For Quick Alerts
ALLOW NOTIFICATIONS  
For Daily Alerts

40ರ ಮಹಿಳೆಯರಿಗೆ ಈ ವಿಟಮಿನ್ ಗಳು ಅಗತ್ಯ

|

ನಲವತ್ತರ ನಂತರ ಮಹಿಳೆಯರು ವಿಟಮಿನ್ ಗಳನ್ನು ಹೆಚ್ಚಾಗಿ ಸೇವಿಸಬೇಕು. ಏಕೆಂದರೆ ಮಹಿಳೆಯರಿಗೆ ಇದು ಮುಟ್ಟು ನಿಲ್ಲುವ ಸಮಯ. ಕೆಲಸಕ್ಕೆ ಹೋಗುವ ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ. ನಿಮಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯಿದ್ದರೆ ಈ ವಿಟಮಿನ್ ಗಳನ್ನು ಸೇವಿಸುವುದನ್ನು ಮರೆಯದಿರಿ.

ನಲವತ್ತರ ನಂತರ ಮಹಿಳೆಯರು ಬದಲಾಗುತ್ತಾರೆ. ಆಕೆ ಹೆಚ್ಚು ನಿಶ್ಯಕ್ತಳಾಗಿ ಕೀಲು ನೋವು ಮೊದಲಾದ ಸಮಸ್ಯೆಗಳಿಂದ ಬಳಲುತ್ತಾಳೆ. ನೀವು ನಲವತ್ತರ ಆಸುಪಾಸಿನ ಮಹಿಳೆಯಾಗಿದ್ದಲ್ಲಿ ನೀವು ಅಗತ್ಯವಾಗಿ ಸೇವಿಸಬೇಕಾದ ವಿಟಮಿನ್ ಗಳ ವಿವರ ಇಲ್ಲಿದೆ.

ಈ ವಿಟಮಿನ್ ಗಳನ್ನು ಕನಿಷ್ಟ ದಿನಕ್ಕೊಮ್ಮೆ ಅಥವ ವಾರಕ್ಕೊಮ್ಮೆಯಾದರೂ ಸೇವಿಸಬೇಕು. ಇವು ಆರೋಗ್ಯವನ್ನು ಉತ್ತಮಪಡಿಸುವಲ್ಲಿ ಸಹಕಾರಿ. ಇದು ತೂಕ ಕಳೆದುಕೊಳ್ಳಲು ಯೋಜಿಸುತ್ತಿರುವ ಮಹಿಳೆಯರಿಗೆ ಕೂಡ ನೆರವಾಗುತ್ತದೆ. ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ನೀವು ಉದ್ಯೋಗಸ್ಥ ಮಹಿಳೆಯಾಗಿದ್ದಲ್ಲಿ ನಿಮಗೆ ಇದರ ಅವಶ್ಯಕತೆಯಿರುತ್ತದೆ.

40ರ ನಂತರ ದೇಹಕ್ಕೆ ಅಗತ್ಯವಾದ ವಿಟಮಿನ್ ಗಳು

ವಿಟಮಿನ್ ಬಿ-12

ವಿಟಮಿನ್ ಬಿ-12

40 ದಾಟಿದ ಮಹಿಳೆಗೆ ಅತ್ಯಗತ್ಯವಾದ ವಿಟಮಿನ್ ಇದು. ಹೃದಯ ಸಂಬಂಧಿ ಸಮಸ್ಯೆಯಿರುವ ಅಥವ ಸರ್ಜರಿ ಮುಗಿಸಿದ ಮಹಿಳೆಯರಿಗೆ ಇದು ಒಳ್ಳೆಯದು. ಬೀಫ್, ಮ್ಯಾಕೆರೆಲ್ ಮತ್ತು ಮೊಟ್ಟೆಗಳಲ್ಲಿ ಇದು ಹೆಚ್ಚಿರುತ್ತದೆ.

ವಿಟಮಿನ್ ಬಿ

ವಿಟಮಿನ್ ಬಿ

ಮತ್ತೊಂದು ಮುಖ್ಯವಾದ ವಿಟಮಿನ್ ಎಂದರೆ ವಿಟಮಿನ್ ಬಿ. ಉದ್ಯೋಗಸ್ಥ ಮಹಿಳೆಯರಿಗೆ ಇದು ಹೆಚ್ಚು ಅತ್ಯವಶ್ಯಕ. ಸೊಪ್ಪು, ಸಾಲಮನ್, ಆಲೂಗಡ್ಡೆ ಮತ್ತು ಲೆಗ್ಯುಮೆಸ್ ನಲ್ಲಿ ಇದು ಹೆಚ್ಚಿರುತ್ತದೆ.

