For Quick Alerts
ALLOW NOTIFICATIONS  
For Daily Alerts

ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು

|

ಭಾರತೀಯರು ಭೋಜನಪ್ರಿಯರು ವಿಧ ವಿಧ ಭಕ್ಷ್ಯಭೋಜನಗಳನ್ನು ರುಚಿಯಾಗಿ ತಯಾರಿಸುವುದರಲ್ಲಿ ಸಿದ್ಧಹಸ್ತರು. ಸಿಹಿತಿಂಡಿಗಳು ನಮ್ಮ ಪ್ರತಿಯೊಂದು ಹಬ್ಬಗಳಲ್ಲೂ ಅದರದ್ದೇ ಆದ ಮಹತ್ವವನ್ನು ಹೊಂದಿವೆ. ಈ ಸಿಹಿವಸ್ತುಗಳನ್ನು ತಯಾರಿಸುವ ಪ್ರತಿಯೊಂದು ಸಾಮಾಗ್ರಿಯೂ ಮಹತ್ವಪೂರ್ಣವಾದುದು.

ಬರಿಯ ತುಪ್ಪ, ಸಕ್ಕರೆ, ಏಲಕ್ಕಿ ಮಾತ್ರ ಸಿಹಿಗೆ ರುಚಿಯನ್ನು ಒದಗಿಸುವುದಿಲ್ಲ. ಸಮ ಪ್ರಮಾಣದ ಬೀಜಗಳನ್ನು ಅಂದರೆ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಹೀಗೆ ಇವುಗಳನ್ನು ಸೇರಿಸುವುದು ಅತ್ಯವಶ್ಯಕವಾದುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಿತ್ತಜನಕಾಂಗದ ರೋಗಕ್ಕೆ ಪರಿಣಾಮಕಾರಿ ಮನೆ ಮದ್ದುಗಳು

ಪಾಯಸ, ರಸಾಯನ, ಕೇಸರಿ ಹೀಗೆ ಪ್ರತಿಯೊಂದು ಸಿಹಿತಿಂಡಿಗೂ ಈ ಬೀಜಗಳ ಬಳಕೆ ಆಗಲೇ ಬೇಕು. ಬೀಜಗಳಲ್ಲಿ ಗೋಡಂಬಿಗೆ ಅದರದ್ದೇ ಆದ ಪ್ರಾಧಾನ್ಯತೆ ಇದೆ. ಗೋಡಂಬಿ ಬೆರೆಸಿ ತಯಾರಿಸಿದ ಪದರತಿಯೊಂದು ಆಹಾರವೂ ರುಚಿಕರ ಮತ್ತು ಆರೋಗ್ಯಕರ.

ಇದನ್ನು ಕೆಂಪಗೆ ತುಪ್ಪದಲ್ಲಿ ಹುರಿದು ಪ್ರತಿಯೊಂದು ಆಹಾರ ಪದಾರ್ಥಕ್ಕೆ ಸೇರಿಸಿದರೆ ಅದರ ರುಚಿ ಅತ್ಯಮೋಘವಾಗಿರುತ್ತದೆ. ಉಪ್ಪು ಮೆಣಸು ಸಮಪ್ರಮಾಣದಲ್ಲಿ ಬೆರೆಸಿ ಗೋಡಂಬಿಯನ್ನು ಹುರಿದರೆ ಅದರ ಸ್ವಾದ ಬಣ್ಣಿಸಲು ಸಾಧ್ಯವಿಲ್ಲದಂತಾಗಿರುತ್ತದೆ.

ಗೋಡಂಬಿಯನ್ನು ಹಾಗೆ ಕೂಡ ತಿನ್ನಬಹುದು.ಹೌದು ಗೋಡಂಬಿಯ ಈ ಮಹತ್ವಪೂರ್ಣತೆ ಬರೀ ಬಾಯಿ ರುಚಿಗೆ ಮಾತ್ರವಲ್ಲ, ಇದನ್ನು ಆರೋಗ್ಯಕ್ಕೂ ಬಳಸಬಹುದು. ಹೌದು ಗೋಡಂಬಿಯು ನಮ್ಮ ಆರೋಗ್ಯಕ್ಕೆ ನೀಡುವ ಪಾತ್ರ ಅತ್ಯಂತ ಹಿರಿದಾದುದು. ಅದು ಹೇಗೆಂದು ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಶ್ವಾಸಕೋಶ ಕಾಪಾಡಿಕೊಳ್ಳಲು 9 ಸಲಹೆಗಳು

