For Quick Alerts
ALLOW NOTIFICATIONS  
For Daily Alerts

ಮೆಂತ್ಯೆಯ 15 ಆರೋಗ್ಯ ಲಾಭಗಳು

By Hemanth P
|

ಭಾರತದ ಆಹಾರಗಳಲ್ಲಿ ಮೆಂತ್ಯೆಯ ಎಲೆಗಳು ಮತ್ತು ಕಾಳುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಲವಾದ ಸುವಾಸನೆ ಹಾಗೂ ಕಹಿ ರುಚಿ ಹೊಂದಿರುವ ಮೆಂತ್ಯೆ ಕಾಳನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿದಾಗ ಅದು ನಮ್ಮ ಅಡುಗೆಯ ರುಚಿ ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಪದಾರ್ಥ, ತರಕಾರಿ ಅಡುಗೆ, ದಾಲ್ ಮತ್ತು ಮೆಂತ್ಯೆಯ ಪರಾರ್ಥಗಳಲ್ಲಿ ಇದನ್ನು ಬಳಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಮರ್ಥ್ಯವನ್ನು ಹೆಚ್ಚಿಸುವ 20 ಸಸ್ಯಾಹಾರಿ ಆಹಾರಗಳು

ಅಡುಗೆಗೆ ಬಳಸಲ್ಪಡುವ ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ ಎಂದು ನಿಮಗೆ ತಿಳಿದಿದೆಯಾ? ಮೆಂತ್ಯೆಯಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯಾಸಿನ್, ಪೊಟಾಷಿಯಂಗಳಿವೆ.

ಇದರಲ್ಲಿ ಈಸ್ಟೋಜನ್ ಗುಣಲಕ್ಷಣಗಳನ್ನು ಹೊಂದಿರುವ ಒಂದು ಸಂಯುಕ್ತ ಡಿಯೊಸ್ಗನಿನ್ ಸಂಯುಕ್ತವಿದೆ. ಅದೇ ರೀತಿ ಸ್ಟಿರಾಯ್ಡ್ ಸ್ಯಾಪೊನಿನ್ ಗಳಿವೆ. ಮೆಂತ್ಯೆಯಲ್ಲಿರುವ ಈ ಗುಣಗಳು ನಿಮ್ಮ ಸೌಂದರ್ಯ ರಕ್ಷಣೆಯ ಜತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೇಸಿಗೆಯಲ್ಲಿ ನಿಮ್ಮ ತೂಕ ಇಳಿಸಲು ಈ ಹಣ್ಣುಗಳು ಸಾಕು!

ಮೆಂತ್ಯೆಯ 15 ಆರೋಗ್ಯ ಲಾಭಗಳನ್ನು ಇಲ್ಲಿ ನೀಡಲಾಗಿದೆ.

ಸ್ತನದ ಹಾಲು ಹೆಚ್ಚಿಸುತ್ತದೆ.

ಸ್ತನದ ಹಾಲು ಹೆಚ್ಚಿಸುತ್ತದೆ.

ಮೆಂತ್ಯೆ ಕಾಳನ್ನು ಹಾಲುಣಿಸುವ ಮಹಿಳೆಯರು ಅಗತ್ಯವಾಗಿ ಸೇವಿಸಲೇಬೇಕು. ಇದರಲ್ಲಿರುವ ಡಿಯೊಸ್ಗನಿನ್ ಅಂಶವು ಹಾಲುಣಿಸುವ ಮಹಿಳೆಯರ ಸ್ತನದಲ್ಲಿ ಹಾಲಿನ ಪ್ರಮಾಣ ಹೆಚ್ಚಿಸುತ್ತದೆ.

ಸುಲಭ ಹೆರಿಗೆಗೆ ಪ್ರೇರೇಪಣೆ

ಸುಲಭ ಹೆರಿಗೆಗೆ ಪ್ರೇರೇಪಣೆ

ಗರ್ಭಾಶಯದ ಸಂಕುಚಿತವನ್ನು ಉತ್ತೇಜಿಸುವ ಮೂಲಕ ಮೆಂತ್ಯೆ ಕಾಳುಗಳು ಮಹಿಳೆಯ ಹೆರಿಗೆಗೆ ನೆರವಾಗುತ್ತದೆ. ಇದು ಹೆರಿಗೆ ನೋವನ್ನು ಕಡಿಮೆ ಮಾಡುತ್ತದೆ. ಆದರೆ ಎಚ್ಚರಿಕೆ ತುಂಬಾ ಮುಖ್ಯ. ಅತಿಯಾಗಿ ಮೆಂತ್ಯೆ ಕಾಳುಗಳನ್ನು ಸೇವಿಸುವುದರಿಂದ ಗರ್ಭಪಾತ ಅಥವಾ ಸಮಯಕ್ಕೆ ಮೊದಲೇ ಹೆರಿಗೆಯಾಗುವ ಸಾಧ್ಯತೆಯಿದೆ.