ವಿಟಮಿನ್ ಡಿ

ವಿಟಮಿನ್ ಡಿ

ಸೂರ್ಯನ ಬಿಸಿಲಿನಲ್ಲಿ ಕನಿಷ್ಠ 15 ನಿಮಿಷ ನಿಂತರೆ ಸಾಕು ಈ ವಿಟಮಿನ್ ನಿಮಗೆ ಸಿಗುತ್ತದೆ. ಅದೇನೆ ಇರಲಿ ನಲವತ್ತರ ಹರೆಯದ ಹೆಂಗಸರು ಸಾಲಮನ್ ಅಥವ ಹಾಲನ್ನು ಕುಡಿಯುವುದು ಒಳ್ಳೆಯದು.

ವಿಟಮಿನ್ ಕ್ಯೂ10

ವಿಟಮಿನ್ ಕ್ಯೂ10

ಇದು ಮೀನು, ಕರುಳು ಮತ್ತು ಮೂತ್ರಪಿಂಡಗಳಲ್ಲಿ ಸಿಗುತ್ತದೆ. ಕಾಳುಗಳಲ್ಲಿ ಕೂಡ ಇದು ಹೆಚ್ಚಿದ್ದು ಇದು ವಿಟಮಿನ್ ನ ಉತ್ತಮ ಮೂಲ.

ಕಬ್ಬಿಣದಂಶ

ಕಬ್ಬಿಣದಂಶ

ಯಾರು ರಕ್ತಹೀನತೆಯಿಂದ ಬಳಲುತ್ತಿರುವರೋ ಅಂತಹವರಿಗೆ ಕಬ್ಬಿಣದಂಶ ಹೆಚ್ಚಾಗಿ ಅಗತ್ಯವಿರುತ್ತದೆ. ಬ್ರೊಕೊಲಿ ಮತ್ತು ಸ್ಪಿನಾಚ್ ತಿನ್ನುವುದರಿಂದ ಕಬ್ಬಿಣದಂಶ ಹೆಚ್ಚಾಗಿ ದೊರಕುತ್ತದೆ.

ವಿಟಮಿನ್ ಸಿ

ವಿಟಮಿನ್ ಸಿ

ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ನಲವತ್ತರ ವಯಸ್ಸಿನಲ್ಲಿ ಕಣ್ಣಿನ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದ್ದರಿಂದ ವಾರಕ್ಕೊಮ್ಮೆಯಾದರೂ ಇದನ್ನು ತಿನ್ನುವುದು ಒಳ್ಳೆಯದು.

ವಿಟಮಿನ್ ಎ

ವಿಟಮಿನ್ ಎ

40ರ ವಯಸ್ಸನ್ನು ದಾಟಿದ ಮಹಿಳೆಯರು ತಮ್ಮ ಆಹಾರದಲ್ಲಿ ವಿಟಮಿನ್ ಎ ಸಾಕಷ್ಟು ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗೆಣಸು ಮತ್ತು ಕ್ಯಾರೆಟಿನಲ್ಲಿ ವಿಟಮಿನ್ ಎ ಹೆಚ್ಚಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚುಗೊಳಿಸಲು ನೆರವಾಗುತ್ತದೆ.

ಮ್ಯಾಗ್ನೀಶಿಯಂ

ಮ್ಯಾಗ್ನೀಶಿಯಂ

ಅವಕ್ಯಾಡೊ ಮತ್ತು ಬಾಳೆಹಣ್ಣುಗಳು ನಲವತ್ತನ್ನು ದಾಟಿದ ಮಹಿಳೆಯರಿಗೆ ಬಹಳ ಒಳ್ಳೆಯದು. ಇದನ್ನು ದಿನವೂ ಸೇವಿಸುವುದರಿಂದ ನರವ್ಯೂಹ ವ್ಯವಸ್ಥೆಯು ಸುವ್ಯವಸ್ಥಿತವಾಗಿರುತ್ತದೆ.

ಜಿಂಕ್

ಜಿಂಕ್

ಅಣಬೆ ಮತ್ತು ಹುರಳಿಕಾಯಲ್ಲಿ ಜಿಂಕ್ ಹೆಚ್ಚಿರುತ್ತದೆ. ಇದನ್ನು ತಿನ್ನುವುದರಿಂದ ಹಲವು ರೀತಿಯ ಸಮಸ್ಯೆಗಳಿಂದ ದೂರವುಳಿಯಬಹುದು.

ವಿಟಮಿನ್ ಇ

ವಿಟಮಿನ್ ಇ

ಟೊಫು, ನಟ್ಸ್ ಮತ್ತು ಬ್ರೊಕೊಲಿಗಳನ್ನು ವಾರಕ್ಕೊಮ್ಮೆಯಾದರೂ ತಿನ್ನುವುದು ಒಳ್ಳೆಯದು. ಇವು ಆಕ್ಸಿಡೆಟೀವ್ ಸ್ಟ್ರೆಸ್ ಕಡಿಮೆಮಾಡಲು ನೆರವಾಗುತ್ತವೆ.

English summary

Vitamins For Women Over 40

Over the age of 40 year, a woman needs to consume an extra source of Vitamins. The only reason why, is because at this age a woman is slowly going into the period of menopause.
Story first published: Wednesday, December 11, 2013, 9:52 [IST]
X
Desktop Bottom Promotion