For Quick Alerts
ALLOW NOTIFICATIONS  
For Daily Alerts

ತೂಕ ಕಮ್ಮಿ ಮಾಡುವ ಸರಳ ವ್ಯಾಯಾಮಗಳಿವು

|

ಸ್ವಲ್ಪ ದಪ್ಪವಾದರೆ ಸಣ್ಣಗಾಗಬೇಕೆಂದು ಪ್ರತಿಯೊಬ್ಬರಿಗೂ ಅನಿಸುತ್ತದೆ. ಜಿಮ್ , ಯೋಗ, ವಾಕ್ ಅಂತ ಹೋಗಲು ಸಮಯವಿಲ್ಲ, ಆದ್ದರಿಂದ ದಪ್ಪಗಾಗುತ್ತಿದ್ದೇನೆ ಇನ್ನು ಕೆಲವರು ತಮ್ಮ ದಪ್ಪವನ್ನು ಸಮರ್ಥಿಸಿಕೊಳ್ಳುವುದನ್ನೂ ಕಾಣಬಹುದು. ಸಮಯ ಯಾರಿಗೂ ಇರುವುದಿಲ್ಲ. ನಮಗೆ ಬೇಕಾದ ಸಮಯವನ್ನು ನಾವೇ ಹೊಂದಿಸಿಕೊಳ್ಳಬೇಕು.

ಸಮಯವಿಲ್ಲವೆಂದು ದಿನದಲ್ಲಿ ಅರ್ಧಗಂಟೆಯನ್ನು ನಮಗಾಗಿ ಇಡಲು ಸಾಧ್ಯವಿಲ್ಲದಿದ್ದರೆ ದಪ್ಪಗಾದ ಬಳಿಕ, ಅನೇಕ ಕಾಯಿಲೆಗಳು ಬಂದು ಕಷ್ಟ ಪಡಬೇಕಾದವರು ನಾವೇ.

ಪಾರ್ಕ್, ಜಿಮ್ ಗೆ ಹೋಗಿ ಮಾಡಿದರೆ ಮಾತ್ರವಲ್ಲ ವ್ಯಾಯಾಮ, ಸರಳ ವ್ಯಾಯಾಮವನ್ನು ಮನೆಯಲ್ಲಿಯೇ ಮಾಡಿದರೆ ಸಾಕು ಸಮತೂಕದ ಮೈಕಟ್ಟು ಪಡೆಯಬಹುದು. ಮನೆಗೆಲಸ ಮಾಡುವುದು, ಲಿಫ್ಟ್ ಬಳಸದೆ ಸ್ಟೆಪ್ ಹತ್ತಿ ಇಳಿಯುವುದು ಇವೆಲ್ಲಾ ತೂಕ ಕಡಿಮೆ ಮಾಡುವಲ್ಲಿ ನಿಮಗೆ ಜಿಮ್ ನಷ್ಟೇ ಪರಿಣಾಮಕಾರಿಯಾಗಿದೆ.

ತೂಕ ಕಮ್ಮಿ ಮಾಡಲು ಮನೆಯಲ್ಲಿ ಮಾಡಬಹುದಾದ ಕೆಲವು ವ್ಯಾಯಾಮಗಳ ಬಗ್ಗೆ ಸ್ಲೈಡ್ ನಲ್ಲಿ ಹೇಳಲಾಗಿದೆ ನೋಡಿ:

 ಸ್ಟೆಪ್ ಹತ್ತಿ ಇಳಿಯುವುದು

ಸ್ಟೆಪ್ ಹತ್ತಿ ಇಳಿಯುವುದು

ಅಪಾರ್ಟ್ ಮೆಂಟ್ ನಲ್ಲಿ ಇರುವವರಾದರೆ ಲಿಫ್ಟ್ ಬದಲು ಸ್ಟೆಪ್ ಬಳಸಿ. ಆಫೀಸ್ ನಲ್ಲೂ ಅಷ್ಟೇ. ಮನೆಯಲ್ಲಿ 10 ನಿಮಿಷದಷ್ಟು ಹೊತ್ತು ಸ್ಟೆಪ್ ಹತ್ತಿ, ಇಳಿಯುವ ವ್ಯಾಯಾಮ ಮಾಡಿದರೆ ಸಾಕು ಮೈಯಲ್ಲಿರುವ ಕೊಬ್ಬು ಕರಗುವುದು.

ಕುರ್ಚಿ ಕೂರುವುದು

ಕುರ್ಚಿ ಕೂರುವುದು

ಸ್ಕೂಲ್ ನಲ್ಲಿ ತಪ್ಪು ಮಾಡಿದಾಗ ಟೀಚರ್ ಕರ್ಚಿ ಕೂರಿಸಿದ ಅನುಭವ ಕೆಲವರಲ್ಲಿ ಇರಬಹುದು. ಅದೇ ರೀತಿ ಈಗಲೂ ಮಾಡಿ. ಕುರ್ಚಿ ಕೂರುವ ವ್ಯಾಯಾಮ ಮಾಡಿದರೆ ಬೊಜ್ಜು ಹೊಟ್ಟೆ ಬರುವುದಿಲ್ಲ.

ಕ್ರಂಚಸ್

ಕ್ರಂಚಸ್

ಕ್ರಂಚಸ್ ಕೂಡ ದೇಹದ ತೂಕವನ್ನು, ಹೊಟ್ಟೆ ಬೊಜ್ಜನ್ನು ಬೇಗನೆ ಕರಗಿಸುವಲ್ಲಿ ಪರಿಣಾಮಕಾರಿಯಾಗಿದೆ.

