For Quick Alerts
ALLOW NOTIFICATIONS  
For Daily Alerts

ಎಚ್ಚರ: ಮಾರಕ ಅಧಿಕ ರಕ್ತದೊತ್ತಡದ 6 ಲಕ್ಷಣಗಳೇನು?

|

ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯವಾದ ಆರೋಗ್ಯದ ಸಮಸ್ಯೆಯಾಗಿದ್ದು, ಇದು ಅಧಿಕ ಸಂದರ್ಭಗಳಲ್ಲಿ ನಿಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿ ಬಿಡುತ್ತದೆ. ಅಧಿಕ ರಕ್ತದೊತ್ತಡದಿಂದ ನರಳುವ ಸುಮಾರು ಜನರಿಗೆ ತುಂಬಾ ವರ್ಷಗಳ ಕಾಲ ಅದರ ಲಕ್ಷಣಗಳು ಕಂಡು ಬಂದಿರುವುದಿಲ್ಲ. ರಕ್ತವು ರಕ್ತ ನಾಳಗಳ ಮೂಲಕ ಹರಿಯುವಾಗ ಅಪಧಮನಿಯ ಗೋಡೆಗಳ ಮೇಲೆ ಉಂಟು ಮಾಡುವ ಒತ್ತಡವೇ ರಕ್ತದೊತ್ತಡ.

ಅಂದರೆ ಯಾವಾಗ ಒಬ್ಬ ವ್ಯಕ್ತಿಯು ತಾನು ಅಧಿಕ ರಕ್ತದೊತ್ತಡದಿಂದ ನರಳುತ್ತಿದ್ದೇನೆ ಎಂದು ಹೇಳುತ್ತಾನೋ, ಆಗ ಅವನ ಅಪಧಮನಿಯ ಗೋಡೆಗಳು ಹೃದಯದಿಂದ ಪಂಪ್ ಆಗಿ ಬರುವ ರಕ್ತದ ಅಧಿಕವಾದ ಒತ್ತಡವನ್ನು ಸ್ವೀಕರಿಸುತ್ತಿವೆ ಎಂದು ಭಾವಿಸಿ. ಸಾಮಾನ್ಯವಾದ ರಕ್ತದೊತ್ತಡವು 140/80mmHg ಇರುತ್ತದೆ. ಯಾವಾಗ ಇದು 140/90mmHg ಆಗುತ್ತದೋ, ಆಗ ನೀವು ಅದಕ್ಕಾಗಿ ಪರೀಕ್ಷೆಯನ್ನು ನಡೆಸಿ ಕಾರಣವನ್ನು ತಿಳಿದು ಕೊಳ್ಳಬಹುದು.

ಆದರೆ ಇದು ವಯಸ್ಸು ಮತ್ತು ಮಾನಸಿಕ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತ ಹೋಗುತ್ತದೆ. 30 ವರ್ಷ ಮೇಲ್ಪಟ್ಟವರು ಯಾರೇ ಆಗಿರಲಿ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

6 Signs Of High Blood Pressure

ಸುಮಾರು ವಿಚಾರಗಳು ರಕ್ತದೊತ್ತಡದ ಮೇಲೆ ಪ್ರಭಾವ ಬೀರುತ್ತಲೆ ಇರುತ್ತವೆ. ಅವು ವಯಸ್ಸು, ಕುಟುಂಬದ ಇತಿಹಾಸ, ಸ್ಥೂಲ ಕಾಯ, ದೈಹಿಕ ಚಟುವಟಿಕೆಗಳು, ಧೂಮಪಾನ ಮತ್ತು ಮಧ್ಯಪಾನದ ಸೇವನೆ ಮುಂತಾದ ವಿಚಾರಗಳಾಗಿರಬಹುದು. ಈ ಪರಿಸ್ಥಿತಿಯನ್ನು ಹಾಗೆಯೇ ಚಿಕಿತ್ಸೆ ನೀಡದೆ ಬಿಟ್ಟಲ್ಲಿ, ದೀರ್ಘ ಕಾಲದ ನಂತರ ಇದು ಮೂತ್ರ ಪಿಂಡದ ವೈಫಲ್ಯ, ಹೃದಯ ರೋಗ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗಬಹುದು.

