For Quick Alerts
ALLOW NOTIFICATIONS  
For Daily Alerts

ನೀವು ಪ್ರತೀ ದಿನ ಸೇವಿಸಬಹುದಾದ 10 ಆಹಾರಗಳು

|

ಜಗತ್ತಿನಲ್ಲಿ ಅನೇಕ ಆರೋಗ್ಯವಂತ ಆಹಾರಗಳಿವೆ. ಆದರೆ ಕೆಲವೊಂದು ಆಹಾರಗಳನ್ನು ಮಾತ್ರ ನಮಗೆ ಸೇವಿಸಲು ಸಾಧ್ಯ. ಉದಾಹರಣೆಗೆ ಮೊಟ್ಟೆ ನಿತ್ಯವೂ ಸೇವಿಸಬಹುದಾದ ಒಂದು ಆರೋಗ್ಯವಂತ ಆಹಾರ. ನ್ಯೂಟ್ರೀನ್ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಮೊಟ್ಟೆಯನ್ನು ವೈದ್ಯರು ನಿತ್ಯವೂ ಸೇವಿಸಲು ಸೂಚಿಸುತ್ತಾರೆ. ಪ್ರತೀ ಸೀಸನ್‌ಗೂ ದೊರೆಯುವ ಆಹಾರ ಪದಾರ್ಥಗಳು ಮೊಸರು ಹಾಲು ಆಗಿದೆ. ಯಾವುದೇ ಸೀಸನ್‌ಗೂ ಇದರ ಸೇವನೆ ನಿಲ್ಲುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಮೆಂತ್ಯೆಯ 15 ಆರೋಗ್ಯ ಲಾಭಗಳು

ತಂಪಾದ ಯೋಗರ್ಟ್ ಅನ್ನು ಬೇಸಿಗೆಯಲ್ಲಿ ಮತ್ತು ಬೆಚ್ಚನೆಯ ಸಲಾಡ್‌ಗಳ ರೂಪದಲ್ಲಿ ಚಳಿಗಾಲದಲ್ಲಿ ಇದನ್ನು ಸೇವಿಸಬಹುದು. ಪ್ರತಿ ಸೀಸನ್‌ನಲ್ಲೂ ಅಗತ್ಯ ನ್ಯೂಟ್ರಿಯಂಟ್‌ಗಳಾದ ಕ್ಯಾಲ್ಶಿಯಂ ಹಾಗೂ ಐರನ್ ನಿಮಗೆ ಅಗತ್ಯವಾಗಿದೆ.

ಕೊಬ್ಬು ಕಡಿಮೆ ಇರುವ ಉತ್ತಮ ಕೊಲೆಸ್ಟ್ರಾಲ್‌ಗಳನ್ನು ಹೊಂದಿರುವ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ನ್ಯೂಟ್ರಿಯಂಟ್ಸ್‌ಗಳನ್ನು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತಂಪಾದ ಲಸ್ಸಿಯ ಆರೋಗ್ಯಕಾರಿ ಪ್ರಯೋಜನಗಳು

ಮೊಟ್ಟೆ:

ಮೊಟ್ಟೆ:

ಎಲ್ಲಾ ಕಾಲದಲ್ಲೂ ಮೊಟ್ಟೆ ಸಿಗುತ್ತದೆ. ಎರಡು ಬೇಯಿಸಿದ ಮೊಟ್ಟೆಗಳನ್ನು ನಿತ್ಯವೂ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತೀ ಉತ್ತಮ. ಬಲವನ್ನು ವರ್ಧಿಸಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಮೊಟ್ಟೆ ಪೂರೈಸುತ್ತದೆ.

ನಟ್ಸ್:

ನಟ್ಸ್:

ನಟ್ಸ್‌ಗಳು ಶಕ್ತಿ ವರ್ಧಕ ಆಹಾರಗಳಾಗಿದ್ದು ತೂಕ ಏರಿಕೆಗೆ ಸಹಾಯಕ. ದಿನವಿಡೀ ಶಕ್ತಿಯನ್ನು ಪಡೆಯಲು ಒಂದು ಮುಷ್ಟಿಯಷ್ಟು ನಟ್ಸ್ ಸಹಕಾರಿ. ಬಾದಾಮಿ, ವಾಲ್‌ನಟ್ಸ್ ಹಾಗೂ ಗೇರುಬೀಜವನ್ನು ನಿತ್ಯವೂ ಸೇವಿಸಬಹುದು.