ಕ್ರಂಚಸ್

ಕ್ರಂಚಸ್

ಕ್ರಂಚಸ್ ಕೂಡ ದೇಹದ ತೂಕವನ್ನು, ಹೊಟ್ಟೆ ಬೊಜ್ಜನ್ನು ಬೇಗನೆ ಕರಗಿಸುವಲ್ಲಿ ಪರಿಣಾಮಕಾರಿಯಾಗಿದೆ.

 ಫುಶ್ ಅಪ್

ಫುಶ್ ಅಪ್

ಸ್ನಾಯುಗಳು ಬಲವಾಗ, ಎದೆ ಅಗಲವಾಗಲು ಪುರುಷರು ಪುಶ್ ಅಪ್ ವ್ಯಾಯಾಮ ಮಾಡುವುದು ಒಳ್ಳೆಯದು.

ಓಡುವುದು

ಓಡುವುದು

ಮನೆ ಮುಂದೆ ಸ್ಥಳಾವಕಾಶವಿದ್ದರೆ ಅಥವಾ ಮನೆ ಮುಂದೆ ಇರುವ ರಸ್ತೆಯಲ್ಲಿ ಅರ್ಧ ಗಂಟೆ ಓಡುವ ವ್ಯಾಯಾಮ ಮಾಡಬಹುದು. ವಯಸ್ಸು 40 ದಾಟಿದವರು ನಡೆಯುವ ವ್ಯಾಯಾಮ ಮಾಡಿದರೆ ಒಳ್ಳೆಯದು.

ಡ್ಯಾನ್ಸ್

ಡ್ಯಾನ್ಸ್

ಡ್ಯಾನ್ಸ್ ಮಾಡುವುದು ಫನ್ ಹಾಗೂ ತೂಕವನ್ನು ಕರಗಿಸುವಲ್ಲಿ ಸಹಕಾರಿ.

ಜಂಪಿಂಗ್

ಜಂಪಿಂಗ್

ಕೈಗಳನ್ನು ಮೇಲತ್ತಿ ಜಂಪಿಂಗ್ ವ್ಯಾಯಾಮ ಮಾಡಬಹುದು. ಇದನ್ನು ಒಬ್ಬರೇ ಮಾಡುವುದಕ್ಕಿಂತ ನಿಮ್ಮ ಅಕ್ಕ ಪಕ್ಕದ ಸ್ನೇಹಿತರ ಜೊತೆ ಮಾಡಿದರೆ ಮತ್ತಷ್ಟು ಖುಷಿ ಸಿಗುವುದು.

 ಸ್ಕಿಪ್ಪಿಂಗ್

ಸ್ಕಿಪ್ಪಿಂಗ್

ಸ್ಕಿಪ್ಪಿಂಗ್ ಆಡಿದರೆ ಕ್ಯಾಲೋರಿಯನ್ನು ಬೇಗನೆ ಕರಗಿಸಿಕೊಳ್ಳಬಹುದು. ಬರೀ ದೇಹದ ತೂಕವನ್ನು ಕಮ್ಮಿ ಮಾಡುವುದು ಮಾತ್ರವಲ್ಲ ಈ ರೀತಿಯ ಆರೋಗ್ಯಕರ ಗುಣಗಳನ್ನು ಪಡೆಯಬಹುದು.

ಡಿಪ್ಸ್

ಡಿಪ್ಸ್

ಸೋಫಾ ಅಥವಾ ಬೆಡ್ ನ ಸಪೋರ್ಟ್ ನಿಂದ ಡಿಪ್ಸ್ ತೆಗೆದು, ನಂತರ ನೆಲದಲ್ಲಿ ಮಲಗಿ ಕೈಯನ್ನು ಆಧಾರವಾಗಿಟ್ಟು ಡಿಪ್ಸ್ ತೆಗೆಯುವ ವ್ಯಾಯಾಮ ಮಾಡಬಹುದು.

ಚಪ್ಪಟೆ ಹೊಟ್ಟೆಗೆ

ಚಪ್ಪಟೆ ಹೊಟ್ಟೆಗೆ

ಹೊಟ್ಟೆ ಬರದಿರಲು ಸಮತಟ್ಟಾದ ನೆಲದಲ್ಲಿ ಟವಲ್ ಹಾಕಿ ಅದರ ಮೇಲೆ ಕಮುಚಿ ಮಲಗಿ. ನಂತರ ಕೈ ಮತ್ತು ಕಾಲಿನ ಬೆರಳಿನಿಂದ ನೆಲವನ್ನು ಒತ್ತ ಹಿಡಿದು ದೇಹವನ್ನು ಗಾಳಿಯಲ್ಲಿ ಬ್ಯಾಲೆನ್ಸ್ ಮಾಡಿದರೆ ಹೊಟ್ಟೆ ಬೊಜ್ಜಿನ ಸಮಸ್ಯೆ ಕಾಡುವುದಿಲ್ಲ.

English summary

Weight Loss Exercises You Can Do At Home | Tips For Weight Loss | ತೂಕ ಕಮ್ಮಿ ಮಾಡುವ ವ್ಯಾಯಾಮಗಳಿವು | ದೇಹದ ತೂಕ ಕಮ್ಮಿ ಮಾಡಲು ಟಿಪ್ಸ್

Giving yourself a no equipment workout at home could be a great way to lose weight. When you do your weight loss exercises at home, there are more chances of you being regular. And we already know that consistency is the key to lose weight. Here are some simple weight loss exercises that can be done at home.
X
Desktop Bottom Promotion