For Quick Alerts
ALLOW NOTIFICATIONS  
For Daily Alerts

ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು

|

ಮೊಣಕಾಲು ನೋವು ಸಾಮಾನ್ಯವಾಗಿ ಮಧ್ಯ ವಯಸ್ಸಿನಲ್ಲಿ ಕಂಡುಬರುತ್ತದೆ. ಇದು ಹಲವಾರು ರೀತಿಯಲ್ಲಿ ಕಂಡುಬರಬಹುದು, ಒತ್ತಡ ಅಥವಾ ಗಾಯದಿಂದಾಗಿ ಬರುವ ತಾತ್ಕಾಲಿಕ ಮೂಳೆ ನೋವಿಗೆ ವಿವಿಧ ಬೇನೆಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಮೂಳೆಗಳ ನಡುವೆ ನೋವು ಉದ್ಭವಿಸಿ ತೀವ್ರವಾಗಿ, ನಿಮ್ಮನ್ನು ಕಾಡಬಹುದು.

ಮೊಣಕಾಲು ನೋವು ಕೀಲು ನೋವಿನ ಒಂದು ವಿಧವಾಗಿದೆ. ಪ್ರತಿಯೊಬ್ಬರಲ್ಲೂ ಮೊಣಕಾಲು ನೋವು ಸರ್ವೇಸಾಮಾನ್ಯ. ಗಾಯಗಳು, ಆಪಘಾತಗಳು ಮತ್ತು ಸಂಧಿವಾತದಿಂದ ಮೊಣಕಾಲು ನೋವು ಕಂಡುಬರುತ್ತದೆ.

5 Tips For Knee Pain Relief

ಮೂಳೆಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲ್ಶಿಯಮ್ ಅಂಶಗಳಿದ್ದರೆ ಮತ್ತು ಮೂಳೆಗಳ ಮೇಲೆ ಒತ್ತಡ ಬೀಳುವುದರಿಂದ ಇದು ಸಂಭವಿಸಬಹುದು. ಮೂಳೆನೋವಿನ ವ್ಯತಿರಿಕ್ತ ಲಕ್ಷಣಗಳೆಂದರೆ ಊತ, ನೋವು ಮತ್ತು ಹಟಮಾರಿ ಧೋರಣೆಯಾಗಿದೆ.

ಮೂಳೆ ನೋವು ಕೆಲವೊಂದು ಸಂದರ್ಭಗಳಲ್ಲಿ ತುಂಬಾ ತೀವ್ರವಾಗಿರುತ್ತದೆ. ದೀರ್ಘ ಸಮಯದವರೆಗೆ ಇದು ಕಾಡುತ್ತಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು. ಒತ್ತಡ ಅಥವಾ ಗಾಯದಿಂದಾಗಿ ಬರುವ ತಾತ್ಕಾಲಿಕ ಮೂಳೆ ನೋವಿಗೆ ವಿವಿಧ ಬೇನೆಗಳಿವೆ.

ಇಂತಹ ನೋವುಗಳಿಗಾಗಿ ನೋವು ನಿವಾರಕಗಳು ಅಥವಾ ಜೆಲ್‌ಗಳನ್ನು ಬಳಸಲಾಗುತ್ತದೆ. ಮೂಳೆ ನೋವಿಗಾಗಿ ಮನೆಯಲ್ಲೇ ಮಾಡಬಹುದಾದ ಸರಳ ಮದ್ದುಗಳು ಹಲವಾರಿವೆ. ಕೆಲವು ವ್ಯಾಯಾಮಗಳು, ಮಸಾಜ್‌ಗಳು ಮತ್ತು ಮನೆಯಲ್ಲೇ ತಯಾರಿಸಿದ ನೈಸರ್ಗಿಕ ಮದ್ದುಗಳ ಹಚ್ಚುವಿಕೆಗಳನ್ನು ಇದು ಒಳಗೊಂಡಿರುತ್ತದೆ.

ಇಂತಹ ಮದ್ದುಗಳು ನೋವಿನಿಂದ ಉಪಶಮನವನ್ನು ನೀಡುತ್ತವೆ. ಮೂಳೆ ನೋವಿನ ಜಡಕ್ಕೆ ಹೋಗಿ ಬುಡದಿಂದಲೇ ಅದನ್ನು ನಿವಾರಿಸುತ್ತದೆ. ಮೂಳೆ ನೋವಿನಿಂದ ಉಪಶಮನ ನೀಡುವ ಕೆಲವೊಂದು ಮುಖ್ಯವಾದ ಸರಳ ಮನೆಮದ್ದುಗಳು ಇಲ್ಲಿವೆ.

1. ಯೋಗ -
ಹಲವಾರು ಆರೋಗ್ಯ ಸಮಸ್ಯೆಗಳಿಗೆ ಯೋಗ ಉತ್ತಮ ಪರಿಹಾರ. ಪ್ರತಿಯೊಂದು ಬಗೆಯ ನೋವನ್ನು ನಿವಾರಿಸಿ ಹೃದಯ ಮತ್ತು ಮಿದುಳನ್ನು ಸುಸ್ಥಿತಿಯಲ್ಲಿಡುತ್ತದೆ. ಸಾಮಾನ್ಯವಾಗಿ ಯೋಗ ಕೂಡ ಮೂಳೆ ನೋವಿಗೆ ಉತ್ತಮವಾದುದು. ಮೂಳೆಯ ಮಾಂಸಖಂಡಗಳನ್ನು ಬಲಗೊಳಿಸುವ ಕೆಲವೊಂದು ಯೋಗ ಶೈಲಿಗಳಿದ್ದು, ಇವುಗಳು ಮೂಳೆಯ ಮಾಂಸಖಂಡಗಳ ಸದೃಢತೆಯನ್ನು ಹೆಚ್ಚಿಸುತ್ತದೆ. ನೋವುಗಳ ಉಪಶಮನಕ್ಕಾಗಿ ಕೂಡ ಯೋಗ ಅತ್ಯುತ್ತಮವಾದುದು.

