For Quick Alerts
ALLOW NOTIFICATIONS  
For Daily Alerts

ಆಹಾರವನ್ನು ಬೇಯಿಸುವ 5 ಅನಾರೋಗ್ಯಕರ ವಿಧಾನಗಳು

|

ಆರೋಗ್ಯಪೂರ್ಣ ಆಹಾರವೆಂದರೆ ಉತ್ತಮ ಹಸಿರು ತರಕಾರಿಗಳು ಮತ್ತು ಪರಿಪೂರ್ಣ ಆಹಾರ ವಿಧಾನಗಳನ್ನು ಒಳಗೊಂಡಿರುವುದು ಮಾತ್ರವಲ್ಲ. ನೀವು ಆಹಾರವನ್ನು ತಯಾರಿಸುವ ವಿಧಾನ ಕೂಡ ಇದಕ್ಕೆ ಸೇರ್ಪಡೆಗೊಳ್ಳುತ್ತದೆ. ನೀವು ಮನೆಯಲ್ಲಿ ತಯಾರಿಸುವ ಆಹಾರವನ್ನೂ ಕೂಡ ಹೈಜೀನಿಕ್ ಆಗಿ ತಯಾರಿಸುವುದು ಅತ್ಯಗತ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ನೀವು ಹೋಟೆಲ್‌ನಲ್ಲಿ ತಯಾರಿಸಿದ ಆಹಾರವನ್ನು ಕೊಂಡೊಯ್ದರೆ ಅದನ್ನು ಸರಿಯಾಗಿ ಬೇಯಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅನಾರೋಗ್ಯಕರ ವಿಧಾನದಲ್ಲಿ ಬೇಯಿಸಿದ ಆಹಾರವೆಂದರೆ ಅದು ಅನಾರೋಗ್ಯಕರ ಆಹಾರವೆಂದೇ ಅರ್ಥ. ಅನಾರೋಗ್ಯಕರ ವಿಧಾನದಲ್ಲಿ ತಯಾರಿಸಿದ ಆಹಾರಪದಾರ್ಥವು ಹಲವಾರು ರೋಗಗಳು, ದೇಹದ ತೂಕ ಏರಿಕೆ ಮತ್ತು ಅವಶ್ಯಕ ನ್ಯೂಟ್ರೀನ್‌ಗಳ ಪೂರೈಕೆಯಲ್ಲಿ ಕೊರತೆಯನ್ನುಂಟುಮಾಡುತ್ತದೆ.

ಇಂದಿನ ಲೇಖನದಲ್ಲಿ ಆಹಾರವನ್ನು ತಯಾರಿಸಲೇಬಾರದ ಅನಾರೋಗ್ಯಕರ ವಿಧಾನಗಳನ್ನು ಕುರಿತು ತಿಳಿದುಕೊಳ್ಳೋಣ. ನ್ಯೂಟ್ರೀನ್ ಭರಿತ ಆಹಾರಗಳನ್ನು ಮಾತ್ರ ತಿಂದರೆ ನಿಮ್ಮ ದೇಹಕ್ಕೆ ನ್ಯೂಟ್ರೀನ್‌ಗಳು ಪೂರೈಕೆಯಾಗುವುದಿಲ್ಲ.

ಕೆಲವೊಮ್ಮೆ ನಿಮಗೆ ಅಗತ್ಯವಾಗಿರುವ ಪ್ರೋಟೀನ್ ನ್ಯೂಟ್ರೀನ್‌ಗಳು ನೀವು ಆಹಾರ ತಯಾರಿಸುವ ವಿಧಾನವನ್ನು ಒಳಗೊಂಡಿರುತ್ತವೆ. ಆದ್ದರಿಂದ ಅನಾರೋಗ್ಯಕರ ಆಹಾರ ತಯಾರಿ ವಿಧಾನವನ್ನು ತ್ಯಜಿಸಿ ಆರೋಗ್ಯಪೂರ್ಣ ತಯಾರಿ ವಿಧಾನವನ್ನು ನಿಮ್ಮದಾಗಿಸಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾಗಿ ಮುದ್ದೆಯ 12 ಆರೋಗ್ಯ ಪ್ರಯೋಜನಗಳು

ಡೀಪ್ ಫ್ರೈ:

ಡೀಪ್ ಫ್ರೈ:

