For Quick Alerts
ALLOW NOTIFICATIONS  
For Daily Alerts

ಜ್ವರದ ಚಿಕಿತ್ಸೆಗೆ ಹತ್ತು ಆಹಾರಗಳು

By Hemanth P
|

ಜ್ವರ ತುಂಬಾ ಕಿರಿಕಿರಿ ಉಂಟುಮಾಡುವ ಕಾಯಿಲೆ, ಇದು ವ್ಯಕ್ತಿಗೆ ವಾಕರಿಕೆ ಮತ್ತು ಹಲವಾರು ದಿನಗಳ ಕಾಲ ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಅತಿಯಾದ ಜ್ವರದೊಂದಿಗೆ ದಿನವಿಡಿ ಹಾಸಿಗೆ ಮೇಲೆ ಮಲಗಿ ಕೊಂಡಿರುವುದು ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಬಳಲಿಕೆ ಮತ್ತು ವಾಕರಿಕೆ ಬರುವುದರಿಂದ ಜ್ವರ ತುಂಬಾ ಕಿರಿಕಿರಿಯುಂಟು ಮಾಡುತ್ತದೆ.

ಜ್ವರದಿಂದ ಬಳಲುವ ರೋಗಿಗಳು ಮಸಾಲೆ ಮತ್ತು ಎಣ್ಣೆಯಿಲ್ಲದ ಸೂಕ್ಷ್ಮ ಆಹಾರ ಸೇವಿಸಬೇಕು. ಆಹಾರ ಮನೆಯಲ್ಲಿ ತಯಾರಿಸಿದ ಮತ್ತು ಆರೋಗ್ಯಕರವಾಗಿರಬೇಕು. ಒಳ್ಳೆಯ ಆಹಾರಕ್ರಮವು ಕ್ಷಿಪ್ರ ಹಾಗೂ ಸುಲಭವಾಗಿ ಚೇತರಿಕೆಗೆ ನೆರವಾಗುತ್ತದೆ. ಜ್ವರ ಬಂದ ಬಳಿಕ ದೇಹದಲ್ಲಿ ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಇದರಿಂದ ಶಕ್ತಿ ಪಡೆಯಲು ಸರಿಯಾದ ಆಹಾರ ಸೇವಿಸಬೇಕು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಸ್ತಮಾ ತಡೆಗೆ ನಿರ್ಲಕ್ಷಿಸಲೇಬೇಕಾದ ಅಂಶಗಳು

ಕೆಲವೊಂದು ಆಹಾರಗಳು ಜ್ವರದ ಚಿಕಿತ್ಸೆಗೆ ನೆರವಾಗುತ್ತದೆ. ಜ್ವರ ಭಾದಿಸುವ ವೇಳೆ ತೆಗೆದುಕೊಳ್ಳಬಹುದಾದ ಕೆಲವೊಂದು ಆಹಾರಗಳು ಪ್ರತಿರಕ್ಷಣಾ ವ್ಯವಸ್ಥೆ ಉತ್ತಮಪಡಿಸಿ, ಜ್ವರದ ವಿರುದ್ಧ ಹೋರಾಡುವಂತೆ ಮತ್ತು ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಈ ಲೇಖನದಲ್ಲಿ ಜ್ವರದ ಚಿಕಿತ್ಸೆ ಬಳಸಬಹುದಾದ ಕೆಲವೊಂದು ಆಹಾರಗಳ ಬಗ್ಗೆ ಚರ್ಚಿಸಲಾಗಿದೆ.

1. ಹಣ್ಣುಗಳು

1. ಹಣ್ಣುಗಳು

ಹಣ್ಣುಗಳಲ್ಲಿ ನೈಸರ್ಗಿಕವಾದ ವಿಟಮಿನ್ ಮತ್ತು ಮಿನರಲ್ಸ್ ಗಳಿವೆ. ಜ್ವರದ ಆಹಾರಗಳಲ್ಲಿ ಹೆಚ್ಚಿನವು ಹಣ್ಣುಗಳಾಗಿವೆ. ಅದರಲ್ಲಿ ಲಘು ಹಾಗೂ ಸುಲಭವಾಗಿ ಜೀರ್ಣವಾಗುವ ಕಿತ್ತಳೆ, ದ್ರಾಕ್ಷಿ, ಸೇಬು ಮತ್ತಿತರ ಹಣ್ಣುಗಳು. ಹಣ್ಣುಗಳು ನಿಮ್ಮ ದೇಹವನ್ನು ಪುನರ್ಜಲೀಕರಿಸುತ್ತದೆ. ಇದು ಜ್ವರ ವಿರುದ್ಧ ಹೋರಾಡಲು ಅತ್ಯಗತ್ಯ. ದಿನವಿಡಿ ಹಣ್ಣುಗಳನ್ನು ತಿನ್ನುವ ಮೂಲಕ ಜ್ವರಕ್ಕೆ ಚಿಕಿತ್ಸೆ ಮಾಡಬಹುದು. ಹಣ್ಣುಗಳು ನೈಸರ್ಗಿಕವಾಗಿ ಲಭ್ಯವಿರುವ ಜ್ವರದ ಆಹಾರಗಳು.