ಒಂದು ವೇಳೆ ನಿಮಗೆ ಹೈಪರ್ ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡ ಬರುವ ಸಾಧ್ಯತೆಯಿದ್ದಲ್ಲಿ ಇದರ ಮುನ್ಸೂಚನೆಯನ್ನು ಸಾರುವ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇದರಿಂದ ನೀವು ಸಕಾಲದಲ್ಲಿ ವೈಧ್ಯಕೀಯ ನೆರವನ್ನು ಪಡೆಯಲು ಸಹಾಯವಾಗುತ್ತದೆ. ಬನ್ನಿ ಆ ಲಕ್ಷಣಗಳ ಕುರಿತಾಗಿ ಮೊದಲು ತಿಳಿದುಕೊಳ್ಳೋಣ. ಅಧಿಕ ರಕ್ತದೊತ್ತಡ ತಡೆಯಲು 10 ಗಿಡಮೂಲಿಕೆಗಳು

ತಲೆನೋವು
ಯಾವಾಗ ನಿಮ್ಮ ರಕ್ತದೊತ್ತಡವು 180/110mmHg ಮೀರುತ್ತದೆಯೋ, ಆಗ ನಿಮಗೆ ತೀವ್ರತರವಾದ ತಲೆನೋವು ಕಾಣಿಸಿಕೊಳ್ಳಬಹುದು. ಆದರೆ ರಕ್ತದೊತ್ತಡದಲ್ಲಿ ಸ್ವಲ್ಪ ಮಟ್ಟಿಗಿನ ಏರಿಕೆ ಕಂಡು ಬಂದರು ತಲೆನೋವು ಸಾಮಾನ್ಯವಾಗಿ ಕಂಡು ಬರುತ್ತದೆ. ತಲೆನೋವುಗಳು ಅಧಿಕ ರಕ್ತದೊತ್ತಡದ ಜೊತೆಯಲ್ಲಿ ಯಾವಾಗಲು ತಳುಕು ಹಾಕಿಕೊಂಡಿರುತ್ತವೆ. ಇದು ಇದರ ಪ್ರಮುಖ ಲಕ್ಷಣವಷ್ಟೇ ಅಲ್ಲ, ಈ ಸ್ಥಿತಿಯು ಗಂಭೀರ ಹಂತವನ್ನು ತಲುಪಿರುತ್ತದೆ.

ಮೂಗಿನಲ್ಲಿ ರಕ್ತ ಸ್ರಾವ
ಮೂಗಿನಲ್ಲಿ ರಕ್ತ ಸ್ರಾವವಾಗುವ ಲಕ್ಷಣವು ಅಧಿಕ ರಕ್ತದೊತ್ತಡ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದಾಗ ಕಂಡು ಬರುತ್ತದೆ. ಒಂದು ವೇಳೆ ನಿಮಗೆ ಮೂಗಿನಲ್ಲಿ ನಿರಂತರವಾಗಿ ರಕ್ತ ಸ್ರಾವವಾಗುತ್ತಿದ್ದಲ್ಲಿ, ಅದನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗದೆ ಇದ್ದಲ್ಲಿ, ದಯವಿಟ್ಟು ತಕ್ಷಣ ವೈಧ್ಯರನ್ನು ಕಾಣುವುದು ಒಳಿತು.

ಕಣ್ಣಿನ ಮೇಲೆ ರಕ್ತದ ಕಲೆಗಳು
ಕಣ್ಣಿನ ಮೇಲೆ ರಕ್ತದ ಕಲೆಗಳು ಕಂಡು ಬಂದಲ್ಲಿ ಬಹುಶಃ ಅದು ಕಣ್ಣಿನ ಪಾಪೆಯ ಮೇಲೆ ಆದ ಗಾಯದಿಂದ ಉಂಟಾದ ರಕ್ತಸ್ರಾವವಾಗಿರಬಹುದು ಅಥವಾ ಅಧಿಕ ರಕ್ತದೊತ್ತಡ, ಇಲ್ಲವೇ ಮಧುಮೇಹದ ಲಕ್ಷಣವಾಗಿರಬಹುದು. ಇದನ್ನು ಕಣ್ಣಿನ ತಜ್ಞರು ಪರೀಕ್ಷೆ ಮಾಡಿ ನಿವಾರಿಸಬಲ್ಲರು. ಒಂದು ವೇಳೆ ಇದು ಕಣ್ಣಿಗೆ ಸಂಬಂಧಪಡದೆ ಇದ್ದಲ್ಲಿ ರಕ್ತದೊತ್ತಡವನ್ನು ನಿವಾರಿಸಬೇಕಾಗುತ್ತದೆ.