ಕ್ಯಾನ್ಸರ್ ನಿರ್ಬಂಧಕ

ಕ್ಯಾನ್ಸರ್ ನಿರ್ಬಂಧಕ

ಗೋಡಂಬಿಯು ಟ್ಯೂಮರ್ ಮತ್ತು ಕ್ಯಾನ್ಸರ್ ಸೆಲ್ ಅನ್ನು ನಿರ್ಬಂಧಿಸುವ ಫ್ಲೇವನೋಲ್‌ಗಳ ಒಂದು ವರ್ಗದಿಂದ ಯಥೇಚ್ಛವಾಗಿವೆ. ನಿಮ್ಮ ಕರುಳಿನ ಕ್ಯಾನ್ಸರ್ ಅಪಾಯವನ್ನು ಇದು ತಡೆಗಟ್ಟುತ್ತದೆ. ಹೃದಯ ರೋಗ ಮತ್ತು ಕ್ಯಾನ್ಸರ್‌ನಿಂದ ನಮ್ಮನ್ನು ರಕ್ಷಿಸುವ ಫೈಟೋ - ಕೆಮಿಕಲ್ಸ್ ಮತ್ತು ಆಂಟಿಯೋಕ್ಸಿಡೆಂಟ್‌ಗಳ ಮಿಶ್ರಣ ಗೋಡಂಬಿಯಲ್ಲಿದೆ.

ಹೃದಯಕ್ಕೆ ಉತ್ತಮ

ಹೃದಯಕ್ಕೆ ಉತ್ತಮ

ಗೋಡಂಬಿಯು ಕಡಿಮೆ ಕೊಬ್ಬಿನಂಶವನ್ನು ಹೊಂದಿದ್ದು ಇತರ ಬೀಜಗಳಿಗಿಂತ (ನಟ್ಸ್) ಪ್ರೋಟೀನ್ ವಿಟಮಿನ್ ಭರಿತವಾಗಿದೆ. ಇದರಲ್ಲಿರುವ ಓಲಿಕ್ ಏಸಿಡ್, ಆಲೀವ್ ಆಯಿಲ್‌‌ನಲ್ಲಿನ ಕೊಬ್ಬು ರಹಿತ ಅಂಶಕ್ಕೆ ಸರಿಸಮವಾಗಿದೆ. ಹೃದಯ ಕಾಯಿಲೆಗಳನ್ನು ಹೆಚ್ಚು ಮಾಡುವ ಅಪಾಯದೊಂದಿಗೆ ಸಮ್ಮಿಳಿತಗೊಂಡಿರುವ ಟ್ರಿಗ್ಲಿಸಿರೈಡ್ ಅಂಶವನ್ನು ಕಡಿಮೆ ಮಾಡಿ ಹೃದಯನಾಳದ ಆರೋಗ್ಯವನ್ನು ಸುಧಾರಿಸುತ್ತದೆ. ಗೋಡಂಬಿಯು ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಅಧಿಕ ಆಂಟಿಯೋಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ. ಗೋಡಂಬಿಗಳಲ್ಲಿರುವ ಮೆಗ್ನೇಶಿಯಂ ಕಡಿಮೆ ರಕ್ತದೊತ್ತಕ್ಕೆ ಸಹಾಯ ಮಾಡಿ ಹೃದಯಾಘಾತಗಳನ್ನು ನಿರ್ಬಂಧಿಸಲು ಸಹಾಯ ಮಾಡುತ್ತದೆ.

ಕೂದಲು ಮತ್ತು ತ್ವಚೆಯ ಆರೋಗ್ಯ

ಕೂದಲು ಮತ್ತು ತ್ವಚೆಯ ಆರೋಗ್ಯ

ಗೋಡಂಬಿಯು ಮಿನರಲ್ ಕೋಪರ್‌ನಲ್ಲಿ ಶ್ರೀಮಂತವಾಗಿದೆ. ಇದರಲ್ಲಿರುವ ಎಂಜೀಮ್ಸ್ ಮತ್ತು ಕೋಪರ್ ಕೂದಲು ಹಾಗೂ ತ್ವಚೆಗೆ ಹೊಳಪನ್ನು ನೀಡುತ್ತದೆ.