2. ಸಲಾಡ್

2. ಸಲಾಡ್

ಒಂದು ಬೌಲ್ ಸಲಾಡ್ ಜ್ವರದ ರೋಗಿಗಳಿಗೆ ಒಳ್ಳೆಯ ಆಹಾರ. ಸಲಾಡ್ ನಲ್ಲಿ ಪ್ರೋಟಿನ್ ಮತ್ತು ಕಾಬ್ರೋಹೈಡ್ರೇಟ್ಸ್ ಗಳು ಸಮೃದ್ಧವಾಗಿದೆ. ಕಾಬ್ರೋಹೈಡ್ರೇಟ್ಸ್ ಮತ್ತು ಪ್ರೋಟಿನ್ ಜ್ವರದಿಂದ ಕುಂದಿಹೋಗಿರುವ ಶಕ್ತಿ ಮರಳುವಂತೆ ಮಾಡುತ್ತದೆ. ಸೌತೆಕಾಯಿ, ಕ್ಯಾರೆಟ್ ಇತ್ಯಾದಿಗಳನ್ನು ಜ್ವರದ ಚಿಕಿತ್ಸೆಗೆ ನಿಯಮಿತವಾಗಿ ಸೇವಿಸಬಹುದು.

3. ಜ್ಯೂಸ್ ಗಳು

3. ಜ್ಯೂಸ್ ಗಳು

ಜ್ವರದ ಚಿಕಿತ್ಸೆಗೆ ಹಣ್ಣು ಮತ್ತು ತರಕಾರಿಗಳ ಜ್ಯೂಸ್ ತುಂಬಾ ಲಾಭಕಾರಿ. ಕ್ಯಾರೆಟ್ ಜ್ಯೂಸ್, ಟೊಮೆಟೊ ಜ್ಯೂಸ್, ಬೆರ್ರಿ ಹಣ್ಣುಗಳ ಜ್ಯೂಸ್ ಮತ್ತು ಸಿಟ್ರಸ್ ಇರುವ ಆಹಾರಗಳ ಜ್ಯೂಸ್ ನಲ್ಲಿರುವ ಉನ್ನತ ಮಟ್ಟದ ಪ್ರೋಟಿನ್ ಮತ್ತು ಪೌಷ್ಠಿಕಾಂಶಗಳು ಜ್ವರಕ್ಕೆ ಒಳ್ಳೆಯ ಆಹಾರಗಳು.

4. ಬ್ರೌನ್ ಬ್ರೆಡ್ ಮತ್ತು ಬೆಳ್ಳುಳ್ಳಿ

4. ಬ್ರೌನ್ ಬ್ರೆಡ್ ಮತ್ತು ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸೂಕ್ಷ್ಮಜೀವಿ ವಿರೋಧಿ ಗುಣಗಳಿವೆ. ಇದು ಜ್ವರಕ್ಕೆ ಕಾರಣವಾಗುವಂತಹ ವೈರಸ್ ವಿರುದ್ಧ ಹೋರಾಡುತ್ತದೆ. ಬ್ರೌನ್ ಬ್ರೆಡ್ ಪ್ರೋಟಿನ್ ನಿಂದ ಸಮೃದ್ಧವಾಗಿದೆ ಮತ್ತು ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಬ್ರೌನ್ ಬ್ರೆಡ್ ಹಾಗೂ ಬೆಳ್ಳುಳ್ಳಿಯ ಮಿಶ್ರಣವು ಶಕ್ತಿ ನೀಡಿ, ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುತ್ತದೆ ಮತ್ತು ಜ್ವರಕ್ಕೆ ಕಾರಣವಾಗುವ ವೈರಸ್ ವಿರುದ್ಧ ನೈಸರ್ಗಿಕವಾಗಿ ಹೋರಾಡುತ್ತದೆ.