2. ಕ್ಯಾಲ್ಶಿಯಂ ಅಂಶ -
ಕೀಲು ನೋವುಗಳು ಸಾಮಾನ್ಯವಾಗಿ ಕ್ಯಾಲ್ಶಿಯಂ ಕೊರತೆಯಿಂದ ಉಂಟಾಗುತ್ತದೆ. ಮೂಳೆಗಳಲ್ಲಿ ಕ್ಯಾಲ್ಶಿಯಂ ಕೊರತೆ ಉಂಟಾದಾಗ ಅವುಗಳ ಬಲ ಕುಗ್ಗುತ್ತದೆ. ಕ್ಯಾಲ್ಶಿಯಂ ಮತ್ತು ಇತರ ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳಿ. ಹಾಲು, ಮೀನು, ಮೊಟ್ಟೆ ಮೊದಲಾದ ಪೋಷಕಾಂಶಗಳಿರುವ ಆಹಾರವನ್ನು ನಿತ್ಯವೂ ತೆಗೆದುಕೊಳ್ಳಿ. ಮೂಳೆ ನೋವು ಅಥವಾ ಇತರ ಯಾವುದೇ ಕೀಲು ನೋವಿನ ಸಮಸ್ಯೆಗಳಿಗೆ ಇದೊಂದು ಉತ್ತಮ ಪರಿಹಾರವಾಗಿದೆ.

3. ಎಣ್ಣೆ ಮಸಾಜ್ -
ಬಿಸಿ ಎಣ್ಣೆ ಮಸಾಜ್ ಮೂಳೆ ನೋವಿಗೆ ರಾಮಬಾಣ. ನೀವು ತೆಂಗಿನ ಎಣ್ಣೆ, ಆಲೀವ್ ಎಣ್ಣೆ ಅಥವಾ ಇತರ ಯಾವುದೇ ಎಣ್ಣೆಯನ್ನು ಮಸಾಜ್‌ಗಾಗಿ ಬಳಸಬಹುದು. ನೋವಿರುವ ಜಾಗಕ್ಕೆ ನಿತ್ಯವೂ ಎಣ್ಣೆ ಮಸಾಜ್ ಮಾಡುವುದು ತುಂಬಾ ಉಪಯೋಗಕಾರಿ. ಸ್ವಲ್ಪ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.

4.ವ್ಯಾಯಾಮ -
ನಿತ್ಯವೂ ವ್ಯಾಯಾಮ ಮಾಡುವುದು ಹಲವಾರು ರೋಗಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತದೆ. ಅತಿ ತೂಕ ಮತ್ತು ಸ್ಥೂಲಕಾಯತೆಯಿಂದ ಕೆಲವೊಮ್ಮೆ ಮೂಳೆ ನೋವು ಉಂಟಾಗಬಹುದು. ಮೂಳೆ ಸ್ನಾಯುಗಳಿಗೆ ವ್ಯಾಯಾಮ ಸಿಗುವಂತಹ ದೈಹಿಕ ಕಸರತ್ತನ್ನು ಮಾಡಬೇಕು. ಸ್ಕಿಪ್ಪಿಂಗ್, ಏರೋಬಿಕ್ಸ್ ಮತ್ತು ಡ್ಯಾನ್ಸಿಂಗ್‌ನಂತಹ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಿ. ಮೂಳೆಗಳಿಗೆ ಭರಿಸಲಾಗದ ಅತಿಯಾದ ತೂಕವನ್ನು ವ್ಯಾಯಾಮವು ಕಡಿಮೆ ಮಾಡುತ್ತದೆ.

5. ಇತರ ಪರಿಹಾರಗಳು -
ಮೇಲೆ ತಿಳಿಸಿದ ಮನೆ ಮದ್ದುಗಳ ಬದಲಾಗಿ ಕೂಡ ಹಲವಾರು ಮೂಳೆ ನೋವಿನ ಪರಿಹಾರ ಉಪಾಯಗಳು ಸಾಕಷ್ಟಿವೆ. ಅರಿಶಿನ ಮಿಶ್ರಿತ ಹಾಲಿನ ಸೇವನೆಯನ್ನು ಈ ಪರಿಹಾರಗಳು ಒಳಗೊಂಡಿವೆ. ಊತವನ್ನು ಕಡಿಮೆ ಮಾಡುವ ಅಂಶಗಳು ಅರಶಿನದಲ್ಲಿ ಹೇರಳವಾಗಿದ್ದು ಮೂಳೆನೋವಿಗೆ ಪರಿಹಾರವನ್ನು ನೀಡುತ್ತದೆ. ಸೆಳೆತವಿರುವ ಜಾಗಕ್ಕೆ ಮೆಂತ್ಯವನ್ನು ನೆನೆಸಿ ಅದನ್ನು ಪೇಸ್ಟ್‌ನಂತೆ ಸವರಿ. ಇದು ಕೂಡ ಉತ್ತಮ ಪರಿಹಾರಕವಾಗಿದೆ.

Read more about: health ಆರೋಗ್ಯ
English summary

5 Tips For Knee Pain Relief

Knee pain is a common problem specially on the onset of old age. The main cause of pain is the destruction of a tissue called cartilage. Cartilage is something which coats the joints and is present between the two bones.
X
Desktop Bottom Promotion