For Quick Alerts
ALLOW NOTIFICATIONS  
For Daily Alerts

ನಿಮ್ಮ ಆಹಾರದಲ್ಲಿ ಅರಿಶಿಣವನ್ನು ಸೇರಿಸಲು ಇರುವ 10 ಕಾರಣಗಳು

By Deepak M
|

ಆಯುರ್ವೇದದಲ್ಲಿ ಹಳದಿ ಅಥವಾ ಅರಿಶಿಣವನ್ನು ಅದರಲ್ಲಿರುವ ಪ್ರಯೋಜನಕಾರಿ ಗುಣಗಳ ಕಾರಣವಾಗಿ " ಮಸಾಲೆ ಪದಾರ್ಥಗಳ ರಾಜ" ನೆಂದು ಪರಿಗಣಿಸಲಾಗಿದೆ. ಈ ಅದ್ಭುತವಾದ ಮಸಾಲೆ ಪದಾರ್ಥವು ಹಲವಾರು ಸೌಂದರ್ಯವರ್ಧಕ ಉತ್ಪನ್ನಗಳ ಅವಿಭಾಜ್ಯ ಅಂಗವಾಗಿದೆ.

ಇದರ ಜೊತೆಗೆ ಕ್ಯಾನ್ಸರ್‌ನಿಂದ ಹಿಡಿದು ಅಲ್ಜೀಮರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುವಲ್ಲಿ ಇದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ನಾವಿಲ್ಲಿ ನಿಮ್ಮ ಆಹಾರ ಪದಾರ್ಥದಲ್ಲಿ ಅರಿಶಿಣವನ್ನು ಏಕೆ ಸೇರಿಸಬೇಕು ಎಂಬುದಕ್ಕೆ 10 ಕಾರಣಗಳನ್ನು ನೀಡುತ್ತಿದ್ದೇವೆ. ಓದಿ ನೀವೇ ತಿಳಿಯಿರಿ, ಅರಿಶಿಣದ ಪ್ರಯೋಜನಗಳನ್ನು.

ಮಧುಮೇಹಿಗಳಿಗೆ ಬೆಸ್ಟ್ ಮನೆಮದ್ದು ಅರಿಶಿಣ

 ಸ್ವಾಭಾವಿಕ ಉಪಶಮಕ

ಸ್ವಾಭಾವಿಕ ಉಪಶಮಕ

ಅರಿಶಿಣವು ತನ್ನಲ್ಲಿ ಸ್ವಾಭಾವಿಕವಾದ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿ ಸೆಪ್ಟಿಕ್ ಗುಣಗಳನ್ನು ಹೊಂದಿದೆ. ಇದರಿಂದಾಗಿ ಇದು ಗಾಯವನ್ನು ಮಾಗಿಸಿ, ತ್ವಚೆಯನ್ನು ಯಥಾ ಸ್ಥಿತಿಗೆ ತರಲು ಸಹಕರಿಸುತ್ತದೆ.

ತೂಕವನ್ನು ಹತೋಟಿಯಲ್ಲಿಡುತ್ತದೆ

ತೂಕವನ್ನು ಹತೋಟಿಯಲ್ಲಿಡುತ್ತದೆ

ಅರಿಶಿಣವು ಕೊಬ್ಬನ್ನು ______ ಇದರಿಂದ ನಮ್ಮ ಏರುವ ತೂಕವು ಹತೋಟಿಯಲ್ಲಿರುತ್ತದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಿಶಿಣ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅರಿಶಿಣ

ಮೇದೊಜೀರಕ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಪುರುಷರ ಜನನಾಂಗದ ಕ್ಯಾನ್ಸರ್‌ಗಳನ್ನು ಪರಿಹರಿಸುವಲ್ಲಿ ಅರಿಶಿಣವು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ಅರಿಶಿಣವು ರಕ್ತನಾಳಗಳಲ್ಲಿ ಗಡ್ಡೆ (ಟ್ಯೂಮರ್) ಬೆಳೆಯದಂತೆ ಕಾಪಾಡುತ್ತದೆ. ಇದರ ಜೊತೆಗೆ ಮಕ್ಕಳಲ್ಲಿ ಲ್ಯೂಕೆಮಿಯಾ ಸಹ ಬರದಂತೆ ತಡೆಯಲು ಅರಿಶಿಣ ಪರಿಣಾಮಕಾರಿಯಾಗಿ ನೆರವಾಗುತ್ತದೆ.