ಡೀಫ್ ಫ್ರೈ ಎಂದರೆ ಆಹಾರವನ್ನು ಬಿಸಿಯಾದ ಎಣ್ಣೆಯಲ್ಲಿ ಹುರಿಯುವುದು ಎಂದರ್ಥ. ಅನಾರೋಗ್ಯಕರ ಆಹಾರ ತಯಾರಿ ವಿಧಾನ ಇದಾಗಿದೆ. ಆಹಾರದಲ್ಲಿರುವ ಸ್ಯಾಚುರೇಟೆಡ್ ಕೊಬ್ಬಿನಂಶವನ್ನು ಹೆಚ್ಚಾಗಿಸುವುದರಿಂದ ಡೀಪ್ ಫ್ರೈ ಪದ್ಧತಿಯನ್ನು ಕೈಬಿಡಿ. ಡೀಪ್ ಫ್ರೈ ಆಹಾರ ಪದಾರ್ಥಗಳು ದೇಹದಲ್ಲ ಕೊಬ್ಬಿನಂಶವನ್ನು ಹೆಚ್ಚಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾಗಿಸುತ್ತದೆ. ಹೊರಗಿನ ಎಣ್ಣೆಯಲ್ಲಿ ಕರಿದ ಆಹಾರಗಳು ನಿಮಗೆ ಹೊಟ್ಟೆಯ ಸಂಕಟಗಳನ್ನು ಉಂಟುಮಾಡುತ್ತವೆ ಹಾಗೂ ದೇಹಕ್ಕೆ ಇವು ಅಪಾಯಕಾರಿ. ಟಿಶ್ಯೂ ಅಥವಾ ಪೇಪರ್ ನ್ಯಾಪಿಕನ್ ಬಳಸಿ ಕರಿದ ತಿಂಡಿಗಳಲ್ಲಿರುವ ಹೆಚ್ಚುವರಿ ಎಣ್ಣೆ ಅಂಶವನ್ನು ತೆಗೆಯಿರಿ.

ಕ್ಯಾರಕೋಲ್ ಬಾರ್ಬೆಕ್ಯೂ:

ಕ್ಯಾರಕೋಲ್ ಬಾರ್ಬೆಕ್ಯೂ:

ಬಾರ್ಬೆಕ್ಯೂ ಆಹಾರ ತುಂಬಾ ರುಚಿಯಾದ ಆಹಾರವಾಗಿದೆ. ಆದರೆ ಕ್ಯಾರಕೋಲ್ ಹೊಗೆಯಲ್ಲಿ ಆಹಾರವನ್ನು ಬೇಯಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಕ್ಯಾರಕೋಲ್‌ನಲ್ಲಿರುವ ಹೊಗೆ ಪರಿಸರದಲ್ಲಿರುವ ಕ್ಯಾನ್ಸರ್ ವರ್ಧಕವಾಗಿರಬಹುದು. ಕ್ಯಾರಕೋಲ್ ಹೊಗೆಯು ಕ್ಯಾನ್ಸರ್ ರೋಗಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಕ್ಯಾರಕೋಲ್ ಬಾರ್ಬೆಕ್ಯೂ ಬದಲಿಗೆ ಎಲೆಕ್ಟ್ರಿಕ್ ಬಾರ್ಬೆಕ್ಯೂವನ್ನು ಬಳಸಿ. ಇದೊಂದು ಪರಿಸರ ಸ್ನೇಹಿ ಆಹಾರ ಬೇಯಿಸುವ ವಿಧಾನವಾಗಿದೆ. ಕ್ಯಾರಕೋಲ್ ಪರಿಸರ ಮಾಲಿನ್ಯವನ್ನು ಉಂಟುಮಾಡುವುದರಿಂದ ಎಲೆಕ್ಟ್ರಿಕ್ ಕ್ಯಾರಕೋಲ್ ಅನ್ನು ಬಳಸಿ.