ಹಾಲು:

ಹಾಲು:

ಹಾಲು ಎಲ್ಲರಿಗೂ ಮೆಚ್ಚಿಗೆಯಾಗುವುದಿಲ್ಲ. ಹಾಲನ್ನು ನಿತ್ಯವೂ ಸೇವಿಸಿ ಜೀರ್ಣಿಸುವ ಶಕ್ತಿಯನ್ನು ಹೊಂದಿದವರಾಗಿದ್ದರೆ ಅದೃಷ್ಟಶಾಲಿಗಳೆಂದೇ ನೀವು ಪರಿಗಣಿಸಲ್ಪಡುತ್ತೀರಿ. ಬೇಸಿಗೆಯಲ್ಲಿ ತಂಪಾಗಿ ಮತ್ತು ಚಳಿಗಾಲದಲ್ಲಿ ಹಾಗೆಯೇ ಹಾಲನ್ನು ಸೇವಿಸುವುದು ಕ್ಯಾಲ್ಶಿಯಂ ಪೂರೈಕೆಯನ್ನು ಮಾಡುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಬೆಳ್ಳುಳ್ಳಿಯ ಆರೋಗ್ಯಕಾರಿ ಅಂಶಗಳು ಅದ್ಭುತ. ಕ್ಯಾನ್ಸರ್, ವೈರಲ್ ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿ ಬೆಳ್ಳುಳ್ಳಿಗಿದೆ. ಇದನ್ನು ಹಾಗೆಯೇ ತಿನ್ನಲು ಸಾಧ್ಯವಿಲ್ಲದಿರುವುದರಿಂದ ಬೇರೆ ಸಾಮಾಗ್ರಿಗಳೊಂದಿಗೆ ಮಿಶ್ರ ಮಾಡಿ ಸೇವಿಸಿ.

ಓಟ್ಸ್:

ಓಟ್ಸ್:

ಸಾಮಾನ್ಯವಾಗಿ ಓಟ್ಸ್ ಅನ್ನು ಬ್ರೇಕ್‌ಫಾಸ್ಟ್ ಸಿರೆಲ್ಸ್ ಎಂದೇ ಕರೆಯುತ್ತಾರೆ. ನಿಮ್ಮ ನಿತ್ಯದ ಆಹಾರವಾದ ರೋಟಿ ಮತ್ತು ಅನ್ನಕ್ಕೆ ಬದಲಾಗಿ ಕೊಲೆಸ್ಟ್ರಾಲ್ ಇಳಿಕೆ ಮಾಡುವ ಓಟ್ಸ್ ಅನ್ನು ಸೇವಿಸಿ. ಓಟ್ಸ್‌ನೊಂದಿಗೆ ಚಿಕನ್ ಅನ್ನು ಮಧ್ಯಾಹ್ನಕ್ಕೆ ಮತ್ತು ಬ್ರೇಕ್‌ಫಾಸ್ಟ್‌ಗೆ ದೋಸೆಯ ಜೊತೆ ಓಟ್ಸ್ ಸೇವಿಸಿ.

ಬ್ರಕೋಲಿ:

ಬ್ರಕೋಲಿ:

ಬ್ರಕೋಲಿ ಅಸಾಧಾರಣ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಸೂಪರ್ ಫುಡ್ ಆಗಿದೆ. ಉತ್ಕರ್ಷಣ ನಿರೋಧಿ ಹಾಗೂ ಫೈಬರ್ ರಿಚ್ ಆಗಿರುವ ಬ್ರಕೋಲಿಯನ್ನು ನಿತ್ಯವೂ ಸೇವಿಸಿ ಫಿಟ್ ಆಗಿರಿ. ನಿಮ್ಮ ತೂಕ ಇಳಿಸಲು ಈ ತರಕಾರಿಯನ್ನು ನಿತ್ಯವೂ ಸೇವಿಸಬೇಕು.

