For Quick Alerts
ALLOW NOTIFICATIONS  
For Daily Alerts

ಪಪ್ಪಾಯಿಯ 11 ಆರೋಗ್ಯಕಾರಿ ಪ್ರಯೋಜನಗಳು

|

ಕ್ರಿಸ್ಟೋಫರ್ ಕೊಲಂಬಸ್ ಇಟಾಲಿಯನ್ ಯಾತ್ರಿಕ ಪಪ್ಪಾಯವನ್ನು ದೇವತೆಗಳ ಹಣ್ಣೆಂದು ಕರೆದಿದ್ದಾನೆ. ವಿಟಮಿನ್ ಸಿ ಹೇರಳವಾಗಿರುವ ಈ ಹಣ್ಣಿನಲ್ಲಿ ನಿಮಗೆ ಅಗತ್ಯವಾಗಿ ಬೇಕಾಗಿರುವ ಪ್ರೋಟೀನ್ ಮಿನರಲ್ಸ್ ಸಾಕಷ್ಟಿದೆ. ಜ್ಯೂಸ್ ರೂಪದಲ್ಲಿ ಇಲ್ಲವೇ ಹಸಿಯಾಗಿಯೇ ತಿನ್ನಬಹುದಾದ ಈ ಹಣ್ಣು ನಿಮ್ಮ ದೈನಂದಿನ ಜೀವನದಲ್ಲಿ ಅಗತ್ಯವಾಗಿರಲೇಬೇಕು.

ಹೆಚ್ಚು ಹೆಚ್ಚು ಈ ಹಣ್ಣನ್ನು ತಿಂದಂತೆ ಅದರಿಂದುಂಟಾಗುವ ಪ್ರಯೋಜನ ನಿಮ್ಮದಾಗಿದೆ. ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವ ಗುಣ ಪಪ್ಪಾಯಕ್ಕಿದ್ದು ನಿರೋಧಕ ಶಕ್ತಿಯನ್ನು ನಿಮ್ಮಲ್ಲಿ ಉತ್ಪತ್ತಿಸುತ್ತದೆ. ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಲ್ಲ ಈ ಹಣ್ಣು ಕಡಿಮೆ ಖರ್ಚಿಲ್ಲದ ಕೃಷಿಯಾಗಿದೆ ಎಂದೇ ಹೇಳಬಹುದು. ಇದರ 11 ಆರೋಗ್ಯಕಾರಿ ಪ್ರಯೋಜನಗಳು ಈ ಲೇಖನದ ಮೂಲಕ ನಿಮಗಾಗಿ

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಲ್ಲಂಗಡಿ ಸೇವನೆಯ 5 ಆರೋಗ್ಯಕರ ಕಾರಣಗಳು

ಕೊಲೆಸ್ಟ್ರಾಲ್ ಅನ್ನು ಇಳಿಸುತ್ತದೆ:

ಕೊಲೆಸ್ಟ್ರಾಲ್ ಅನ್ನು ಇಳಿಸುತ್ತದೆ:

ಪಪ್ಪಾಯದಲ್ಲಿರುವ ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಿ ಅಂಶಗಳು ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದರಿಂದ ಹೃದಯಾಘಾತ ಮತ್ತು ಹೈಪ‌ರ್‌ಟೆನ್ಶನ್‌ನ ಅಪಾಯ ಕಡಿಮೆಯಾಗುತ್ತದೆ.

ತೂಕ ಇಳಿಸುತ್ತದೆ:

ತೂಕ ಇಳಿಸುತ್ತದೆ:

ಅತಿಯಾದ ತೂಕವನ್ನು ಹೊಂದಿರುವವರು ತಮ್ಮ ದೈನಂದಿನ ಆಹಾರದಲ್ಲಿ ಪಪ್ಪಾಯವನ್ನು ಸೇರಿಸುವುದು ಅತ್ಯವಶ್ಯಕ. ಕ್ಯಾಲೋರಿ ಕಡಿಮೆ ಇರುವ ಈ ಹಣ್ಣು ನಿಮ್ಮ ಕರುಳಿನ ಚಲನೆಯನ್ನು ತೆರವುಗೊಳಿಸಿ ತೂಕ ಇಳಿಕೆಯಾಗುವಂತೆ ಮಾಡುತ್ತದೆ.