ಪ್ಲಾಸಿಕ್ ಪಾತ್ರೆಗಳು:

ಪ್ಲಾಸಿಕ್ ಪಾತ್ರೆಗಳು:

ಮೈಕ್ರೋವೇವ್‌ನಲ್ಲಿ ಆಹಾರಗಳನ್ನು ಬೇಯಿಸಲು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದಿರಿ. ಪ್ಲಾಸ್ಟಿಕ್ ಪಾತ್ರೆಗಳು ಕ್ಯಾನ್ಸರ್ ಉಂಟುಮಾಡುವ ಅಂಶಗಳನ್ನು ಒಳಗೊಂಡಿದೆ. ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಆಹಾರವನ್ನು ಹಾಗೆಯೇ ಬಿಸಿ ಮಾಡಬಾರದು. ಇದು ಆಹಾರ ಬೇಯಿಸುವ ಅನಾರೋಗ್ಯಕರ ವಿಧಾನವಾಗಿದೆ. ಆಹಾರ ಬೇಯಿಸುವಾಗ ಸೂಕ್ತವಾದ ಕಾಳಜಿಯನ್ನು ನೀವು ತೆಗೆದುಕೊಳ್ಳಲೇಬೇಕು. ಇಂತಹ ಸಣ್ಣ ಅಂಶಗಳಲ್ಲಿ ನಾವು ಗಮನವಿರಿಸಿಕೊಂಡರೆ ದೊಡ್ಡ ಅಪಾಯಗಳನ್ನು ಕಡಿಮೆ ಮಾಡಬಹುದು.

ತರಕಾರಿಗಳನ್ನು ಸ್ವಚ್ಛಗೊಳಿಸುವುದು:

ತರಕಾರಿಗಳನ್ನು ಸ್ವಚ್ಛಗೊಳಿಸುವುದು:

ತರಕಾರಿಗಳ ಸಿಪ್ಪೆ ಇರುವಾಗಲೇ ಅದನ್ನು ತೊಳೆದುಕೊಳ್ಳಬೇಕು. ಸಿಪ್ಪೆಯು ಕೊಳೆ ಮತ್ತು ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ತರಕಾರಿಗಳನ್ನು ಒಮ್ಮೆ ನೀವು ಕತ್ತರಿಸಿದರೆ, ನಂತರ ಅವುಗಳನ್ನು ತೊಳೆಯುವುದನ್ನು ಬಿಡಿ. ಕತ್ತರಿಸಿದ ತರಕಾರಿಗಳನ್ನು ನೀವು ತೊಳೆದರೆ ಮಿನರಲ್ಸ್ ನ್ಯೂಟ್ರಿಯಂಟ್ಸ್ ನಿಮಗೆ ನಷ್ಟವಾಗುತ್ತದೆ. ಆಲೂಗಡ್ಡೆ ಮತ್ತು ಸೇಬಿನ ಸಿಪ್ಪೆಯನ್ನು ಬಿಸಾಡದಿರಿ ಹಾಗೆಯೇ ಚೆನ್ನಾಗಿ ತೊಳೆದು ಬಳಸಿ. ಸಿಪ್ಪೆಯಲ್ಲಿ ಅತ್ಯಧಿಕ ಮಟ್ಟದ ನ್ಯೂಟ್ರಿಯಂಟ್ಸ್‌ಗಳು ಸೇರಿಕೊಂಡಿರುತ್ತವೆ. ಇಂತಹ ಅನಾರೋಗ್ಯಕರ ವಿಧಾನವನ್ನು ಬಿಡಲು ಪ್ರಯತ್ನಿಸಿ.

ಪ್ಯಾನ್ ಫ್ರೈ:

ಪ್ಯಾನ್ ಫ್ರೈ:

ಪ್ಯಾನ್ ಫ್ರೈ ಅಥವಾ ಶ್ಯಾಲೋ ಫ್ರೈ ಡೀಪ್ ಫ್ರೈಯಂತೆ ಅನಾರೋಗ್ಯಕರ ಆಹಾರ ತಯಾರಿ ವಿಧಾನವಾಗಿದೆ. ಆಹಾರವನ್ನು ಬೇಯಿಸುವ ವಿಧಾನವಾದ ಶ್ಯಾಲೋ ಫ್ರೈಯಿಂಗ್ ಅನ್ನು ಬಿಟ್ಟುಬಿಡಿ. ನಿತ್ಯವೂ ಹುರಿದ ತಿಂಡಿಗಳನ್ನು ಸೇವಿಸುವುದು ಅನಾರೋಗ್ಯಕರ.

Read more about: health ಆರೋಗ್ಯ
English summary

5 Unhealthy Ways Of Cooking Food

Healthy diet or healthy food does not include good green vegetables alone. The way the food is cooked also counts. You must have a hygienic cooking system if you are cooking food at home
 Unhealthy cooking methods can cause food borne diseases, weight gain and does not provide the nutrients that are necessary for the body.
Story first published: Monday, March 10, 2014, 14:08 [IST]
X
Desktop Bottom Promotion