5. ಶುಂಠಿ ಚಹಾ

5. ಶುಂಠಿ ಚಹಾ

ಶುಂಠಿ ಜ್ವರಕ್ಕೆ ನೈಸರ್ಗಿಕ ಮದ್ದು. ಶತಮಾನಗಳಿಂದ ಶುಂಠಿಯನ್ನು ಜ್ವರದ ಚಿಕಿತ್ಸೆಗೆ ಬಳಸುತ್ತಾರೆ. ಶುಂಠಿಯಲ್ಲಿ ಉರಿಯೂತ ಶಮಕನಕಾರಿ ಮತ್ತು ಸೂಕ್ಷ್ಮಾಣುಜೀವಿ ವಿರೋಧಿ ಗುಣಗಳಿವೆ. ಇದು ಜ್ವರ ಕಡಿಮೆ ಮಾಡಿ, ಜ್ವರಕ್ಕೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡುತ್ತದೆ.

6. ಬಾಳೆಹಣ್ಣು

6. ಬಾಳೆಹಣ್ಣು

ಬಾಳೆಹಣ್ಣು ತುಂಬಾ ಲಘು ಮತ್ತು ಸುಲಭವಾಗಿ ಜೀರ್ಣ ಮಾಡಬಹುದು. ಬಾಳೆಹಣ್ಣಿನ ಮಿಲ್ಕ್ ಶೇಕ್ ಅಥವಾ ಬಾಳೆಹಣ್ಣಿನೊಂದಿಗೆ ಸಕ್ಕರೆ ಹಾಕಿ ಸೇವಿಸುವುದು ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆ. ವಾಕರಿಕೆ, ಬಳಲಿಕೆ ಮತ್ತು ವಾಂತಿಗೆ ಬಾಳೆಹಣ್ಣು ತುಂಬಾ ಒಳ್ಳೆಯದು. ಹೊಟ್ಟೆ ಜ್ವರದಿಂದ ಬಳಲುತ್ತಿರುವಾಗ ಬಾಳೆಹಣ್ಣು ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.

7. ಮಿಂಟ್ ಕ್ಯಾಂಡಿ

7. ಮಿಂಟ್ ಕ್ಯಾಂಡಿ

ಜ್ವರದ ವೇಳೆ ಉಂಟಾಗುವ ಒಣ ಮತ್ತು ನೋಯುವ ಗಂಟಲನ್ನು ಮಿಂಟ್ ಮೃದುವಾಗಿಸುತ್ತದೆ. ಮಿಂಟ್ ದೇಹದಲ್ಲಿನ ನೀರನಾಂಶ ನಿರ್ವಹಣೆಗೆ ನೆರವಾಗುತ್ತದೆ ಮತ್ತು ನಾಲಗೆಯ ರುಚಿ ಬದಲಾಯಿಸುತ್ತದೆ. ಮಿಂಟ್ ಕ್ಯಾಂಡಿ ಜ್ವರದ ವೇಳೆ ತಾಜಾತನ ಪಡೆಯಲು ನೆರವಾಗುತ್ತದೆ.

8. ಟರ್ಕಿ

8. ಟರ್ಕಿ

ಟರ್ಕಿಯ ಮಾಂಸದಲ್ಲಿ ಅತ್ಯಧಿಕ ಪ್ರೋಟಿನ್ ಮತ್ತು ಕಡಿಮೆ ಕೊಬ್ಬು ಇದೆ. ಇದರಿಂದ ಟರ್ಕಿ ಮಾಂಸ ತಿಂದರೆ ಒಳ್ಳೆಯ ಪೌಷ್ಠಿಕಾಂಶಗಳು ಸಿಗುತ್ತದೆ. ಇದರಿಂದ ಜ್ವರಕ್ಕೆ ಟರ್ಕಿ ಒಳ್ಳೆಯ ಆಹಾರ ಮತ್ತು ಇದನ್ನು ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆಯಾಗಿ ಬಳಸಬಹುದು.

9. ಸೂಪ್

9. ಸೂಪ್

ಆರೋಗ್ಯಕರ ತರಕಾರಿ ಮತ್ತು ಚಿಕನ್ ಸೂಪ್ ಜ್ವರದ ವೇಳೆ ದೇಹಕ್ಕೆ ಶಕ್ತಿ ಒದಗಿಸುತ್ತದೆ. ಸೂಪ್ ತುಂಬಾ ಬೆಚ್ಚಗಿನ ಮತ್ತು ದೇಹಕ್ಕೆ ತುಂಬಾ ಲಘುವಾಗಿರುತ್ತದೆ.

10. ಬ್ಲ್ಯಾಕ್ ಟೀ

10. ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಜ್ವರದ ಚಿಕಿತ್ಸೆ ಮತ್ತು ಒಣ ಗಂಟಲಿಗೆ ತುಂಬಾ ಒಳ್ಳೆಯದು.

English summary

10 foods to treat flu

Flu is an irritating disease which makes a person nauseated and bed ridden for days. It is really annoying to sleep on the couch all day with high fever.
Story first published: Wednesday, January 22, 2014, 16:42 [IST]
X
Desktop Bottom Promotion