ನಿರೋಧಕ ಶಕ್ತಿ ಹೆಚ್ಚು:

ನಿರೋಧಕ ಶಕ್ತಿ ಹೆಚ್ಚು:

ನಿಮ್ಮನ್ನು ರೋಗಿಯನ್ನಾಗಿ ಮಾಡುವ ಹಲವಾರು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಪಪ್ಪಾಯ ಒದಗಿಸುತ್ತದೆ. ಪಪ್ಪಾಯದ ಒಂದು ತುಂಡು 200% ದಷ್ಟು ವಿಟಮಿನ್ ಸಿಯನ್ನು ಒಳಗೊಂಡಿರುತ್ತದೆ. ಇದು ನಿಮ್ಮ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಮಧುಮೇಹಿಗಳಿಗೆ ಉತ್ತಮ:

ಮಧುಮೇಹಿಗಳಿಗೆ ಉತ್ತಮ:

ಪಪ್ಪಾಯದಲ್ಲಿರುವ ಕಡಿಮೆ ಸಕ್ಕರೆ ಪ್ರಮಾಣವು ಮಧುಮೇಹಿಗಳಿಗೆ ತಿನ್ನಲು ಯೋಗ್ಯವಾಗಿದೆ. ಮಧುಮೇಹ ಇಲ್ಲದವರೂ ಕೂಡ ಅದರಿಂದ ರಕ್ಷಣೆ ಹೊಂದಲು ಇದನ್ನು ನಿಯಮಿತವಾಗಿ ಸೇವಿಸಬಹುದು.

ನಿಮ್ಮ ಕಣ್ಣುಗಳಿಗೆ ಉತ್ತಮ:

ನಿಮ್ಮ ಕಣ್ಣುಗಳಿಗೆ ಉತ್ತಮ:

ಪಪ್ಪಾಯದಲ್ಲಿರುವ ವಿಟಮಿನ್ ಎ ಕಣ್ಣುಗಳಿಗೆ ಅತ್ಯಂತ ಅಗತ್ಯ. ಕಣ್ಣು ಮಂಜಾಗುವುದು ಪೊರೆ ಬರುವುದು ಮೊದಲಾದ ಸಮಸ್ಯೆಗಳು ನಿಮ್ಮಿಂದ ದೂರಾಗುತ್ತವೆ.

ಸಂಧಿವಾತದಿಂದ ಮುಕ್ತಿ:

ಸಂಧಿವಾತದಿಂದ ಮುಕ್ತಿ:

ಇದೊಂದು ಆಘಾತಕಾರಿ ರೋಗವಾಗಿದ್ದು ಮಾನವನ ಆಯಸ್ಸನ್ನು ಕಡಿಮೆ ಮಾಡುತ್ತದೆ. ಪಪ್ಪಾಯದಲ್ಲಿರುವ ಆಂಟಿ ಇನ್‌ಫ್ಲಾಮೇಟರಿ ಅಂಶಗಳು ವಿಟಮಿನ್ ಸಿಯೊಂದಿಗೆ ಜೊತೆಗೂಡಿ ಸಂಧಿವಾತದ ಮೂಲವನ್ನು ಹೊರದೂಡುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಸಿಯುಳ್ಳ ಆಹಾರವನ್ನು ಸೇವಿಸುವವರು ಸಂಧಿವಾತದಿಂದ ಗುಣಮುಖರಾಗಿರುವುದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ನಿಮ್ಮ ಜೀರ್ಣಕ್ರಿಯೆಗೆ ತೊಡಕುಂಟುಮಾಡುವ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಖಂಡಿತ ಸಾಧ್ಯವಿಲ್ಲದ ಮಾತು. ಹೆಚ್ಚು ಎಣ್ಣೆಯಿಂದ ತಯಾರಿಸಲಾದ ಝಂಕ್ ಫುಡ್ ಮತ್ತು ಹೋಟೇಲಿನ ಊಟಕ್ಕೆ ನಾವಿಂದು ಬಲಿಪಶುಗಳಾಗುತ್ತಿದ್ದೇವೆ. ಪಪ್ಪಾಯವನ್ನು ದಿನವೂ ತಿನ್ನುವುದು ಝಂಕ್ ಫುಡ್‌ನಿಂದ ಉಂಟಾಗುವ ಜೀರ್ಣಕ್ರಿಯೆ ಸಮಸ್ಯೆಯನ್ನು ತಡೆಗಟ್ಟಿ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ.