ಮೂಳೆಯ ಆರೋಗ್ಯ

ಮೂಳೆಯ ಆರೋಗ್ಯ

ಗೋಡಂಬಿಯಲ್ಲಿ ಮೆಗ್ನೇಶಿಯಂ ಅಧಿಕವಾಗಿದ್ದು, ಮೂಳೆಗಳ ಸುದೃಢತೆಗೆ ಸಹಕಾರಿಯಾಗಿದೆ. ನಮ್ಮ ದೇಹದಲ್ಲಿರುವ ಮೇಗ್ನೇಶಿಯಂ ಅಧಿಕ ಭಾಗ ಮೂಳೆಗಳಲ್ಲಿದೆ. ಗೋಡಂಬಿಯಲ್ಲಿರುವ ಕೋಪರ್ ಅಂಶವು ಮೂಳೆಗೆ ದೃಢತೆ ಮತ್ತು ನಮ್ಯತೆಯನ್ನು ನೀಡುತ್ತದೆ.

ನರಗಳಿಗೆ ಅತ್ಯುತ್ತಮ

ನರಗಳಿಗೆ ಅತ್ಯುತ್ತಮ

ಕ್ಯಾಲ್ಶಿಯಂನ ಅಧಿಕ ಪ್ರಮಾಣವು ನರ ಮಂಡಲಗಳಿಗೆ ಧುಮುಕದಂತೆ ಮತ್ತು ಅವುಗಳನ್ನು ಕ್ರಿಯಾತ್ಮಕಗೊಳ್ಳದಂತೆ ತೆಹಿಡಿಯುವಲ್ಲಿ ಗೋಡಂಬಿಯ ಪಾತ್ರ ಅತ್ಯಂತ ಹಿರಿದಾದುದು. ಮೆಗ್ನೇಶಿಯಂ ನ ಅಂಶ ನರಗಳನ್ನು ವಿಶ್ರಮಗೊಳಿಸಿ ನರಮಂಡಲಗಳು ಹಾಗೂ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಗೋಡಂಬಿಯಲ್ಲಿರುವ ಮೆಗ್ನೇಶಿಯಂನ ಅಂಶ ಮೈಗ್ರೇನ್ ದಾಳಿ, ಕಡಿಮೆ ರಕ್ತದೊತ್ತಡ, ಹೃದಯಾಘಾತವನ್ನು ತಡೆಯುತ್ತದೆ.

ಪಿತ್ತಕಲ್ಲುಗಳನ್ನು ನಿರ್ಬಂಧಿಸುತ್ತದೆ

ಪಿತ್ತಕಲ್ಲುಗಳನ್ನು ನಿರ್ಬಂಧಿಸುತ್ತದೆ

ಗೋಡಂಬಿಯಂತಹ ನಟ್ಸ್ ಅನ್ನು ಸೇವಿಸಿದಂತಹ ಮಹಿಳೆಯರಲ್ಲಿ ಪಿತ್ತಕಲ್ಲುಗಳ ರಚನೆ 25% ದಷ್ಟು ಕಡಿಮೆಯಾಗಿದೆ ಎಂಬ ಅಂಶವನ್ನು ನರ್ಸಸ್ ಹೆಲ್ತ್ ಸ್ಟಡಿ ದೃಢಪಡಿಸಿದೆ.

ತೂಕ ಇಳಿಕೆ

ತೂಕ ಇಳಿಕೆ

ಅಪರೂಪಕ್ಕೆ ನಟ್ಸ್ ತಿನ್ನುವವರಿಗಿಂತ ವಾರಕ್ಕೆ ಎರಡು ಬಾರಿ ನಟ್ಸ್ ತಿನ್ನುವವರ ತೂಕವು ಇಳಿಕೆಯಾದುದು ಗಮನಕ್ಕೆ ಬಂದಿದೆ. ಗೋಡಂಬಿಯಲ್ಲಿರುವ ಕೊಬ್ಬು ಉತ್ತಮ ಕೊಬ್ಬಾಗಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ.

Read more about: health ಆರೋಗ್ಯ
English summary

7 amazing health benefits of Cashews Nuts

Cashews are ripe with proanthocyanidins, a class of flavanols that actually starve tumors and stop cancer cells from dividing. Studies have also shown that cashews can reduce your colon cancer risk.
Story first published: Friday, January 31, 2014, 11:39 [IST]
X
Desktop Bottom Promotion