ಮಹಿಳೆಯ ಆರೋಗ್ಯ ಸಮಸ್ಯೆ ತಗ್ಗಿಸುತ್ತದೆ

ಮಹಿಳೆಯ ಆರೋಗ್ಯ ಸಮಸ್ಯೆ ತಗ್ಗಿಸುತ್ತದೆ

ಮೆಂತ್ಯೆಯಲ್ಲಿರುವ ಡಿಯೊಸ್ಗನಿನ್ ಸಂಯುಕ್ತ ಮತ್ತು ಈಸ್ಟ್ರೊಜೆನ್ ತರಹದ ಗುಣಗಳನ್ನು ಐಸೊಫ್ಲೆವೊನ್ಸ್ ಗಳು ಪಿಎಂಎಸ್ ಗೆ ಸಂಬಂಧಿತ ಕಿರಿಕಿರಿ ಮತ್ತು ಋತುಚಕ್ರದ ವೇಳೆ ಉಂಟಾಗುವಂತಹ ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈ ಸಂಯುಕ್ತಗಳು ಮುಟ್ಟು ನಿಲ್ಲುವಾಗ ಉಂಟಾಗುವ ಲಕ್ಷಣಗಳಾದ ಹಾಟ್ ಫ್ಲ್ಯಾಷ್ ಮತ್ತು ಮನಸ್ಥಿತಿ ಬದಲಾಗುವುದನ್ನು ಕಡಿಮೆ ಮಾಡುತ್ತದೆ. ಹದಿಹರೆಯ(ಋತುಚಕ್ರದ ಆರಂಭ), ಗರ್ಭಧಾರಣೆ ಮತ್ತು ಹಾಲುಣಿಸುವ ವೇಳೆ ಮಹಿಳೆಯರು ಕಬ್ಬಿನಾಂಶದ ಕೊರತೆಯಿಂದ ಬಳಲುತ್ತಾರೆ. ಮೆಂತ್ಯೆ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಉತ್ತಮ ಗುಣಮಟ್ಟದ ಕಬ್ಬಿನಾಂಶ ಪಡೆಯಬಹುದು. ಟೊಮೆಟೊ ಅಥವಾ ಬಟಾಟೆಯನ್ನು ಮೆಂತ್ಯೆ ಸೊಪ್ಪಿನೊಂದಿಗೆ ಸೇರಿಸಿದರೆ ಕಬ್ಬಿನಾಂಶ ಪಡೆಯಬಹುದು.

ಸ್ತನದ ಗಾತ್ರ ಹಿಗ್ಗಿಸಲು

ಸ್ತನದ ಗಾತ್ರ ಹಿಗ್ಗಿಸಲು

ನಿಮ್ಮ ಸ್ತನಗಳನ್ನು ಹಿಗ್ಗಿಸಲು ಬಯಸಿದ್ದೀರಾ? ಹಾಗಾದರೆ ದೈನಂದಿನ ಆಹಾರ ಕ್ರಮದಲ್ಲಿ ನೀವು ಮೆಂತ್ಯೆಯನ್ನು ಬಳಸಿ. ಮೆಂತ್ಯೆಯಲ್ಲಿರುವ ಒಸ್ಟೋಜನ್ ನಂತಹ ಸಂಯುಕ್ತವು ಮಹಿಳೆಯಲ್ಲಿ ಹಾರ್ಮೋನ್ ಸಮತೋಲವನ್ನು ಉಂಟುಮಾಡಿ ಮಹಿಳೆಯ ಸ್ತನದ ಗಾತ್ರ ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಕೊಲೆಸ್ಟ್ರಾಲ್ ತಗ್ಗಿಸುತ್ತದೆ

ಅಧ್ಯಯನಗಳ ಪ್ರಕಾರ ಮೆಂತ್ಯೆ ಕಾಳುಗಳು ಕೊಲೆಸ್ಟ್ರಾಲ್ ನ್ನು ತಗ್ಗಿಸುತ್ತದೆ. ವಿಶೇಷವಾಗಿ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್(ಎಲ್ ಡಿಎಲ್).