ಮುಟ್ಟಿನ ನೋವು ತಡೆಯುವಲ್ಲಿ ಸಹಕಾರಿ:

ಮುಟ್ಟಿನ ನೋವು ತಡೆಯುವಲ್ಲಿ ಸಹಕಾರಿ:

ಮುಟ್ಟಿನ ನೋವು ಅನುಭವಿಸುವ ಹೆಂಗಳೆಯರು ತಿನ್ನಲೇಬೇಕಾದ ಹಣ್ಣಾಗಿದೆ ಪಪ್ಪಾಯ. ಇದರಲ್ಲಿರುವ ಪೆಪೇನ್ ಅಂಶ ನೋವನ್ನು ನಿವಾರಿಸಿ ಋತುಚಕ್ರವನ್ನು ನಿರಾಳಗೊಳಿಸುತ್ತದೆ.

ಮುಪ್ಪಿನ ಲಕ್ಷಣಗಳನ್ನು ತೊಡೆದುಹಾಕುತ್ತದೆ:

ಮುಪ್ಪಿನ ಲಕ್ಷಣಗಳನ್ನು ತೊಡೆದುಹಾಕುತ್ತದೆ:

ಯವ್ವೌನವನ್ನು ಪ್ರತಿಯೊಬ್ಬರೂ ಬಯಸುವುದು ಸಾಮಾನ್ಯ. ಆದರೆ ಇದನ್ನು ಹೇಳಿದಷ್ಟು ಸುಲಭವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಪಪ್ಪಾಯವನ್ನು ದಿನವೂ ತಿನ್ನುವುದು ನಿಮ್ಮ ವಯಸ್ಸನ್ನು 5 ವರ್ಷ ಕಡಿಮೆಯಾದಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ, ವಿಟಮಿನ್ ಇ ಮತ್ತು ಬೇಟಾ ಕ್ಯಾರಟೀನ್ ರೇಡಿಕಲ್ ಹಾನಿಯಿಂದ ತ್ವಚೆಯನ್ನು ರಕ್ಷಿಸುತ್ತದೆ ಮತ್ತು ನೆರಿಗೆಗಳು ಹಾಗೂ ಇತರ ಮುಪ್ಪಿನ ಲಕ್ಷಣಗಳನ್ನು ತೊಡೆದುಹಾಕುತ್ತದೆ.

.ಕ್ಯಾನ್ಸರ್ ನಿವಾರಕ:

.ಕ್ಯಾನ್ಸರ್ ನಿವಾರಕ:

ಪಪ್ಪಾಯದಲ್ಲಿರುವ ಉತ್ಕರ್ಷಣ ನಿರೋಧಿ ಅಂಶ, ಫೈಟೋನ್ಯೂಟ್ರಿಯೆಂಟ್ಸ್ ಮತ್ತು ಫ್ಲೇವಿನೋಯಿಡ್ಸ್ ಕರುಳಿನ ಕೋಶಗಳನ್ನು ಮುಕ್ತ ರೇಡಿಕಲ್ ಹಾನಿಯಿಂದ ತಪ್ಪಿಸುತ್ತವೆ. ಪಪ್ಪಾಯವು ಕರುಳಿನ ಮತ್ತು ಜನನೇಂದ್ರಿಯಾದ ಕ್ಯಾನ್ಸರ್ ಅನ್ನು ತಡೆಗಟ್ಟಿರುವ ನಿದರ್ಶನಗಳು ನಮ್ಮ ಕಣ್ಣಮುಂದಿದೆ.

ಒತ್ತಡವನ್ನು ಹೋಗಲಾಡಿಸುತ್ತದೆ:

ಒತ್ತಡವನ್ನು ಹೋಗಲಾಡಿಸುತ್ತದೆ:

ದಿನ ಪೂರ್ತಿ ವಿಶ್ರಾಂತಿಯಿಲ್ಲದೆ ದುಡಿದು, ಮನೆಗೆ ಬಂದಾಕ್ಷಣ ಒಂದು ಪ್ಲೇಟ್ ಪಪ್ಪಾಯವನ್ನು ಹೊಟ್ಟೆಗೆ ಇಳಿಸುವುದು ಉತ್ತಮ ಉಪಾಯವಾಗಿದೆ. ವಿಟಮಿನ್ ಸಿ ಅಂಶ ಒತ್ತಡ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

Read more about: health ಆರೋಗ್ಯ
English summary

11 health benefits of papayas

Christopher Columbus, an Italian voyager once referred to papayas as the fruit of the angels. The fruit which is extremely rich in Vitamin C has a wide range of health benefits making it a great fruit option to include in your diet.
Story first published: Thursday, February 6, 2014, 10:48 [IST]
X
Desktop Bottom Promotion