ಅಧಿಕ ಪ್ರಮಾಣದ ಜೋಮು
ಅಧಿಕ ರಕ್ತದೊತ್ತಡದಿಂದ ಪಾರ್ಶ್ವ ವಾಯು ಸಂಭವಿಸಬಹುದು. ಇದರ ಮುನ್ಸೂಚನೆಯೇ ಅಧಿಕ ಪ್ರಮಾಣದ ಜೋಮು ಕಾಣಿಸಿಕೊಳ್ಳುವುದು. ನಿರಂತರವಾದ, ತಡೆಯಿಲ್ಲದ ರಕ್ತದೊತ್ತಡವು ನರಗಳನ್ನು ಹಾಳು ಮಾಡಿಬಿಡುತ್ತದೆ. ಇದು ಈ ಪಾರ್ಶ್ವವಾಯುಗೆ ಮೂಲ ಕಾರಣವಾಗುತ್ತದೆ.

ನಾಸಿಯಾ ಮತ್ತು ವಾಂತಿ
ಅಧಿಕ ರಕ್ತದೊತ್ತಡದ ಮತ್ತೊಂದು ಮುನ್ಸೂಚನೆ ವಾಂತಿ ಮತ್ತು ನಾಸಿಯಾ. ವಾಂತಿಯು ಇನ್ನಿತರ ಕಾರಣಗಳಿಗೆ ಸಂಬಂಧಪಟ್ಟಿರುವುದು ನಿಜವಾದರೂ, ದೃಷ್ಟಿಯಲ್ಲಿ ಲೋಪ ದೋಷಗಳು ಅಥವಾ ಉಸಿರಾಟದಲ್ಲಿ ಏರುಪೇರಾಗುವುದು ಜೊತೆಗಿದ್ದಲ್ಲಿ ಒಮ್ಮೆ ವೈಧ್ಯರನ್ನು ಕಾಣುವುದು ಒಳ್ಳೆಯದು. ಕಡಿಮೆ ರಕ್ತದೊತ್ತಡವುಂಟಾಗಲು ಪ್ರಮುಖ 10 ಕಾರಣಗಳು

ತಲೆ ಸುತ್ತು
ತಲೆ ಸುತ್ತು ಎರಡು ಲಕ್ಷಣಗಳಲ್ಲಿ ಕಂಡು ಬರುತ್ತದೆ. ಒಂದು ಹಗುರವಾದ ತಲೆ ತಿರುಗುವಿಕೆಯಾದರೆ ಮತ್ತೊಂದು ತಲೆ ಸುತ್ತುವಿಕೆ. ಇದನ್ನು ಉದಾಸೀನ ಮಾಡಬೇಡಿ. ವಿಶೇಷವಾಗಿ ಇದ್ದಕಿದ್ದಂತೆ ಇದು ಕಾಣಿಸಿಕೊಳ್ಳುತ್ತಿದ್ದರೆ ಮೊದಲು ವೈಧ್ಯರ ಬಳಿ ತಪಾಸಣೆ ಮಾಡಿಕೊಳ್ಳಿ. ಸುಸ್ತಾಗುವುದು, ನಿಮ್ಮ ದೇಹದ ಮೇಲೆ ನೀವು ನಿಯಂತ್ರಣ ಕಳೆದುಕೊಳ್ಳುವುದು, ನಡೆದಾಡಲು ತೊಂದರೆಪಡುವುದು ಇವೆಲ್ಲವು ಪಾರ್ಶ್ವವಾಯುವಿನ ಮುನ್ಸೂಚನೆಗಳು.

English summary

6 Signs Of High Blood Pressure

High blood pressure is a common health issue that puts your life under many health risks. People may suffer from high blood pressure for years without showing any signs of it. Blood pressure is the force applied on the arterial walls during blood flow.
Story first published: Thursday, October 2, 2014, 11:33 [IST]
X
Desktop Bottom Promotion