತ್ತವೆ. ಈ ನೋವನ್ನು ಕೋಕೊ ಸೇವನೆಯಿಂದ ಅಥವಾ ಒಂದು ಲೋಟ ಕಾಫಿಯ ಸೇವನೆಯಿಂದ ಕಡಿಮೆ ಮಾಡಬಹುದು. ಕೋಕೊ ದಲ್ಲಿರುವ ಕೆಫೇನ್ ನರಗಳನ್ನು ವಿಸ್ತರಿಸದಂತೆ ಮಾಡಿ ನೋವನ್ನು ಕೂಡಲೇ ಕಡಿಮೆ ಮಾಡುತ್ತವೆ. ಫ್ಲಾಕ್ಸ್ ಸೀಡ್ ಒಮೆಗಾ ಕೊಬ್ಬು ಇರುವ ಆಹಾರಗಳಲ್ಲಿ ಹೆಚ್ಚಾಗಿದ್ದು ಉರಿಯೂತ ನಿವಾರಕ ಗುಣದಿಂದಾಗಿ ನೋವನ್ನು ಕಡಿಮೆ ಮಾಡುತ್ತದೆ.

ಅನನಾಸು:

ಅನನಾಸು:

ಅನನಾಸಿನಲ್ಲಿ ಎಂಜೈಮ್ ಗಳಿದ್ದು ಇವನ್ನು ಬ್ರೊಮಲೈನ್ ಎಂದು ಕರೆಯುತ್ತಾರೆ ಇವು ಸ್ನಾಯುಗಳ ನೋವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಾಯಕ. ಇದರ ಜೊತೆಗೆ ಸಂಧಿವಾತದ ಬಹಳ ತೀವ್ರಕರವಾದ ನೋವನ್ನು ನಿವಾರಣೆ ಮಾಡುವಲ್ಲೂ ಇದು ಬಹಳ ಸಹಾಯಕ. ಇದು ನೋವು ನಿವಾರಣೆಯಲ್ಲಿ ಬಹಳ ಶಕ್ತಿಯುತವಾದ ಔಷಧ ಎಂದು ಹೆಸರುವಾಸಿ.

Read more about: health ಆರೋಗ್ಯ
English summary

7 Pain Fighting Foods

Different kinds of pain such as joint ach, muscle pain, heart burn and PMS cramps can be easily cured by having certain foods. Different kinds of pain such as joint ach, muscle pain, heart burn and PMS cramps can be easily cured by having certain foods.
Story first published: Wednesday, May 7, 2014, 12:10 [IST]
X
Desktop Bottom Promotion