ಕರುಳಿನಲ್ಲಿನ ನಂಜನ್ನು ನಿವಾರಿಸಲು

ಕರುಳಿನಲ್ಲಿನ ನಂಜನ್ನು ನಿವಾರಿಸಲು

ಅರಿಶಿಣವು ಕರುಳಿನಲ್ಲಿನ ನಂಜನ್ನು ನಿವಾರಿಸಲು ಸಹಕರಿಸುತ್ತದೆ. ಇದು ಕರುಳಿನಲ್ಲಿರುವ ಹೆಪಾಟಿಕ್ ಕೋಶಗಳನ್ನು ಪುನಃಶ್ಚೇತನಗೊಳಿಸಿ, ಅವುಗಳಲ್ಲಿ ನಂಜಿನ ವಿರುದ್ಧ ಹೋರಾಡುವಂತಹ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತದೆ.

ಆಂಟಿ- ಆಕ್ಸಿಡೆಂಟ್

ಆಂಟಿ- ಆಕ್ಸಿಡೆಂಟ್

ಅರಿಶಿಣದಲ್ಲಿ ಕುರ್ಕುಮಿನ್ ಎಂಬ ಪ್ರಧಾನ ಅಂಶವಿರುತ್ತದೆ. ಇದು ಗ್ಲುಟಾಥಿಯೋನ್ ಎಂಬ ಪರಿಣಾಮಕಾರಿ ಆಂಟಿ-ಆಕ್ಸಿಡೆಂಟ್ ಅನ್ನು ಉತ್ಪಾದಿಸುತ್ತದೆ. ಇದು ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್‌ಗಳ ವಿರುದ್ಧ ಹೋರಾಡಿ, ವಯಸ್ಸಾದಂತೆ ಬರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಅಲ್ಜೀಮರ್ ಕಾಯಿಲೆಯನ್ನು ನಿಯಂತ್ರಿಸುತ್ತದೆ.

ಅಲ್ಜೀಮರ್ ಕಾಯಿಲೆಯನ್ನು ನಿಯಂತ್ರಿಸುತ್ತದೆ.

ಅರಿಶಿಣವು ಮೆದುಳಿನಲ್ಲಿರುವ ಅಮೈಲೊಯ್ಡ್ ಎಂಬ ಪ್ಲಾಕ್ ಅನ್ನು ತೆಗೆದು ಹಾಕುತ್ತದೆ. ಇದರಿಂದಾಗಿ ಅಲ್ಜೀಮರ್ ಕಾಯಿಲೆಯು ಬೆಳವಣಿಗೆ ಹೊಂದಲು ಸಾಧ್ಯವಾಗುವುದಿಲ್ಲ.

ನೋವು ನಿವಾರಕ

ನೋವು ನಿವಾರಕ

ಅರಿಶಿಣ ಒಂದು ಅದ್ಭುತವಾದ ಪ್ರಾಕೃತಿಕ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದೆ. ಸಂಧಿವಾತ, ವಾತರೋಗ, ಸ್ಕೆರೊಸಿಸ್ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಿಸಲು ಅರಿಶಿಣವನ್ನು ಬಳಸಲಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅರಿಶಿಣವು ಅಲರ್ಜಿಗಳ ವಿರುದ್ಧ ಹೋರಾಡಿ ನಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ.

ಕಾರ್ಡಿಯೊವ್ಯಾಸ್ಕುಲರ್ ರಕ್ಷಣೆಯನ್ನು ಒದಗಿಸುತ್ತದೆ

ಕಾರ್ಡಿಯೊವ್ಯಾಸ್ಕುಲರ್ ರಕ್ಷಣೆಯನ್ನು ಒದಗಿಸುತ್ತದೆ

ಅರಿಶಿಣವು ರಕ್ತವನ್ನು ತೆಳುಗೊಳಿಸುತ್ತದೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಅರಿಶಿಣವು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಅರಿಶಿಣವು ಒಂದು ಅದ್ಭುತವಾದ ಜೀರ್ಣಶಕ್ತಿ ಪ್ರಚೋದಕ. ಹಾಗಾಗಿ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಗುಣಗಳ ಕಾರಣವಾಗಿ ಅರಿಶಿಣವು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮಸಾಲೆ ಪದಾರ್ಥವಾಗಿ ಗುರುತಿಸಿಕೊಂಡಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಇದನ್ನು ಬಳಸುವುದನ್ನು ಯಾವುದೇ ಕಾರಣಕ್ಕು ಮರೆಯಬೇಡಿ.

Read more about: health ಆರೋಗ್ಯ
English summary

10 Reasons to Add Turmeric to Your Diet

In Ayurveda, haldi or turmeric is considered as “King of Spices” because of its beneficial properties Here, we have 10 reasons why you should add this spice to your diet.
Story first published: Saturday, June 7, 2014, 13:18 [IST]
X
Desktop Bottom Promotion