ಹೃದಯ ಸಂಬಂಧಿ ಅಪಾಯ ತಗ್ಗಿಸುತ್ತದೆ

ಹೃದಯ ಸಂಬಂಧಿ ಅಪಾಯ ತಗ್ಗಿಸುತ್ತದೆ

ಮೆಂತ್ಯೆ ಕಾಳುಗಳಲ್ಲಿರುವ ಗ್ಲಾಕ್ಟೊಮನನ್ ನಿಂದಾಗಿ ಇದು ಹೃದಯಕ್ಕೆ ಲಾಭವನ್ನು ಉಂಟುಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ. ಇದರಲ್ಲಿ ಪೊಟಾಶಿಯಂನ ಮೂಲ ಅಧಿಕವಾಗಿದ್ದು, ಇದು ಸೋಡಿಯಂನ ಕಾರ್ಯವನ್ನು ಎದುರಿಸಿ ಹೃದಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತ್ರಣ

ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯೆ ಕಾಳುಗಳು ತುಂಬಾ ನೆರವಾಗುತ್ತದೆ. ಮೆಂತ್ಯೆ ಕಾಳಿನಲ್ಲಿರುವ ನೈಸರ್ಗಿಕ ನಾರಿನಾಂಶ ಗ್ಲಾಕ್ಟೊಮನನ್ ರಕ್ತವು ಸಕ್ಕರೆ ಅಂಶವನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಮೆಂತ್ಯೆಯಲ್ಲಿ ಅಮಿನೊ ಆಮ್ಲವು ಇನ್ಸುಲಿನ್ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಜೀರ್ಣಾಂಗಕ್ಕೆ ನೆರವು

ಜೀರ್ಣಾಂಗಕ್ಕೆ ನೆರವು

ಮೆಂತ್ಯೆ ಕಾಳು ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಇದು ಅಜೀರ್ಣ ತಡೆಯುತ್ತದೆ ಮತ್ತು ಮಲಬದ್ಧತೆ ಸುಧಾರಿಸಲು ನೆರವಾಗುತ್ತದೆ.

ಆಮ್ಲ ಹಿನ್ಸರಿತ ಅಥವಾ ಎದೆಯುರಿ ಶಮನ

ಆಮ್ಲ ಹಿನ್ಸರಿತ ಅಥವಾ ಎದೆಯುರಿ ಶಮನ

ನಿಮ್ಮ ದೈನಂದಿನ ಆಹಾರದಲ್ಲಿ ಒಂದು ಚಮಚ ಮೆಂತ್ಯೆ ಕಾಳನ್ನು ಸೇವಿಸಿದರೆ ಅದು ಆಮ್ಲ ಹಿನ್ಸರಿತ ಅಥವಾ ಎದೆಯುರಿ ನಿವಾರಿಸುತ್ತದೆ. ಮೆಂತ್ಯೆ ಕಾಳುಗಳ ಗೋಂದು ಕರುಳು ಮತ್ತು ಹೊಟ್ಟೆಯಲ್ಲಿ ಒಳಪದರ ನಿರ್ಮಿಸುತ್ತದೆ ಮತ್ತು ಕಿರಿಕಿರಿ ಉಂಟುಮಾಡುವ ಜಠರಕರುಳಿನ ಅಂಗಾಂಶಗಳನ್ನು ಶಮನಗೊಳಿಸುತ್ತದೆ. ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿ ಗೋಂದನ್ನು ಮಾಡಿ ಸೇವಿಸಬೇಕು.

ಜ್ವರ ಮತ್ತು ಗಂಟಲು ನೋವಿಗೆ ಮದ್ದು

ಜ್ವರ ಮತ್ತು ಗಂಟಲು ನೋವಿಗೆ ಮದ್ದು

ಮೆಂತ್ಯೆ ಕಾಳುಗಳನ್ನು ಒಂದು ಚಮಚ ಲಿಂಬೆರಸ ಮತ್ತು ಜೇನಿನೊಂದಿಗೆ ಸೇವಿಸಿದಾಗ ಅದು ದೇಹವನ್ನು ಪುನಶ್ಚೇತನಗೊಳಿಸಿ ಜ್ವರ ಕಡಿಮೆ ಮಾಡುತ್ತದೆ. ಮೆಂತ್ಯೆಯ ಗೋಂದಿನಲ್ಲಿರುವ ಶಮನಕಾರಿ ಅಂಶವು ಕಫ ಮತ್ತು ಗಂಟಲು ನೋವು ನಿವಾರಣೆ ಮಾಡುತ್ತದೆ.