ಗ್ರೀನ್ ಟೀ:

ಗ್ರೀನ್ ಟೀ:

ಗ್ರೀನ್ ಟೀ ಒಂದು ಪೇಯವಾಗಿದ್ದು ಅತ್ಯದ್ಭುತ ಆರೋಗ್ಯ ಸಹಾಯಕ ಅಂಶಗಳನ್ನು ಒಳಗೊಂಡಿದೆ. ಗ್ರೀನ್ ಟೀ ಯನ್ನು ಸೇವಿಸುವುದೆಂದರೆ ಒಳಗಿನ ಸ್ನಾನವನ್ನು ನೀವು ಮಾಡುವುದು ಅಂದರೆ ದೇಹದ ಒಳಗಿನ ಸ್ವಚ್ಛತೆ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ದೇಹದಲ್ಲಿನ ವಿಷವನ್ನು ಹೊರಹಾಕಲು ಸಹಕಾರಿ. ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಕೂಡ ಗ್ರೀನ್ ಟೀಗಿದೆ.

ಯೋಗರ್ಟ್:

ಯೋಗರ್ಟ್:

ನಿಮಗೆ ಹಾಲು ಇಷ್ಟವಾಗದಿದ್ದರೆ ಹಾಲಿನ ಗುಣಗಳನ್ನು ಹೊಂದಿರುವ ಯೋಗರ್ಟ್ ಅನ್ನು ಸೇವಿಸಬಹುದು. ಯೋಗರ್ಟ್ ಉತ್ತಮ ಬ್ಯಾಕ್ಟೀರೀಯಾವನ್ನು ಒಳಗೊಂಡಿದ್ದು ನಿಮ್ಮನ್ನು ಆರೋಗ್ಯವಂತರನ್ನಾಗಿ ಇರಿಸುತ್ತದೆ. ಆಹಾರವನ್ನು ಸುಲಭವಾಗಿ ಜೀರ್ಣ ಮಾಡಿ ಕ್ಯಾಲ್ಶಿಯಂಗಳ ನಿಕ್ಷೇಪಗಳನ್ನೇ ನಿಮ್ಮಲ್ಲಿ ಉಂಟು ಮಾಡಲು ಯೋಗರ್ಟ್ ಸಹಕಾರಿ.

ಆಲೀವ್ ಆಯಿಲ್:

ಆಲೀವ್ ಆಯಿಲ್:

ವಿಟಮಿನ್ ಇ ಯಿಂದ ಭರಿತವಾಗಿರುವ ಆಲೀವ್ ಆಯಿಲ್ ಹೃದಯ ರೋಗಗಳ ವಿರುದ್ಧ ಹೋರಾಡುತ್ತದೆ ಹಾಗೂ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ. ನಿಮ್ಮ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಶ್ರೇಣಿಯನ್ನು ಹೆಚ್ಚುಮಾಡುತ್ತದೆ. ಆಲೋವ್ ಆಯಿಲ್ ಅನ್ನು ಅಡುಗೆಗೆ ಬಳಸಿ ಕೂಡ ಅದನ್ನು ಸೇವಿಸಬಹುದು.

ಧಾನ್ಯಗಳು:

ಧಾನ್ಯಗಳು:

ಧಾನ್ಯಗಳು ಅಂದರೆ ಸಿರೆಲ್ಸ್‌ನಂತಿದ್ದು ನಿಮ್ಮನ್ನು ದಪ್ಪಗಾಗಿಸುವುದಿಲ್ಲ. ದಾಲ್, ಕಿಡ್ನಿ ಬೀನ್ಸ್ ಹಾಗೂ ಮೊಳಕೆ ಕಾಳುಗಳು ಕೊಬ್ಬಿನ ಶೇಖರಣೆ ಮಾಡದೆ ಪ್ರೊಟೀನ್‌ಗಳನ್ನು ಪೂರೈಸುತ್ತದೆ. ಆದ್ದರಿಂದ ಪ್ರತೀ ದಿನ ಧಾನ್ಯಗಳನ್ನು ಪ್ರೊಟೀನ್ ಮೂಲಗಳಂತೆ ಸೇವಿಸಿ.

Read more about: health ಆರೋಗ್ಯ
English summary

10 Foods To Eat Every Day Without Fail

There are many healthy foods in this world. However, very few foods are healthy enough to be eaten on a daily basis. Eggs are the best example of everyday superfood.
X
Desktop Bottom Promotion