ಕರುಳಿನ ಕ್ಯಾನ್ಸರ್ ತಡೆಯುತ್ತದೆ

ಕರುಳಿನ ಕ್ಯಾನ್ಸರ್ ತಡೆಯುತ್ತದೆ

ಮೆಂತ್ಯೆ ಕಾಳಿನಲ್ಲಿರುವ ನಾರಿನಾಂಶವು ಆಹಾರದಲ್ಲಿನ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಹೊರಹಾಕುತ್ತದೆ. ಇದರಿಂದ ಕರುಳಿನ ಲೋಳೆಯ ಪೊರೆಯನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ಹಸಿವು ನಿಯಂತ್ರಿಸಿ ತೂಕ ತಗ್ಗಿಸುವುದು

ಹಸಿವು ನಿಯಂತ್ರಿಸಿ ತೂಕ ತಗ್ಗಿಸುವುದು

ನೆನೆಸಿದ ಮೆಂತ್ಯೆ ಕಾಳುಗಳನ್ನು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಿದರೆ ತೂಕ ತಗ್ಗಿಸಬಹುದು. ನೈಸರ್ಗಿಕವಾಗಿ ಹೀರಿಕೊಳ್ಳುವಂತಹ ನಾರಿನಾಂಶವು ಹೊಟ್ಟೆ ತುಂಬುವಂತೆ ಮಾಡಿ ಹಸಿವು ಕಡಿಮೆ ಮಾಡುತ್ತದೆ.

ಚರ್ಮದ ಉರಿಯೂತ ಮತ್ತು ಗಾಯ ನಿವಾರಣೆ

ಚರ್ಮದ ಉರಿಯೂತ ಮತ್ತು ಗಾಯ ನಿವಾರಣೆ

ನೆನೆಸಿದ ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ಸುಟ್ಟ, ಬಿಸಿ ಮತ್ತು ಇಸುಬು ಇತ್ಯಾದಿ ಸಮಸ್ಯೆಗಳ ಚಿಕಿತ್ಸೆಗೆ ಬಳಸಬಹುದು. ಗಾಯ ನಿವಾರಣೆಗೆ ಮೆಂತ್ಯೆ ಕಾಳುಗಳು ನೆರವಾಗುತ್ತದೆ.

ಸೌಂದರ್ಯ ಸಾಧನ

ಸೌಂದರ್ಯ ಸಾಧನ

ಮೆಂತ್ಯೆ ಕಾಳುಗಳು ಮನೆಯಲ್ಲಿ ತಯಾರಿಸುವ ಸೌಂದರ್ಯ ವರ್ಧಕಗಳಿಗೆ ಒಳ್ಳೆಯ ವಸ್ತು. ಫೇಸ್ ಪ್ಯಾಕ್ ಗಳಲ್ಲಿ ಮೆಂತ್ಯೆ ಕಾಳುಗಳನ್ನು ಬಳಸುವುದರಿಂದ ಕಪ್ಪುಕಲೆ, ಮೊಡವೆ, ನೆರಿಗೆ ಇತ್ಯಾದಿಗಳನ್ನು ನಿವಾರಿಸಬಹುದು. ಮೆಂತ್ಯೆ ಕಾಳುಗಳನ್ನು ಬೇಯಿಸಿದಂತಹ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ ಅಥವಾ ಮೆಂತ್ಯೆ ಸೊಪ್ಪಿನ ಪೇಸ್ಟ್ ನ್ನು 20 ನಿಮಿಷಗಳ ಕಾಲ ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ತ್ವಚೆ ಹೊಳೆಯುತ್ತದೆ.

ಕೂದಲಿನ ಸಮಸ್ಯೆಗೆ ಪರಿಹಾರ

ಕೂದಲಿನ ಸಮಸ್ಯೆಗೆ ಪರಿಹಾರ

ಆಹಾರ ಕ್ರಮದಲ್ಲಿ ಮೆಂತ್ಯೆ ಕಾಳನ್ನು ಬಳಸುವುದು ಅಥವಾ ನೇರವಾಗಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ತುಂಬಾ ಕಪ್ಪಾಗಿ ಹೊಳೆಯುತ್ತದೆ. ತೆಂಗಿನ ಎಣ್ಣೆಯಲ್ಲಿ ನೆನೆಸಿಟ್ಟ ಮೆಂತ್ಯೆ ಕಾಳುಗಳನ್ನು ಬೇಯಿಸಿ ಪ್ರತೀದಿನ ನಿಮ್ಮ ತಲೆ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ ತಡೆಯಬಹುದು. ಇದಕ್ಕಿಂತ ಹೆಚ್ಚೇನು? ಮೆಂತ್ಯೆ ಕಾಳುಗಳು ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ.

Read more about: health ಆರೋಗ್ಯ
English summary

15 health benefits of methi

The seeds and leaves of methi (fenugreek) are readily available and widely used in Indian kitchen.The seeds and leaves of methi (fenugreek) are readily available and widely used in Indian kitchen.
X
Desktop Bottom Promotion